ವಿಷಯಕ್ಕೆ ಹೋಗು

ಶ್ರೀವತ್ಸ ಜೋಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀವತ್ಸ ಜೋಶಿ
ಶ್ರೀವತ್ಸ ಜೋಶಿಯವರು ತಮ್ಮ ಪುಸ್ತಕ ಬಿಡುಗಡೆ ಸಮಾರಂಭ: 'ಸ್ನೇಹ ಸ್ಪರ್ಶ'ದಲ್ಲಿ ಕಾಣಿಸಿಕೊಂಡಿದ್ದು
Born
ಶ್ರೀವತ್ಸ

ದಕ್ಷಿಣ ಕನ್ನಡದ ಉಡುಪಿಜಿಲ್ಲೆಯ ಕಾರ್ಕಳ ತಾಲ್ಲೂಕಿನ 'ಮಾಳ' ಗ್ರಾಮದಲ್ಲಿ
Educationಬಿ.ಇ.(ಕಂಪ್ಯೂಟರ್ ಇಂಜಿನಿಯರಿಂಗ್)
Alma materದಾವಣಗೆರೆಯಲ್ಲಿ
Occupationಅಮೆರಿಕ ಸಂಯುಕ್ತ ಸಂಸ್ಥಾನದ ವಾಶಿಂಗ್ಟನ್ ಡಿ.ಸಿ.ಯಲ್ಲಿ ಐ.ಬಿ.ಎಮ್. ಕಂಪೆನಿಯಲ್ಲಿ ಕಂಪ್ಯೂಟರ್ ತಂತ್ರಾಂಶ ತಜ್ಞ,
Years active೨೦೦೦-ಇದು ವರೆವಿಗೂ
Known forವಿಚಿತ್ರಾನ್ನ, ಪರಾಗಸ್ಪರ್ಷ ಅಂಕಣಗಳನ್ನು ಬರೆದು ಪ್ರಕಟಿಸಿದ ಬಳಿಕ, ಈಗ 'ವಿಶ್ವವಾಣಿ' ವಾರ ಪತ್ರಿಕೆಯಲ್ಲಿ ಪ್ರತಿ ರವಿವಾರದಂದು 'ತಿಳಿರು ತೋರಣ' ಅಂಕಣ ಬರೆಯುತ್ತಿದ್ದಾರೆ. 'ಫೇಸ್ಬುಕ್' ಸಾಮಾಜಿಕ ತಾಣದಲ್ಲಿ 'ಬತ್ತದ ಉತ್ಸಾಹ'ಎನ್ನುವ ಶೀರ್ಷಿಕೆಯಡಿಯಲ್ಲಿ ಲೇಖನಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಶ್ರೀವತ್ಸ ಜೋಶಿ, ವಿಚಿತ್ರಾನ್ನ, ಪರಾಗಸ್ಪರ್ಷ,[] ತಿಳಿರು ತೋರಣ,[೧] ಮೊದಲಾದ ಇ-ಅಂಕಣಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಕನ್ನಡಭಾಷೆಯ ಪರಿಚಾರಿಕೆಯನ್ನು ಅತ್ಯಂತ ಸಮರ್ಥವಾಗಿ ಮಾಡುತ್ತಿದ್ದಾರೆ. ಕವಿ, ವ್ಯಕ್ತಿಚಿತ್ರಗಳು,ಕಾವ್ಯ,ಸಂಗೀತ,ನೃತ್ಯ,ಆಧುನಿಕ ಗ್ಯಾಡ್ಜೆಟ್ ಗಳ ಬಗ್ಗೆ ಮಾಹಿತಿ, ಹೀಗೆ, ಅತ್ಯಂತ ವೈವಿಧ್ಯಮಯ ವಿಷಯಗಳನ್ನು ಆರಿಸಿಕೊಂಡು, ಪ್ರತಿದಿನವೂ ಹೊಸಹೊಸ ಜ್ಞಾನ ಸಂಚಯಗಳನ್ನು ವಿಶ್ವದ ಕನ್ನಡ ಓದುಗರಿಗೆ ಒದಗಿಸುತ್ತಾ ಬಂದಿದ್ದಾರೆ.

ಪ್ರಸಕ್ತ ಜೀವನ

[ಬದಲಾಯಿಸಿ]

ಶ್ರೀವತ್ಸ ಜೋಶಿಯವರು, ವಾಷಿಂಗ್ಟನ್ ಡಿ.ಸಿ.ಯಲ್ಲಿ ಸಾಫ್ಟ್ವೇರ್ ಉದ್ಯೋಗಿ. ಕನ್ನಡದಲ್ಲಿ 'ದಟ್ಸ್ ಕನ್ನಡ ಅಂತರಜಾಲ ಪತ್ರಿಕೆ'ಯಲ್ಲಿ 5 ವರ್ಷಗಳ ಕಾಲ 'ವಿಚಿತ್ರಾನ್ನ'ವೆಂಬ ಸಾಪ್ತಾಾಹಿಕ ಅಂಕಣ ಮತ್ತು ವಿಜಯ ಕರ್ನಾಟಕದಲ್ಲಿ 3 ವರ್ಷ ಪರಾಗಸ್ಪರ್ಶ’ ಅಂಕಣ ಬರೆದಿರುವ ಜೋಷಿಯವರ ಬರಹಗಳೆಲ್ಲ 8 ಪುಸ್ತಕಗಳ ರೂಪದಲ್ಲಿ ಪ್ರಕಟವಾಗಿವೆ. ಈ ಪೈಕಿ 3 ಪುಸ್ತಕಗಳು ಅಮೆರಿಕದ ಪ್ರತಿಷ್ಠಿತ ಲೈಬ್ರರಿ ಆಫ್ ಕಾಂಗ್ರೆಸ್ನ ಪುಸ್ತಕ ಖಜಾನೆಗೆ ಸೇರ್ಪಡೆಗೊಂಡಿವೆ. ಈಗ ವಿಶ್ವವಾಣಿ ಕುಟುಂಬದ ಅಂಕಣಕಾರ. ಪ್ರಚಲಿತ ವಿದ್ಯಮಾನಗಳನ್ನಿಟ್ಟುಕೊಂಡು ಪ್ರತಿ ರವಿವಾರ ತಮ್ಮ ತಿಳಿರುತೋರಣ’ ಅಂಕಣವನ್ನು ಪ್ರಥಮಬಾರಿಗೆ ಇ-ಮಾಧ್ಯಮದಿಂದ ಹೊರಬಂದು ಮುದ್ರಣ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಶ್ರೀವತ್ಸ ಜೋಶಿ, ವಿಚಿತ್ರಾನ್ನ, ಪರಾಗಸ್ಪರ್ಷ, ತಿಳಿರು ತೋರಣ, ಮೊದಲಾದ ಅಂಕಣಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಹೊರನಾಡು ಕನ್ನಡಿಗರಾಗಿ, 'ಫೇಸ್ಬುಕ್' ನಂತಹ ಸಾಮಾಜಿಕ ಮೀಡಿಯಾದಲ್ಲೂ ಅತ್ಯಂತ ಸಕ್ರಿಯರಾಗಿ ಕನ್ನಡಭಾಷೆಯ ಪರಿಚಾರಿಕೆಯನ್ನು ಅತ್ಯಂತ ಸಮರ್ಥವಾಗಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರಕಟವಾಗುವ ವಿಶ್ವವಾಣಿ ಎಂಬ ಪತ್ರಿಕೆಯಲ್ಲಿ ಜನಪ್ರಿಯ ಅಂಕಣ, 'ತಿಳುರು ತೋರಣ', ಪ್ರತಿ ರವಿವಾರ ಪ್ರಕಟವಾಗುತ್ತಿದೆ. ಪದವಿನೋದ, ಪದಬಂಧ ಆವರ ಬಲುಪ್ರಿಯವಾದ ಹವ್ಯಾಸಗಳು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಈಗಿನ ಉಡುಪಿಜಿಲ್ಲೆಯ ಬಳಿ ಕಾರ್ಕಳದ ತಾಲ್ಲೂಕಿನ ಮಾಳ,[] ಎಂಬಹಳ್ಳಿಯಲ್ಲಿ ಜನಿಸಿದರು. ಈ ಪ್ರದೇಶ ಕುದುರೆಮುಖಕ್ಕೆ ಹೋಗುವ ದಾರಿಯಲ್ಲಿದೆ

ವಿದ್ಯಾಭ್ಯಾಸ

[ಬದಲಾಯಿಸಿ]

೭ನೆಯ ಇಯತ್ತೆಯವರೆಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾಭ್ಯಾಸಗಳನ್ನು ತಮ್ಮ'ಮಾಳ' ಹಳ್ಳಿಯಲ್ಲೇ ಮಾಡಿದರು. ಎರಡು ವರ್ಷದ ಕಾಲೇಜಿನ ಅಭ್ಯಾಸವನ್ನು 'ಇಜಿರೆ'ಯಲ್ಲಿ ಧರ್ಮಸ್ಥಳ ಮಂಜುನಾಥ ಕಾಲೇಜಿನಲ್ಲಿ ಮಾಡಿದರು. ಧರ್ಮಸ್ಥಳದ ವಿದ್ಯಾರ್ಥಿನಿಲಯ,'ಸಿದ್ಧವ್ವನಗುರುಕುಲ'ದಲ್ಲಿ ವಾಸ್ತವ್ಯ ನಡೆಯಿತು.[] ದಾವಣಗೆರೆಯಲ್ಲಿ ಬಿ.ಇ ಪದವಿ ಬಿ.ಡಿ.ಟಿ ಕಾಲೇಜಿನಲ್ಲಿ,[] ೯೦ ರ ದಶಕದಲ್ಲಿ ೯೧ ರಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದರು. ಬೆಂಗಳೂರಿನಲ್ಲಿ 'ಮೋಟರೋಲ್ಲಾ ಕಂಪೆನಿ'ಯ ಇಂಡಿಯನ್ ಸಬ್ಸಿಡಿಯರಿ ಕಂಪೆನಿಯಲ್ಲಿ ಇ.ಡಿ.ಪಿ ಡಿವಿಷನ್ ನಲ್ಲಿ ಪಬ್ಲಿಕ್ ಸೆಕ್ಟರ್ ಕಂಪೆನಿಯಲ್ಲಿ ಕೆಲಸ. ಉದ್ಯೋಗಾರ್ಥಿಯೆಯಾಗಿ ಬೆಂಗಳೂರಿನಲ್ಲಿ ೧೯೯೮ ರಲ್ಲಿ ಬಂದರು ಬಹುಶ ೨ ವರ್ಷ ವಿದ್ದರೂ ಅಮೆರಿಕಡಾ ಚಿಕಾಗೋ ನಗರಕ್ಕೆ ಪಾದಾರ್ಪಣೆ ೨೦೦೦ ದಲ್ಲಿ. ಅವರ ಬ್ಯಾಚಿನ ಗೆಳೆಯರು ಬಂದು ನೆಲೆಸಿದ್ದರು. ಕೆಲವರು ಅಮೆರಿಕಕ್ಕೆ ಹೋಗಿ ಕೆಲಸಮಾಡಿ ತಾಯಿನಾಡಿಗೆ ಮರಳಿದ್ದರು. ಕನ್ಸಲ್ಟಿಂಗ್ ಕಂಪೆನಿ, ವಾಷಿಂಗ್ ಟನ್ ಡಿಸಿಯಲ್ಲಿ , ಬಯೋ ಟೆಕ್ನೋಲೊಜಿಯಲ್ಲಿ ಐ ಟಿ ವಿಭಾಗದಲ್ಲಿ ಕೆಲಸ ಸಿಕ್ಕಿತು. ೨೦೦೬ ರಲ್ಲಿ ಆ ನಗರದಲ್ಲಿಯೇ ಐ ಬಿ ಎಂ ಕಂಪೆನಿಯಲ್ಲಿ ಫೇಡರಲ್ ಗವರ್ನ ಮೆಂಟ್ ಮತ್ತು ಪ್ರೈವೇಟ್ ಕಂಪೆನಿಗಳಲ್ಲಿ, ಇಂಟರ್ ಫೇಸ್ ಫೆಡರಲ್ ಗವರ್ನಮಿನೆಂಟ್ ಮತ್ತು ಸ್ಟೇಟ್ ಗವರ್ನಮಿನೆಂಟ್ ಪ್ರಾಜೆಕ್ಟ್ಸ್ಜಶಾಖೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು.

ವೃತ್ತಿ ಜೀವನ

[ಬದಲಾಯಿಸಿ]

ಅಮೆರಿಕದಲ್ಲಿ ನೋಡಿದ ಪ್ರದೇಶಗಳ ವಿವರಣೆಗಳನ್ನು 'ಲೆಟ್ ಆಸ್ ನೋ ಯುಎಸ್'ಎನ್ನುವ ರೀತಿಯಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಬರೆಯಲು ಆರಂಭಿಸಿದರು. ಆಗ ಟ್ರೈಪಾಡ್, ಜಿಯೋಸೈಟೇಷನ್ ಮೊದಲಾದ ಇಂಟರ್ನೆಟ್ ತಾಣಗಳು, ಪರ್ಸನಲ್ ವೆಬ್ ಸೈಟ್ಸ್ ತರಹದವು ಬಳಕೆಯಲ್ಲಿದ್ದವು. ವಾರಕ್ಕೊಮ್ಮೆ ಇಂಗ್ಲಿಷ್ ಭಾಷೆಯಲ್ಲಿ ಅಂಕಣಬರೆಯಲು ಆರಂಭಿಸಿದರು ಕೌಟುಂಬಿಕ ಸಾಪ್ತಾಹಿಕ ಸುದ್ದಿ ಪತ್ರ, 'ಖಬ್ರಿ' ಆರಂಭಿಸಿದರು ವರ್ಚುಯಲ್ ಚಿತ್ರಾನ್ನ,ಲಘು ಪ್ರಹಸನಗಳು, ಮಾತುಕತೆ ಕನ್ನಡದಲ್ಲಿ ಶ್ಯಾಮಸುಂದರ್ ಅಮೆರಿಕದಿಂದ ಭಾರತಕೆ ಸೆಪ್ಟೆಂಬರ್ ತಿಂಗಳಲ್ಲಿ ಹೋದರು. ಅಲ್ಲಿಂದ ಒಂದು ಇಮೇಲ್ ಕಳಿಸಿ, ಅದರಲ್ಲಿ ಒಂದು ವಾರಾಂತ್ಯದ ಅಂಕಣವನ್ನು ಕನ್ನಡದಲ್ಲಿ ಪ್ರಾಂಭಿಸುವ ಬಗ್ಗೆ ಜೋಶಿಯವರು ಸಹಕರಿಸಬೇಕೆಂದು ವಿನಂತಿಸಿದರು. ಅಕ್ಟೊಬರ್, ೧೫, ೨೦೦೨ ರಲ್ಲಿ ಶುಭಾರಂಭಗೊಂಡ ವಿಚಿತ್ರಾನ್ನ ಅಂಕಣ, ಸತತವಾಗಿ ೫ ವರ್ಷ ನಡೆದುಕೊಂಡು ಬಂತು.ಅನಿವಾಸಿ ಕನ್ನಡಿಗರು ಪ್ರತಿ ಮಂಗಳವಾರವೂ ಪ್ರಕಟವಾಗುತ್ತಿದ್ದ ಅಂಕಣವನ್ನು ಸ್ವಾಗತಿಸಿದರು. ಇಂಟರ್ನೆಟ್ ಪಾರಿಚಯವಿದ್ದ ಅವರು ಕನ್ನಡದಲ್ಲಿ ಲಘು ಧಾಟಿಯಲ್ಲಿ ಮೂಡಿಬರುತ್ತಿದ್ದ ವಿಶ್ಲೇಷಣೆ, ಮನರಂಜನೆಯ ಲೇಖನಗಳನ್ನು ಬಹಳ ಆಸಕ್ತಿಯಿಂದ ಓದುತ್ತಿದ್ದರು.

ವೈವಿಧ್ಯಮಯ ವಲಯಗಳಲ್ಲಿ ಆಸಕ್ತರು

[ಬದಲಾಯಿಸಿ]
  1. ಪದವಿನೋದ, ಪದಬಂಧ, ಆವರ ಬಲುಪ್ರಿಯವಾದ ಹವ್ಯಾಸಗಳು.
  2. ಅಮೆರಿಕ ಸಂಯುಕ್ತ ಸಂಸ್ಥಾನದ ಅನಿವಾಸಿ ಕನ್ನಡ ಇ-ಅಂಕಣಕಾರರು/ಬ್ಲಾಗಿಗರು : ತ್ರಿವೇಣಿ ರಾವ್,[೨] ರಾಮ ಪ್ರಸಾದ್ ಕೆ.ವಿ, [೩] ಡಾ.ಎಮ್.ವೈ.ನಟರಾಜ, ಶಿಕಾರಿಪುರ ಹರಿಹರೇಶ್ವರ(ನಿಧನ) ಇವರಲ್ಲಿ ಮುಂಚೂಣಿಯಲ್ಲಿರುವವರು, ಶ್ರೀವತ್ಸ ಜೋಶಿ,ಯವರು.
  3. [೪]ಹೊರನಾಡು ಕನ್ನಡಿಗರಾಗಿ, 'ಫೇಸ್ಬುಕ್' ನಂತಹಸಾಮಾಜಿಕ ಮೀಡಿಯಾದಲ್ಲೂ 'ಬತ್ತದ ಉತ್ಸಾಹ',[೫] ವೆಂಬ ಹೆಸರಿನಲ್ಲಿ ಅತ್ಯಂತ ಸಕ್ರಿಯರಾಗಿದ್ದಾರೆ.

೨೦೦೪-೨೦೦೫ ರಲ್ಲಿ

[ಬದಲಾಯಿಸಿ]

೨೦೦೪-೦೫ ರಲ್ಲಿ ವಿಜಯಕರ್ನಾಟಕ ಪತ್ರಿಕೆ ಒಂದು ಹೊಸ ಪ್ರಯೋಗವನ್ನು ಬಳಕೆಗೆ ತಂದಿತು. ವಿಚಿತ್ರಾನ್ನ, ಮತ್ತು ಅನೇಕ ಅನಿವಾಸಿ ಕನ್ನಡಿಗರು ಬರೆದ ಲೇಖನಗಳನ್ನು ಹಾಗೆ ಹಾಗೆಯೇ ಮರು-ಪ್ರಕಟಿಸುವ ಪ್ರಕ್ರಿಯೆಯನ್ನು ಹುಟ್ಟು ಹಾಕಿದರು. ಶ್ರೀವತ್ಸ ಜೋಶಿ, ೨೦೦೭ ರಲ್ಲಿ ವಿಚಿತ್ರಾನ್ನ ಅಂಕಣಕ್ಕೆವಿದಾಯ ಹೇಳಿ, ಪ್ರತ್ಯೇಕ ಅಂಕಣ ಬರೆಯಲು ಅರಂಭಿಸಿದರು. ಕೇವಲ ಇಂಟರ್ನೆಟ್ ನ. ವೆಬ್ ಆಡಿಯನ್ಸ್ ಗೆ ಮುಟ್ಟುತ್ತಿದ್ದ ಲೇಖನಗಳು,ಈಗ ಪ್ರಿಂಟ್ ಮೀಡಿಯಂನಲ್ಲಿ ಹೊರಬಂದು ಪುಸ್ತಕ ಪ್ರಿಯರಿಗೆ ಸಿಗಲಾರಂಭಿಸಿದವು. ತಮ್ಮ ೮ ಅಂಕಣ ಸಂಕಲನಗಳನ್ನು ಪ್ರಕಟಿಸಿದರು ಅದರಲ್ಲಿ ೩ ಸಂಪುಟಗಳು ವಾಷಿಂಗ್ಟನ್ ನ, ಲೈಬ್ರರಿ ಆಫ್ ಕಾಂಗ್ರೆಸ್ ಆರ್ಕೈವ್ ಗೆ ಸೇರ್ಪಡೆಯಾದ್ದವು.

ಭಾಷೆಗಳ ಬಗ್ಗೆ ಆಸಕ್ತಿ

[ಬದಲಾಯಿಸಿ]

ಹೈದರಾಬಾದ್ ನಲ್ಲಿ ಕೆಲಸದಲ್ಲಿದ್ದಾಗ, ತೆಲುಗು ಭಾಷೆ ಕಲಿತರು. 'ಈನಾಡು ದಿನಪತ್ರಿಕೆ', 'ಸ್ವಾತಿ ವಾರಪತ್ರಿಕೆ', ಪದಬಂಧವನ್ನು ತೆಲುಗಿನಲ್ಲಿ ತುಂಬುವಷ್ಟು ತೆಲುಗು ಕಲಿತಿದ್ದರು. ಭಾಷಾ ಕ್ರಿಮಿ (Language buff)ಪರಿಣಿತಿಯನ್ನು ಸಾಧಿಸಲು ಮತ್ತು ಜನಪ್ರಿಯ ನುಡಿಗಟ್ಟುಗಳನ್ನು ಓದಿ ಅರ್ಥಮಾಡಿಕೊಂಡು ಮರು ಬಳಸುವಷ್ಟು ಪರಿಣತಿ ಗಳಿಸಿದರು ಇದರಿಂದಾಗಿ ಆವರ ಲೇಖನಗಳಲ್ಲಿ ಒಂದು ಹೊಸ ಆಯಾಮ ಬಂತು.

ಅಮೆರಿಕದಲ್ಲಿ

[ಬದಲಾಯಿಸಿ]

ಅಮೆರಿಕಕ್ಕೆ ಹೋದ ಮೊದಲಿನಲ್ಲಿ ಅಲ್ಲಿನ ಪ್ರೇಕ್ಷಣಿಕ ಸ್ಥಳಗಳನ್ನು ನೋಡಿದ ಬಗ್ಗೆ ಒಂದು ಸರಣಿ ತಯಾರಿಸಿದ್ದರು. ಎಲ್ಲೆಲ್ಲಿ ಏನೇನು ನೋಡಿದೆ, ಇತ್ಯಾದಿ. 'Let us know US' ಎನ್ನುವ ರೀತಿಯಲ್ಲಿ ಹಲವಾರು ಲೇಖನಗಳನ್ನು ಇಂಗ್ಲೀಷಿನಲ್ಲಿ ಬರೆಯುತ್ತಿದ್ದರು. ಆಗ 'ಬ್ಲಾಗ್' ಗಳಾಗಲೀ ಸಾಮಾಜಿಕ ತಾಣಗಳಾಗಲೀ (ಫೇಸ್ಬುಕ್) ಇನ್ನೂ ಬಳಕೆಗೆ ಬಂದಿರಲಿಲ್ಲ.ಅಮೆರಿಕದಲ್ಲಿ ತಾನುಕಂಡುಕೊಂಡ ವಿಷಗಳನ್ನು ಸ್ನೇಹಿತರೊಡನೆ ಬಂಧುಗಳ ಜೊತೆಹಂಚಿಕೊಳ್ಳುವ ಪತ್ರಿಕೆ ಆರಂಭಿಸಿದರು. 'ಖಬ್ರಿ ಮಾಸಿಕ'ಕುಟುಂಬ ಪತ್ರಿಕೆ. ಮನೆಯಲ್ಲಿ ಚಿತ್ಪಾವನಿ ಭಾಷೆ ಬಳಸುತ್ತಾರೆ. ಚಿತ್ಪಾವನಿ, ಮರಾಠಿಯ ಉಪಭಾಷೆ. ಡೆಟ್ರಾಯಿಟ್ ನಗರದಲ್ಲಿ ನಡೆದ ೪ ನೆಯ ಅಕ್ಕ ಕನ್ನಡ ಸಮ್ಮೇಳನದಲ್ಲಿ, ದಟ್ಸ್ ಕನ್ನಡ-ಇ ಪತ್ರಿಕೆಯ ಸಂಪಾದಕ, ಶ್ರೀ.ಎಸ್.ಕೆ.ಶ್ಯಾಮಸುಂದರ್ ರವರ ಭೇಟಿಯಾಯಿತು.ಅವರು ವಾಶಿಂಗ್ಟನ್ ಡಿ.ಸಿಗೂ ಬಂದಿದ್ದರು. ಜೋಶಿಯವರ ಲಘುಬರಹ ಶೈಲಿ ಅವರಿಗೆ ಇಷ್ಟವಾಯಿತು. ಕನ್ನಡದಲ್ಲಿ ಬರೆಯುವ ಬಗ್ಗೆ ಸಲಹೆಮಾಡಿದ್ದಲ್ಲದೆ, ಭಾರತಕ್ಕೆ ಮರಳಿದ ಬಳಿಕೆ ಒಂದು ಇಮೇಲ್ ಕಳಿಸಿ ತಮ್ಮ ಪತ್ರಿಕೆಯಲ್ಲಿ ಒಂದು ಅಂಕಣ ಪ್ರಾರಂಭಿಸಲು ಕರೆಕೊಟ್ಟರು. 'ವಿಚಿತ್ರಾನ್ನ' ಹಾಗೆ ಶುರುವಾಯಿತು. ಗಣೇಶನ ಆಶೀರ್ವಾದದೊಂದಿಗೆ, ಗಣಪತಿಯ 'ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ, ನಂಬಿದವರ..... ಒಂದು ಒಪ್ಪಂದವಾಯಿತು. ಅಂತರಜಾಲದಲ್ಲಿ ಕನ್ನಡದಲ್ಲಿ ಲಭ್ಯವಾದ ಬರವಣಿಗೆಯನ್ನು ಓದಿ ಅನಿವಾಸಿ ಕನ್ನಡಿಗರಿಗೆ ಆಶ್ಚರ್ಯವಾಯಿತು. ಒಳ್ಳೆಯ ಪ್ರತಿಕ್ರಿಯೆ, ಮತ್ತು ಸ್ವಾಗತ ಸಿಕ್ಕಿತು. ೫ ವರ್ಷ ಹಲವಾರು ವಿಷಯಗಳನ್ನು ತೆಗೆದುಕೊಂಡು ಲೇಖನಗಳನ್ನು ಬರೆದರು. ಅಮೆರಿಕದ ಜೀವನ, ಕನ್ನಡಿಗರ ಹೊಂದಾಣಿಕೆ ಅನುಭವಗಳು, ಜನಪ್ರಿಯವಾಗಿವೆ.

  • ವಿಶ್ವಕರ್ನಾಟಕ ಪತ್ರಿಕೆಯಲ್ಲಿ ೨ವರ್ಷ ಸತತವಾಗಿ ಬರೆದ ೧೨೦ ಲೇಖನಗಳನ್ನು ಸಂಗ್ರಹಿಸಿ, ೨ ಸಂಚಿಕೆಗಳಲ್ಲಿ 'ಒಲವಿನ ಟಚ್', 'ನಲವಿನ ಟಚ್', ಎಂಬ ಶಿರೋನಾಮಗಳಡಿಯಲ್ಲಿ ಪ್ರಕಟಿಸಿದ್ದಾರೆ.
  • ನಟ ವಿಷ್ಣುವರ್ಧನರ ಬಗ್ಗೆ,'ಹಾಡು ಹಾಡ್ತಾನ' (ನಾಗರ ಹಾವು ಸ್ಮರಣೆ ಸಹಿತ), ಎಂಬ ಶೀರ್ಶಿಕೆಯಲ್ಲಿ ಬರೆದ ಒಂದು ಲೇಖನ, ಬಹಳ ಜನಪ್ರಿಯವಾಯಿತು.

ಪರಿವಾರ

[ಬದಲಾಯಿಸಿ]

ಶ್ರೀವತ್ಸ ಜೋಶಿಯವರ ಪರಿವಾರದಲ್ಲಿ, 'ಸಹನಾ'ರವರು ಪತ್ನಿ, ಮತ್ತು ಮಗ, ಸೃಜನ್ ಇದ್ದಾರೆ.

ಶ್ರೀವತ್ಸ ಜೋಶಿಯವರ ವಿಶಿಷ್ಠ ವೀಡಿಯೋ ಪ್ರಯೋಗಗಳು

[ಬದಲಾಯಿಸಿ]

ಗೌರವಗಳು

[ಬದಲಾಯಿಸಿ]
  • ’ಚಂದನ ವಾಹಿನಿ’ ಯಲ್ಲಿ ಜನವರಿ ೫ ನೇ ತಾರೀಖು, ೨೦೧೦ ರ ಬೆಳಿಗ್ಯೆ, ೭ ಗಂಟೆಗೆ, ’ಬೆಳಗು,’ ಕಾರ್ಯಕ್ರಮದಲ್ಲಿ ’ಶ್ರೀವತ್ಸ ಜೋಶಿಯವರ ಜೊತೆ ಸಂವಾದ’ []
  • ಅಮೆರಿಕದ ಕಾವೇರಿ ಕನ್ನಡ ಸಂಘದವರು 'ಬೆಸ್ಟ್ ರಿಸಿಪಿಯೆಂಟ್ ಪ್ರಶಸ್ತಿ'ಯನ್ನು ೨೦೦೭ ರಲ್ಲಿ ಪ್ರದಾನಮಾಡಿದ್ದಾರೆ.[]
  • ಅಮೆರಿಕದ ನಾರ್ತ್ ಕೆರೋಲಿನದ ಬಾನುಲಿ ನಿಲಯದಲ್ಲಿ ರವಿ ಕಲ್ಮಠರ ಜೊತೆಗೆ, ೫,ಜುಲೈ,೨೦೧೬ ರಂದು (ಅಮೆರಿಕ ದೇಶದ ಸ್ವಾತಂತ್ರ್ಯೋತ್ಸವದ ಶುಭದಿನದಂದು) 'ರೇಡಿಯೋ ಸಂದರ್ಶನ' ನಡೆಯಿತು.[]

ಶ್ರೀವತ್ಸ ಜೋಶಿಯವರ ವೀಡಿಯೋಗಳು

[ಬದಲಾಯಿಸಿ]
  1. h from Newseum Washington DC; shyama sundar
  2. video ರವಿ ರಂಗೇರಿಸಿದ ಒಂದು ಸಂಜೆ
  3. Yaava Mohana Murali Kareyitu- On FLute By Praveen Godkhind
  4. ವಿದ್ಯಾತೀರ್ಥರು ಹಾಡಿದ್ದಾರೆ. ಮಧುಕರ ವೃತ್ತಿ ಎನ್ನದು
  5. ಹೂವು ಚೆಲುವೆಲ್ಲ ನಂದೆಂದಿತು
  6. ಇ-ಪರಿಯ ಭಾಷಣ ಬೇರೆಲ್ಲೂ ನೀಕಾಣ? :-)
  7. ಶ್ರೀವತ್ಸ ಜೋಷಿಯವರ ಇ-ಭಾಷಣಗಳ ಆರ್ಕೈವ್,

ಉಲ್ಲೇಖಗಳು

[ಬದಲಾಯಿಸಿ]
  1. ಒನ್ ಇಂಡಿಯ, ಶ್ರೀವತ್ಸ ಜೋಶಿ ಪುಸ್ತಕ ಪರಾಗ ಸ್ಪರ್ಶ,ಜುಲೈ, ೨೫, ೨೦೧೨
  2. "Mala, Udupi District, Karnataka Pincode 574122". Archived from the original on 2014-10-19. Retrieved 2016-07-06.
  3. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕಿರು ಪರಿಚಯ, December 13, 2015
  4. University B.D.T College of Engineeringk Davanagere
  5. "!sampada.net, by venkatesh on January 6, 2010". Archived from the original on ಆಗಸ್ಟ್ 10, 2009. Retrieved ಜುಲೈ 6, 2016.
  6. Kaveri kannada sangha, Best Recipiant award (2007)
  7. When the keyboard becomes the sword, 'ಶ್ರೀವತ್ಸ ಜೋಶಿಯವರ ಜೊತೆ ರವಿ ಕಲ್ಮಠ', ನಡೆಸಿದ "ನಮ್ಮರೇಡಿಯೋ ಸಂದರ್ಶ"

ಬಾಹ್ಯಸಂಪರ್ಕಗಳು

[ಬದಲಾಯಿಸಿ]
  1. ವಿಶ್ವವಾಣಿ ಸುದ್ದಿಮನೆ: ಶ್ರೀವತ್ಸ ಜೋಶಿಯವರ ವರ್ಣಮಾಲೆ ೧,೨ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ :'ಲೇಖಕರಿಂದ ಪತ್ರಿಕೆಗಳಿಗೆ ಬರೆಸುವುದು ಸವಾಲಿನ ಕೆಲಸ'
  2. ಅರಿವಿನ ಪರಿಧಿ ಹಿರಿವಂತೆ ಬರೆದ ಹರಿಹರೇಶ್ವರ “ತಿಳಿರುತೋರಣ” ಅಂಕಣದ ಐವತ್ತೊಂಬತ್ತನೆಯ ಸಂಚಿಕೆ (05Mar2017)
  3. ವಿಶ್ವವಾಣಿ ಪತ್ರಿಕೆಯ ಭಾನುವಾರದ “ತಿಳಿರುತೋರಣ” ಅಂಕಣದ ೩೯ ನೆಯ ಸಂಚಿಕೆ (09Oct2016)- ಮದ್ರಾಸ್ ಪ್ಯಾಲೇಸ್ ರೆಸ್ಟೊರೆಂಟ್ ಇನ್ನು ನೆನಪು ಮಾತ್ರ
  4. ಮದ್ರಾಸ್ ಪ್ಯಾಲೇಸ್ ರೆಸ್ಟೊರೆಂಟ್ ಇನ್ನು ನೆನಪು ಮಾತ್ರ ಪಾಡ್ಕಾಸ್ಟ್
  5. "ಮೀನಿನ ವಾಸನೆಯಿಂದ ಮೂತ್ರದ ವಾಸನೆಯವರೆಗೆ"-ಲಘುಹರಟೆಬರಹ/ಓದು, ಅಕ್ಟೋಬರ್ ೨,೨೦೧೬ ರ,ಗಾಂಧಿಜಯಂತಿಯದಿನದ ತಿಳಿರುತೋರಣದ ಕೊಡುಗೆ. ಪ್ರಸ್ತುತಿ :ಶ್ರೀವತ್ಸಜೋಶಿ
  6. ಲಘು ಬರಹಗಳು
  7. ವಿಶ್ವವಾಣಿ,ಶ್ರೀವತ್ಸ ಜೋಶಿ-ತೊಲೆ ಮೇಲೆ ಬರೆದುದು ತೊಲೆ ಚಿನ್ನಕ್ಕಿಂತ ಬೆಲೆಯದು
  8. ಪಾಡ್ ಕ್ಯಾಸ್ಟ್
  9. kannada.oneindia.com, ಅಸಹಿಷ್ಣುತೆ’ಗೆ ಭಾರತೀಯ ಮುಸ್ಲಿಂ ಮಹಿಳೆ ಹಿಡಿದ ಕನ್ನಡಿ, By: ಸೋಫಿಯಾ ರಂಗವಾಲಾ, ವೈದ್ಯೆ, ಬೆಂಗಳೂರು, Saturday, November 28, 2015,
  10. 'ಮೆರೆಯುವವರ ಮೆರೆದಾಟ ಕ್ಷಣಿಕ, ಬೆರೆಯುವವರ ಬಾಂಧವ್ಯ ಚಿರಕಾಲ',ಶ್ರೀವತ್ಸ ಜೋಶಿ,Friday, September 5, 2014, '೫ ನೆಯ ಅಕ್ಕ ವಿಶ್ವಕನ್ನಡ ಸಮ್ಮೇಳನದ ಒಂದು ಸಮೀಕ್ಷೆಯ ತುಣುಕು'
  11. ಕನ್ನಡ ಸಾಹಿತ್ಯರಂಗ ಕಾರ್ಯಕ್ರಮ, ನಮ್ಮ ಬರಹಗಾರರು-ಶ್ರೀವತ್ಸ ಜೋಶಿ, ಶ್ರೀನಾಥ ಭಲ್ಲೆ
  12. Mohana Mrushtaanna by sjoshi, ದಿನಾಂಕ 17 ಆಗಸ್ಟ್, 2012
  13. [https://sjoshi.podbean.com/2012/08/15/mohana-mrushtaanna/#comments, Mohana Mrushtaanna, joshi, ದಿನಾಂಕ 17 ಆಗಸ್ಟ್  2012
  14. ಶ್ರೀವತ್ಸ ಜೋಶಿಯವರ 'ಪುಳಕದ ಟಚ್'ನಲ್ಲೇನಿದೆ? By: Prasad Updated: Saturday, September 29, 012,
  15. University B.D.T College of Engineering
  16. VK, May, 13,2012 ಇವಳು ಸು'ಸಂಸ್ಕೃತ ಅಮ್ಮ', ಶ್ರೀವತ್ಸ ಜೋಶಿ
  17. Pdf link: ೧೩, ಏಪ್ರಿಲ್,೩೦೨೦, ತಿಳಿರುತೋರಣ’ ಅಂಕಣಬರಹಗಳ ವಾಚನ ಧ್ವನಿಮುದ್ರಣ (🎼podcast🎼) ಸಂಕಲನ.17ಜನವರಿ2016ರಿಂದ 12ಏಪ್ರಿಲ್2020ರವರೆಗೆ ಪ್ರಕಟವಾದ ಎಲ್ಲ 220 ಲೇಖನಗಳ ಧ್ವನಿಮುದ್ರಣ ಇದರಲ್ಲಿದೆ