ಶುಭಾ ಸತೀಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶುಭಾ ಸತೀಶ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಶುಭಾ ಸತೀಶ್
ಹುಟ್ಟು (1999-07-13) ೧೩ ಜುಲೈ ೧೯೯೯ (ವಯಸ್ಸು ೨೪)
ಬೆಂಗಳೂರು, ಕರ್ನಾಟಕ ಭಾರತ
ಬ್ಯಾಟಿಂಗ್ಎಡಗೈ
ಬೌಲಿಂಗ್ಬಲಗೈ
ಪಾತ್ರಆಲ್-ರೌಂಡರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಒಂದೇ ಟೆಸ್ಟ್ (ಕ್ಯಾಪ್ ೯೨)೧೪,ಡಿಸೆಂಬರ್ ೨೦೨೩ v ಇಂಗ್ಲೆಂಡ್
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2012/13–2022/23ಕರ್ನಾಟಕ
೨೦೨೩/೨೪–ಪ್ರಸ್ತುತರೈಲ್ವೆ
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ WFC WLA WT20
ಪಂದ್ಯಗಳು ೫೨ ೪೧
ಗಳಿಸಿದ ರನ್ಗಳು ೬೯ ೯೦ ೧,೨೭೫ ೬೬೫
ಬ್ಯಾಟಿಂಗ್ ಸರಾಸರಿ ೬೯.೦೦ ೧೮.೦೦ ೨೮.೯೭ ೨೦.೭೮
೧೦೦/೫೦ ೦/೧ ೦/೧ ೦/೧೦ ೦/೩
ಉನ್ನತ ಸ್ಕೋರ್ ೬೯ ೬೯ ೮೫ ೬೧*
ಎಸೆತಗಳು ೨೯೬ ೭೨
ವಿಕೆಟ್‌ಗಳು
ಬೌಲಿಂಗ್ ಸರಾಸರಿ ೨೭.೭೧ ೨೧.೦೦
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೨/೧೧ ೨/೨೪
ಹಿಡಿತಗಳು/ ಸ್ಟಂಪಿಂಗ್‌ ೦/– ೨/– ೨೨/– ೨೨/–
ಮೂಲ: CricketArchive, ೧೮ ಡಿಸೆಂಬರ್ ೨೦೨೩

ಶುಭಾ ಸತೀಶ್ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ. ಇವರು ಪ್ರಸ್ತುತ ರೈಲ್ವೇಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. ಅವರು ಬಲಗೈ ಬ್ಯಾಟರ್ ಮತ್ತು ಬಲಗೈ ಮಧ್ಯಮ ಬೌಲರ್ ಆಗಿ ಆಡುತ್ತಾರೆ. ಈ ಹಿಂದೆ ಕರ್ನಾಟಕದ ಪರ ಕೂಡ ಆಡಿದ್ದರು.[೧]

ಅವರು ಡಿಸೆಂಬರ್ ೨೦೨೩ ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಪರ ಟೆಸ್ಟ್ ಪಂದ್ಯದಲ್ಲಿ ಆಡಿದದ್ದರು, ಈ ಮೂಲಕ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು.

ವಯಕ್ತಿಕ ಜೀವನ[ಬದಲಾಯಿಸಿ]

ಶುಭಾ ಸತೀಶ್ ರವರು ೧೩ನೇ ಜುಲೈ ೧೯೯೯ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಬೆಮಲ್ ಉದ್ಯೋಗಿಯಾಗಿರುವ ಎನ್.ಸತೀಶ್ ಹಾಗೂ ತಾರಾ ದಂಪತಿಗಳ ಪುತ್ರಿ. ಇವರು ೧೨ನೇ ವಯಸ್ಸಿನಲ್ಲಿ ಕ್ರಿಕೆಟ್ ಆಟವಾಡಲು ಆರಂಭಿಸಿದ್ದರು.[೨]

ವೃತ್ತಿ ಜೀವನ[ಬದಲಾಯಿಸಿ]

ಇವರು ಎಡಗೈನಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಹಾಗೂ ಬಲಗೈ ಮಧ್ಯಮ ವೇಗದ ಬೌಲರ್ ಕೂಡ ಹೌದು. ಇವರು ಆಲ್-ರೌಂಡರ್ ಆಗಿದ್ದಾರೆ. [೩]

ದೇಶೀಯ[ಬದಲಾಯಿಸಿ]

ಶುಭಾರವರು ನವೆಂಬರ್ ೨೦೧೨ರಲ್ಲಿ ಆಂಧ್ರ ವಿರುದ್ಧ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.[೪] ಅವರು ಜನವರಿ ೨೦೧೭ರಲ್ಲಿ ತಮ್ಮ ಚೊಚ್ಚಲ ಟ್ವೆಂಟಿ ೨೦ ಅರ್ಧಶತಕವನ್ನು ಸೌರಾಷ್ಟ್ರ ವಿರುದ್ಧ ೬೧* ಮತ್ತು ಡಿಸೆಂಬರ್ ೨೦೧೮ರಲ್ಲಿ ತಮಿಳುನಾಡು ವಿರುದ್ಧ ೭೨ ರನ್ ರೊಂದಿಗೆ ಅವರ ಮೊದಲ ಲಿಸ್ಟ್ ಎ ಅರ್ಧ ಶತಕವನ್ನು ಗಳಿಸಿದರು. ಅವರು ೨೦೨೦-೨೧ರ ಮಹಿಳಾ ಸೀನಿಯರ್ ಏಕದಿನ ಟ್ರೋಫಿಯಲ್ಲಿ ನಾಲ್ಕು ಅರ್ಧಶತಕಗಳು ಸೇರಿದಂತೆ ೩೪೬ ರನ್‌ಗಳೊಂದಿಗೆ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಅವರು ೨೦೨೩-೨೪ ಆವೃತ್ತಿಯ ಮುಂಚಿತವಾಗಿ ರೈಲ್ವೇಸ್ಗೆ ತೆರಳಿದರು. [೫][೬]

ಅವರು ೨೦೧೭-೧೮ರ ಹಿರಿಯ ಮಹಿಳಾ ಕ್ರಿಕೆಟ್ ಅಂತರ ವಲಯ ಮೂರು ದಿನದ ಪಂದ್ಯಾವಳಿಯಲ್ಲಿ ದಕ್ಷಿಣ ವಲಯಕ್ಕಾಗಿ ಎರಡು ಪಂದ್ಯಗಳನ್ನು ಆಡಿದರು.[೭]

ಡಿಸೆಂಬರ್ ೨೦೨೩ ರಲ್ಲಿ, ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾದರು.[೮] ಡಿಸೆಂಬರ್ ೯ ರಂದು, ಡಬ್ಲ್ಯೂಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೯ಲಕ್ಷಕ್ಕೆ ಇವರನ್ನು ಖರೀದಿಸಿದೆ.

ಅಂತರರಾಷ್ಟ್ರೀಯ[ಬದಲಾಯಿಸಿ]

ಡಿಸೆಂಬರ್ ೨೦೨೩ರಲ್ಲಿ, ಶುಭಾ ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಿಗಾಗಿ ಭಾರತ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ೬೯ ರನ್ ಗಳಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. [೯] ಇದು ವಿಶ್ವ ಮಹಿಳಾ ಟೆಸ್ಟನಲ್ಲಿ ಮೂರನೇ ಅತೀ ವೇಗದ ಅರ್ಧಶತಕವಾಗಿದೆ. [೧೦] ಈ ಹಿಂದೆ ಗಾಯದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.

ಉಲ್ಲೇಖಗಳು[ಬದಲಾಯಿಸಿ]