ವಿಷಯಕ್ಕೆ ಹೋಗು

ಶ್ರೀ ಶಿವ ಭಕ್ತ ಬೇಡರ ಕಣ್ಣಪ್ಪನ ದೇವಸ್ಥಾನ ಬಸವನಗುಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಶಿವ ಭಕ್ತ ಬೇಡರ ಕಣ್ಣಪ್ಪ ದೇವಸ್ಥಾನ ಬಸವನಗುಡಿ
Native name
ಕನ್ನಡ:ಶ್ರೀ ಕನ್ನೇಶ್ವರ ದೇವಸ್ಥಾನ
Sri Shiva bhakta bedara kannappa temple basavanaguddi
ಸ್ಥಳಬಸವನಗುಡಿ,ಬೆಂಗಳೂರು, ಕರ್ನಾಟಕ 560019.
ಸ್ಥಾಪನೆಗುಜ್ಜಲ ಓಬನಾಯಕ

ಬೆಂಗಳೂರಿನ ಐತಿಹಾಸಿಕ ದೇವಾಲಯಗಳಲ್ಲಿ ಬಸವನಗುಡಿಯ ಇತಿಹಾಸ ಪ್ರಸಿದ್ಧ ಶಿವ ಭಕ್ತ ಬೇಡರ ಕಣ್ಣಪ್ಪನ ದೇವಸ್ಥಾನವೂ ಒಂದು. ಈ ದೇವಾಲಯ ಬಸವನಗುಡಿಯ ದೊಡ್ಡ ಬಸವಣ್ಣ ಹಾಗೂ ದೊಡ್ಡ ಗಣಪತಿಯ ದೇವಸ್ಥಾನದ ಮುಂದೆ ಇದೆ. ಈ ದೇವಾಲಯವು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಸುಮಾರು 5 ಕಿ. ಮೀ ದೂರದಲ್ಲಿದೆ.

ಇತಿಹಾಸ

[ಬದಲಾಯಿಸಿ]

ಕೆಂಪೇಗೌಡರ ಕಾಲದಲ್ಲಿ ಶತ್ರುಗಳು ಬರುವದನ್ನು ಗಮನಿಸಿ, ಕಹಳೆ ಉದ್ದಿ ಜನರನ್ನು ಎಚ್ಚರಿಸುವುದಕ್ಕಾಗಿ ಒಂದು ಪಡೆಯನ್ನು ನೇಮಿಸಿದ್ದರು. ಇವರು ಕಹಳೆ ಗೋಪರದಲ್ಲಿ ನಿಂತು ರಾಜ್ಯದ ನಾಲ್ಕು ದಿಕ್ಕಿನಲ್ಲಿ, ಕಣ್ ಹಾಯಿಸಿ ಎಚ್ಚರಿಕೆಯಿಂದ ನಗರವನ್ನು ಕಾಯುತ್ತಿದ್ದರು, ಈ ಪಡೆಯ ನಾಯಕರಾದ ಗುಜ್ಜಲ ಓಬನಾಯಕ ಎಂಬುವನು ತಮ್ಮ ಜನಾಂಗದ ಕುಲ ದೇವರಾದ "ಬೇಡರ ಕಣ್ಣಪ್ಪನ ದೇವಾಲಯವನ್ನು ಸ್ಥಾಪಿಸಲು ತೀರ್ಮಾನಿಸಿ, ಕೆಂಪೇಗೌಡರ ಅನುಮತಿ ಪಡೆದು, ಬಂಡೆಯೊಂದರ ಮೇಲೆ ಶಿವಲಿಂಗ ಹಾಗೂ ಬೇಡರ ಕಣ್ಣಪ್ಪ ತನ್ನ ಕಣ್ಣನ್ನು ಕಿತ್ತಿ ಶಿವನಿಗೆ ಅರ್ಪಿಸು ತಿರುವಂತೆಯೂ ಹಾಗೂ ಆನೆಯೊಂದು ಈ ಶಿವಲಿಂಗಕ್ಕೆ ಹಾರ ಅರ್ಪಿಸುತ್ತಿ ರುವಂತೆಯೂ ಇರುವ ಕೆತ್ತನೆ ಮಾಡಿಸಿ ದೇವಾಲಯವನ್ನು ನಿರ್ಮಿಸಿದನು.[೧]

ಉತ್ಸವಗಳು

[ಬದಲಾಯಿಸಿ]

ಇಂದಿಗೂ ಬೇಡರ ಜನಾಂಗಕ್ಕೆ ಈ ದೇವಸ್ಥಾನವೇ ಪ್ರಧಾನವಾಗಿದೆ ಮಹಾಶಿವರಾತ್ರಿಯ ದಿನ ಕರ್ನಾಟಕದ ನಾನಾ ಮೂಲಗಳಿಂದ ಈ ಬೇಡರ ಜನಾಂಗದವರು ಈ ಕಣ್ಣಪ್ಪ ದೇವಸ್ಥಾನಕ್ಕೆ ತಮ್ಮ ಕುಟಂಬ ಸಮೇತ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಶಿವಭಕ್ಕೆ ಕಣ್ಣಪ್ಪನ ಜಯಂತಿಯನ್ನು ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ.[೨]

ವಿಶೇಷತೆ

[ಬದಲಾಯಿಸಿ]

ಹಿಂದೆ, ಹರಕೆ ಹೊತ್ತವರು ಬಾಯಿಗೆ ಬೀಗ, ಕಳಸ, ಕನ್ನಡಿ, ಆರತಿ, ಮಂಗಳವಾದ್ಯ ಕೋಲು ಕುಣಿತ, ತಮಟೆ ಇತ್ಯಾದಿ ಮೆರವಣಿಗೆ ಸಮೇತ ಕಣ್ಣಪ್ಪನ ದೇವಸ್ತಾನಕ್ಕೆ ಆಗಮಿಸಿ ಸ್ವಾಮಿಗೆ ವಿಶೇಷ ಅಭಿಷೇಕ ಪೂಜೆ, ಪರಾವು, ಅರವಟ್ಟಿಗೆ, ಜಾಗರಣೆ ಹಾಗೂ ಇನ್ನೂ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ತಮ್ಮ ಕೌಟುಂಬಿಕ ವ್ಯವಹಾರ ಇತ್ಯಾದಿಗಳು ಇಲ್ಲೇ ತೀರ್ಮಾನ ಮಾಡುತ್ತಿದ್ದರು.[೩]

ದೇವಸ್ಥಾನದ ಜಿರ್ಣೋದ್ದರ

[ಬದಲಾಯಿಸಿ]

ಬೇಡ ಜನಾಂಗದ ಏಕೈಕ ದೇಗುಲವಾದ ಈ ಕಣ್ಣಪ್ಪ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲು 1981 ರಲ್ಲಿ ಜಿರ್ಣೋದ್ದರ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯವರ ದೈವಭಕ್ತಿ ಶ್ರದ್ಧೆಗಳಿಂದಾಗಿ ದೇವಸ್ಥಾನದ ಮುಂಭಾಗದಲ್ಲಿ ನವಗ್ರಹ ವೃಕ್ಷಗಳನ್ನು ನೆಡಲಾಯಿತು. ಹಾಗೂ ಒಂದು ಕಟ್ಟೆಯನ್ನು ಕಟ್ಟಿ ಕಲ್ಲುಚಪ್ಪಡಿಗಳನ್ನು ಹಾಸಲಾಯಿತು,

ಉಲ್ಲೇಖಗಳು

[ಬದಲಾಯಿಸಿ]
  1. ಗೋಪಾಲ್, ಡಾ . ಆರ್ . (2013). ಬೆಂಗಳೂರು ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ. ಮೈಸೂರು: ಪ್ರಾಚ್ಯ ವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ. p. 56.
  2. ವಸಂತಲಕ್ಷ್ಮಿ, ಡಾ. ಕೆ. (2005). ಬೆಂಗಳೂರು ದರ್ಶನ ಸಂಪುಟ ೧. ಕೆಂಪೇಗೌಡ ನಗರ ಬೆಂಗಳೂರು: ಉದಯ ಭಾನು ಕಲಾ ಸಂಘ. p. 431.
  3. ರಂಗಸ್ವಾಮಿ, ಎಸ್. (1994). ಕರ್ನಾಟಕದ ದೇವಾಲಯಗಳು. ವಿಜಯನಗರ 2ನೇ ಹಂತ ಬೆಂಗಳೂರು: ಸ್ನೇಹಾ ಮುದ್ರಣ. p. 8.{{cite book}}: CS1 maint: location (link)