ಶ್ರೀ ಕರಿಕಾನ ಪರಮೇಶ್ವರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಕರಿಕಾನ ಪರಮೇಶ್ವರಿ ದೇವಾಲಯ

ಉತ್ತರ ಕನ್ನಡ ಜಿಲ್ಲೆಯ ಸಹ್ಯಾದ್ರಿ ಬೆಟ್ಟದ ಸಾಲಿನಲ್ಲಿ ಹಚ್ಚಹಸುರಾಗಿರುವ ಅರಣ್ಯದ ನಡುವೆ, ಹೊನ್ನಾವರ ತಾಲೂಕಿನ ನೀಲಕೋಡು ಗ್ರಾಮದ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯ ಒಂದು ಧಾರ್ಮಿಕ ಕ್ಷೇತ್ರ. ಸುತ್ತಲೂ ಹಬ್ಬಿರುವ ಅರಣ್ಯಗಳಿಂದ ಐತಿಹಾಸಿಕವಾಗಿ, ಧಾರ್ಮಿಕವಾಗಿ ಪ್ರಸಿದ್ಧವಾದ ಪ್ರದೇಶ

.

ಸಹ್ಯಾದ್ರಿ ಬೆಟ್ಟದ ಸಾಲಿನಲ್ಲಿ ಕಂಗೊಳಿಸುವ ನಯನಮನೋಹರವಾದ ಸೌಂದರ್ಯರಾಶಿಯ ಮಧ್ಯೆ, ಬೆಟ್ಟದ ತಪ್ಪಲಿನಲ್ಲಿ ಪುಣ್ಯಕ್ಷೇತ್ರವಾಗಿ, ನಿಸರ್ಗಧಾಮವಾಗಿ ಇದೆ ಈ ಶಾಂತಿಧಾಮ. ಈ ಕ್ಷೇತ್ರವು ಕೇವಲ ಶಿಲೆಗಳಿಂದಾವೃತವಾದ ಶಿಖರಗಳ ನಡುವೆ ಇದ್ದು, ಶ್ರೀ ಕರಿಕಾನಮ್ಮ ದೇವಿಯ ಶಿಲಾಮಯವಾದ ಉದ್ಭವ ಮೂರ್ತಿ ಇಲ್ಲಿದೆ.

ಐತಿಹ್ಯ[ಬದಲಾಯಿಸಿ]

ಉದ್ಭವ ಮೂರ್ತಿಯಾದ ದೇವಿಗೆ ಇಲ್ಲಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಿ, ಗುದ್ದಲಿ, ಹಾರೆಗಳಿಂದ ನೆಲವನ್ನು ಅಗೆದಾಗ ನೆಲದಿಂದ ರಕ್ತ ಚಿಮ್ಮುತ್ತಿತ್ತು. ನಂತರ, ಶ್ರೀ ಶ್ರೀಧರ ಸ್ವಾಮಿಗಳು ಇಲ್ಲಿಗೆ ಬಂದು ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ.