ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ

ವಿಕಿಪೀಡಿಯ ಇಂದ
Jump to navigation Jump to search

ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗವು ಅಥವಾ ರಾ (ಆಂಗ್ಲ:R&AW - Researach and Analysis Wing) ಭಾರತ ಸರ್ಕಾರದ ಅಧಿಕೃತ ಬೇಹುಗಾರಿಕಾ ಸಂಘಟನೆಯಾಗಿದೆ. ಸಾಮಾನ್ಯವಾಗಿ ಭಾರತದ ಹೊರಗಡೆ ಕಾರ್ಯನಿರ್ವಹಿಸುವ ಈ ಸಂಘಟನೆ ಇತರೆ ದೇಶಗಳ ಚಟುವಟಿಕೆ, ಅವುಗಳ ರಾಜತಾಂತ್ರಿಕ ನೀತಿ ಮತ್ತು ಅಲ್ಲಿನ ಆಗುಹೋಗುಗಳನ್ನು ವಿಶ್ಲೇಷಿಸಿ ಭಾರತ ಸರ್ಕಾರಕ್ಕೆ ವರದಿ ಮಾಡುತ್ತದೆ. ಇಷ್ಟೇ ಅಲ್ಲದೇ ಭಾರತದಲ್ಲಿ ನಡೆಯುವ ಆಂತರಿಕ ಭಯೋತ್ಪಾದನೆ ಮತ್ತು ಉನ್ನತ ಸಮಾಜಘಾತುಕ ಶಕ್ತಿಗಳನ್ನು ಸೆದೆಬಡಿಯಲು ಕೂಡ ರಾ ವಿಭಾಗವು ತನ್ನ ಬೇಹುಗಾರಿಕಾ ಪಡೆಯನ್ನು ಬಳಸುತ್ತದೆ.[೧]

೧೯೬೨ ರ ಭಾರತ-ಚೀನ ಯುದ್ಧ ಮತ್ತು ೧೯೬೫ರ ಭಾರತ-ಪಾಕಿಸ್ತಾನ ಯುದ್ಧದ ಬಳಿಕ ಬೇಹುಗಾರಿಕಾ ಪಡೆಯ ಅಗತ್ಯತೆಯನ್ನು ಭಾರತ ಸರ್ಕಾರ ಮನಗಂಡು ೧೯೬೮ಸೆಪ್ಟೆಂಬರ್ ೨೧ರಂದು 'ರಾ'ವನ್ನು ಹುಟ್ಟುಹಾಕಲಾಯಿತು. ದೆಹಲಿಯಲ್ಲಿ ಇದರ ಪ್ರಧಾನ ಕಚೇರಿಯಿದೆ. ಭಾರತದ ಪರಮಾಣು ಅಸ್ತ್ರಗಳ ಪರೀಕ್ಷೆಗೆ ಸಂಬಂಧಿಸಿದ ನಗುವ ಬುದ್ಧ (smiling buddha) ಕಾರ್ಯಾಚರಣೆಯ ಸುರಕ್ಷತೆಯ ಹೊಣೆಯನ್ನು 'ರಾ' ಹೊತ್ತುಕೊಂಡು ಯಶಸ್ವಿಯಾಗಿ ಮುಗಿಸಿತ್ತು. ಕಾರ್ಗಿಲ್ ಯುದ್ಧ ಮತ್ತು ಭಾರತದ ಇತರೇ ರಹಸ್ಯ ಕಾರ್ಯಾಚರಣೆಯಲ್ಲೂ 'ರಾ' ತನ್ನದೇ ಪಾತ್ರ ವಹಿಸುತ್ತ ಬಂದಿದೆ.

ಉಲ್ಲೇಖಗಳು[ಬದಲಾಯಿಸಿ]