ಶ್ರೀ ಗೀತಾಂಬಿಕಾ ದೇವಸ್ಥಾನ, ಘಾಟ್ಕೋಪರ್(ಪ), ಮುಂಬೈ

ವಿಕಿಪೀಡಿಯ ಇಂದ
Jump to navigation Jump to search



ಶ್ರೀ ಗೀತಾಂಬಿಕಾ ದೇವಸ್ಥಾನ, ಘಾಟ್ಕೋಪರ್(ಪ),ಮುಂಬಯಿ

ಶ್ರೀ ಗೀತಾಂಬಿಕಾ ದೇವಸ್ಥಾನವು ಮುಂಬಯಿಯ ಅಸಾಲ್ಫಾ ವಿಲೇಜ್ ನ ಹತ್ತಿರದ ಮಾರುಕಟ್ಟೆಗೆ ತಗುಲಿದಂತೆ ಒಂದು ಗಲ್ಲಿಯಲ್ಲಿದೆ. ಮೊದಲು ಸ್ವಲ್ಪ ಚಿಕ್ಕದಾರಿಯಂತೆ ಗೋಚರಿಸಿದರೂ ದೇವಾಲಯದ ಹತ್ತಿರ ವಿಶಾಲವಾದ ಜಾಗವಿದೆ. ಮಂದಿರದಲ್ಲಿ ಪೂಜೆ ಪುನಸ್ಕಾರಗಳು ವ್ಯವಸ್ಥಿತವಾಗಿ ಜರುಗುತ್ತವೆ. ಗೀತಾಂಬಿಕಾ ಮಂದಿರ, ಹಿಮಾಲಯೇಶ್ವರ ಮಂದಿರ, ಹಾಗೂ ಸಂಕಟ ವಿಮೋಚನ ಮಾರುತಿ ಮಂದಿರಗಳಿಗೆ ನಿಕಟವಾಗಿದೆ. ಘಾಟ್ಕೋಪರ್ ರೈಲ್ವೆ ಸ್ಟೇಷನ್ (ಪ)ನಿಂದ, ಈ ಮಂದಿರವನ್ನು ತಲುಪಲು ಬಿ.ಇ.ಎಸ್.ಟಿ.ಬಸ್ ಅಥವಾ ರಿಕ್ಷಾಗಳಲ್ಲಿ ಬರಬಹುದು. ಭಟ್ವಾಡಿಗೂ ತುಂಬಾ ಸಮೀಪದಲ್ಲಿದೆ. ೩೮೯, ೩೯೦ ನಂಬರ್ ನ, ಬಿ.ಇ.ಎಸ್.ಟಿ. ಬಸ್ ನಲ್ಲಿ ಬಂದು, ಶಿವಸೇನ ಆಫೀಸ್ ನ ಸ್ಟಾಪ್ ನಲ್ಲಿಳಿದು ನಡೆದೇ ಬರುವಷ್ಟು ಹತ್ತಿರದಲ್ಲಿದೆ. ಘಾಟ್ಕೋಪರ್ (ಪ) ದಿಂದ ಮಿಲಿಂದ್ ನಗರಕ್ಕೆ ಬರುವ ೪೨೯ ಬಸ್ ನಲ್ಲಿ ಬಂದರೆ, ಈ ದೇವಾಲಯಕ್ಕೆ ನಡೆದೇ ಬರಬಹುದು.

ಶ್ರೀ ಗೀತಾಂಬಿಕ ದೇವಾಲಯದ ಮುಂಭಾಗ

[೧]

ಉಲ್ಲೇಖಗಳು[ಬದಲಾಯಿಸಿ]

<References / >

  1. ಗೀತಾಂಬಿಕ ದೇವಸ್ಥಾನದಲ್ಲಿ ಅಹೋರಾತ್ರಿ ಭಜನೆ, ಉದಯವಾಣಿ, ೨೦೧೪, ಮಾರ್ಚ್, ೨೨, ಶನಿವಾರ,