ವಿಷಯಕ್ಕೆ ಹೋಗು

ಶ್ವೇತಕೇತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ವೇತಕೇತು
ಪೋಷಕ
  • ಉದ್ಧಾಲಕ ಅರುಣಿ (father)

ಶ್ವೇತಕೇತು ಒಬ್ಬ ಋಷಿ. ಅವನನ್ನು ಚಾಂಡೋಗ್ಯ ಉಪನಿಷತ್ತಿನಲ್ಲಿ ಉಲ್ಲೇಖಿಸಲಾಗಿದೆ. ಆತನು, ಅರುಣಿ ಎಂಬ ಹೆಸರು ಹೊಂದಿದ್ದ, ಜ್ಞಾನದ ಸರ್ವೋತ್ಕೃಷ್ಟ ಅನ್ವೇಷಕನನ್ನು ಪ್ರತಿನಿಧಿಸುತ್ತಿದ್ದ, ಉದ್ಧಾಲಕ ಎಂಬ ಋಷಿಯ ಮಗನಾಗಿದ್ದನು. ಉಪನಿಷತ್ತುಗಳು ಶ್ವೇತಕೇತು ಅಜ್ಞಾನದಿಂದ ಸತ್ಯದ ಜ್ಞಾನದೆಡೆಗೆ ಪಯಣಿಸುವುದನ್ನು ವಿವರಿಸುತ್ತದೆ.

"ಹೆಂಡತಿ ತನ್ನ ಇಡೀ ಜೀವನದಲ್ಲಿ ಒಬ್ಬನೇ ಗಂಡನಿಗೆ ನಿಷ್ಠಳಾಗಿರುವ" ಅಭ್ಯಾಸವನ್ನು ಸೃಷ್ಟಿಸಿದ ಕೀರ್ತಿ ಶ್ವೇತಕೇತುವಿಗೆ ಸಲ್ಲುತ್ತದೆ.[೧]

ಶ್ವೇತಕೇತುವನ್ನು ಮೂರು ಪ್ರಮುಖ (ಮುಖ್ಯ) ಉಪನಿಷತ್ತುಗಳಲ್ಲಿ ಉಲ್ಲೇಖಿಸಲಾಗಿದೆ. ಅವುಗಳೆಂದರೆ ಬೃಹದಾರಣ್ಯಕ ಉಪನಿಷತ್ತು ಪರಿಚ್ಛೇದ ೬.೨.೧ ರಿಂದ ೬.೨.೮, ಚಾಂಡೋಗ್ಯ ಉಪನಿಷತ್ತು ೫.೩ ಮತ್ತು ಕೌಸಿತಕಿ ಪರಿಚ್ಛೇದ ೧. ಚಾಂಡೋಗ್ಯ ಉಪನಿಷತ್ತಿನ ಹದಿನಾರು ಅಧ್ಯಾಯಗಳಲ್ಲಿ ೬ನೇ ವಿಭಾಗದಲ್ಲಿ ಶ್ವೇತಕೇತುವು ಜ್ಞಾನವನ್ನು ಸ್ವೀಕರಿಸುವ ಕುರಿತು ಹೇಳಲಾಗಿದೆ.

ಮೊದಲ ಪುನರ್ಜನ್ಮದ ಕಥೆ[ಬದಲಾಯಿಸಿ]

ವೇದಗಳನ್ನು ಮತ್ತು ಮಾನವ ಇತಿಹಾಸಕ್ಕೆ ತಿಳಿದಿರುವ ಎಲ್ಲಾ ಬರಹಗಳನ್ನು ಗಣನೆಗೆ ತೆಗೆದುಕೊಂಡರೆ ಪುನರ್ಜನ್ಮದ ಕುರಿತಾದ ಉಲ್ಲೇಖವು ಮೊದಲ ಬಾರಿಗೆ ಬಂದಿರುವುದು ಚಾಂಡೋಗ್ಯ ಉಪನಿಷತ್ತಿನಲ್ಲಿರುವ ಶ್ವೇತಕೇತುವಿನ ಕಥೆಯಿಂದ. ಕಥೆಯಲ್ಲಿ, ಶ್ವೇತಕೇತು ಅಧ್ಯಯನದ ನಂತರ ತನ್ನ ಮನೆಗೆ ಹಿಂದಿರುಗುತ್ತಾನೆ ಮತ್ತು ಅವನ ಬಾಲ್ಯದ ಸ್ನೇಹಿತರು ಮರಣಾನಂತರದ ಜೀವನದ ಬಗ್ಗೆ ಅವನು ತನ್ನ ಅಧ್ಯಯನದಲ್ಲಿ ಏನು ಕಲಿತಿದ್ದಾನೆ ಎಂದು ಕೇಳುತ್ತಾರೆ. ಅದಕ್ಕೆ ಅವನು ಅದು ತನ್ನ ಪಠ್ಯಕ್ರಮದ ಭಾಗವಲ್ಲ ಎಂದು ಉತ್ತರಿಸುತ್ತಾನೆ. ಅವರು ಶ್ವೇತಕೇತುವಿನ ತಂದೆಯನ್ನು ಕೇಳುತ್ತಾರೆ. ಅವರಿಗೂ ಅದು ತಿಳಿದಿರುವುದಿಲ್ಲ. ಆದ್ದರಿಂದ ಅವರು ರಾಜನನ್ನು ಕೇಳುತ್ತಾರೆ, ಆತನು ತಾನು ಎಲ್ಲದರ ಬಗ್ಗೆ ತಿಳಿದವನು ಎಂದು ಹೇಳಿಕೊಳ್ಳುತ್ತಾನೆ ಮತ್ತು ಪುನರ್ಜನ್ಮದ ಪರಿಕಲ್ಪನೆಯನ್ನು ವಿವರಿಸುತ್ತಾನೆ. ರಾಜನು "ಇದು ಕ್ಷತ್ರಿಯ (ಯೋಧ ಮತ್ತು ಆಡಳಿತ ವರ್ಗ) ರಲ್ಲಿರುವ ಸಾಮಾನ್ಯ ನಂಬಿಕೆಯಾಗಿದೆ ಮತ್ತು ಈ ನಂಬಿಕೆಯಿಂದಲೇ, ಅವರು ತಮ್ಮ ಯುದ್ಧದಲ್ಲಿ ಧೈರ್ಯದಿಂದ ಹೋರಾಡುತ್ತಾರೆ" ಎಂದು ಹೇಳುತ್ತಾನೆ. .[೨]

ಉಲ್ಲೇಖಗಳು[ಬದಲಾಯಿಸಿ]

  1. Paul Thomas (1960). Kama Kalpa, or The Hindu Ritual of Love. D.B. Taraporevala. p. 3.
  2. "Does the Rig-Veda Mention Reincarnation or not? : Part 1 | Hindu Human Rights Worldwide". www.hinduhumanrights.info. 4 April 2013. Retrieved 23 April 2020.

೧. ಪಾಲ್ ಧಾಮಸ್ ೧೯೬೦ . ಕಾಮ ಕಲ್ಪ, ಆರ್ ದಿ ಹಿಂದೂ ರಿಚುಯಲ್ ಆಫ್ ಲವ್

ಇದನ್ನೂ ಓದಿ[ಬದಲಾಯಿಸಿ]

  • ಕಿಸಾರಿ ಮೋಹನ್ ಗಂಗೂಲಿ ಸಂಪುಟ ೧, ಸ್ಥಳ ೫೦೬೦ರ ಕೃಷ್ಣ ದ್ವೈಪಾಯನ ವ್ಯಾಸರ ಮಹಾಭಾರತ
  • ಎಸ್. ರಾಧಾಕೃಷ್ಣನ್, ಪ್ರಧಾನ ಉಪನಿಷತ್ತುಗಳು
  • ಶ್ರೀ ಅರಬಿಂದೋ, ಉಪನಿಷತ್ತುಗಳು .[೧][ಶಾಶ್ವತವಾಗಿ ಮಡಿದ ಕೊಂಡಿ] ಶ್ರೀ ಅರಬಿಂದೋ ಆಶ್ರಮ, ಪಾಂಡಿಚೇರಿ. ೧೯೭೨