ಶೈಕ್ಷಣಿಕ ಪ್ರವೇಶ ಪರೀಕ್ಷೆ
ಪ್ರವೇಶ ಪರೀಕ್ಷೆಯು ಪ್ರವೇಶಕ್ಕಾಗಿ ಭಾವೀ ವಿದ್ಯಾರ್ಥಿಗಳನ್ನು ಆಯ್ಕೆಮಾಡಲು ಶೈಕ್ಷಣಿಕ ಸಂಸ್ಥೆಗಳು ನಡೆಸುವ ಪರೀಕ್ಷೆ.[೧] ಇದನ್ನು ಪ್ರಾಥಮಿಕದಿಂದ ತೃತೀಯಕದವರೆಗೆ ಶಿಕ್ಷಣದ ಯಾವುದೇ ಹಂತದಲ್ಲಿ ನಡೆಸಬಹುದು. ಆದರೆ ಸಾಮಾನ್ಯವಾಗಿ ಇದನ್ನು ತೃತೀಯಕ ಹಂತದಲ್ಲಿ ನಡೆಸಲಾಗುತ್ತದೆ.
ಭಾರತ
[ಬದಲಾಯಿಸಿ]ಭಾರತದಲ್ಲಿ, ಪ್ರವೇಶ ಪರೀಕ್ಷೆಗಳು ಮುಖ್ಯವಾಗಿ ವೈದ್ಯವಿಜ್ಞಾನ, ಎಂಜಿನಿಯರಿಂಗ್ ಮತ್ತು ವ್ಯವಸ್ಥಾಪನೆಗೆ ಸೀಮಿತವಾಗಿವೆ. ಇವು ನೂರರಲ್ಲಿ ಕೇವಲ ಒಬ್ಬರು ಪ್ರವೇಶ ಪಡೆಯಲು ನಿರೀಕ್ಷಿಸಬಹುದಾದ ಬಿಟ್ಸ್ ಪಿಲಾನಿ ಪ್ರವೇಶ ಪರೀಕ್ಷೆ ಮತ್ತು ಐಐಟಿ-ಜೆಇಇಯಿಂದ ಹಿಡಿದು ಅನೇಕ ಮತ್ತು ವೈವಿಧ್ಯವುಳ್ಳ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಗಳವರೆಗೆ ವ್ಯಾಪಿಸುತ್ತವೆ. ಬಿರುಸಾಧ ಸ್ಪರ್ಧೆಯು ಅನೇಕ ವಿದ್ಯಾರ್ಥಿಗಳು ತಮ್ಮ ಶಾಲಾ ಅಭ್ಯಾಸಗಳನ್ನು ಉಪೇಕ್ಷಿಸಿ ಸಮಯ ಹಿಡಿಯುವ ಮತ್ತು ದುಬಾರಿಯಾದ ಪ್ರವೇಶ ತರಬೇತಿ ಮೇಲೆ ಮಾತ್ರ ಕೆಂದ್ರೀಕರಿಸುವ ಪರಿಸ್ಥಿತಿಗೆ ಕಾರಣವಾಗಿದೆ. ಇದರಿಂದಾಗಿ ಅನೇಕ ರಾಜ್ಯಗಳು ಪ್ರವೇಶ ಪರೀಕ್ಷೆಗಳನ್ನು ರದ್ದುಪಡಿಸಿ ಪ್ರವೇಶಗಳನ್ನು ಶಾಲಾ ಬಿಡುವಿಕೆಯ ಅಂಕಗಳ ಮೇಲೆ ಪ್ರವೇಶಗಳನ್ನು ಆಧರಿಸಿವೆ. ದುರದೃಷ್ಟವಶಾತ್ ಇವು ಬಹಳ ವಿಶ್ವಾಸಾರ್ಹವಾಗಿಲ್ಲ.