ಶ್ರೀನಾಥಜಿ ದೇವಸ್ಥಾನ, ನಾಥದ್ವಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀನಾಥ ದೇವರ ಪೂಜೆ

ನಾಥದ್ವಾರದ ಶ್ರೀನಾಥ್‍ಜಿ ದೇವಸ್ಥಾನ[ಬದಲಾಯಿಸಿ]

ಭಾರತ ದೇಶದ ರಾಜಸ್ಥಾನ ರಾಜ್ಯದ ಉದಯಪುರದಿಂದ ಸುಮಾರು ೪೫ ಕಿ.ಮಿ ದೂರದಲ್ಲಿ, ನಾಥದ್ವಾರ ಎಂಬಲ್ಲಿ ವೈಷ್ಣವ ಸಂಪ್ರದಾಯದ ಈ ಪ್ರಮುಖ ಕೃಷ್ಣ ದೇವಾಲಯ ಸ್ಥಿತವಾಗಿದೆ. ಈ ದೇವಾಲಯವನ್ನು ಪ್ರತಿದಿನ ಕೆಲವೇ ನಿರ್ದಿಷ್ಟ ಸಮಯದಲ್ಲಷ್ಟೇ ತೆರೆದಿರಲಾಗುತ್ತದೆ.

ವಿಶೇಷತೆ[ಬದಲಾಯಿಸಿ]

ಗೋವರ್ಧನ ಗಿರಿ ಯನ್ನು ಒಂದು ಕೈನಿಂದ ಎತ್ತಿ ಹಿಡಿದಿರುವಂತಹ ಭಂಗಿಯಲ್ಲಿರುವ ಕಣ್ಮನ ಸೆಳೆಯುವ ಸ್ವಯಂಭು ಕೃಷ್ಣ ಪ್ರತಿಮೆ ಗೋವರ್ಧನಗಿರಿಯಿಂದ ಉಗಮವಾಗಿರುವುದೆಂದು ನಂಬಲಾಗುತ್ತದೆ. ವಲ್ಲಭಾಚರ್ಯರ ಮಗನಾದ ವಿಟ್ಟಲ್ ನಾಥಜಿ ಇಲ್ಲಿ ಪೂಜೆಯನ್ನು ಪ್ರಾರಂಭಿಸಿದರು.

ಐತಿಹ್ಯ[ಬದಲಾಯಿಸಿ]

ಐತಿಹ್ಯದಂತೆ ಇಲ್ಲಿರುವ ಕೃಷ್ಣ ಪ್ರತಿಮೆ, ಆರಂಭದಲ್ಲಿ ಮಥುರೆಯ ಬಳಿಯಿರುವ ಗೋವರ್ಧನ ಗಿರಿಯಲ್ಲಿ ಪೂಜಿಸಲ್ಪಡುತ್ತಿತ್ತು. ಔರಂಗಜೇಬನು ಈ ಪ್ರತಿಮೆಯನ್ನು ತನ್ನ ಬಳಿ ಇಟ್ಟು ಕೊಳ್ಳಲು ಬಯಸಿದ್ದರಿಂದ ಅದನ್ನು ಆಗ್ರಾಕ್ಕೆ ಸ್ಥಳಾಂತರಗೊಳಿಸಲಾಯಿತು. ನಂತರ ಮೂರ್ತಿಯನ್ನು ದಕ್ಷಿಣ ದಿಕ್ಕಿನ ಸುರಕ್ಷಿತ ಪ್ರದೇಶಕ್ಕೆ ಸಾಗಿಸುತ್ತಿರುವಾಗ ಸಿಹಾದ್ ಎಂಬ ಹಳ್ಳಿಯ ಬಳಿ ಬಂದಾಗ ಮೂರ್ತಿಯಿರುವ ಎತ್ತಿನ ಗಾಡಿಯ ಚಕ್ರವು ಹೂತುಹೋಯಿತಂತೆ. ಎಷ್ಟು ಪ್ರಯತ್ನ ಪಟ್ಟರೂ ಚಕ್ರ ಮೇಲೆತ್ತಲಾಗದಿದ್ದಾಗ, ಇದರೊಂದಿಗೆ ಪ್ರಯಾಣಿಸುತ್ತಿದ್ದ ಆರಾಧಕರು, ಭಗವಂತನು ಈ ಸ್ಥಳವನ್ನು ತನಗಾಗಿ ಆರಿಸಿರುವನೆಂದು ಅರಿತು, ಅಲ್ಲಿ ದೇವಸ್ಥಾನವನ್ನು ಮೇವಾರದ ರಾಜನಾದ ರಾಜ್ ಸಿಂಗ್ ರ ರಕ್ಷಣೆಯಲ್ಲಿ ಕಟ್ಟಿಸಿದರು.

ಬಾಹ್ಯ ಕೊಂಡಿಗಳು[ಬದಲಾಯಿಸಿ]

https://en.wikipedia.org/wiki/Shrinathji


ಉಲ್ಲೇಖ[ಬದಲಾಯಿಸಿ]