ಶ್ರೀ ಕ್ಷೇತ್ರ ಮಲೆಂಗಲ್ಲು

ವಿಕಿಪೀಡಿಯ ಇಂದ
Jump to navigation Jump to search

ಶ್ರೀ ಕ್ಷೇತ್ರ ಮಲೆಂಗಲ್ಲು ಶ್ರೀ ಕ್ಷೇತ್ರ ಮೆಲಂಗಲ್ಲು ಸೃಷ್ಠಿ, ಸ್ಥಿತಿ, ಲಯಪತಿಯಾದ ಶ್ರೀ ಸಾಂಬಾಅದಾಶಿವನು ಕಾಮಿತಾರ್ಥಪ್ರದನಾಗಿ ಶ್ರೀ ಉಮಾ ಮಹೇಶ್ವರ ರೂಪದಿಂದ ಸರ್ವರೂ ಪ್ರೇಕ್ಷಿಸುವುದಕ್ಕಅಗಿಯೇ ಎಂಬಂತೆ ಈ ಮಲೆಂಗಲ್ಲಿನ ಶಿಲಾಶಿಖರದಲ್ಲಿ ಸ್ಥರಗೊಂಡಿರುವುದು ಸಕಲರಿಗೆ ಆನಂದದಾಯಕವೇ. ಆದರೂ ಬಹಳ ಪೂರ್ವ ಕಾಲದಿಂದಲೇ ಘನ ಮಹಿಮರಿಂದ ಶುಭ ಮುಹೂರ್ಥದಲ್ಲಿ ಸದಾ ತನ್ನಅರ್ಧಾಂಗಿಯೊಡನೆ ಪ್ರತಿಷ್ಠೆಗೊಂಡು ಭಕ್ತ ಜನರ ಸಕಲ ಕಾರ್ಯಗಳಲ್ಲಿಯೂ ಕಾರ್ಯೇಷು ಮಂತ್ರಿ, ಸಕಲೇಷು ದಾಸಿ ಎಂಬಂತೆ ಪ್ರಿಯೆಯೊಡನೆ ಮಂತ್ರಾಲೋಚನೆಗೈಯುತ್ತಾ ಭಕ್ತರಿಗಿಷ್ಟ ಪ್ರಧಾನವಾಗಿರುವುದು ಸತ್ಯ . ಜಗತ್ತಿನ ಮಾತಾಪಿತರೆನಿಸುವ ಶ್ರೀ ಪಾರ್ವತೀ ಪರಮೇಶ್ವರರು ಮಲೆಂಗಲ್ಲಿನಲ್ಲಿ ಪ್ರತ್ಯಕ್ಷವಾಗಿ ಒಂದೇ ಪೀಠದಲ್ಲಿ ಶ್ರೀ ಉಮಾಮಹೇಶ್ವರ ನಾಮದಿಂದ ಪೊರ್ವಕಾಲದಿಂದ ಪ್ರತಿಷ್ಠಿತಗೊಂಡು ಸಕಲ ಭಕ್ತವೃಂದದವರಿಗೆ ಆಪದ್ಭಾಂಧವನಾಗಿ ಕರ್ಯಸಿದ್ಧಿಗೊಳಿಸುತ್ತಿರುವ ಕರುಣಾಮಯರೆಂದು ಪ್ರಸಿದ್ದಿಗೊಂಡಿರುವವರು .

  ಶ್ರೀ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕಣಿಯೊರು ಗ್ರಾಮದಲ್ಲಿದೆ . ಉಪ್ಪಿನಂಗಡಿಯಿಂದ ಗುರುವಾಯನಕೆರೆಗೆ ಬರುವ ರಾಜ್ಯ ಹೆದ್ದಾರಿಯಾಗಿ ಸುಮಾರು ಏಳು ಕಿ.ಮಿ. ಗಳಷ್ಟು ಬಂದಾಗ ಕುಪ್ಪೆಟ್ಟಿ ಎಂಬಲ್ಲಿ ಬಂದಾರು ಕಡೆಗೆ ಸುಮಾರು ನಾಲ್ಕು ಕಿ.ಮೀ .ಗಳಷ್ಟು ದೂರದ ಬಲಬದಿಯಲ್ಲಿ ಉನ್ನತವಾದ ಗಿರಿಶಿಲಶಿಖರದಲ್ಲಿ ಪೂರ್ವನಿರ್ಮಿತವಾದ ಶ್ರೀ ಉಮಾಮಹೇಶ್ವರ ದೇವಸ್ಥಾನವು ದೃದ್ಗೋಚರವಾಗುವುದು                                             
   ಶ್ರೀ ಉಮಾಮಹೇಶ್ವರನ ದೇವಾಲಯವು ಭೂಮಿಯ ಮೇಲೆ ಬೃಹದಾಕಾರವಾಗಿ ಎದ್ದು ನಿಂತಂತಹ ಬಂಡೆಗಲ್ಲು. ಇದು ಸುಮಾರು ೫೦೦ ಅಡಿ ಎತ್ತರವಿದೆ .ಈ ವಿಶಾಲವಾದ ಹಚ್ಚ ಹಸಿರಿನ ಪರಿಸರ , ಒಂದು ಕಡೆ ನೋಡಿದರೆ ಪಶ್ಚಿಮ ಘಟ್ಟ ,ಇನ್ನೊಂದು ಕಡೆಯಿಂದ ಕುದುರೆಮುಖವು ಕೈಬಿಸಿ ಕರೆಯುತ್ತಿದೆ.ಪರಶಿವನ ಸನ್ನಿಧಿಯು ಇರುವಂತಹ ಈ ಕರಿಗಲ್ಲು ಮಲೆಂಗಲ್ಲಿನ ಮೇಲೆ ನಿಂತು ಒಮ್ಮೆ ಕಣ್ಣು ಹಾಯಿಸಿದರೆ ಕಾಣುವುದು ಹಚ್ಚ ಹಸಿರು ಕಣಿಯೂರು ಗ್ರಾಮದ ಪರಿಸರ .ಕರಿಗಲ್ಲಿರುವ ಕಾಡಿನಲ್ಲಿ ಕತ್ತೆಕಿರುಬ ಎಂಬ ದನಗಳನ್ನು ತಿನ್ನುವ ಪ್ರಾಣಿಯಿತ್ತೆಂದು ಅಲ್ಲಿನ ಜನ ಹೇಳುತ್ತಾರೆ .ಅಲ್ಲದೆ ಬೆಲೆಬಾಳುವ ಮರಗಳಾದ ಹೊನ್ನು,ಶ್ರೀಗಂಧ,ಚಂದನದ ಮರಗಳು ಇದ್ದವು ಎಂಬ ಮಾಹಿತಿಯಿದೆ .
     ಶ್ರೀ ದೇವಳವು ಪ್ರಾಚೀನ ಕಾಲದಿಂದಲೂ ನೆಲೆಗೊಂಡಿದ್ದು ಸಮೀಪದ ಜೈನ ಸಮಸ್ತರಿಂದ ಸ್ಥಾಪಿತಗೊಂಡು ಒಂದೆ ಪೀಠದಲ್ಲಿ ಕುಳಿತಿರುವ ಉಮಾಮಹೇಶ್ವರನು ಮೊರ್ತಿಯಾಗಿ ಪೊಜೆಗೊಂಡು ಉತ್ಸವಾದಿಳಿಂದ ಸೇವಿಸಲ್ಪಡುತ್ತಿದ್ದರು ಅನಾವರಣವಾಗಿ ಬರೇ ಬಂಡೆಗಲ್ಲನ ಪೀಠದಲ್ಲಿ ಉನ್ನತ ವಿಗ್ರಹದಿಂದ ಕಂಗೊಳಿಸುತಿತ್ತೇಂದು ಪ್ರತೀತಿಯಿದೆ .ಆದರೆ ಕಾಲಾಂತರದಲ್ಲಿ ದುರಾದೃಷ್ಟವಶಾತ್ ಒಬ್ಬ ಮತಿಭ್ರಷ್ಟನಿಂದ ಮೊರ್ತಿಯನ್ನು ಛೀದ್ರಗೊಳಿಸಲ್ಪಡಲು ,ಅಲ್ಲಿ ಪೊಜಾದಿಗಳೆಲ್ಲ ಸ್ಥಗಿತಗೊಂಡು ಕಾಲಾಂತರದಲ್ಲಿ ಆ ಕುಟುಂಬದವರಿಗೆ ಅನೇಕ ಭಾದೆಗಳು ಕಂಡುಬರಲಾಗಿ ಅವರಲ್ಲೊರ್ವ ಪ್ರಮುಖರು ದೈವಜ್ಞರ ಮೊಲಕ ಇದಕ್ಕೆ ಪರಿಹಾರಾರ್ಥವಾಗಿ ಹೊಸ ಮೊರ್ತಿಯನ್ನು ೧೯೪೬ ರಲ್ಲಿ ಪ್ರತಿಷ್ಟಾಪಿಸಿ ಸಮರ್ಪಿಸಿದರು .
    ಶ್ರೀ ಉಮಾಮಹೇಶ್ವರನಿಗೆ ವರ್ಷಂಪ್ರತಿ ರಂಗಪೊಜೆ ,ರುದ್ರಾಭಿಷೆಕ ,ತೀರ್ಥಸ್ನಾನ,ಅಪ್ಪದ ಪೊಜೆ ಎಂಬ ಅನೇಕ ಸೇವೆಗಳು ,ಹರಕೆ ಕಾಣಿಕೆಗಳನ್ನು ಸಲ್ಲಿಸುತ್ತಾ ಭಕ್ತರು ಉಮಾಮಹೇಶ್ವರನ ‌ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ತೃಪ್ತಿ ಒಡೆಯುತ್ತಿರುವುದು ಇಲ್ಲಿನ ವೈಶಿಷ್ಟೈ.ಭಕ್ತರು ದೇವಾಲಯಕ್ಕೆ ಬಂದು ಹರಕೆ ಕಾಣಿಕೆಗಳನ್ನು ಸಲ್ಲಿಸಿ ತಮ್ಮ ಕಷ್ಟಕಾರ್ಪನೈಗಳನ್ನು ಪರಿಹರಿಸಿಕೊಳ್ಳುತ್ತಾರೆ ಎಂಬುವುದಕ್ಕೆ ಎಂದು ಮಳೆ ಬೆಳೆ,ಆರೋಗ್ಯ ,ಪಶು ಸಂಪತ್ತು , ವನ್ಯ ಸಂಪತ್ತು ಸಮೃಧವಾಗಿರುವುದೆ ಸಾಕ್ಷಿ.
      ಈ ದೇವಾಲಯದಲ್ಲಿ ಸಿಹಿಕಹಿ ಹಬ್ಬ ಯುಗಾದಿ ,ನಾಗರ ಪಂಚಮಿಯಂದು ನಾಗದೇವರಿಗೆ ಕ್ಷೀರಾಭೀಷೆಕ ಮಾಡಿ ಪ್ರಸಾದ ಹಂಚುತ್ತಾರೆ. ಉಮಾಮಹೇಶ್ವರನು ಕರುಣಾಮಯಿ, ಭಕ್ತರ ಪ್ರಾರ್ಥನೆಯನ್ನು ಸಾಕಾರಗೊಳಿಸುವ ದಯಾಮಯನು. ಹಚ್ಚ ಹಸಿರು ತುಂಬಿದ ರಮನೀಯ ಸೌಂದರ್ಯವನ್ನು ವಿಶ್ಲೇಸಿಸಲಾಗದಂತ ಒಂದು ಸೌಂದರ್ಯ ಬುತ್ತಿ ಈ ಉಮೇಯ ಅರಸನು ನೆಲೆಸಿರುವ ನೆಲೆಬೀಡು. ಪ್ರಕೃತಿ ಕೈಬೀಸಿ ಕರೆಯುವ ಪುಣ್ಯಶಾಂತಿ ಸ್ಥಳಕ್ಕೆ ಬಂದು ಉಮಾಪತಿಯ ಪಾದಕ್ಕೆ ನಮಸ್ಕರಿಸಿ ಪಾವಣರಾಗೋಣ.