ಶ್ರೀ ಕಂಠೀರವ ಕ್ರೀಡಾಂಗಣ
Kanteerava Outdoor 11.JPG | |
ಸ್ಥಳ | ಬೆಂಗಳೂರು |
---|---|
ಕಕ್ಷೆಗಳು | 12°58′10.40″N 77°35′36.49″E / 12.9695556°N 77.5934694°E |
ನಿರ್ಮಿಸಲಾದದ್ದು | 1997 |
ಮಾಲೀಕ | ಯುವಜನ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ |
ಸಾಮರ್ಥ್ಯ | 24,000[೧] |
ಶ್ರೀ ಕಂಠೀರವ ಕ್ರೀಡಾಂಗಣ ಬೆಂಗಳೂರಿನಲ್ಲಿರುವ ಒಂದು ಕ್ರೀಡಾಂಗಣ. ಪ್ರಮುಖವಾಗಿ ಇಲ್ಲಿ ಫುಟ್ಬಾಲ್ ಆಟವನ್ನಾಡಲಾಗುತ್ತದೆ. ಕ್ರೀಡಾಂಗಣವು 24,000 ಜನ ಪ್ರೇಕ್ಷಕರ ಸಾಮರ್ತ್ಯ ಹೊಂದಿದೆ. ಇದು ಎರಡು ಹೊರಾಂಗಣ ರಾಕ್ ಕ್ಲೈಂಬಿಂಗ್ ಗೋಡೆಗಳು, ಒಡುವ ಟ್ರ್ಯಾಕ್, ಫುಟ್ಬಾಲ್ ಮೈದಾನ ಮತ್ತು ವಾಲಿಬಾಲ್ ಅಂಗಣಗಳನ್ನು ಹೊಂದಿದೆ. ಈ ಕ್ರೀಡಾಂಗಣವನ್ನು ರೂ. 220 ಮಿಲಿಯನ್ ವೆಚ್ಚದಲ್ಲಿ ಎಸ್ ವಿ ಈ ಸಿ ಕನ್ಸ್ಟ್ರಕ್ಶನ್ಸ್ ಲಿಮಿಟೆಡ್ ಮೂಲಕ ನಿರ್ಮಿಸಿ ,31 ಮೇ 1997 ರಲ್ಲಿ ಪೂರ್ಣಗೊಂಡಿತು.
ಕೇಂದ್ರ ಕಣ
[ಬದಲಾಯಿಸಿ]ಕ್ರೀಡಾಂಗಣದ ಕೇಂದ್ರ ಕಣದಲ್ಲಿ 8-ಪಥದ 400 ಮೀ ಸಿನ್ಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಇದೆ ಹಾಗು ಬಯಲುಕ್ರೀಡೆಗಳಾದತಹ ಉದ್ದಜಿಗಿತ, ಎತ್ತರಜಿಗಿತ, ಟ್ರಿಪಲ್ ಜಂಪ್ ಮತ್ತು ಪೊಲ್ ವಾಲ್ಟ್ ಕಣವನ್ನು ಹೊಂದಿದೆ. ಅಥ್ಲೆಟಿಕ್ ಟ್ರ್ಯಾಕ್ನ ಒಳಗಡೆ 100ಮೀ x 68ಮೀ ಅಳತೆಯ ಫುಟ್ಬಾಲ್ ಮೈದಾನವಿದೆ.
ಬೆಂಗಳೂರು ಎಫ್ ಸಿ
[ಬದಲಾಯಿಸಿ]ಈ ಕ್ರೀಡಾಂಗಣವು ಪ್ರಸ್ತುತ ಬೆಂಗಳೂರು ಎಫ್ ಸಿ ತಂಡದ ತವರು ಮೈದಾನವಾಗಿ ಕಾರ್ಯನಿರ್ವಹಿಸುತ್ತದೆ.
ಇದನ್ನು ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Sree Kanteerava Stadium". soccerway. Retrieved 18 ಆಗಸ್ಟ್ 2017.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Coordinates: 12°58′11″N 77°35′37″E / 12.969671°N 77.593474°E