ವಿಷಯಕ್ಕೆ ಹೋಗು

ಶಿಶುನಾಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿಶುನಾಗನು (ಸು. ಕ್ರಿ.ಪೂ. 444 – 363) ಇಂದಿನ ಉತ್ತರ ಭಾರತದಲ್ಲಿನ ಮಗಧಶಿಶುನಾಗ ರಾಜವಂಶದ ಸಂಸ್ಥಾಪಕನಾಗಿದ್ದನು. ಆರಂಭದಲ್ಲಿ, ಇವನು ಮಗಧ ಸಾಮ್ರಾಜ್ಯದ ಹರ್ಯಂಕ ರಾಜವಂಶದಲ್ಲಿ ಅಮಾತ್ಯನಾಗಿದ್ದನು. ಹರ್ಯಂಕ ರಾಜವಂಶದ ಆಳ್ವಿಕೆಯ ವಿರುದ್ಧ ಜನರು ಬಂಡಾಯವೆದ್ದು ಇವನನ್ನು ಸಿಂಹಾಸನದ ಮೇಲೆ ಕೂರಿಸಿದರು. ಇವನು ತನ್ನ ಮಗನನ್ನು ವಾರಾಣಸಿಯಲ್ಲಿ ಇರಿಸಿ ತಾನು ಗಿರಿವ್ರಜನಿಂದ ಆಳಿದನು ಎಂದು ಪುರಾಣಗಳು ಹೇಳುತ್ತವೆ. ಇವನ ನಂತರ ಇವನ ಮಗ ಕಾಲಾಶೋಕನು (ಕಾಕವರ್ಣ) ಉತ್ತರಾಧಿಕಾರಿಯಾದನು.

ಆರಂಭಿಕ ಜೀವನ

[ಬದಲಾಯಿಸಿ]

ಮಹಾವಂಶತಿಕದ ಪ್ರಕಾರ, ಶಿಶುನಾಗನು ವೈಶಾಲಿಯ ಒಬ್ಬ ಲಿಚ್ಛವಿ ಅರಸನ ಮಗನಾಗಿದ್ದನು.[] ಇವನು ಒಬ್ಬ ನಗರ ಶೋಭಿನಿಯ ಗರ್ಭದಿಂದ ಹುಟ್ಟಿದನು ಮತ್ತು ಇವನನ್ನು ರಾಜ್ಯಾಧಿಕಾರಿಯಾಗಿ ಬೆಳೆಸಲಾಯಿತು. ಬಂಡಾಯದ ವೇಳೆ, ಇವನು ವಾರಾಣಸಿಯಲ್ಲಿ ಹರ್ಯಂಕ ರಾಜವಂಶದ ಕೊನೆಯ ಅರಸ ನಾಗದಾಸಕನ ರಾಜಪ್ರತಿನಿಧಿಯಾಗಿದ್ದನು.[]

ಆಳ್ವಿಕೆ

[ಬದಲಾಯಿಸಿ]

ಶಿಶುನಾಗನು ಕ್ರಿ.ಪೂ. ೪೧೩ ರಿಂದ ೩೯೫ರ ವರೆಗೆ ಆಳಿದನು.[] ಆರಂಭದಲ್ಲಿ, ರಾಜಗೃಹವು ಇವನ ರಾಜಧಾನಿ ಮತ್ತು ವೈಶಾಲಿಯು ಇವನ ಎರಡನೇ ರಾಜನಿವಾಸವಾಗಿತ್ತು. ನಂತರ ಇವನು ತನ್ನ ರಾಜಧಾನಿಯನ್ನು ವೈಶಾಲಿಗೆ ಸ್ಥಳಾಂತರಿಸಿದನು. ಅವಂತಿ ರಾಜ್ಯದ ಪ್ರದ್ಯೋತ ರಾಜವಂಶದ ವೈಭವದ ವಿನಾಶ ಇವನ ಅತ್ಯಂತ ಗಮನಾರ್ಹ ಸಾಧನೆಯಾಗಿತ್ತು. ಹೆಚ್ಚು ಸಂಭಾವ್ಯವಾಗಿ ಅವಂತಿವರ್ಧನನು ಶಿಶುನಾಗನಿಂದ ಗರ್ವಭಂಗಗೊಂಡ ಅವಂತಿಯ ರಾಜನಾಗಿದ್ದನು. ಆರ್ಯಕನನ್ನು ಉಜ್ಜಯಿನಿಯ ಸಿಂಹಾಸನದ ಮೇಲೆ ಇರಿಸಿದ ಕ್ರಾಂತಿಯು ಮಗಧದ ವಿಜಯಕ್ಕೆ ನೆರವಾಗಿರಬೇಕು.

ವಿಸ್ತರಣೆ

[ಬದಲಾಯಿಸಿ]

ಶಿಶುನಾಗನ ಆಳ್ವಿಕೆಯ ಅವಧಿಯಲ್ಲಿ ಬಹುಮಟ್ಟಿಗೆ ಇಡೀ ಭಾರತ (ಆಧುನಿಕ ಭಾರತದ ಮದುರೈ ದಕ್ಷಿಣದ ತಮಿಳುನಾಡಿನ ಪ್ರದೇಶಗಳು, ಪಾಕಿಸ್ತಾನ, ನೇಪಾಳ, ಭೂತಾನ್, ಅಫ಼್ಘಾನಿಸ್ತಾನ್ ಮತ್ತು ಈಶಾನ್ಯ ಬಾಂಗ್ಲಾದೇಶವನ್ನು ಹೊರತುಪಡಿಸಿ) ಇವನ ಕೈಯಲ್ಲಿತ್ತು. ಕ್ರಿ.ಪೂ ೪೨೫ರಲ್ಲಿ ಇವನು ಜೈಪುರವನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು. ಕ್ರಿ.ಪೂ. ೪೦೫ರ ವೇಳೆಗೆ ಇವನು ಕೊನೆಯ ಮಹಾಜನಪದವನ್ನು ಸೋಲಿಸಿದನು. ಕ್ರಿ.ಪೂ. ೪೨೨ ರಿಂದ ೪೧೫ರ ಅವಧಿಯಲ್ಲಿ ಇವನು ಸಿಂಧ್, ಮುಲ್ತಾನ್, ಲಾಹೋರ್, ಕಾಬುಲ್, ಹೇರಾಟ್, ಚಗ್‍ಚರನ್, ಅಂಜುರಿ, ಕಂದಾಹರ್, ಕರಾಚಿ ಮತ್ತು ವೆಲ್ಲೋರನ್ನು ಸೇರಿಸಿಕೊಂಡನು. ಕ್ರಿ.ಪೂ. ೪೧೩ರಲ್ಲಿ ಇವನ ಪ್ರಾಂತಗಳು ದಕ್ಷಿಣದಲ್ಲಿ ಕೋಚಿನ್ ಹಾಗೂ ಮದುರೈವರೆಗೆ, ಉತ್ತರದಲ್ಲಿ ಶಾರ್ದು ಹಾಗೂ ದಾನ್ಯೋರ್‍ವರೆಗೆ, ಪೂರ್ವದಲ್ಲಿ ಮುರ್ಶೀದಾಬಾದ್ ಹಾಗೂ ದಖಿನ್‍ಪರಾವರೆಗೆ, ಪಶ್ಚಿಮದಲ್ಲಿ ಹೇರಾಟ್‍ವರೆಗೆ ಹರಡಿದ್ದವು.

ಉಲ್ಲೇಖಗಳು

[ಬದಲಾಯಿಸಿ]
  1. Upinder Singh 2016, p. 272.
  2. Raychaudhuri 1972, pp. 193–5.
  3. Thapar 1990.
"https://kn.wikipedia.org/w/index.php?title=ಶಿಶುನಾಗ&oldid=808717" ಇಂದ ಪಡೆಯಲ್ಪಟ್ಟಿದೆ