ಸಂಕಟ ವಿಮೋಚನ್ ಹನುಮಾನ್ ಮಂದಿರ್, ಘಾಟ್ಕೋಪರ್ (ಪ), ಮುಂಬಯಿ
ಮುಂಬಯಿ, ನಗರದ ಘಾಟ್ಕೋಪರ್ ಉಪನಗರದ, ಅಸಾಲ್ಫಾ ವಿಲೇಜ್' ನ 'ಗೋವಿಂದ್ ನಗರ್' ನಲ್ಲಿ 'ಸಂಕಟ ವಿಮೋಚನ ಹನುಮಾನ್ ಮಂದಿರ'ವಿದೆ. ಇದು ಪುರಾತನ ದೇವಾಲಯ. 'ಹನುಮಾನ್ ಗುಡಿ'ಯ ಬದಿಯಲ್ಲೇ, ಶಿವಲಿಂಗವಿದೆ. ಪಕ್ಕದಲ್ಲಿ ಒಂದು 'ಬಾವಿ'ಯೂ ಇದೆ. ಈ ದೇವಾಲಯ ಒಂದು 'ಟ್ರಸ್ಟ್' ಗೆ ಸೇರಿದೆ. 'ಹನುಮದ್ಜಯಂತಿ', ಚೆನ್ನಾಗಿ ನಡೆಯುತ್ತದೆ. ಮಂದಿರ ಸುತ್ತಲೂ ಗಿಡ ಮರಗಳಿವೆ. ತೆಂಗಿನ ಮರಗಳೂ ಇವೆ. ಈ ಪುರಾತನ ಮಂದಿರಕ್ಕೆ ಘಾಟ್ಕೋಪರ್ (ಪ)ದಿಂದ ಬರಲು 'ಬಸ್' ಮತ್ತು 'ರಿಕ್ಷಾ' ಸೌಲಭ್ಯಗಳಿವೆ. ಎಲ್.ಬಿ.ಎಸ್.ಮಾರ್ಗದ ಮುಖಾಂತರ ಬಂದು, ಮಹೇಂದ್ರ-ಮಹೇಂದ್ರ ಹೌಸಿಂಗ್ ವಲಯದಿಂದ, ಸಾಗುವ ಗಲ್ಲಿಯಲ್ಲಿ ಸಾಗಿ, 'ಎನ್.ಎಸ್.ಎಸ್.ರಸ್ತೆ'ಯಲ್ಲಿ ಬರಬಹುದು. ಇಲ್ಲವೇ 'ಭಟ್ವಾಡಿ' ಯೂ ತೀರ ಹತ್ತಿರದಲ್ಲಿದೆ. 'ಹಿಮಾಲಯೇಶ್ವರ ಮಹದೇವ್ ದೇವಸ್ಥಾನ', 'ಶ್ರೀ ಗೀತಾಂಬಿಕಾ ದೇವಸ್ಥಾನ'ಗಳೂ ಹತ್ತಿರದಲ್ಲೇ ಇವೆ.
ಅರಳೀಮರದ ಕೆಳಗೆ ಹಲವಾರು ಚಿಕ್ಕಪುಟ್ಟ ದೇವತೆಗಳ ಮೂರ್ತಿಗಳಿವೆ
[ಬದಲಾಯಿಸಿ]ಭಕ್ತಾದಿಗಳು, ಮುಖ್ಯವಾಗಿ ಹೆಣ್ಣುಮಕ್ಕಳು, ಈ ದೇವತೆಗಳಿಗೆ ಪೂಜೆ ಮಾಡಲು ಬರುತ್ತಾರೆ. ದೇವರ ಬಗ್ಗೆ ಜನರಿಗೆ ಭಕ್ತಿ ಕಡಿಮೆಯಾಗಿಲ್ಲ. ಹಬ್ಬ ಹರಿದಿನಗಳ ವೇಳೆಯಲ್ಲಿ, ಮಂಗಳವಾರ, ಶನಿವಾರಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿರುತ್ತದೆ. ಎಕ್ಕದ ಎಲೆಯ ಸರಗಳು ಮತ್ತು 'ದೀಪದ ಎಣ್ಣೆಯ ಕುಡಿಕೆಗಳು' ಮಂದಿರದ ಹೊರಗೆ 'ಹೂವಿನ ಹಾರದ ಅಂಗಡಿ'ಗಳಲ್ಲಿ ದೊರೆಯುತ್ತವೆ.
ಸನ್,೨೦೧೧ ರ ಹನುಮಜ್ಜಯಂತಿ ಉತ್ಸವ
[ಬದಲಾಯಿಸಿ]೧೮, ಏಪ್ರಿಲ್, ೨೦೧೧ ರ ಸೋಮವಾರದಂದು ಜರುಗಿದ 'ಹನುಮಜ್ಜಯಂತಿ ಉತ್ಸವ' ದಿನ ಪೂರ್ತಿ ಮಾರುತಿಯ ಪೂಜೆ, ಆರತಿ, ಭಜನೆ, ಮತ್ತು ಸತ್ಸಂಗಗಳಿಂದ ಸಂಪನ್ನವಾಯಿತು. ಭಕ್ತಾದಿಗಳು ಎಲ್ಲ ಕಡೆಗಳಿಂದ ಧಾವಿಸಿ ಬಂದು 'ಹನುಮಜ್ಜಯಂತಿ'ಯಲ್ಲಿ ಭಾಗಿಯಾದರು.