ವಿಷಯಕ್ಕೆ ಹೋಗು

ಸಂತೋಷ್ ಯಾದವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂತೋಷ್ ಯಾದವ್
೨೦೦೮ ರಲ್ಲಿ ಯಾದವ್
ಜನನಟೆಂಪ್ಲೇಟು:ಜನನ ದಿನಾಂಕ ಮತ್ತು ವಯಸ್ಸು
ವೃತ್ತಿಪರ್ವಾತಾರೋಹಿ
ಸಂಗಾತಿಉತ್ತಮ್ ಕುಮಾರ್ ಲಾಲ್ (m.1992)
ಪ್ರಶಸ್ತಿಗಳು
ಜಾಲತಾಣsantoshyadavmountaineer.com


ಸಂತೋಷ್ ಯಾದವ್ (ಜನನ ೧೦ ಅಕ್ಟೋಬರ್ ೧೯೬೭) ಅವರು ಭಾರತೀಯ ಪರ್ವತಾರೋಹಿಯಾಗಿದ್ದಾರೆ. ಮೌಂಟ್ ಎವರೆಸ್ಟ್ವನ್ನು ಎರಡು ಬಾರಿ ಹತ್ತಿದ ವಿಶ್ವದ ಮೊದಲ ಮಹಿಳೆ [] ಮತ್ತು ಕಾಂಗ್‌ಶುಂಗ್ ಮುಖಭಾಗದಿಂದ ಮೌಂಟ್ ಎವರೆಸ್ಟ್ ಅನ್ನು ಯಶಸ್ವಿಯಾಗಿ ಹತ್ತಿದ ಮೊದಲ ಮಹಿಳೆಯಾಗಿದ್ದಾರೆ. ಅವರು ಮೇ ೧೯೯೨ ರಲ್ಲಿ ಮೊದಲು ಬಾರಿ ಶಿಖರವನ್ನು ಏರಿದರು ನಂತರ ಮೇ ೧೯೯೩ ರಲ್ಲಿ ಇಂಡೋ-ನೇಪಾಲಿಸ್ ತಂಡದೊಂದಿಗೆ ಎರಡನೇ ಬಾರಿ ಶಿಖರವನ್ನು ಏರಿದರು.

೧೯೯೨ ರಲ್ಲಿ ತನ್ನ ಎವರೆಸ್ಟ್ ಮಿಷನ್ ಸಮಯದಲ್ಲಿ, ಅವರು ಇನ್ನೊಬ್ಬ ಪರ್ವತಾರೋಹಿ ಮೋಹನ್ ಸಿಂಗ್ ಅವರೊಂದಿಗೆ ಆಮ್ಲಜನಕವನ್ನು ಹಂಚಿಕೊಳ್ಳುವ ಮೂಲಕ ಅವರ ಜೀವವನ್ನು ಉಳಿಸಿದ್ದರು. ಅವರು ಸೌತ್ ಕೋಲ್‌ನಲ್ಲಿ ಸಾಯುತ್ತಿದ್ದ ಪರ್ವತಾರೋಹಿಗೆ ಸಹಾಯ ಮಾಡಲು ಪ್ರಯತ್ನಿಸಿದರು, ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. []

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಅವರು ಭಾರತದ ಹರಿಯಾಣ ರಾಜ್ಯದ ರೇವಾರಿ ಜಿಲ್ಲೆಯ ಜೋನಿಯಾವಾಸ್ ಗ್ರಾಮದಲ್ಲಿ ಐದು ಗಂಡು ಮಕ್ಕಳ ಕುಟುಂಬದಲ್ಲಿ ಆರನೇ ಮಗುವಾಗಿ ಜನಿಸಿದರು. ಅವರು ಮೊದಲು ಸ್ಥಳೀಯ ಶಾಲೆಯಲ್ಲಿ ಓದಿದರು ನಂತರ ದೆಹಲಿಗೆ ತೆರಳಿ ಅಲ್ಲಿ ಶಾಲೆಗೆ ಸೇರಿಕೊಂಡರು. ಬಳಿಕ ಅವರು ಜೈಪುರದ ಮಹಾರಾಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು, ಅಲ್ಲಿ ಅವರು ಪರ್ವತಾರೋಹಿಗಳು ಅರಾವಳಿ ಶ್ರೇಣಿಯನ್ನು ಹತ್ತುವುದನ್ನು ತನ್ನ ಕೋಣೆಯಿಂದ ನೋಡಲು ಸಾಧ್ಯವಾಯಿತು. . ಇದು ಅವರನ್ನು ಉತ್ತರಕಾಶಿಯ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ಗೆ ಸೇರಿಕೊಳ್ಳಲು ಪ್ರೇರೇಪಿಸಿತು. ಅವರು ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯವು ಒದಗಿಸಿದ ಹಾಸ್ಟೆಲ್‌ನಲ್ಲಿ ಭಾರತೀಯ ಆಡಳಿತ ಸೇವೆ (IAS) ಪರೀಕ್ಷೆಗಳಿಗೆ ತಮ್ಮ ಅಧ್ಯಯನವನ್ನು ಯಶಸ್ವಿಯಾಗಿ ಮುಂದುವರೆಸಿದರು.

ವೃತ್ತಿ

[ಬದಲಾಯಿಸಿ]

೧೯೯೨ ರಲ್ಲಿ, ಯಾದವ್ ಅವರು ಕೇವಲ ಇಪ್ಪತ್ತು ವರ್ಷದವರಾಗಿದ್ದಾಗ ಮೌಂಟ್ ಎವರೆಸ್ಟ್ ಅನ್ನು ಏರಿದ್ದರು. ಈ ಸಾಧನೆಯನ್ನು ಮಾಡಿದ ವಿಶ್ವದ ಅತ್ಯಂತ ಕಿರಿಯ ಮಹಿಳಾ ಪರ್ವತಾರೋಹಿಯಾಗಿದ್ದರು, ಈ ದಾಖಲೆಯನ್ನು ೨೦೧೩ ರಲ್ಲಿ ೧೩ ವರ್ಷದ ಮಾಲವತ ಪೂರ್ಣ ಅವರು ಸರಿಗಟ್ಟಿದರು. ಹನ್ನೆರಡು ತಿಂಗಳನಂತರ ಅವರು ಇಂಡೋ-ನೇಪಾಳಿ ಮಹಿಳಾ ಆರೋಹಣದ ಸದಸ್ಯರಾದರು ಮತ್ತು ಎವರೆಸ್ಟ್ ಅನ್ನು ಎರಡನೇ ಬಾರಿಗೆ ಏರಿದರು, ಹೀಗೆ ಎವರೆಸ್ಟ್ ಅನ್ನು ಎರಡು ಬಾರಿ ಹತ್ತಿದ ಮೊದಲ ಮಹಿಳೆ ಎಂಬ ದಾಖಲೆಯನ್ನು ಸ್ಥಾಪಿಸಿದರು. ಅವರು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್‌ ಇಲಾಖೆಯಲ್ಲಿ ಅಧಿಕಾರಿಯಾಗಿಯೂ ಕಾರ್ಯಾನಿರ್ವಹಿಸಿದ್ದಾರೆ. ಅವರು ೧೯೮೯ ರಲ್ಲಿ  ಒಂಬತ್ತು-ರಾಷ್ಟ್ರಗಳ ಅಂತರಾಷ್ಟ್ರೀಯ ಕ್ಲೈಂಬಿಂಗ್ ಕ್ಯಾಂಪ್-ಕಮ್-ಎಕ್ಸ್‌ಪೆಡಿಶನ್‌ನ ನನ್ ಕುನ್‌ ಆರೋಹಣದ ಭಾಗವಾಗಿದ್ದರು. ಅಲ್ಲದೆ ಅವರು ಉತ್ಸಾಹಭರಿತ ಪರಿಸರವಾದಿಯಾಗಿದ್ದರು, ಅವರು ಹಿಮಾಲಯದಿಂದ ೫೦೦ ಕೆಜಿ ತ್ಯಾಜ್ಯವನ್ನು ಸಂಗ್ರಹಿಸಿದ್ದರು

ಪರ್ವತರೋಹಣಗಳು

[ಬದಲಾಯಿಸಿ]
  • ೧೯೯೯ ರಲ್ಲಿ, ಸಂತೋಷ್ ಯಾದವ್ ಎವರೆಸ್ಟ್‌ನ ಕಾಂಗ್‌ಶುಂಗ್ ಫೇಸ್‌ಗೆ ಭಾರತೀಯ ಪರ್ವತಾರೋಹಣ ದಂಡಯಾತ್ರೆಯನ್ನು ನಡೆಸಿದರು. []
  • ೨೦೦೧ ರಲ್ಲಿ, ಅವರು ಈಸ್ಟ್ ಫೇಸ್, ಮೌಂಟ್ ಎವರೆಸ್ಟ್‌ಗೆ ಪರ್ವತಾರೋಹಣ ತಂಡವನ್ನು ಮುನ್ನಡೆಸಿದ್ದರು. []

ಉಲ್ಲೇಖಗಳು

[ಬದಲಾಯಿಸಿ]
  1. "Santosh Yadav feels motivated to climb Everest again". News.webindia123.com. 2007-05-11. Retrieved 2010-06-20.
  2. -, Beehive (2006). Textbook in English for class IX. Publication Division, National Council of Educational Research and Training, Sri Aurobindo Marg, New Delhi 110016: Central Board of Secondary Education. p. 102. ISBN 81-7450-502-4. {{cite book}}: |last= has numeric name (help)CS1 maint: location (link)
  3. ೩.೦ ೩.೧ Menon, Shaym G. (25 May 2013). "No work on any expedition was below my dignity". The Hindus. Retrieved 2 July 2013.