ಶ್ರೀ ವೇಥಾಥಿ ಮಹರ್ಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರಿ ವೇಥಾಥಿ ಮಹರ್ಷಿ
Born೧೪ ಆಗಸ್ಟ್ ೧೯೧೧
ಗುಡುವನ್‌ಚೇರಿ,ತಮಿಳುನಾಡು
Died೦೩ ಮಾರ್ಚ್‌ ೨೦೦೬
ಕೊಯಂಬತ್ತೂರು

ಶ್ರಿ ವೇಥಾಥಿ ಮಹರ್ಷಿ[ಬದಲಾಯಿಸಿ]

ಯೋಗಿರಾಜ್ ಮಹರ್ಷಿ ಒಬ್ಬ ಆಧ್ಯಾತ್ಮಿಕ ನಾಯಕರು ಮತ್ತು ೧೯೫೮ ಚೆನೈನಲ್ಲಿ ವಿಶ್ವ ಸಮುದಾಯ ಕೇಂದ್ರ ಸೇವಯ ಸಂಸ್ಥಾಪಕರಾಗಿದ್ದರು. ಇವರು ೩೦೦ ಯೋಗ ಕೇಂದ್ರಗಳನ್ನು ಮತ್ತು ಕೆಲವು ಪುಸ್ತಕಗಳನ್ನು ಬರೆದು ಸ್ಥಾಪಿಸಿದರು. ಅವುಗಳಲ್ಲಿ ಕೆಲವು ಶೈಕ್ಷಣಿಕ ಪುಸ್ತಕ ಗಳಾದವು. ೧೯ನೇ ಶತಮಾನದಲ್ಲಿ ಇವರನ್ನು ಸಿದ್ದ ಎಂದು ದ್ರಾವಿಡ ವಿಶ್ವವಿದ್ಯಾಲಯವು ಗುರುತಿಸಿತು.

ಜನನ[ಬದಲಾಯಿಸಿ]

ಇವರು ೧೪ ಆಗಸ್ಟ್ ೧೯೧೧ ಗುಡುವನ್‌ಚೇರಿ ಹಳ್ಳಿಯ, ಒಂದು ಬಡ ನೇಕಾರ ಕುಟುಂಬದಲ್ಲಿ ಜನಿಸಿದರು.

ಆರಂಭಿಕ ಜೀವನ[ಬದಲಾಯಿಸಿ]

ಬಹಳ ವರ್ಷಗಳ ಕಾಲ ಹಲವಾರು ಸಣ್ಣ ಉದ್ಯೋಗಗಳನ್ನು ಮಾಡಿ, ಜವಳಿ ಕಾಳಜಿ ಎಂಬ ಸಂಸ್ಥೆ ಪ್ರಕಟಿಸಿದರು. ಇದರಿಂದ ೨೦೦೦ ಕಾರ್ಮಿಕರಿಗೆ ಉದ್ಯೋಗ ದೊರೆಯಿತು. ೩೫ ವರ್ಷದಲ್ಲಿ ಅವರು ಆತ್ಮಾವಲೋಕನ ಮತ್ತು ತೀವ್ರಧ್ಯಾನದಲ್ಲಿ ನಿಯಮಿತವಾಗಿ ಭಾಗವಹಿಸಿದರು. ಅವರು ೫೦ನೇ ವರ್ಷದಲ್ಲಿ ವಾಣಿಜ್ಯ ಉದ್ದಿಮೆಗಳನ್ನು ಮುಚ್ಚಿ ಕೇವಲ ಆಧ್ಯಾತ್ಮಿಕ ಸೇವೆಯಲ್ಲೆ ಕಳೆಯತೊಡಗಿದರು. ಮತ್ತು ಇವರು ತಮ್ಮ ಕುಟುಂಬವನ್ನು ಬಿಡದೆ ಒಬ್ಬ ಸ್ಥಳೀಯ ಸಿದ್ಧ ಸಂಪ್ರದಾಯದಲ್ಲಿ ತಮ್ಮ ಕುಟುಂಬವನ್ನು ನಿರ್ವಹಿಸುತ್ತಿದ್ದರು.

ಕವನಗಳು ಮತ್ತು ಪುಸ್ತಕಗಳು[ಬದಲಾಯಿಸಿ]

ಇವರು ತಾತ್ವಿಕ ವಿಷಯಗಳ ಬಗ್ಗೆ ೩೦೦೦ ಕವನಗಳನ್ನು ಬರೆದರು. ಭಾರತೀಯ ತಾತ್ವಿಕ ಸಂಪ್ರದಾಯದ ಪ್ರಕಾರ ಅವನ ತತ್ವಶಾಸ್ತ್ರ, ಶುದ್ಧ ಅದ್ವೈತಕ್ಕೆ ಸಂಬಂಧಪಟ್ಟಿರಿತ್ತದೆ, ಅಂದರೆ ದೇವರು ಒಂದೇ ಎಂದು ಹೇಳುತ್ತದೆ. ಇದನ್ನು ಸರ್ವದೇವತಾರಾಧನೆ ಏಕತತ್ವವಾದದು ಎಂದು ಕರೆಯಲಾಗುತ್ತದೆ. ಅವರ ಭಾಷೆ ಮತ್ತು ವರ್ತನೆಗಳಲ್ಲಿ, ಸಮಕಾಲಿನ ಅನುಭವವಿದೆ. ಇವರು ೮೦ ಪುಸ್ತಕಗಳನ್ನು ತಮಿಳು ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ಬರೆದು, ಇದನ್ನು ಸಾಯುವ ತನಕ ಬರೆಯಲು ಮುಂದುವರಿಸಿದರು.

ಆಧ್ಯಾತ್ಮಿಕ ಭೋಧನೆಗಳು[ಬದಲಾಯಿಸಿ]

ದೇವರು ಎಂದರೇನು? ಜೀವನ ಎಂದರೇನು? ವಿಶ್ವದಲ್ಲಿ ಬಡತನಕ್ಕೆ ಕಾರಣವೇನು ? ಈ ಮೂರು ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನದಲ್ಲಿದ್ದರು ಮತ್ತು ಮುಂದೆ ಬಹಳಷ್ಟು ವಿವಿಧ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿ ವಿಚಾರವಂತರಾಗಿದ್ದರು, ಎರಡು ಸ್ಥಳೀಯ ಔಷಧಿಗಳೊಲ್ಲೊಂದಾ ಸಿದ್ದ ಮತ್ತು ಆಯುರ್ವೇಧ ಶಾಸ್ತ್ರದ ವೈದ್ಯರಾಗಬೇಕೆಂದರು. ಮತ್ತು ಹೋಮಿಯೋಪಥಿ ವೈಧ್ಯರಾಗಿ ಪ್ರಮಣಿತಗೊಂಡರು. ಇವರು ೫೦ ವರ್ಷವಿದ್ದಾಗ ವ್ಯಾಪಾರವನ್ನು ಬಿಟ್ಟು. ಸ್ವಯಂಘೋಷಿತ ದೈವಿಕ ಜ್ಞಾನವನ್ನು ಹೇಳಿಕೊಡಲು ಸಿದ್ದರಾದರು. ಅನೇಕ ಪುಸ್ತಕಗಳನ್ನು ಇಂಗ್ಲೀಷ್‌ ಮತ್ತು ತಮಿಳಿನಲ್ಲಿ ಪ್ರಕಟಿಸಿದರು. ೧೯೭೨-೧೯೮೩ ಅವಧಿಯಲ್ಲಿ ಅಮೇರಿಕಾ, ಯುರೋಪ್‌, ಮಲೇಷ್ಯಾ, ಸಿಂಗಪುರ, ದಕ್ಷಿಣ ಕೊರಿಯ, ಜಪಾನ್‌ ಮತ್ತು ಮೆಕ್ಸಿಕೊ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದರು.

ಸಂಸ್ಥೆಗಳು[ಬದಲಾಯಿಸಿ]

೧೯೫೮ ರಲ್ಲಿ ಶ್ರೀ ವೇಥಾಥ್ರಿ ಮಹರ್ಷಿ ವಿಶ್ವ ಸಮುದಾಯ ಸೇವ ಕೇಂದ್ರ (wcsc), ವೈಯಕ್ತಿಕ ಶಾಂತಿ ಮೂಲತಹ, ವಿಶ್ವ ಶಾಂತಿ ಕಡೆಗೆ ಕೆಲಸದ ದೃಷ್ಟಿಯಿಂದ ಒಂದು ಲಾಭರಹಿತ ನೋಂದಾಯಿತ ಸೊಸೈಟಿ ಸ್ಥಾಪಿಸಿದರು. ಇಂದು ಹೆಚ್ಚು ೨೦೦ ಮಾನ್ಯತ ಕೇಂದ್ರಗಳು, ೧೦೦೦ ಧ್ಯಾನ ಕೇಂದ್ರಗಳು ವಿಶ್ವ ಸಮುದಾಯ ಸೇವಕೇಂದ್ರದಲ್ಲಿ ನೋಂದಾಯಿಸಲಾಗಿದೆ ಅದು ಭಾರತದಲ್ಲಿ. ೧೯೭೨-೧೯೯೩ ರಲ್ಲಿ ಅವರು ವಿದೇಶಿ ಪ್ರಯಣ ಮಾಡಿದರು, ಅದು ಜಪಾನ್‌, ಸೌಥ್‌ ಕೋರಿಯ, ಮಲೇಶಿಯಾ, ಸಿಂಗಪುರ, ಯುಎಸ್‌ಎ. ೧೯೮೪ ರಲ್ಲ್ಲಿ ಅವರು ಅಲಿಯಾರ್‌ ಮೂಲಕ ವೇಥಾಥಿ ಮಹರ್ಷಿಯರು ಯೋಗ ಮತ್ತು ಕಾಯ ರಿಸರ್ಶ ಫೌಂಡೆಷನ್‌ ಸ್ಥಾಪಿಸಿದರು. ಕುಂಡಲಿನಿ ಯೋಗ, ದೈಹಿಕ ವ್ಯಯಾಮ, ಕಾವ್ಯ ಕಲ್ಪ ಯೋಗದ ಮೂಲಕ ಮಾನವೀಯತೆಯನ್ನು ಬೆಳೆಸುವುದಕ್ಕೆ ಜೀವನದಲ್ಲಿ ವಿಜ್ಞಾನದ ಬಗ್ಗೆ ಸಂಶ್ಲೇಪಿಸಲು ವೇಥಾಥ್ರಿಯವರು ಮುಂದೆ ಹೋಗುತ್ತಾರೆ. ಇವರ ಜೀವಿತಾವಧಿಯ ಕೃತಿಯನ್ನು ವೆಥತಿರಿಯಂ ಎಂದು ಕರೆಯುತ್ತಾರೆ. ಇವರು ೨೦೦೬ರಲ್ಲಿ ನಿಧನರಾದರು.[೧]

ವೇಥಾಥ್ರಿಯವರು ಅಂಕೆಯಿಲ್ಲವೆಂದು ಯಾವುದಕ್ಕೊ ಹೇಳುತ್ತಾರೆ ಅದಕ್ಕೆ ರಾಜ್ಯದ ಎರಡು ಅಂತರ್ಗತ ಲಕ್ಷಣಗಳಿವೆ.

 • ಫೋರ್ಸ್‌ ಅಥವಾ ಗುರುತ್ವಾಕರ್ಷಣೆ ‍(ಗ್ರಾವಿಟಿ)
 • ಪ್ರಜ್ಞೆ

ವೇಥಾಥಿ ಮಹರ್ಷಿಯವರ ಜೀವನ ಸೂತ್ರಗಳು[ಬದಲಾಯಿಸಿ]

 1. ಯುದ್ಧವಿಲ್ಲದ ಪ್ರಪಂಚ.
 2. ಆರ್ಥಿಕ ನ್ಯಾಯ.
 3. ಪ್ರಾಮಾಣಿಕ ನ್ಯಾಯಾಂಗ.
 4. ಒಂದೇ ವಿಶ್ವ ಸಂಯುಕ್ತ ಸರ್ಕಾರ.
 5. ಸಂಸ್ಕೃತಿಯ ಸುಧಾರಣೆ.
 6. ಬುದ್ಧಿ ಜೀವಗಳ ಮಾರ್ಗದರ್ಶನದಲ್ಲಿ ಜೀವಿಸುವುದು.
 7. ಸ್ತ್ರೀತ್ವಕ್ಕೆ ಗೌರವ ಮತ್ತು ಸಂಪೂರ್ಣ ಸಮಾನ ಹಕ್ಕುಗಳ ನೀಡಿಕೆ.
 8. ಪ್ರಕೃತಿ ನಿಯಮಕ್ಕೆ ಅನುಗುಣವಾಗಿ ಜೀವಿಸುವುದು.
 9. ಅನಾವಶ್ಯಕ ಶಾಸ್ತ್ರಾ ವಿಧಿಗಳು ಮತ್ತು ಹಬ್ಬಗಳ ದೂರೀಕರಣ
 10. ಆಟಗಳನ್ನು ವ್ಯಾಪಾರೀಕರಿಸದೆ ಮಕ್ಕಳಿಗಾಗಿ ಮಾತ್ರ ಸೀಮಿತಗೊಳಿಸುವುದು.
 11. ಕಾರಣದ ನಿಯಮದ ಬೋಧನೆಯನ್ನು ಶೈಕ್ಷಣಿಕ ಪಠ್ಯಾವಳಿಯಲ್ಲಿ ಸೇರಿಸುವುದು.
 12. ಕಾಂತತ್ವ ತತ್ವಜ್ಞಾನದ ವಿವರಣೆ.
 13. ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ನೀರು ಮತ್ತು ಆಹಾರದ ಲಭ್ಯತೆ.
 14. ಸ್ವ ಸಮ್ಮತವಾದ ಒಂದೇ ವಿಶ್ವ ಧರ್ಮವನ್ನು ವ್ರದ್ಧಿಪಡಿಸಲು ಒಂದೇ ಸತ್ಯ(ದೈವ)ದ ಬಗ್ಗೆ ಸಾರ್ವಜನಿಕ ಒಪ್ಪಂದ.

ಹೊರಗಿನ ಕೊಂಡಿಗಳು[ಬದಲಾಯಿಸಿ]

ಉಲೇಖನಗಳು[ಬದಲಾಯಿಸಿ]

 1. "ಮಹರ್ಷಿಯವರ ನಿಧನ".