ಶ್ರೀ ವ್ಯಾಡೇಶ್ವರ ಶಿವ ದೇವಾಲಯ
ಶ್ರೀ ವ್ಯಾಡೇಶ್ವರ ಶಿವ ದೇವಾಲಯ
[ಬದಲಾಯಿಸಿ]ಇದು ಮಹಾರಾಷ್ಟ್ರ ರಾಜ್ಯದ ರತ್ನಾಗಿರಿ ಜಿಲ್ಲೆಯಲ್ಲಿರುವ ಗುಹಾಘರ್ ಎಂಬ ಊರಿನಲ್ಲಿದೆ. ಶ್ರೀ ವ್ಯಾಡೇಶ್ವರನು ಬಹಳಷ್ಟು ಚಿತ್ಪಾವನರ ಕುಲದೇವತೆ.
ಹಿನ್ನೆಲೆ
[ಬದಲಾಯಿಸಿ]ಹಿಂದೂಗಳ ನಂಬಿಕೆಯಂತೆ, ಭಗವಾನ್ ಶ್ರೀ ಪರಶುರಾಮರು ಕೊಡಲಿ ಬೀಸಿ ಸಮುದ್ರವನ್ನು ಹಿಂದೆ ಸರಿಯುವಂತೆ ಮಾಡಿ ಗಳಿಸಿದ ಭೂಮಿಯನ್ನು, ಕಶ್ಯಪರಿಗೆ ದಾನವಾಗಿ ಕೊಟ್ಟು, ಭಗವಾನ್ ಶಿವನನ್ನು ಈ ಜಾಗದಲ್ಲಿಯೇ ಇದ್ದು ದಿನಾಲೂ ತನಗೆ ದರ್ಶನ ನೀಡುವಂತೆ ಬೇಡಿಕೊಂಡಾಗ, ಶಿವನು ಒಪ್ಪಿದನಂತೆ. ತದನಂತರ, ಪರಶುರಾಮನು ಅರವತ್ತು ವಿಪ್ರರನ್ನು ಅಲ್ಲಿಗೆ ಕರೆಸಿಕೊಂಡರಂತೆ. ಅವರಲ್ಲಿ ವ್ಯಾಡ ಎಂಬ ವಿಪ್ರನು, ಶಿವಲಿಂಗವೊಂದನ್ನು ಇಲ್ಲಿ ಸ್ಥಾಪಿಸಿದನಂತೆ. ಮುಂದೆ ರಾಜ ಸಕುರಾನ್ ಎಂಬುವನು ಈ ಲಿಂಗಕ್ಕಾಗಿ ದೇವಾಲಯವೊಂದನ್ನು ಕಟ್ಟಿಸಿದನಂತೆ. ಅದೇ ಈಗ ನಾವು ನೋಡುತ್ತಿರುವ ದೇವಾಲಯ. ಅದೇನೇ ಇದ್ದರೂ, ಈ ದೇವಾಲಯವು ಅತ್ಯಂತ ಅದ್ಭುತವಾಗಿ ಕಟ್ಟಿಸಿದ್ದು, ಮಧ್ಯದಲ್ಲಿ ಶಿವ ಪ್ರತಿಷ್ಟಾಪನೆ ಯಾಗಿದ್ದು, ನಾಲ್ಕೂ ಮೂಲೆಗಳಲ್ಲಿ, ಸೂರ್ಯ, ಗಣೇಶ, ಪಾರ್ವತಿ, ವಿಷ್ಣು ಮತ್ತು ಲಕ್ಶ್ಮಿ ಪ್ರತಿಷ್ಟಾಪನೆ ಮಾಡಲಾಗಿದೆ. ಮಧ್ಯದಲ್ಲಿರುವ ಶಿವನ ಎದುರು ಭವ್ಯವಾದ ನಂದಿಯನ್ನು ಪ್ರತಿಷ್ಟಾಪಿಸಲಾಗಿದೆ. ಈ ದೇವಾಲಯಕ್ಕೆ ಪೂರ್ವ, ಪಶ್ಚಿಮ ಹಾಗೂ ದಕ್ಷಿಣದ ಕಡೆಯಿಂದ ಮೂರು ಬಾಗಿಲುಗಳಿವೆ. ಈ ಬಾಗಿಲುಗಳ ಮುಖಾಂತರ ಒಳಹೊಕ್ಕರೆ, ಮುಖ್ಯ ದ್ವಾರದ ಅಕ್ಕ ಪಕ್ಕದಲ್ಲಿ ಗರುಡ ಮತ್ತು ಮಾರುತಿಯ ವಿಗ್ರಹಗಳಿವೆ. ಅಂತೂ ರುದ್ರಗಂಭೀರ ಸುಂದರ ದೇವಾಲಯವಿದಾಗಿದ್ದು, ಸದಾ ಭಕ್ತಾದಿಗಳಿಂದ ತುಂಬಿಕೊಂಡಿರುತ್ತದೆ. ಇಲ್ಲಿ ಪ್ರಸಿದ್ಧ ಸಮುದ್ರ ತಟವೂ, ಶ್ರೀ ದುರ್ಗಾದೇವಿಯ ಮಂದಿರವೂ ಇದೆ.