ವಿಷಯಕ್ಕೆ ಹೋಗು

ಸಂಜೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇರಳದಲ್ಲಿ ಒಂದು ಸಂಜೆ

ಸಂಜೆ (ಸಂಧ್ಯಾಕಾಲ, ಸಾಯಂಕಾಲ, ಬೈಗು) ಎಂದರೆ ದಿನದ ಕೊನೆಯಲ್ಲಿನ ಸಮಯಾವಧಿ, ಸಾಮಾನ್ಯವಾಗಿ ಸುಮಾರು ೫ ಅಥವಾ ೬ ಗಂಟೆಯಿಂದ ರಾತ್ರಿಯವರೆಗೆ. ಇದು ಬದಲಾಗುವ ಸಮಯಾವಧಿಯ ಪ್ರತಿದಿನದ ಖಗೋಳಶಾಸ್ತ್ರೀಯ ಘಟನೆಯಾಗಿದೆ ಮತ್ತು ಹಗಲು ಹಾಗೂ ರಾತ್ರಿಯ ನಡುವೆ ಬರುತ್ತದೆ. ಮಧ್ಯಾಹ್ನದ ನಂತರ ಹಾಗೂ ರಾತ್ರಿಗೆ ಮೊದಲಿನ ಈ ಅವಧಿಯಲ್ಲಿ ಹಗಲಿನ ಬೆಳಕು ಕಡಿಮೆಯಾಗುತ್ತ ಹೋಗುತ್ತದೆ. ಸಂಜೆಯು ಯಾವಾಗ ಆರಂಭವಾಗುತ್ತದೆ ಮತ್ತು ಮುಗಿಯುತ್ತದೆ ಎಂಬುದಕ್ಕೆ ಯಾವುದೇ ನಿಖರ ಸಮಯವಿಲ್ಲ. ಈ ಪದವು ವ್ಯಕ್ತಿನಿಷ್ಠವಾದರೂ, ಸಂಜೆಯು ಸಾಮಾನ್ಯವಾಗಿ ಸೂರ್ಯಾಸ್ತಕ್ಕೆ ಸ್ವಲ್ಪ ಮೊದಲು ಆರಂಭಗೊಂಡು, ಸಂಧಿಪ್ರಕಾಶದ ಅವಧಿಯಲ್ಲಿ ಇದ್ದು (ಸೂರ್ಯಾಸ್ತ ಮತ್ತು ಸಂಧಿಪ್ರಕಾಶ ವರ್ಷದಾದ್ಯಂತ ಬದಲಾಗುತ್ತವೆ),[೧] ರಾತ್ರಿಯವರೆಗೆ (ಸಾಮಾನ್ಯವಾಗಿ ಖಗೋಳ ಸೂರ್ಯಾಸ್ತ) ಇರುತ್ತದೆ ಎಂದು ತಿಳಿಯಲಾಗುತ್ತದೆ. ಗಡಿಯಾರದ ಸಮಯದನುಸಾರವಾಗಿ ಯಾವುದೇ ನಿಖರ ವ್ಯಾಖ್ಯಾನ ಸಾಧ್ಯವಿಲ್ಲವಾದರೂ, ಇದು ಸಾಮಾಜಿಕವಾಗಿ ಸುಮಾರು ೫ ಅಥವಾ ೬ ಗಂಟೆಗೆ ಆರಂಭವಾಗಿ ರಾತ್ರಿ ಅಥವಾ ಮಲಗುವ ಸಮಯದವರೆಗೆ ಇರುತ್ತದೆ ಎಂದು ಪರಿಗಣಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Sunrise and sunset times in London". www.timeanddate.com.
"https://kn.wikipedia.org/w/index.php?title=ಸಂಜೆ&oldid=913252" ಇಂದ ಪಡೆಯಲ್ಪಟ್ಟಿದೆ