ವಿಷಯಕ್ಕೆ ಹೋಗು

ಶ್ರೀ ಪಾಶ್ರ್ವನಾಥ ಸ್ವಾಮಿ ಗುರುಬಸದಿ (ಸಿದ್ಧಾಂತ ಬಸದಿ), ಮೂಡುಬಿದರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಗವಾನ್ ಶ್ರೀ ಪಾಶ್ರ್ವನಾಥ ಸ್ವಾಮಿ ಬಸದಿಯು ಗುರುಗಳ ಬಸದಿಯ ಎಂದು ಪ್ರಖ್ಯಾತವಾಗಿದೆ. ಇದು ಶ್ರೀ ಮಠದಿಂದ 200 ಮೀಟರ್ ದೂರ ಪೂರ್ವದಿಕ್ಕು ಬಸ್ ನಿಲ್ದಾಣದಿಂದ ಒಂದೂವರೆ ಕಿಲೋಮೀಟರ್ ಈಶಾನ್ಯ ದಿಕ್ಕಿನಲ್ಲಿ ಇದೆ. ನಾಡಿನ ಅತ್ಯಂತ ಪ್ರಾಚೀನ ಜಿನಾಲಯಗಳಲ್ಲಿ ಒಂದೊಂದು ಪ್ರಸಿದ್ಧವಾಗಿದೆ. ಇದಕ್ಕೆ ಉತ್ತರ ದಿಕ್ಕಿನಲ್ಲಿ ಕೋಟೆ ಬಸದಿ ದಕ್ಷಿಣಕ್ಕೆ ಲೆಕ್ಕದಲ್ಲಿ ಪಶ್ಚಿಮಕ್ಕೆ ವಿಕ್ರಮಶಕೆ ಬಸದಿಯಿದೆ. ಗುರುಗಳ ಬಸದಿಯ ಜೈನ ಕಾಶಿಯ ಅತ್ಯಂತ ಪ್ರಾಚೀನ ವರದಿಯಾಗಿದೆ.


ಇತಿಹಾಸ

[ಬದಲಾಯಿಸಿ]

ಅನೇಕ ಶತಮಾನಗಳ ಹಿಂದೆ ಇದು ಬಿದಿರಿನಿಂದ ಆವೃತವಾದ ಪ್ರದೇಶವಾಗಿತ್ತು. ಒಂದು ದಿನ ದಿಗಂಬರ ಮುನಿಗಳನ್ನು ಶ್ರವಣಬೆಳಗೋಳ ಜೈನಮಠದ ಪರಿಸರದ ಪಡು ಬಸದಿಯಲ್ಲಿ ವಸತಿ ಮಾಡಿ ಶೌಚಕ್ಕಾಗಿ ಮಠದ ಪೂರ್ವದಲ್ಲಿರುವ ಸುಮಾರು 250 ಮೀಟರ್ ದೂರದಲ್ಲಿರುವ ನೀರಿನ ಒಂದು ತೊಟ್ಟಿಯಿಂದ ಒಂದು ದನವು ಒಂದು ಹುಲಿಯು ತಮ್ಮ ವೈರತ್ವವನ್ನು ಮರೆತು ನೀರು ಕುಡಿಯುವುದನ್ನು ಕಂಡರು. ಇದೊಂದು ವೀತರಾಗ ಮನಸ್ಸು ನಿರ್ಮಾಣ ಮಾಡಬಲ್ಲ ಅಪರೂಪದ ಶಾಂತಿ ಕೇಂದ್ರ ಇಲ್ಲಿ ಏನೋ ಅತಿಶಯವಿದೆ ಎಂಬುದನ್ನು ಮನಗಂಡು ಪರಿಸರದ ಜೈನ ಶ್ರಾವಕರನ್ನು ಕರೆದು ಬಿದಿರಿನಿಂದ ಆವೃತವಾದ ಈ ಪ್ರದೇಶದ ಬಿದಿರಿನ ಮೇಲೆ ಸರಿಸಿ ಭೂಮಿ ಅಗೆಸಿದಾಗ ಹನ್ನೆರಡು ಅಡಿಯ ಕೃಷ್ಣನ ಶಿಲೆಯ ಚಂಡೋಗ್ರ ಪಾಶ್ರ್ವನಾಥ ಸ್ವಾಮಿಯ ಸುಂದರ ಮೂರ್ತಿಯೊಂದು ಕಂಡುಬಂದಿತು ಸಂತೋಷಗೊಂಡು ನಮಸ್ಕರಿಸಿ ಈ ಮೂರ್ತಿ ಪ್ರಭಾವದಿಂದ ಕ್ರೂರ ಸ್ವಭಾವದ ಹುಲಿ ತನ್ನ ಕ್ರೂರತೆ ಮರೆತು ಹಸುವಿನೊಂದಿಗೆ ನೀರನ್ನು ಕುಡಿದು ಶಾಂತಿ ಕೇಂದ್ರ ಎಂದು ಗುರುತಿಸಿಕೊಂಡರು ಎಂಬ ದಂತಕಥೆ ಜನಜನಿತವಾಗಿದೆ. []


ಜಿನ ಮಂದಿರ ನಿರ್ಮಾಣ

[ಬದಲಾಯಿಸಿ]

ಇಲ್ಲಿಯೇ ಸನ್ 714ರಲ್ಲಿ ಈ ಜಿನ ಮಂದಿರವನ್ನು ನಿರ್ಮಿಸಿ ಬಿಂಬವನ್ನು ಪ್ರತಿಷ್ಠಾಪಿಸಲಾಯಿತು ಎಂದು ಹೇಳಲಾಗುತ್ತದೆ. ಗುರುಗಳ ವೈಭವದಿಂದ ಇಬ್ಬರು ಬ್ರಹ್ಮಚಾರಿಗಳು ಸುಮಾರು ಹನ್ನೆರಡನೇ ಶತಮಾನದ ವೇಳೆಗೆ ಜೈನ ಪರಮಗಮಗಳಾದ ಧವಲ, ಜಯಧವಲ ಮಹಾಧವಲ ಎಂಬ ಗ್ರಂಥಗಳನ್ನು ಸುರಕ್ಷಿತವಾಗಿರಿಸುವ ಸಲುವಾಗಿ ದೇಶಿಯ ಗಣ ಮೂಲಸಂಘದ ಗುರುಪರಂಪರೆಯ ಕೇಂದ್ರವಾದ ಈ ಗುರುಗಳ ಬಸದಿಯಲ್ಲಿ ಪೂಜಿಸಿದರು. ಎಂಬ ಪ್ರತೀತಿಯಿದೆ. 14ನೇ ಶತಮಾನದ ಜೋಳಶೆಟ್ಟಿ ಎಂಬ ಪ್ರಸಿದ್ಧ ವರ್ತಕ ಗುರುಗಳಿಗೆ ಭಕ್ತಿಯಿಂದ ಸಮರ್ಪಿಸಿದ ರತ್ನ ಚಿತ್ತಾರಗಳಿಂದ ಅಲಂಕೃತವಾದದಲ್ಲಿನ ಮಂಟಪವನ್ನು ಇಲ್ಲಿ ಕಾಣಬಹುದು ಎಂಬುದು ವಿವಿಧ ಮೂಲಗಳಿಂದ ತಿಳಿದು ಬರುತ್ತದೆ ಈ ಬಸದಿಯ ಮೂಲ ಸ್ವಾಮಿ ಶ್ರೀ ಭಗವಾನ್ ಪಾಶ್ರ್ವನಾಥ ಸ್ವಾಮಿ.

ಈ ಬಸದಿಯಲ್ಲಿ ಒಟ್ಟು ಆರು ಮಂಟಪಗಳಿವೆ ಮೊದಲಿಗೆ ಮಾನಸ್ತಂಭ, ಪ್ರವೇಶದ್ವಾರ, ಕಲ್ಲಿನ ಚಂದ್ರಶಾಲೆಗೋಪುರ ಇದರ ಮೂಲಕ ಗದ್ದುಗೆ ಮಂಟಪ ಇದನ್ನು ದಾಟಿ ಗಂಟೆ ಮಂಟಪವನ್ನು ಪ್ರವೇಶಿಸಿ ಅಲ್ಲಿಂದ ಮುಂದೆ ತೀರ್ಥಂಕರ ಮಂಟಪ. ಇದನ್ನು ಹಾದು ರಸಭಾವ ಮತ್ತು ನಿತ್ಯ ಅಭಿಷೇಕ ಮಂಟಪ ಅಲ್ಲಿಂದ ಮುಂದೆ ಕಲಸ ಮಂಟಪ ಅದರ ಮೂಲಕ ಗರ್ಭಗೃಹ ಮಂಟಪಕ್ಕೆ ಹೋಗಬಹುದಾಗಿದೆ.


ಆರಾಧ್ಯ ದೇವರು

[ಬದಲಾಯಿಸಿ]

ಇಲ್ಲಿ ಭಗವಂತನು ಪಶ್ಚಿಮಾಭಿಮುಖವಾಗಿದೆ ಎಡಭಾಗದಲ್ಲಿ 24 ಕೃಷ್ಣಶಿಲೆಯ ಮೂರು ಅಡಿಯ ತೀರ್ಥಂಕರರ ಮೂರ್ತಿಗಳಿವೆ. ಇವು ದರ್ಶನೀಯವಾಗಿದ್ದು ಮನೋಜ್ಞವಾಗಿದೆ. ಇಲ್ಲಿಯೇ ಸರಸ್ವತಿ ಹಾಗೂ ಆರಾಧ್ಯದೇವಿ ಪದ್ಮಾವತಿಯ ಕುಳಿತಬಂಗಿಯ ವಿಶಿಷ್ಟ ಶಿಲ್ಪದ ಮೂರ್ತಿಗಳು ಭಕ್ತರ ಪಾಲಿಗೆ ಅಭಿಸ್ಥಾವರ ಪ್ರಧಾನಿಯಾಗಿ ದರ್ಶನ ನೀಡುತ್ತಿರುವುದು ಗಣಧರ ಪಾದುಕೆಗಳು ಗುರುಗಳ ಪಾದುಕೆಗಳು ಪೂಜಿಸಲ್ಪಡುತ್ತದೆ. ಇಲ್ಲಿ ಅಷ್ಟಮಂಗಲ ಸಹಿತ ಆರಾಧನಾ ಯಂತ್ರದ ಮಣಿಗಳಿರುತ್ತವೆ ಪದ್ಮಾವತಿ 24 ತೀರ್ಥಂಕರರು ಸರಸ್ವತಿ ದಿನಂಪ್ರತಿ ಇಲ್ಲಿ ತ್ರಿಕಾಲದಲ್ಲಿ ಪೂಜಿಸಲ್ಪಡುವ ದೇವರುಗಳು. ಪ್ರಧಾನವಾಗಿ ಪದ್ಮಾವತಿ ಅಮ್ಮ ಹಾಗೂ ಸರಸ್ವತಿ ಇಲ್ಲಿನ ಯಕ್ಷಿಯರು ಅಂದರೆ ಜೈನ ಶಾಸನ ದೇವತೆಗಳು.


ಪ್ರಸಿದ್ಧವಾಗಿರುವ ಅಂತಹ ಪ್ರಸಾದ ಕೇಳುವ ಕ್ರಮ ಶತಮಾನಗಳಿಂದ ಇಲ್ಲಿ ನಡೆದು ಬಂದಿದೆ. ಗುರುಗಳ ಬಸದಿಯಲ್ಲಿ ಸುಮಾರು ಏಳನೇ ಶತಮಾನದಲ್ಲಿ ಈ ಮೂರ್ತಿ ನಿರ್ಮಾಣವಾದ ಉಲ್ಲೇಖವಿದೆ. ಸಾವಿರ ಕಂಬದ ಬಸದಿ ಬಿಟ್ಟರೆ ಅತಿ ಹೆಚ್ಚು ಶಿಲಾಶಾಸನಗಳು ಇರುವುದು ಇಲ್ಲಿಯೇ. ಕ್ಷೇತ್ರಪಾಲ ಹಾಗೂ ಪದ್ಮಾವತಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆಶ್ವೀಜ ಹಾಗೂ ಕಾರ್ತಿಕ ಮಾಸದ ಮಧ್ಯೆ ಮಹಾವಿದ್ಯೆ ಪೂಜೆಯನ್ನು ನೆರವೇರಿಸಲಾಗುತ್ತದೆ.ದಶಮಾನದ ಪೂಜೆ ಹಾಗೂ ಪ್ರತೀ ಶುಕ್ರವಾರದ ಪೂಜೆಗಳಿಂದ ಭಕ್ತರ ಅಭಿಷ್ಠ ಗಳು ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ಶಿಲಾಕೃತಿಗಳು

[ಬದಲಾಯಿಸಿ]

ಗುರುಗಳ ಬಸದಿಯಲ್ಲಿರುವ ಎಲ್ಲಾ ಶಿಲಾಕೃತಿಗಳು ಮನೋಹರವಾಗಿ ಕಂಡುಬರುತ್ತವೆ. ಬಸದಿಯ ಪಶ್ಚಿಮದ ಮುಖ್ಯದ್ವಾರದ ಇಕ್ಕೆಲಗಳಲ್ಲಿ ಇಬ್ಬರು ದ್ವಾರಪಾಲಕರ ಬಣ್ಣದ ಚಿತ್ರಗಳು ಬಹು ಪುರಾತನವಾಗಿದ್ದು ಶ್ರೀಮಠದ ಬಿತ್ತಿ ಚಿತ್ರಗಳಂತೆ ಈ ಹಿಂದೆ ಔಷಧೀಯ ಸಸ್ಯಗಳಿಂದ ವರ್ಣಗಳನ್ನು ಸಂಗ್ರಹಿಸಿ ರಚಿಸಿದ್ದವುಗಳಾಗಿರುತ್ತದೆ. ಪ್ರವೇಶದ್ವಾರದ ಮಂಟಪದಲ್ಲಿ ಸುಂದರಕೆತ್ತನೆಗಳಿಂದ ಆದ ಅನೇಕ ದೇವರುಗಳ ಜೈನ ಪುರಾಣದ ರಾಮಾಯಣಕ್ಕೆ ಸಂಬಂಧಿಸಿದ ಗಣಪತಿ ಗರುಡ ಹನುಮ ಸೂರ್ಯನಾರಾಯಣ ಮೊದಲಾದ ಉಬ್ಬು ಶಿಲ್ಪಗಳಿವೆ. ಶಾರ್ದೂಲ ಸಿಂಹ ಅಲಂಕೃತ ಆನೆ ಮೊದಲಾದ ಶಿಲ್ಪಕಲಾಕೃತಿಗಳನ್ನು ಸುಂದರವಾಗಿ ಮೂಡಿಸಲಾಗಿದೆ. ಬಸದಿಯ ಕಂಬಗಳಲ್ಲಿರುವ ಹಂಸ ನವಿಲು ನೃತ್ಯಗಾರರು ಪಶುಪಕ್ಷಿ ಭಜನಾಮೃತ ವಿವಿಧ ರಂಗವಲ್ಲಿಗಳು ಕಲಾಪ್ರಿಯರು ಮನಸ್ಸನ್ನು ತಣಿಸುತ್ತವೆ.


ಪ್ರವೇಶದ್ವಾರ

[ಬದಲಾಯಿಸಿ]

ಪ್ರವೇಶದ್ವಾರದಲ್ಲಿ ಓಂಕಾರ ನಿನಾದವನ್ನು ಹೊಮ್ಮಿಸುವ ಬೃಹದಾಕಾರದ ಗಂಟೆ ಯೊಂದನ್ನು ತೂಗುಹಾಕಲಾಗಿದೆ. ಬಸದಿಯ ಆವರಣದಲ್ಲಿ ಒಂದು ಪಾರಿಜಾತ ಗಿಡರುತ್ತದೆ. ಹಾಗೂ ಒಂದು ಚಿಕ್ಕ ಹೂಗಳ ತೋಟವಿದೆ. ಮಾನಸ್ತಂಭ ಬದಲಾಗಿ ಒಂದು ಕಲ್ಲಿನ ದೇವಸ್ಥಾನವಿದ್ದು ಸೂತಕ ಪಾತಕಗಳ ಆದಾಗ ಸೂತಕವೇ ಇರುವವರು ಈ ಧ್ವಜಸ್ತಂಭದ ಪಶ್ಚಿಮ ಭಾಗದಲ್ಲಿ ಹಾದು ಹೋಗಬೇಕಾಗುತ್ತದೆ.


ಉಪದೇಶ ಮಂಟಪ

[ಬದಲಾಯಿಸಿ]

ಬಸದಿಯ ಎಡಭಾಗದಲ್ಲಿ ಚಂದ್ರಶಾಲೆ ಎಂದು ಹೇಳಲ್ಪಡುವ ವಿಶ್ರಾಂತಿ ಗೋಪುರವಿದ್ದು ಇಲ್ಲೆ ಗುರುಗಳ ಮಂಟಪ ಇರುವುದರಿಂದ ಅದನ್ನು ಉಪದೇಶ ನೀಡುವುದಕ್ಕಾಗಿ ಹಾಗೂ ಧಾರ್ಮಿಕ ಸಭೆಗಳಲ್ಲಿ ಧರ್ಮ ಶ್ರವಣವನ್ನು ಮಾಡುವುದಕ್ಕಾಗಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಕ್ಕಾಗಿ ಉಪಯೋಗಿಸುತ್ತಾರೆ. ಇಲ್ಲಿ ಹಿಂದಿನಿಂದಲೂ ಮೂಲಸಂಘದ ದೇಶಿಯ ಗಣ ಕುಂದ ಕುಂದ ಅನ್ವಯದ ಗುರುಪರಂಪರೆಯ ಎಲ್ಲಾ ಗುರುಗಳು ವಾಸ ಹಾಗೂ ತಪಸ್ಸು ಮಾಡುತ್ತಿದ್ದರು ಎಂದು ತಿಳಿದುಬರುತ್ತದೆ. ಕಾಲಕ್ರಮೇಣ ಆಡಳಿತ ದೃಷ್ಟಿಯಿಂದ ನಿರ್ಮಾಣವಾಗುವುದರಿಂದ ಗುರುಗಳ ಕೇಂದ್ರ ಇಂದಿನ ಶ್ರೀ ಜೈನಮಠಕ್ಕೆ ಸ್ಥಳಾಂತರವಾಯಿತು.


ಜೈನ ಮುನಿಗಳ ಯೋಗಗಳು

[ಬದಲಾಯಿಸಿ]

1923-24 ರ ಸುಮಾರಿಗೆ ಶ್ರೀ ಚಾರುಕೀರ್ತಿ ಸ್ವಾಮಿಗಳು ಇಲ್ಲೇ ತಂಗಿದ್ದರು. ಹಾಗೂ ಎರಡು ತಿಂಗಳು ಗ್ರೀಷ್ಮ ಯೋಗವನ್ನು ಆಚರಿಸಿದ್ದರೆಂದು ಶ್ರೀಮಠದ ದಾಖಲೆಗಳಿಂದ ತಿಳಿದು ಬರುತ್ತದೆ. ಎಂದು ಪೂಜ್ಯ ಮುನಿವರ್ಯ ರಾದ ಜಂಬು ಸ್ವಾಮಿಗಳು ಪಾಯಸಾಗರರು ನೆಲ್ಲಿ ಕಾರಿನ ಶ್ರೀ ಅನಂತ ಸ್ವಾಮಿಗಳು ಆರ್ಯನಂದಿಗಳು, ದೇಶಭೂಷಣ ಮಹಾರಾಜರು, ಆಚಾರ್ಯ ವಿದ್ಯಾನಂದರು, ಆಚಾರ್ಯ ವರ್ಧಮಾನ ಸಾಗರ ಆಚಾರ್ಯ ಬಾಹುಬಲಿ ಸಾಗರ ಆಚಾರ್ಯ ಸಾಗರ ಈ ಸನ್ನಿಧಿಗೆ ಆಗಮಿಸಿದ್ದರು. ಎಲ್ಲಾ ಜೈನ ಮಠಗಳ ಭಟ್ಟಾರಕರು ಈ ಬಸದಿಗೆ ಆಗಮಿಸುತ್ತಾರೆ. 2008ರಲ್ಲಿ ಆಚಾರ್ಯ ಶ್ರೀ ವಿರಾಗ ಸಾಗರರ ಚಾತುರ್ಮಾಸದ ಇಲ್ಲಿ ಜರುಗಿತು. ಕ್ರಾಂತಿಕಾರೀ ಸಂತ ತರುಣ ಸಾಗರರು ಕೂಡ ಇಲ್ಲಿಗೆ ಆಗಮಿಸಿದ್ದರು. ಗುರುಗಳ ಬಸದಿಯ ಆಗ್ನೇಯ ದಿಕ್ಕಿನಲ್ಲಿ ನಾಗ ಸ್ವಾಮಿಯ ಪ್ರಾಚೀನವಾದ ಕ್ಷೇತ್ರಪಾಲನ ಸಾಹಿತ್ಯಗಳಿಗೆ ನಗರ ದೇವತೆಗಳನ್ನು ಶ್ರೀನಾಗ ಹಾಗೂ, ಕ್ಷೇತ್ರ ಪಾಲಕರೊಂದಿಗೆ ವರ್ಷಕ್ಕೊಮ್ಮೆ ಪೂಜಿಸಲಾಗುತ್ತದೆ.

ವಿಶೇಷ ಪೂಜೆಗಳು ಹಾಗೂ ಅಭಿಷೇಕಗಳು

[ಬದಲಾಯಿಸಿ]

ನಾಗರ ಪಂಚಮಿ ಅಮಾವಾಸ್ಯೆ ಮತ್ತು ಸಿಂಹ ಮಾಸದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಕಾರ್ತಿಕ ಅಷ್ಟಾಂಗಿಕ ವರ್ಷದ ಎಂಟು ದಿನಗಳು ಮೇಗಿನ ನೆಲೆಯಲ್ಲಿ ಮಂದಾರ ಅಭಿಷೇಕ ನೆರವೇರುತ್ತದೆ. ಪಶುಪಕ್ಷಿಗಳಿಗೆ ರೋಗರುಜಿನಗಳು ಬಾರದ ಹಾಗೆ ಪದ್ಮಾವತಿ ಅಮ್ಮನಿಗೆ ಪೂಜೆ ಸಲ್ಲಿಸಲಾಗುತ್ತದೆ. ಶ್ರೀ ಬಲಿ ವಿಧಾನ ಹಾಗೂ ವಾಸ್ತು ಪೂಜೆ ಜರುಗಿದಾಗ ದಿಕ್ಪಾಲಕರಿಗೆ ಷೋಡಶೋಪಚಾರ ಕಲಿಸಲಾಗುತ್ತದೆ. ವಿಮಾನ ಶುದ್ಧಿ ಹಾಗೂ ವಾಸ್ತು ಪೂಜೆಗಳ ಸಂದರ್ಭದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.

ಭಧ್ರತೆ

[ಬದಲಾಯಿಸಿ]

ಗುರುಗಳ ಬಸದಿಗೆ ಕೆಂಪುಕಲ್ಲಿನ ಭದ್ರವಾದ ಸುಮಾರು 8 ಅಡಿ ಎತ್ತರದ ಕಾಂಪೌಂಡ್ ಗೋಡೆ ಇದೆ. ಪಕ್ಕದಲ್ಲಿ ಮುನಿ ವಾಸವಿದ್ದು ಆಧುನಿಕ ಭದ್ರತಾ ಸಿಬ್ಬಂದಿಗಳ ಆಧುನಿಕ ಸೌಲಭ್ಯಗಳಿಲ್ಲದ ಕೊಠಡಿಗಳಿವೆ.

ಉಲ್ಲೇಖಗಳು

[ಬದಲಾಯಿಸಿ]
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರೀ ಪ್ರಂಟರ್ಸ್. ISBN ೯೨. {{cite book}}: Check |isbn= value: invalid character (help)