ಷಣ್ಮುಗಂ
ಬಾಲ್ಯ ಜೀವನ
[ಬದಲಾಯಿಸಿ]ವಿಶ್ವ ಕಪ್ ಪುಟ್‌ಬಾಲ್ ಪ್ರಧಾನ ಹಂತಕ್ಕೆ ಅರ್ಹತೆ ಗಳಿಸಿದ್ದ ಭಾರತ ತಂಡದ ಆಟಗಾರ, ಒಲಿಂಪಿಕ್ಸ್ನಲ್ಲಿ ಬರಿಗಾಲಿನಲ್ಲಿಯೇ ಆಡಿದ ಭಾರತ ತಂಡದ ಸದಸ್ಯ. ರಾಷ್ಟ್ರೀಯ ಪುಟ್‌ಬಾಲ್ ಚಾಂಪಿಯನ್ ಷಿಪ್‌ನಲ್ಲಿ ತಂಡದ ನಾಯಕತ್ವ ವಹಿಸಿದ್ದಾಗ ಟ್ರೋಫಿ ಎತ್ತಿಕೊಂಡಿದ್ದಲ್ಲದೆ ತರಬೇತುದಾರನಾಗಿದ್ದಾಗಲೂ ಟ್ರೋಫಿ ಎತ್ತಿಕೊಂಡ ಹೆಗ್ಗಳಿಕೆ ರಾಜ್ಯ ಪುಟ್‌ಬಾಲ್ಗೆ ಸಂಬಂಧಿಸಿದಂತೆ ಹೀಗೆ ನಮ್ಮ ಕಲ್ಪನೆಗೂ ನಿಲುಕದಷ್ಟು ಹತ್ತು ಹಲವು ಅಚ್ಚರಿ ಸಾಧನೆಗಳ ಷಣ್ಮುಗಂ ಅವರು ಭಾರತ ತಂಡ ಅನನ್ಯ ಫುಟ್ಬಾಲ್ ಆಟಗಾರ. ಅಂದು ಭಾರತದ ಮಿಡ್ ಫೀಲ್ಡ್ನಲ್ಲಿ ಬೆಂಗಳೂರಿನ ಷಣ್ಮುಗಂ ಗಮನಾರ್ಹ ಸಾಮರ್ಥ್ಯ ತೋರಿದ್ದರು. ಅದರ ಮರುವರ್ಷವೇ ಹೆಲ್ಸಿಂಕಿಯಲ್ಲಿ ನಡೆದಿದ್ದ ಒಲಿಂಪಿಕ್ನಲ್ಲಿ ಭಾರತದ ಆಟಗರರು ಆ ಕೊರೆಯುವ ಚಳಿಯಲ್ಲಿಯೂ ಬರಿಗಾಲಿನಲ್ಲಿಯೇ ಆಡಿ ವಿಶ್ವದ ಗಮನ ಸೆಳೆದಿದ್ದರು ಅಂದು ಆ ತಂಡದ ಮುಂಚುಣಿಯಲ್ಲಿ ಪಾದರಸದಂತೆ ಆಡಿದ್ದವರು ಷಣ್ಮುಗಂ.
ಸಾಧನೆ
[ಬದಲಾಯಿಸಿ]ಬ್ರೆಜಿಲ್‌ನ ರಿಯೋ ಡಿ ಜನ್ಯೆರೊದಲ್ಲಿ ೧೯೫೦ ನಡೆದಿದ್ದ ವಿಶ್ವಕಪ್ ಪುಟ್‌ಬಾಲ್ ಕೂಟದ ಪದೆಧಾನ ಹಂತಕ್ಕೆ ಭಾರತ ತಂಡ ಅರ್ಹತೆ ಪಡೆದಿತ್ತು ಅದಕ್ಕೆ ಪೂರ್ವ ತಯಾರಿಗಾಗಿ ಷಿಲ್ಲಾಂಗ್‌ನಲ್ಲಿ ವರ್ಷಕ್ಕೆ ಮೊದಲೇ ಕಠಿಣ ತರಬೇತಿ ಶಿಬಿರ ನಡೆದಿತ್ತು.[೧] ೧೯೪೯ ರ ಕೊನೆಯಲ್ಲಿ ಅಂದಿನ ಬಲಿಷ್ಟ ಭಾರತ ತಂಡ ‘ವಿಶ್ವಕಪ್ ಸಿದ್ದತೆ’ಗೆಂದೇ ಅಘ್ಘಾನಿಸ್ತಾನಕ್ಕೆ ಪ್ರವಾಸ ತೆರಳಿ ಆ ದೇಶದ ವಿರುದ್ದ ಆಡಿದ ಆರೂ ಪಂದ್ಯಗಳಲ್ಲಿ ಗೆದ್ದಿತ್ತು ಆಗಿನ ಸಿಲೋನ್ ದೇಶಕ್ಕೂ ಪ್ರವಾಸ ತೆರಳಿ ಆ ದೇಶದ ತಂಡದ ವಿರುದ್ದ ಆಡಿದ ಎಲ್ಲ ಆರೂ ಪಂದ್ಯಗಳಲ್ಲಿ ಜಯ ಗಳಿಸಿತ್ತು. ೧೯೫೦ರ ಆರಂಭದಲ್ಲಿ ಬರ್ಮಾ, ಹಾಕಂಗ್‌ಗಳಿಗೆ ತೆರಳಿದ್ದ ಈ ತಂಡ ಅಲ್ಲಿಯೂ ತನ್ನ ಅಪ್ರತಿಮ ಆಟದಿಂದ ಜನಮೆಚ್ಚುಗೆ ಗಳಿಸಿತ್ತು ರಿಯೋದಲ್ಲಿ ಭಾರತ ೧೦ನೇ ಗುಂಪಿನಲ್ಲಿ ಆಡಬೇಕಿತ್ತು ಎಪ್ರಿಲ್ ವೇಳೆಗೆ ಭಾರತ ತಂಡ ಹೊರಟು ನಿಂತಿತ್ತು ಆಗ ಫಿಫಾದಿಂದ ಬಂದ ಸಂದೇಶದಲ್ಲಿ ‘ಬರಿಗಾಲ ಆಟಗಾರರಿಗೆ ಅವಕಾಶವಿಲ್ಲ’ ಎಂದು ತಿಳಿಸಲಾಗಿತ್ತು ಆಗ ಆ ತಂಡದಲ್ಲಿದ್ದ ಷಣ್ಮುಗಂ ತೀವ್ರ ನಿರಾಸೆಯಿಂದ ಬೆಂಗಳೂರಿಗೆ ವಾಪಸಾದರು. ಪುಟ್‌ಬಾಲ್ ಅಜ್ಜ ಎಂದೇ ಪ್ರಸಿದ್ದಿ ಪಡೆದಿರುವ ಇವರು ಲೆಲ್ಲಾ ಷಿಲ್ಲಾಂಗ್ ತರಬೇತಿ ಶಿಬಿರದ ನೆನಪುಗಳನ್ನು ಬಿಚ್ಚಿಕೊಳ್ಳುತ್ತಲೇ ಇದ್ದರು ಎಲವೆಯಲ್ಲಿ ಆಸ್ಟಿನ್ ಟೌನ್ ಪ್ರಾತಮಿಕ ಶಾಲೆಯಲ್ಲಿ ಓದುವಾಗಲೇ ಪುಟ್‌ಬಾಲ್ ಬಗ್ಗೆ ಆಸಕ್ತಿ ಬೆಳಸಿಕೊಂಡಿದ್ದ ಇವರು ನಂತರ ಆರ್‌ಎಎನ್‌ಎಂಎಸ್ ಹೈಸ್ಕೂಲು ತಂಡದಲ್ಲಿ ಸ್ಥಾನ ಪಡೆದಿದ್ದರು. ಶಿಕ್ಷನ ಮುಗಿಯುತ್ತಿದ್ದಂತೆಯೇ ‘ಬೆಂಗಳೂರು ಸ್ಟೂಡೆಂಟ್ಸ್’ ಮತ್ತು ‘ಮಹಾರಾಜ ಸೋಷಿಯಲ್ಸ್’ ಕ್ಲಬ್ಗಳ ಪರ ಆಡಿದ್ದರು ಆಟದ ಚಮತ್ಕಾರದಿಂದಾಗಿಯೇ ಇವರಿಗೆ ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸವೂ ಸಿಕ್ಕಿತ್ತು ನಂತರ ತಾವು ಎಷ್ಟೆ ಎತ್ತರಕ್ಕೆರಿದರೂ ಸತತ ೨೫ ವರ್ಷಗಳ ಕಾಲ ಇವರು ರಾಜ್ಯ ಪೊಲೀಸ್ ತಂಡದ ಪರ ಆಡಿದ್ದರು. ಮಿಡ್‌ಫೀಲ್ಡ್ ನಲ್ಲಿ ಚೆಂಡಿನ ಮೇಲೆ ಇವರು ಹೊಂದುತ್ತಿದ್ದ ನಿಯಂತ್ರಣ, ಎದುರಾಳಿಗಳನ್ನು ತಮ್ಮ ತಂಡದ ಆವರಣದೊಳಗೆ ಪ್ರವೇಶಶಿದಂತೆ ತಡೆಯುತ್ತಿದ್ದ ರೀತಿ ಅಂದಿನ ಪುಟ್‌ಬಾಲ್ ವಲಯದಲ್ಲಿ ಗಮನ ಸೆಳೆದಿತ್ತು ೧೯೪೪ರಲ್ಲಾಗಲೇ ಇವರು ರಾಜ್ಯ ತಂಡದಲ್ಲಿ ಸ್ಥಾನಗಳಿಸಿದ್ದರು. ಸ್ವಾತಂತ್ರ್ಯ ಬರುವುದಕ್ಕೆ ಒಂದು ವರ್ಷಕ್ಕೆ ಮೊದಲು ಇವರ ನಾಯಕತ್ವದ ಆಗಿನ ಮೈಸೂರು ರಾಜ್ಯ ತಂಡ ಮೊದಲ ಬಾರಿಗೆ ರಾಷ್ಟ್ರೀಯ ಪುಟ್ಬಾಲ್ ಚಾಂಪಿಯನ್‌ಷಿಪ್‌ನು ಪಡೆದುಕೊಂಡಿತ್ತು ೧೯೫೨ ರಲ್ಲಿ ದಶಕದ ಕಾಲ ಇವರು ರಾಜ್ಯ ತಂಡದ ನೇತೃತ್ವದಲ್ಲಿ ಆಡಿದ್ದರು. ಅದೇ ಸಂದರ್ಭದಲ್ಲಿ ಭಾರತ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿದ್ದು, ಡೆನ್ಮಾರ್ಕ್, ಸ್ವಿಟ್ಜರ್‌ಲೆಂಡ್, ಸ್ವೀಡನ್, ಆಸ್ಟ್ರಿಯ, ಜರ್ಮನಿಯ ನೆಲಗಳಲ್ಲಿ ಆಡಿದ್ದರು. ೧೯೬೦ರಲ್ಲಿ ಇವರು ಪಟಿಯಾಲದ ಎನ್‌ಐಎಸ್‌ನಲ್ಲಿ ತರಬೇತಿಗೆ ಸಂಬಂಧಿಸಿಂತೆ ಡಿಪ್ಲೊಮಾ ಪಡೆದರು. ೧೯೬೪ರಲ್ಲಿ ಟೋಲಿಯೊದಲ್ಲಿ ನಡೆದಿದ್ದ “ಫಿಫಾ” ವತಿಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡರು. ಆ ವರ್ಷದಿಮದ ೧೯೭೮ ರವರೆಗೆ ಅಂದರೆ ೧೪ ವರ್ಷಗಲ ಕಾಲ ಕರ್ನಾಟಕ ತಂಡದ ‘ಕೋಚ್‌ಗಳ ಬಳಗ’ದಲ್ಲಿದ್ದರು. ಭಾಷಾ ಮತ್ತು ಇವರ ಮಾರ್ಗದರ್ಶನದಲ್ಲಿ ರೂಪುಗೊಂಡ ಕರ್ನಾಟಕ ತಂಡ ೧೯೬೭ ಮತ್ತು ೬೮ರಲ್ಲಿ ಎರಡು ಸಲ ರಾಷ್ಟ್ರೀಯ ಚಾಂಪಿಯನ್‌ಷಿಪ್ ಗೆದ್ದಿತ್ತು. ಆಗ ಕರ್ನಾಟಕ ತಂಡದ ನಾಯಕರಾಗಿದ್ದ ಕೃಷ್ಣಾಜಿರಾವ್ ಜತೆ ಮಾತಿಗಿಳಿದಾಗ ಷಣ್ಮುಗಂ ನೈತಿಕ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು. ಷಣ್ಮುಗಂ ೧೯೭೭ ರಲ್ಲಿ ಇರಾನ್‌ನಲ್ಲಿ ನಡೆದಿದ್ದ ಏಷ್ಯಾ ಯುವ ಪುಟ್‌ಬಾಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಭಾರತ ತಂಡಕ್ಕೂ ತರಬೇತು ನೀಡಿದ್ದರು ಇವರು ಹಲವು ಸಲ ಭಾರತ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇವರು೧೯೭೯ರಿಂದ ಗೋವಾದ ಸಲಗಾಂವೃರ್ ಕ್ಲಬ್ಗೆ ತರಬೇತುದಾರರಾಗಿದ್ದು. ಆ ತಂಡ ಗೋವಾ ಲೀಗ್ ಅಲ್ಲದೆ,ರೋವರ್ಸ್ ಕಪ್, ಬಮದೋಡ್ಕರ್ ಕಪ್, ಫೇತರೇಷನ್ ಕಪ್ಗಳನ್ನು ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಗೋವಾ ರಾಜ್ಯ ತಂಡ ರಾಷ್ಟ್ರೀಯ ಚಾಂಪಿಯನ್‌ಷಿಪ್ ಗೆಲ್ಲುವಲ್ಲಿ ಇವರದೇ ಮಾರ್ಗದರ್ಶನ.
ವೃತ್ತಿ
[ಬದಲಾಯಿಸಿ]ಪುಟ್‌ಬಾಲ್‌ನಲ್ಲಿ ಹೆಚ್ಚು ಸಾಧನೆ ಮಾಡಿದ ಇವರು ತಮ್ಮನ್ನು ಕರ್ನಾಟಕ ಪೊಲೀಸ್ ಇಲಾಖೆಯೊಂದಿಗೆ ಹೆಚ್ಚು ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತಿದ್ದರು ತಾವು ಬ್ರಿಟಿಷ್ ಅಧಿಕಾರಿಗಳ ಅಡಿಯಲ್ಲಿ ಕೆಲಸ ಮಾಡಿದ್ದರು.ತಾವು ಇನ್ಸ್ಪೆಕ್ಟರ್ ಆಗಿದ್ದಾಗ ರಸ್ತೆ ನಿಯಮವನ್ನು ಉಲ್ಲಂಘಿಸಿದ್ದ ಸಚಿವರೊಬ್ಬರನ್ನು ಅಡ್ಡಗಟ್ಟಿದಾಗ, ಆ ಸಚಿವರು ಕಾರಿನಿಂದಿಳಿದು ತಮ್ಮನ್ನು ಶ್ಲಾಘಿಸಿದ್ದ ಘಟನೆಯನ್ನು ನೆನಪಿಕೊಲ್ಳುತ್ತಿದ್ದರು.
ಪ್ರಶಸ್ತಿ
[ಬದಲಾಯಿಸಿ]ಸಂತೋಷ್ ಟ್ರೋಫಿ, ರಾಷ್ಟ್ರೀಯ ಚಾಂಪಿಯನ್‌ಷಿಪ್, ರಾಜ್ಯದ ಅತ್ಯುನ್ನತ ರಾಜ್ಯ ಪ್ರಶಸ್ತಿ.