ಸಂಜಿತಾ ಚಾನು ಖುಮುಚ್ಚಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಜಿತಾ ಚಾನು ಖುಮುಚ್ಚಮ್ (ಜನನ: 2 ಜನವರಿ1994) ಒಬ್ಬ ಭಾರತೀಯ ವೇಟ್ ಲಿಫ್ಟರ್. ಇವರು ಮಣಿಪುರದ, ಕಾಚಿಂಗ್ ಜಿಲ್ಲೆ, ಕಾಚಿಂಗ್ ಕನೌ ನಲ್ಲಿ ಜನಿಸಿದರು.[೧] ಎರಡು ಭಾರಿ ಭಾರತಕ್ಕೆ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ. ಕಾಮನ್ ವೆಲ್ತ್ ಚಾಂಪಿಯನ್ ನಲ್ಲಿ 2014 ರ ಗ್ಲಾಸ್ಗೊ ಮತ್ತು 2018 ರ ಗೋಲ್ಡ್ ಕೋಸ್ಟ್ ಸ್ಫರ್ಧೆಗಳಲ್ಲಿ ಮಹಿಳೆಯರ 48 ಕೆ ಜಿ ಮತ್ತು 53 ಕೆ ಜಿ ತೂಕದ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ [೨].

ವೈಯಕ್ತಿಕ ಮಾಹಿತಿ[ಬದಲಾಯಿಸಿ]

ಸಂಜಿತಾ ಚಾನು ವೈಯಕ್ತಿಕ ಮಾಹಿತಿ
ರಾಷ್ಟ್ರೀಯತೆ [ಶಾಶ್ವತವಾಗಿ ಮಡಿದ ಕೊಂಡಿ] [[ ಭಾರತೀಯ]]
ಹುಟ್ಟು 2 ಜನವರಿ 1994 (ವಯಸ್ಸು 26)

ಕಾಚಿಂಗ್ ಖನೌ, ಕಾಚಿಂಗ್ ಜಿಲ್ಲೆ,ಮಣಿಪುರ, ಭಾರತ

ಎತ್ತರ 152 ಮೀ ( 4 ಅಡಿ 11 ಇಂಚು)
ತೂಕ 48 ಕೆಜಿ ( 106 ಫೌಂಡ್)

ಕ್ರೀಡೆ[ಬದಲಾಯಿಸಿ]

ದೇಶ: ಭಾರತ ಕ್ರೀಡೆ: ಭಾರ ಎತ್ತುವಿಕೆ ಕಾರ್ಯಕ್ರಮಗಳು: 53 ಕೆ ಜಿ, 48 ಕೆ ಜಿ. ತೂಕ

ಪದಕ ದಾಖಲೆ[ಬದಲಾಯಿಸಿ]

ಮಹಿಳೆಯರ ವೇಟಿ ಲಿಫ್ಟಿಂಗ್ ಕಾಮನ್ ವೆಲ್ತ್ ಕ್ರೀಡಾ ಕೂಟ :2014 ರಲ್ಲಿ ಗ್ಲಾಸ್ಗೊ 48 ಕೆಜಿ. 2018 ರಲ್ಲಿ ಗೋಲ್ಡ್ ಕೋಸ್ಟ್ 53 ಕೆ ಜಿ

ಹಿನ್ನೆಲೆ[ಬದಲಾಯಿಸಿ]

ಚಾನು ರವರು2006 ರ ಮಣಿಪುರದಲ್ಲಿ ಕ್ರೀಡಾ ವೆಲ್ತ್ ಲಿಫ್ಟಿಂಗನ್ನು ಕೈಗೆತ್ತಿಕೊಂಡರು. ಪ್ರವರ್ತಕ ವೇಟ್ ಲಿಫ್ಟರ್ ಮತ್ತು ಸಹವರ್ತಿ ಮಣಿಪುರಿ ಕುಂಜುರಾನಿ ದೇವಿ ಎಲ್ಲರು ನನಗೆ ಉತ್ತೇಜನ ನೀಡಿದವರು ಎಂದು ಪರಿಗಣಿಸುತ್ತಾಳೆ.

ವೃತ್ತಿ[ಬದಲಾಯಿಸಿ]

2014 ಸಂಜಿತಾ ಚಾನು ಮಹಿಳೆಯರ 48 ಕೆಜಿ ಭಾರ ಎತ್ತುವಿಕೆಯಲ್ಲಿ ಕಾಮನ್ ವೆಲ್ತ್ ಕ್ರೀಡೆಯ ಸ್ಫರ್ಧೆಯಲ್ಲಿ ಭಾರತಕ್ಕೆ ಮೋದಲನೆ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾಳೆ. ಅವಳು72 ಕೆಜಿ ಯಷ್ಟು ಭಾರ ಎತ್ತುವ ಪ್ರಯತ್ನದಿಂದ ಪ್ರಾರಂಭಿಸಿ 77 ಕೆ ಜಿ ತೂಕವನ್ನು ಎತ್ತಿ ಕೀರ್ತಿಯನ್ನು ಮೇರದಳು. ಇದುವರೆಗೂ ಸ್ನ್ಯಾಚ್ ನಲ್ಲಿ ಯಾವುದೇ ರೀತಿಯಲ್ಲಿ ತೂಕವನ್ನು ಇಳಿಸಿಲ್ಲ, ಕ್ಲೀನ್ ಮತ್ತು ಜರ್ಕ್ ಕ್ರೀಡೆಯಲ್ಲಿ 96 ಕೆಜಿ ಭಾರ ಎತ್ತುವುದರೊಂದಿಗೆ ಅಜೇಯ ಮುನ್ನಡೆ ಸಾದಿಸಿದ್ದು, ಒಟ್ಟು 173ಕೆಜಿ ತೂಕದೊಂದಿಗೆ ಚಿನ್ನದ ಪದಕ ಗೆದ್ದರು.[೩] 2018 ರಲ್ಲಿ ಆಸ್ರೇಲಿಯಾದಲ್ಲಿ ನಡೆದ ಕಾಮನ್ ವೆಲ್ತ್ ನ ಗೋಲ್ಡ್ ಕೋಸ್ಟ್ ನಲ್ಲಿ 53 ಕೆಜಿ ಭಾರ ಎತ್ತುವ ಸ್ಫರ್ಧೆಯಲ್ಲಿ ಸತತ ಎರಡನೇ ಪ್ರಯತ್ನದಲ್ಲು ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಡುತ್ತಾಳೆ. ಒಟ್ಟು192 ಕೆಜಿ ತೂಕ ಎತ್ತುವ ಮೂಲಕ ಆಟಗಳನ್ನು ಮುಂದುವರೆಸಿದರು. [೪] ಮೇ30 ರಂದು ಟೆಸ್ಟೋಸ್ಟರಾನ್ ನ ಪ್ರತಿಕೂಲ ವಿಶ್ಲೇಷಣಾತ್ಮಕ ಶೋಧನೆಗಾಗಿ ಚಾನು ಅವರನ್ನು ಐಡಬ್ಲ್ಯೂಎಫ್ ತಾತ್ಖಾಲಿಕವಾಗಿ ಅಮಾನತ್ತು ಗೊಳಿಸಿತು. ಅಂತರಾಷ್ಟ್ರೀಯ ವೇಟ್ ಲಿಪ್ಟಿಂಗ್ ಪೆಡರೇಷನ್ ಸಂಜಿತಾ ಅವರ ಡೊಪಿಂಗ್ ಪ್ರಕರಣವನ್ನು ತಪ್ಪಾಗಿ ಒಪ್ಪಿಕೊಂಡಿದೆ. ಇದಕ್ಕಾಗಿ ವಿಚಾರಣೆ ನಡೆಸ ಬೇಕೆಂದು ಸಂಜಿತಾ ಕೋರಿದ್ದಾರೆ.[೫]


ಉಲ್ಲೇಖಗಳು[ಬದಲಾಯಿಸಿ]

  1. results.glasgow2014.com/athlete/weightlifting/1009112/s_khumukcham.html
  2. https://timesofindia.indiatimes.com/sports/tournaments/2014-commonwealth-games/india-news/Weightlifter-Khumukcham-Sanjita-wins-Indias-first-gold-at-Commonwealth-Games/articleshow/38981620.cms?from=mdr
  3. https://timesofindia.indiatimes.com/sports/tournaments/2014-commonwealth-games/india-news/Weightlifter-Khumukcham-Sanjita-wins-Indias-first-gold-at-Commonwealth-Games/articleshow/38981620.cms?from=mdr
  4. "ಆರ್ಕೈವ್ ನಕಲು". Archived from the original on 2020-01-25. Retrieved 2020-01-26.
  5. results.glasgow2014.com/athlete/weightlifting/1009112/s_khumukcham.html