ಶ್ರೀನಿವಾಸ ರಾಮಾನುಜನ್ (ಪುಸ್ತಕ)
ಗೋಚರ
ಲೇಖಕರು | ಜಿ.ಟಿ.ನಾರಾಯಣ ರಾವ್ |
---|---|
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ಜೀವನ ಚರಿತ್ರೆ |
ಪ್ರಕಾರ | ಜೀವನ ಮತ್ತು ಸಾಧನೆ |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೪, ೨ನೇ ಮುದ್ರಣ |
ಪುಟಗಳು | ೧೭೬ |
ಐಎಸ್‍ಬಿಎನ್ | 978-81-8467-333-3 |
ಶ್ರೀನಿವಾಸ ರಾಮಾನುಜನ್ ಜಿ.ಟಿ.ನಾರಾಯಣ ರಾವ್ಅವರು ಬರೆದ ಪುಸ್ತಕ. ಇದು ಜೀವನ ಮತ್ತು ಸಾಧನೆ ಬಗೆಗಿನ ಪುಸ್ತಕ.
ಶ್ರೀನಿವಾಸ ರಾಮಾನುಜನ್ ಭಾರತದ ಅತ್ಯುಜ್ವಲ ಗಣಿತ ಪ್ರತಿಭೆ. ಪವಾಡ ಪುರುಷ ಅಲ್ಲದ ಸೃಜನಶೀಲ ಸ್ವೋಪಜ್ಞ ವ್ಯಕ್ತಿತ್ವ. ಅನ್ವೇಷಣಾ ಕುತೂಹಲಿ. ಯುಗಕ್ಕೊಮ್ಮೆ ಎನ್ನುವಂತೆ ಆವಿರ್ಭವಿಸಿ, ಅಪರೂಪದ ವಿದ್ವತ್ತು ಹೊಂದಿ, ಜಗತ್ತನ್ನೇ ಬೆರಗುಗೊಳಿಸುವ ಸಂಶೋಧನೆ ನಡೆಸಿದ ಕರ್ಮಯೋಗಿ. ನಾವೆಲ್ಲ ಅಚ್ಚರಿಯಿಂದ ಹುಬ್ಬೇರಿಸಿ ನೋಡುವಂಥ ಏಕಮೇವಾದ್ವಿತೀಯ ವಿದ್ವನ್ಮಣಿ. ಇವರ ಬಗ್ಗೆ ಪುಸ್ತಕಗಳನ್ನು ಬರೆಯುವುದೇ ಒಂದು ಸೊಗಸು; ಓದುವುದು ಇನ್ನಷ್ಟು ಹುಮ್ಮಸ್ಸು. ಜಿ.ಟಿ.ನಾರಾಯಣ ರಾವ್ ಬರೆದಿದ್ದಾರೆ, ನಾವು ಓದಿ ಇವರ ಜೀವನ-ಸಾಧನೆಗಳನ್ನು ಪರಿಚಯಿಸಿಕೊಳ್ಳೋಣ.