ಶಿವಪೂಜನ್ ರೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಿವಪೂಜನ್ ರೈ
Born
ಶಿವಪೂಜನ್ ರೈ

(೧೯೧೩-೦೩-೦೧)೧ ಮಾರ್ಚ್ ೧೯೧೩
ಶೇರ್ಪುರ್, ಘಾಜಿಪುರ,[ಆಗ್ರಾ ಮತ್ತು ಔದ್ ಸಂಯುಕ್ತ ಪ್ರಾಂತ್ಯಗಳು, ಬ್ರಿಟಿಷ್ ಭಾರತ
Died18 August 1942(1942-08-18) (aged 29)
ಮೊಹಮ್ಮದಾಬಾದ್, ಘಾಜಿಪುರ, ಯುನೈಟೆಡ್ ಪ್ರಾಂತ್ಯಗಳು, ಬ್ರಿಟಿಷ್ ಭಾರತ
Other namesಡಾಕ್ಟರ್ ಸಾಹಿಬ್
Occupationಭಾರತೀಯ ಸ್ವಾತಂತ್ರ್ಯ ಹೋರಾಟಗಾರ
Organizationಭಾರತೀಯ ರಾಷ್ಟ್ರೀಯ ಕಾಂಗ್ರೆಸ್
Known forಭಾರತೀಯ ಸ್ವಾತಂತ್ರ್ಯ ಚಳುವಳಿ

ಡಾ. ಶಿವಪೂಜನ್ ರೈ ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ. ೧೯೪೨ ರ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ, ರಾಯ್ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಗುಂಪು ಮೊಹಮ್ಮದಾಬಾದ್ ತೆಹಸಿಲ್‌ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿತು. ಈ ಸಂಧರ್ಭದಲ್ಲಿ ಶಿವಪೂಜನ್ ರೈ, ಋಷಿಶೇವರ್ ರೈ, ವಾನ್ಸ್ ನಾರಾಯಣ ರೈ, ರಾಮ್ ಬದನ್ ಉಪಾಧ್ಯಾಯ, ರಾಜ್ ನಾರಾಯಣ ರೈ, ನಾರಾಯಣ ರೈ, ವಶಿಷ್ಠ ನಾರಾಯಣ ರೈ ಮತ್ತು ಬನ್ಸ್ ನಾರಾಯಣ ರೈ ಅವರು ೧೮ ಆಗಸ್ಟ್ ೧೯೪೨ ರಂದು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಇವರೆಲ್ಲರನ್ನು ಶೇರ್ಪುರದ ಅಷ್ಟಾ ಶಹೀದ್ (ಎಂಟು ಹುತಾತ್ಮರು) ಎಂದು ಕರೆಯಲಾಗುತ್ತದೆ.

ಜೀವನಚರಿತ್ರೆ[ಬದಲಾಯಿಸಿ]

ಆರಂಭಿಕ ಜೀವನ[ಬದಲಾಯಿಸಿ]

ಡಾ. ಶಿವಪೂಜನ್ ರೈ ಅವರು ೧೯೧೩ ರಲ್ಲಿ ಗಾಜಿಪುರ ಜಿಲ್ಲೆಯ ಶೇರ್ಪುರ್ ಗ್ರಾಮದಲ್ಲಿ ಭೂಮಿಹಾರ್ ಎಂಬ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. [೧]

ಸ್ವಾತಂತ್ರ್ಯ ಹೋರಾಟಗಾರರಾಗಿ[ಬದಲಾಯಿಸಿ]

ಶಿವಪೂಜನ್ ರೈ ೧೯೪೨ ರಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. [೨]

ಮೊಹಮ್ಮದಾಬಾದ್‌ನಲ್ಲಿ ಹುತಾತ್ಮ[ಬದಲಾಯಿಸಿ]

ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಡಾ. ಶಿವಪೂಜನ್ ರೈ ಅವರು ಯುವ ಸ್ವಾತಂತ್ರ್ಯ ಹೋರಾಟಗಾರರ ಗುಂಪನ್ನು ಮೊಹಮ್ಮದಾಬಾದ್‌ನ ತಹಸಿಲ್ ಹೆಡ್ ಕ್ವಾರ್ಟರ್‌ಗೆ ಮುನ್ನಡೆಸಿದರು ಮತ್ತು ತಹಸಿಲ್ ಕಟ್ಟಡದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರಯತ್ನಿಸಿದರು. ಶಸ್ತ್ರಸಜ್ಜಿತ ಬ್ರಿಟಿಷ್ ಅಧಿಕಾರಿಗಳು ಅವರಿಗೆ ಎಚ್ಚರಿಕೆ ನೀಡಿದರು ಆದರೆ ಶಿವಪೂಜನ್ ರೈ ಅವರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮುಂದೆ ಸಾಗಿದರು. ತಹಸೀಲ್ದಾರ್ ತನ್ನ ಸರ್ವಿಸ್ ರಿವಾಲ್ವರ್‌ನಿಂದ ಅವರ ಮೇಲೆ ಗುಂಡು ಹಾರಿಸಿದರೂ ಯುವ ಸ್ವಾತಂತ್ರ್ಯ ಹೋರಾಟಗಾರರಾದ ಇವರು ನಿಲ್ಲಲಿಲ್ಲ. ಎದೆಗೆ ಐದು ಗುಂಡುಗಳು ತಾಗಿದ ನಂತರ ಅವರು ಕೆಳಗೆ ಬಿದ್ದು ೨೯ ವರ್ಷ ವಯಸ್ಸಿನಲ್ಲೇ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. [೩]

ಉಲ್ಲೇಖಗಳು[ಬದಲಾಯಿಸಿ]

  1. Ghazipur ke Ranbankurey, by Pradhyapak Achal, Bhasha Bharati Press, 1962, Varanasi
  2. Ghazipur District Records; Chopra; P.N.:Quit India Movement of 1942, published in the Journal of Indian History, Trivendrum, 1971.
  3. Who's Who of Indian Martyrs VOL.I by P.N. Chopra. 1969. ISBN 9788123021805.