ವಿಷಯಕ್ಕೆ ಹೋಗು

ಶ್ರೀನಿವಾಸ ಉಡುಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀನಿವಾಸ ಉಡುಪ
ಜನನಜನೆವರಿ ೮, ೧೯೩೩
ನಲ್ಲುಂಡೆ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ನಿಧನಮಾರ್ಚ್ ೯, ೨೦೦೦
ಬೆಂಗಳೂರು, ಕರ್ನಾಟಕ, ಭಾರತ
ಲೇಖನ ನಾಮ'ಶ್ರೀಮುಖ', 'ಹೋಶ್ರೀ', 'ಶ್ರೀಶ'
ಉದ್ಯೋಗಕವಿ, ಲೇಖಕ, ಸರ್ಕಾರಿ ನೌಕರ
ರಾಷ್ಟ್ರೀಯತೆಭಾರತೀಯ
ವಿದ್ಯಾನಿಲಯಮೈಸೂರು ವಿಶ್ವವಿದ್ಯಾನಿಲಯ
ಅವಧಿ20ನೆಯ ಶತಮಾನ
ಶೈಲಿಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಅಂಕಣ
ಪ್ರಶಸ್ತಿಗಳುರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಅಖಿಲ ಭಾರತ ಆಕಾಶವಾಣಿ ಪುರಸ್ಕಾರ

ಶ್ರೀನಿವಾಸ ಉಡುಪ ಅನೇಕ ಕಾದಂಬರಿಗಳನ್ನು ಪ್ರಕಟಿಸಿದ ಕನ್ನಡ ಲೇಖಕರಾಗಿದ್ದರು. ೧೯೩೩ ಜನೆವರಿ ೮ರಂದು ಹೊಸನಗರ ತಾಲೂಕಿನ ಹುಂಚದಲ್ಲಿ ಜನಿಸಿದ ಇವರು ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕಥಾಸಂಕಲನ, ನಾಟಕ, ಕಾದಂಬರಿಗಳನ್ನು ಪ್ರಕಟಿಸಿದ್ದ ಶ್ರೀನಿವಾಸ ಉಡುಪರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ಆಕಾಶವಾಣಿ ಪುರಸ್ಕಾರ ಮೊದಲಾದ ಗೌರವಗಳು ಸಂದಿವೆ.

ಕೃತಿಗಳು

[ಬದಲಾಯಿಸಿ]

ಶ್ರೀನಿವಾಸ ಉಡುಪ ಎಂಬ ಹೆಸರಲ್ಲದೇ 'ಶ್ರೀಮುಖ', 'ಹೋಶ್ರೀ' ಮತ್ತು 'ಶ್ರೀಶ' ಕಾವ್ಯನಾಮಗಳಿಂದ ಸುಮಾರು ೬೦ ಕಾದಂಬರಿಗಳು, ೧೩ ಕಥಾಸಂಕಲನಗಳು, ೧೬ ಮಕ್ಕಳ ಕೃತಿಗಳು, ೬ ನಾಟಕಗಳು, ೮ ಸಂಪಾದಿತ ಕೃತಿಗಳು, ಒಂದು ವಿಮರ್ಶೆ ಹಾಗೂ ಒಂದು ಕ್ಷೇತ್ರ ದರ್ಶನ ಕೃತಿ ಸೇರಿ ಅವರ ಸಾಹಿತ್ಯ ಕೃತಿಗಳ ಒಟ್ಟು ಸಂಖ್ಯೆ ನೂರಕ್ಕೂ ಹೆಚ್ಚು.

ಕಥಾಸಂಕಲನ

[ಬದಲಾಯಿಸಿ]
  • ಮನೆಗೆ ಬಂದ ಮಗಳು(೧೯೫೭)
  • ನಿರಾಶೆಯ ಕೊನೆಯಲ್ಲಿ(೧೯೫೯)
  • ಕಪ್ಪುಬೆಳಗಿತು (೧೯೬೦)
  • ಅವಳ ಕಥೆ (೧೯೬೦)
  • ಬದುಕು (೧೯೬೫)
  • ಹೆಗ್ಗಡತಿ ಹೆತ್ತ ದೆವ್ವ (೧೯೬೫)
  • ಹೊಸ ಕಥೆಗಳು (೧೯೬೭)
  • ಪುರಾಣ ಕಥೆಗಳು (೧೯೭೩)
  • ಸಂಭಾವಿತ (೧೯೭೭)
  • ರೇಷ್ಮೆ ಸೀರೆ
  • ಅಮೃತ ಹೃದಯ
  • ಗಣಪತಿ ಭರವಸೆ
  • ಮದುವೆ ಹೆಣ್ಣು

ಕಾದಂಬರಿ

[ಬದಲಾಯಿಸಿ]
  • ಒಲಿದು ಬಂದವಳು
  • ಕೆಂಪು ತುಟಿ
  • ಜೀವನದ ಜೊತೆಗಾರ
  • ತುಂಬಿದ ಬಾಳು
  • ಪ್ರೇಮದ ಮನೆ
  • ಬಾಳಿನ ವೈಭವ
  • ಮನೆಗೆ ಬಂದವಳು
  • ವಿಜಯಲಕ್ಷ್ಮಿ
  • ಶೀಲವಂತೆ
  • ಸೋತ ಹೃದಯ
  • ಸ್ನೇಹಶೀಲೆ

ಮಕ್ಕಳ ಕಾದಂಬರಿ

[ಬದಲಾಯಿಸಿ]
  • ಅಭಿಮನ್ಯು

ಪುರಸ್ಕಾರ

[ಬದಲಾಯಿಸಿ]