ವಿಷಯಕ್ಕೆ ಹೋಗು

ಸಂವರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂವರಣನು (ಸಂಸ್ಕೃತ: संवरण, saṁvaraṇa m.) ಋಕ್ಷನ ಮಗ.[] ತಪತಿ ಈತನ ಪತ್ನಿ. ಈತ ಕುರು (ಕುರು ರಾಜವಂಶ ಮತ್ತು ಕುರು ಸಾಮ್ರಾಜ್ಯದ ಸ್ಥಾಪಕ) ಎಂಬ ಮಗನನ್ನು ಹೊಂದಿದ್ದಾನೆ.

ಸಂವರಣ
Information
ಗಂಡ/ಹೆಂಡತಿತಪತಿ
ಮಕ್ಕಳುಕುರು
ಸಂಬಂಧಿಕರುಋಕ್ಷ(ತಂದೆ)

ಮಹಾಭಾರತಲ್ಲಿ ಸಂವರಣ

[ಬದಲಾಯಿಸಿ]

ಆದಿ ಪರ್ವದಲ್ಲಿ ಸಂವರಣನು ರಾಜನಾಗಿ ಆಳುತ್ತಿದ್ದಾಗ ಅವನ ರಾಜ್ಯದ ಜನರು ಎಲ್ಲಾ ರೀತಿಯ ಪಿಡುಗುಗಳ ಜೊತೆಗೆ ಕ್ಷಾಮ, ಬರ ಮತ್ತು ರೋಗಗಳಿಗೆ ತುತ್ತಾಗುತ್ತಾರೆ.ಅಷ್ಟೇ ಅಲ್ಲದೆ ಶತ್ರು ದೇಶವರು ಸಂವರಣನ ರಾಜ್ಯದ ಮೇಲೆ ದಾಳಿ ಮಾಡುತ್ತಾರೆ. ರಾಜನು ತನ್ನ ಕುಟುಂಬ, ಸ್ನೇಹಿತರು ಮತ್ತು ಮಂತ್ರಿಗಳೊಂದಿಗೆ ಸಿಂಧೂ ನದಿಯ ಕಾಡುಗಳಲ್ಲಿ ನೆಲೆಸುತ್ತಾನೆ. ನಂತರ, ಒಂದು ದಿನ ಋಷಿ ವಸಿಷ್ಠರು ಅವರನ್ನು ಭೇಟಿ ಮಾಡುತ್ತಾರೆ ಮತ್ತು ಎಂಟು ವರ್ಷಗಳ ಕಾಲ ವಸಿಷ್ಠರು ಸಹ ಅವರೊಂದಿಗೆ ಕಾಲವನ್ನು ಕಳೆಯುತ್ತಾರೆ. ಅದರ ನಂತರ, ಸಂವರಣನು ಋಷಿ ವಸಿಷ್ಠರನ್ನು ತನ್ನ ಪುರೋಹಿತನನ್ನಾಗಿ ಮಾಡಲು ನಿರ್ಧರಿಸುತ್ತಾನೆ. ವಸಿಷ್ಠರ ಸಹಾಯದಿಂದ ಸಂವರಣನು ತನ್ನ ಸಂಪೂರ್ಣ ರಾಜ್ಯ ಮತ್ತು ಅಧಿಕಾರವನ್ನು ಮರಳಿ ಪಡೆಯುತ್ತಾನೆ.

ಮದುವೆ

[ಬದಲಾಯಿಸಿ]

ಬೇಟೆಯಾಡಲು ಹೋದ ರಾಜ ಸಂವರಣನು ತಪತಿಯನ್ನು ನೋಡಿದನು.ತಪತಿಯು ಸೂರ್ಯ ದೇವರಾದ ವಿವಸ್ವತ್‌ನ ಮಗಳು.[] ತಪತಿಯ ಮೇಲೆ ಸಂವರಣನಿಗೆ ಪ್ರೀತಿ ಆಗುತ್ತದೆ. ರಾಜನು ತಪತಿಯ ಮುಂದೆ ಮದುವೆಯ ಪ್ರಸ್ತಾಪವನ್ನು ಮಾಡಿದನು. ಆಗ ತಪತಿಯು ತನ್ನ ತಂದೆಯ ಒಪ್ಪಿಗೆಗಾಗಿ ಸೂರ್ಯದೇವನ ಬಳಿ ಹೋಗಲು ಹೇಳಿದಳು. ಆದಾದ ನಂತರ ರಾಜನು ಸೂರ್ಯನನ್ನು ಆರಾಧಿಸಲು ಪ್ರಾರಂಭಿಸಿದನು. ವಸಿಷ್ಠ ಋಷಿಯ ಸಹಾಯದಿಂದ ರಾಜನು ಸೂರ್ಯದೇವನ ಬಳಿ ಹೋದನು. ನಂತರ ವಸಿಷ್ಠ ಸಂವರಣ ಮತ್ತು ತಪತಿಯ ವಿವಾಹವನ್ನು ಮಾಡುವಂತೆ ಹೇಳಿದರು. ನಂತರ ಸೂರ್ಯದೇವ ಒಪ್ಪಿ ಮದುವೆ ಮಾಡಿಸಿದನು.

ಹನ್ನೆರಡು ವರ್ಷಗಳ ಕಾಲ, ರಾಜನು ತನ್ನ ಹೆಂಡತಿಯೊಂದಿಗೆ ಬೆಟ್ಟಗಳು ಮತ್ತು ಪರ್ವತಗಳಲ್ಲಿ ಸಂತೋಷದಿಂದ ವಾಸಿಸುತ್ತಿದ್ದನು. ತನ್ನ ಕರ್ತವ್ಯಗಳಿಂದ ಸಂಪೂರ್ಣವಾಗಿ ಹಿಂದೆ ಸರಿದನು. ಆದರೆ ನಂತರ ದೇಶದಲ್ಲಿ ಭೀಕರ ಬರಗಾಲವುಂಟಾಯಿತು. ನಂತರ ವಸಿಷ್ಠನು ಸಂವರಣ ಮತ್ತು ಅವನ ಹೆಂಡತಿಯನ್ನು ಹಿಂದಕ್ಕೆ ಕರೆದನು. ಅವರ ಹಿಂದಿರುಗುವಿಕೆಯು ಎಲ್ಲಾ ನಾಗರಿಕರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತಂದಿತು.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಸಂವರಣ&oldid=1252912" ಇಂದ ಪಡೆಯಲ್ಪಟ್ಟಿದೆ