ಶೈಲೇಶ್ ಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಗ್ಗ ಹಳ್ಳಿಯ ಪರಿಸರದಿಂದ ಗೊತ್ತೂ ಗುರಿಯಲ್ಲದ ಮಹಾನಗರಕ್ಕೆ ಹೋಗಿ, ಹೋಟೆಲ್ ವೊಂದರಲ್ಲಿ ಕ್ಲೀನರ್ ಆಗಿ ಸೇರಿ ನಿಷ್ಠೆಯಿಂದ ಕೆಲಸಮಾಡಿ ಮಾಲೀಕರ ಶಭಾಶ್ ಗಿರಿ ಪಡೆದ 'ಶೈಲೇಶ್ ಗೌಡ', ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಲೇ ಹೋದರು. ತೀರ್ಥಹಳ್ಳಿ ತಾಲ್ಲೂಕಿನ ಹೆಗ್ಗೋಡು ಗ್ರಾಮದ ಹೈದ ಎಳೆಯ ಪ್ರಾಯದಲ್ಲೇ ಶಾಲೆ ಮುಗಿದ ಬಳಿಕ ತನ್ನ ತಂದೆಯವರ ಜೊತೆ ವ್ಯವಸಾಯದಲ್ಲಿ ಕೈಜೋಡಿಸಿದ. ಅದೇ ಕಾರ್ಯ ನೀತಿ ಅವನನ್ನು ಅತಿ ಎತ್ತರಕ್ಕೆ ಕರೆದೊಯ್ಯಿತು.

ಬಾಲ್ಯ ಪರಿವಾರ[ಬದಲಾಯಿಸಿ]

ಶೈಲೇಶ್ ಗೌಡರ ತಂದೆ ದೇವಪ್ಪ ಗೌಡ, ವ್ಯವಸಾಯಗಾರ. ತಾಯಿ, ರತ್ನಮ್ಮ. ಈ ದಂಪತಿಗಳ ಹೆಮ್ಮೆಯ ಮಗನಾದ ಶೈಲೇಶ್ ಓದಿದ್ದು ಕೇವಲ ೮ ನೆ ಇಯತ್ತೆವರೆಗೆ. ವಿದ್ಯೆ ತಲೆಗೆ ಹತ್ತಲಿಲ್ಲ. ಪಕ್ಕದ ಊರಾದ ಕಡ್ತೂರಿಗೆ ಹೋಗಿ, ಟೈಲರಿಂಗ್ ಕಲಿತ. ಇದು ಹೇಗೋ ಅವನಿಗೆ ಪ್ರಿಯವಾಯಿತು. ಅದರಲ್ಲೇ ಸ್ವಲ್ಪ ಕೆಲಸಮಾಡಿ ತಂದೆಗೆ ನೆರವಾದ. ಸ್ಥಳೀಯ ಗುರುತು ಪರಿಚಯದವರಾದ ಶೆಟ್ಟರೊಬ್ಬರ ನೆರವಿನಿಂದ ಬೊಂಬಾಯಿಗೆ ಉದ್ಯೋಗಾರ್ಥಿಯಾಗಿ ಹೋದ. ಬೊಂಬಾಯಿನ ಉಪನಗರ ಗೋರೆಗಾಂವ್ ನ 'ಪ್ರೀತಮ್ ಫಾಸ್ಟ್ ಫುಡ್' ಎಂಬ ಖಾನಾವಳಿಯಲ್ಲಿ ಶೆಟ್ಟರೊಬ್ಬರ ಸಹಾಯದಿಂದ ನೌಕರಿಗೆ ಸೇರಿದನು. ಹೋಟೆಲ್ ನ ಮಾಲೀಕ 'ಜಯಂತಿ ಲಾಲ್'. ಅಜಾನುಬಾಹು ಜಯಂತಿಲಾಲರು, ಒಮ್ಮೆ ಆ ಹೋಟೆಲ್ ನ ಒಳಗೆ ಅಡುಗೆ ಮನೆಯಲ್ಲಿ ಕುಳಿತಿದ್ದಾಗ ಗ್ಯಾಸ್ ಸಿಲೆಂಡರ್ ಸಿಡಿಯುವ ಸ್ಥಿತಿಯಲ್ಲಿದ್ದನ್ನು ಶೈಲೇಶ್ ಶೆಟ್ಟಿ ಗಮನಿಸಿ ತಕ್ಷಣವೇ ಓಡಿಬಂದು ಒದ್ದೆ ಗೋಣಿತಟ್ಟನ್ನು ಸಿಲೆಂಡರ್ ಮೇಲೆ ಹೊದಿಸಿ ಅಪಘಾತವನ್ನು ತಡೆಗಟ್ಟಿದ. ಹೀಗೆ ತಮ್ಮ ಜೀವ ಉಳಿಸಿದ ಕೃತಜ್ಞತೆಯಿಂದ ಸಂತಸಗೊಂಡ ಜಯಂತಿ ಲಾಲ್ ಶೈಲೇಶ್ ಶೆಟ್ಟಿಯನ್ನು ನಂಬಿಕೆಯ ಪ್ರಮುಖ ಕೆಲಸಗಳಿಗೆ ನೇಮಿಸಲಾರಂಭಿಸಿದರು. ಕೆಲವು ದಿನಗಳಲ್ಲಿ ತನ್ನ ಹೋಟೆಲ್ ನ ಒಂದು ಭಾಗವನ್ನು ಲೀಸ್ ಮೇಲೆ ಶೈಲೇಶ್ ಶೆಟ್ಟಿಗೆ ಕೊಟ್ಟು ನಿರ್ವಹಿಸಲು ಪ್ರೋತ್ಸಾಹಿಸಿದ. ಹೀಗೆ ನಂಬಿಕೆಗೆ ಅರ್ಹನಾಗಿ ಕೆಲಸಮಾಡಿ ಯಜಮಾನರ ಭರವಸೆಯನ್ನು ಗಳಿಸಿದ ಶೈಲೇಶ್ ಹಿಂದಿರುಗಿ ನೋಡಲೇ ಇಲ್ಲ. ಹೀಗೆ ಮುಂದುವರೆದು ತನ್ನ ಪರಿಶ್ರಮ ಮತ್ತು ಶ್ರದ್ಧೆಯಿಂದ ಏರುತ್ತಲೇ ಸಾಗಿ ೩೦೦ ಜನರಿಗೆ ಉದ್ಯೋಗಾವಕಾಶ ಕೊಡುವಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗೆ ೩ ಸ್ಟಾರ್ ಹೋಟೆಲ್ ಗಳ ಮಾಲೀಕರಾಗಿರುವ ಶೈಲೇಶ್ ಗೌಡರು ಕೆಳಗೆ ನಮೂದಿಸಿದ ಬೃಹದ್ ಹೋಟೆಲ್ ಗಳ ಹೆಮ್ಮೆಯ ಮಾಲೀಕರಾಗಿದ್ದಾರೆ :

  • 'ಹೋಟೆಲ್ ಕ್ಲಾಸಿಕ್',
  • 'ಪ್ರೀತಮ್ ಫಾಸ್ಟ್ ಫುಡ್ಸ್,'
  • 'ಕ್ಲಾಸಿಕ್ ಕಂಫರ್ಟ್'

ಹೋಟೆಲ್ ಉದ್ಯಮದಲ್ಲಿ ಅತ್ಯವಶ್ಯಕವಾದ ಪ್ರಮುಖ ಆದ್ಯತೆಗಳೆಂದರೆ ಶುಚಿ ರುಚಿಯಾದ ತಿಂಡಿ ತಿನಸುಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವ ಅಜೆಂಡಾ ಗುರುತಿಸಿ ಗ್ರಾಹಕರ ಮನಸ್ಸನ್ನು ಗೆಲ್ಲುವುದರಲ್ಲಿ ಶೈಲೇಶ್ ಗೌಡರು ಯಶಸ್ವಿಯಾದರು. ಹೋಟೆಲ್ ಮ್ಯಾನೇಜ್ಮೆಂಟ್ ವಲಯದಲ್ಲಿ ಮುಂಬಯಿ ನಗರವು ಸೇರಿದಂತೆ ಮಹಾರಾಷ್ಟ್ರ ರಾಜ್ಯದ ಹಲವಾರು ನಗರಗಳಲ್ಲಿ ಜರುಗುವ 'ಸೆಮಿನಾರ್' ಗಳಲ್ಲಿ ಉಪನ್ಯಾಸಗಳನ್ನು ಕೊಡುತ್ತಾ ಬಂದರು. ೬-೮ ಭಾಷೆಗಳಲ್ಲಿ ಸರಾಗವಾಗಿ ಮಾತಾಡಬಲ್ಲವರಾದ ಶೆಟ್ಟಿಯವರು,ಮುಂಬಯಿನ ಹಲವೆಡೆ ಇರುವ ಬಡಾವಣೆಗಳಲ್ಲಿ ತಾವೇ ಮುಂದಾಳತ್ವ ವಹಿಸಿ, ಕನ್ನಡಿಗರನ್ನು ಸಂಘಟಿಸುವ ಕಾರ್ಯದಲ್ಲಿ ಯಶಸ್ವಿಯಾದರು. ಕನ್ನಡಾಭಿಮಾನವನ್ನು ಬೆಳೆಸುತ್ತಿದ್ದಾರೆ. ಉದ್ಯೋಗ ಹಾಗೂ ಶೈಕ್ಷಣಿಕ ರಂಗದಲ್ಲಿ ಸಾಧನೆ ಮಾಡಲು ಹಾತೊರೆಯುತ್ತಿರುವ ಯುವ ಜನರಿಗೆ ತಮ್ಮ ಸಹಾಯ ಹಸ್ತವನ್ನು ಕೊಟ್ಟು ಅವರನ್ನು ಮುಂದೆ ತರುತ್ತಿದ್ದಾರೆ ತಮ್ಮ ವರ್ಚಸ್ಸಿನಿಂದ ಮಹಾರಾಷ್ಟ್ರದ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳು, ಸಾಮಾಜಿಕ ಹೋರಾಟಗಾರರ ಒಡನಾಟವನ್ನು ಸಂಪಾದಿಸಿದ್ದಾರೆ.

ಗೌರವ ಪ್ರಶಸ್ತಿಗಳು[ಬದಲಾಯಿಸಿ]

  • ಟ್ರಿನಿಟಿ ವರ್ಲ್ಶ್ ಯೂನಿವರ್ಸಿಟಿಯವರು ಗೌ. ಡಾಕ್ಟೊರೇಟ್ ಕೊಟ್ಟು ಗೌರವಿಸಿದ್ದಾರೆ.

೩ ದಶಕಗಳಲ್ಲಿ ತಮ್ಮ ಸತತ ಪರಿಶ್ರಮದಿಂದ ಇಂದು ಡಾ. ಶೈಲೇಶ್ ಶೆಟ್ಟಿ ಎಂದು ಮುಂಬಯಿ ನ ಪ್ರತಿಷ್ಠಿತ ವಲಯದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಒಟ್ಟಾರೆ ೫ ಹೋಟೆಲ್ ಗಳನ್ನು ಅವರು ನಡೆಸಿಕೊಂಡು ಬರುತ್ತಿದ್ದಾರೆ. ಯಾವುದೇ ವಲಯದಲ್ಲಿ ಪ್ರಾಮಾಣಿಕತೆ, ಅತ್ಯಂತ ಶ್ರದ್ಧೆ ಮತ್ತು ನಿರಂತರ ಪರಿಶ್ರಮ ಯಶಸ್ಸಿನ ಮೈಲಿಗಲ್ಲೆಂದು ಎಲ್ಲರಿಗೂ ತೋರಿಸಿಕೊಟ್ಟಿದ್ದಾರೆ. ಯಾವುದೇ ಕೆಲಸದಲ್ಲಿ ಇರುವ ಒಳಿತು ಕೆಡಕುಗಳ ತುಲನೆ ಮಾಡಿ ಉತ್ತಮ ಕೆಲಸದಲ್ಲಿ ಪಾಲ್ಗೊಳ್ಳುವುದರಿಂದ ಯಶಸ್ಸು ನಿಶ್ಚಯವೆನ್ನುವುದು ಅವರ ಅಭಿಮತ.