ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾಸ ಮರಕತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ[ಬದಲಾಯಿಸಿ]

ಸುಳ್ಯ ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲೊಂದು.ಕುಕ್ಕೆ ಸುಬ್ರಹ್ಣಣ್ಯದಿಂದ ಸುಮಾರು ೧೦ ಕಿ.ಮೀ. ದೂರದಲ್ಲಿ ಈ ದೇವಾಸ್ಥಾನವಿದೆ. ಕುಕ್ಕೆ ಸುಬ್ರಹ್ಣಣ್ಯದಿಂದ ಗುತ್ತಿಗಾರು ಮಾರ್ಗವಾಗಿ ಸುಳ್ಯಕ್ಕೆ ಪ್ರಯಾಣಿಸುವಾಗ ಮರಕತ ಎಂಬಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಾಸ್ಥಾನವನ್ನು ನಾವು ಕಾಣಬಹುದು. ಇಲ್ಲಿ ಕಲ್ಲಾಜೆ ಹೊಳೆಯು ಹರಿಯುತ್ತಿದ್ದು, ಇದರಲ್ಲಿ ತೀರ್ಥ ಸದೃಶವಾದ ಗಯವೊಂದಿದೆ. ಅಲ್ಲದೇ ದೇವರಮೀನುಗಳೆಂದು ಕರೆಯಲ್ಪಡುವ ಮೀನುಗಳು ಇಲ್ಲಿವೆ.

ದೇವಾಲಯದ ಪುರಾತನ ಇತಿಹಾಸ[ಬದಲಾಯಿಸಿ]

ಸುಳ್ಯ ತಾಲೂಕಿನ ಪರಿಧಿಯೊಳಗೆ ಬಾಳುಗೋಡು ಎಂಬ ಪುಟ್ಟ ಹಳ್ಳಿಯೊಂದಿದೆ.ಅಲ್ಲಿನ ರತ್ನಪುರ ಎಂಬಲ್ಲಿ ಪ್ರಾಚೀನ ಇತಿಹಾಸದ ಪ್ರಕಾರ ನವದುರ್ಗೆಗಳಲ್ಲೊಬ್ಬಲಾದ ಶ್ರೀ ದುರ್ಗಾಪರಮೇಶ್ವರೀ ದೇವಿಯು ನೆಲೆಸಿದಳೆಂದೂ ಪ್ರತೀತಿ.ನಂತರ ತನ್ನ ಮೂಲನೆಲೆಯನ್ನು ಪರಿತ್ಯಜಿಸಿ ಮರಕತ ಎಂಬಲ್ಲಿಗೆ ಬಂದು ನೆಲೆಸಿದಳು.ಅಲ್ಲೇ ತಪ್ಪಸ್ಸನ್ನಾಚರಿಸುತ್ತಿದ್ದ ಮಾರ್ಕಾಂಡೇಯ ಮುನಿಯೋರ್ವನಿಗೆ ಪ್ರತ್ಯಕ್ಷಗೊಂಡಳು. ಈತ ವಿಷ್ಣುಸಾನಿಧ್ಯದೊಂದಿಗೆ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಿದನೆಂದು ಪ್ರತೀತಿ.

ಗಯ ಹಾಗೂ ತೀರ್ಥೋದ್ಭವ[ಬದಲಾಯಿಸಿ]

ಈ ಹೊಳೆಯು ಕಲ್ಲಾಜೆ ಎಂಬ ಊರಿನಿಂದ ಕೆಳಮುಖವಾಗಿ ಯೇನೆಕಲ್ಲಿಗೆ ಹರಿಯುವ ನದಿ ಇದು. ಮರಕತ ದುರ್ಗಾಪರಮೇಶ್ವರೀ ದೇವಾಸ್ಥನವನ್ನು ಸಮೀಪಿಸುವಲ್ಲಿ ಗಯವೊಂದಿದೆ. ಇದನ್ನು ದೇವರಗುಂಡಿಯಂತಲೂ ಕರೆಯುತ್ತೆವೆ. ಈ ಗಯದಲ್ಲಿ ಮಕರ ಸಂಕ್ರಮಣದ ದಿನದಂದು ತೀರ್ಥೋದ್ಭವವಾಗುವುದು ಇಲ್ಲಿನ ವಿಶೇಷತೆ.ಇದರಲ್ಲಿ ಸ್ಥಾನಮಾಡಿದರೆ ಸಕಲ ಪಾಪಗಳು ಪರಿಹಾರವಾಗಿ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ಮರಕತ ಹೆಸರಿನ ವಿಶೇಷತೆ[ಬದಲಾಯಿಸಿ]

ಇ ಪ್ರದೇಶದಲ್ಲಿ ರತ್ನಗಳಲ್ಲೊಂದಾದ ಮರಕತ ಕಲ್ಲು ಕಂಡುಬರುವುದರಿಂದ ಈ ಪ್ರದೇಶವು ಮರಕತ ಎಂಬ ಹೆಸರಿನಿಂದ ಕರೆಸ್ಪಡುತ್ತದೆ.

ಇಲ್ಲಿನ ವಿಶೇಷತೆ[ಬದಲಾಯಿಸಿ]

ಇಲ್ಲಿನ ಗಯದಲ್ಲಿ ತೀರ್ಥಸ್ಥಾನ ಮಾಡಿ ಶ್ರೀ ದೇವಿಯಲ್ಲಿ ವಿಶ್ಏಷವಾಗಿ ಪ್ರಾರ್ಥಿಸಿಕೊಂಡರೆ ವಿವಾಹ ಸಿದ್ಧಿ, ಸಂತಾನ ಪ್ರಾಪ್ತಿ, ಉದ್ಯೋಗ ಪ್ರಾಪ್ರಿ,ರೋಗ ನಿವಾರಣೆ ಹೀಗೆ ಇಷ್ಟಾರ್ಥ ಸಿದ್ಧಿ ಫಲಿಸುವುದು.ಹಿಂದಿನ ಕಾಲದಲ್ಲಿ ವಿವಾಹ ಸಂಬಂಧ ಇಲ್ಲಿ ಪ್ರಾರ್ಥಿಸಿಕೊಂಡು ಗಯದ ದಡದಲ್ಲಿ ಹರಿವಾಣವನ್ನು ಇಟ್ಟರೆ ಮರುದಿನ ವಿವಾಹಕ್ಕೆ ಅಗತ್ಯವಾದ ಆಭರಣಗಳು ಲಭಿಸುತ್ತಿದ್ದವಂತೆ. ಈ ದೇವಾಲಯವು ಕುಕ್ಕೆಗೆ ಪಶ್ಚಿಮಾಭಿಮುಖವಾಗಿ ಕಟ್ಟಲಾಗಿದ್ದು, ಹಿಂದೆ ಲೋಕಕಂಟಕನಾದ ತಾರಕಾಸುರನ ವಧೆಗೋಸ್ಕರ ಸುಬ್ರಹ್ಣಣ್ಯ ಸ್ವಾಮಿಯ ಬೆಂಬಲಕ್ಕಾಗಿ ಅವತರಿಸಿದ ಆದಿಮಾತೆಯ ಎಂಟನೆಯ ಅವತಾರವಾಗಿಯು ಈಕೆಯನ್ನು ಆರಾಧಿಸಲಾಗುತ್ತದೆ. ಅಲ್ಲದೇ ಅಷ್ಟಬಾಹುಗಳಿಂದ ಸಿಂಹವಾಹಿನಿಯಾಗಿ ಪ್ರಸನ್ನಳಾಗಿರುವ ಶ್ರೀ ದೇವಿಯನ್ನು ಕಾತ್ಯಾಯಿನಿಯಾಗಿಯು, ಸಿದ್ಧಿದಾತ್ರಿಯಾಗಿಯೂ ಆರಾಧಿಸಲಾಗುತ್ತದೆ.ವಿಶೇಷವಾಗಿ ರಂಗಪೂಜೆ,ದುರ್ಗಾಪೂಜೆ,ಹೀಗೆ ಅನೇಕ ಪೂಜೆಗಳು ನಡೆಯುತ್ತದೆ. ಮಂಗಳವಾರ,ಶುಕ್ರವಾರ ಸೇರಿದಂತೆ ಇನ್ನಿತರ ವಿಶೇಸ ದಿನಗಳಲ್ಲಿ ಅನ್ನ ಸಂತರ್ಪಣೆಯು ನಡೆಯುತ್ತದೆ.