ವಿಷಯಕ್ಕೆ ಹೋಗು

ಶಿಲಾಂಗ್ ಶಹರದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[][] ಶಿಲಾಂಗ್ ಶಹರದ ಬಗ್ಗೆ:

File:Shillong India.jpg

ಇತಿಹಾಸ

[ಬದಲಾಯಿಸಿ]

ಶಿಲಾಂಗ್ ಶಹರದಲ್ಲಿ ಕವಿ ರವೀಂದ್ರನಾಥ ಠಾಗೋರರ ಇಷ್ಟದ ನಗರವಿದು. ಇಲ್ಲಿ ಹೆಣ್ಣುಮಕ್ಕಳದೇ ಪಾರುಪತ್ಯ ಇರುವುದರಿಂದ ಮಾತೃಪ್ರಧಾನ ಸಂಸ್ಕೃತಿ ಎದ್ದು ಕಾಣಿಸುತ್ತದೆ. ಗುವಾಹಟಿಯಿಂದ ದೂರವಿರುವ 'ಪೂರ್ವದ ಸ್ಕಾಟ್ಲೆಂಡ್' ಖ್ಯಾತಿಯ ಶಿಲಾಂಗ್ ಮೇಘಾಲಯದ ರಾಜಧಾನಿ ನಗರ. ಇಲ್ಲಿನ ವಾರ್ಡ್ಸ್ ಸರೋವರದ ಸೌಂದರ್ಯ ವೀಕ್ಷಿಸಿ, ಪೋಲೋ ಬಜೌರ್ ಸುತ್ತುವಾಗ ಗಮನ ಸೆಳೆದದ್ದು ಸಾಲು ಸಾಲು ಮಾಂಸದ ಅಂಗಡಿಗಳು. ಇಷ್ಟೊಂದು ಮಾಂಸ ಪ್ರಿಯರೆ ಶಿಲಾಂಗ್ ನಿವಾಸಿಗಳು. ಇಡೀ ಬಬೌರ್ ಸುತ್ತಾಡಿದರೆ ಹಣ್ನುಹಂಪಲುಗಳ ಅಂಗಡಿಗಳ ನಡುವೆಯೂ ಮಾಂಸದ ಅಂಗಡಿಗಳು! ಪರ್ವತಗಳ ನಡುವಿರುವ ಶಿಲಾಂಗ್ ದೂಡ್ಡ ಶಹರವೇನಲ್ಲ. ಇದು ಮೊದಲು ಅಸ್ಸಾಂನ ರಾಜಧಾನಿ ಆಗಿತ್ತು. ಅಸ್ಸಾಂನ ವಿಭಜನೆಯ ನಂತರ ಮೇಘಾಲಯದ ರಾಜಧಾನಿ ಆಯಿತ್ತು. ಪೂರ್ವೋತ್ತರದ ಕೆಲವೇ ಆಧುನಿಕ ಶಹರಗಳಲ್ಲಿ ಇದೂ ಒಂದು. ಅಸ್ಸಾಂನ ಗುವಾಹಟಿಯ ನಂತರ ಎಲ್ಲಕ್ಕಿಂತ ವಿಕಸಿತ ಶಹರವಿದು ಎನ್ನಬಹುದು. ಒಂದೊಮ್ಮೆ ಇಂಗ್ಲಿಷರ ಆಶ್ರಯ ಸ್ಥಳವಾಗಿತ್ತು. ಹಾಗೆಂದೇ ಇಲ್ಲಿ ಕೆಥೋಲಿಕ್ ಸಂಪ್ರದಾಯ ಗಟ್ಟಿಗೊಂಡಿದೆ. ಆದರೂ ಬುಡಕಟ್ಟು ಸಂಪ್ರದಾಯ ಇನ್ನೂ ಉಳಿದಿದೆ.

ಸಾಮ್ರಾಜ್ಯದ ಬಗ್ಗೆ

[ಬದಲಾಯಿಸಿ]

ತಾಯಿ ಮನೆಯ ಮುಖ್ಯಸ್ಥೆಯಾದರೆ, ದೊಡ್ಡ ಮಗಳಿಗೆ ಜಮೀನು ಹಕ್ಕು ಇದೆ. ತಾಯಿಯ ಸರ್ ನೇಮ್ ಅನ್ನು ಮಕ್ಕಳು ಇಟ್ಟುಕೊಳ್ಳುತ್ತಾರೆ. ವಿವಾಹದ ನಂತರ ಯುವತಿ ಮಾವನ ಮನೆಗೆ ಹೋಗುವುದು ಕಡಿಮೆ. ಪತಿಯೇ ಆಕೆಯ ಮನೆಗೆ ಬರುತ್ತಾನೆ. ಅರ್ಥಾತ್ ಮನೆ ಅಳಿಯನಾಗುತ್ತಾನೆ. ಒಟ್ಟಿನಲ್ಲಿ ಇದೊಂದು ಮಾತೃಪ್ರಧಾನ ರಾಜ್ಯ. ಇಲ್ಲಿನ ಪ್ರಕೃತಿ ಸೌಂರ್ದಯದ ಕಾರಣ ಶಿಲಾಂಗ್ ಅನ್ನು 'ಪೂರ್ವದ ಸ್ಕಾಟ್ಯ್ಲಾಂಡ್ ಎಂದು ಕರೆಯುತ್ತಾರೆ. ಕವಿ ರವೀಂದ್ರನಾಥ್ ಠಾಗೋರ್-ರ ಇಷ್ಟದ ತಾಣವೂ ಇದಾಗಿತ್ತು. ಕೆಥೋಲಿಕ್ ಸಂಪ್ರದಾಯದ ಜನರೇ ಇಲ್ಲಿ ಹೆಚ್ಚಿರುವುದರಿಂದ ಸಾಕಷ್ಟು ಚರ್ಚ್-ಗಳಿವೆ. ಇವುಗಳಲ್ಲಿ ಡಾನ್ಬಾಸ್ಕೋ ಚರ್ಚ್ ಮತ್ತು ಮ್ಯೂಸಿಯಂ ಪ್ರಮುಖ ಪ್ರೇಕ್ಷಣೀಯ ತಾಣಗಳು. ಇದು ನಿಜಕ್ಕೂ ಕಾಸ್ಮೋಪೊಲಿಟನ್ ಶಹರ. ಗುವಾಹಟಿಯಿಂದ ಶಿಲಾಂಗ್-ಗೆ ಬರುವಾಗ ಒಂದು ವಿಶೇಷ ದೃಶ್ಯ ಕಾಣಿಸುತ್ತದೆ. ಖಾನಾಪಾರ ಈಚೆಗೆ ಅಸ್ಸಾಂನ ರಾಜ್ಯ. ರಸ್ತೆಯ ಆಚೆಬದಿರಿ ಭೋಯಿ ಜಿಲ್ಲೆ ಮೇಘಾಲಯ ರಾಜ್ಯಕ್ಕೆ ಸೇರಿದ್ದು. ಹೀಗೆ ಎಡಬದಿ ಅಸ್ಸಾಂ, ಬಲಬದಿ ಮೇಘಾಲಯ. ಶಹರದಿಂದ ಎಂಟು ಕಿ.ಮಿ ದೂರ ಉತ್ತರ ಪೂರ್ವಕ್ಕೆ ಮೇಘಾಲಯದ ಏಕೈಕ ಪೂರ್ವೋತ್ತರ ಪರ್ವತೀಯ ವಿಶ್ವವಿದ್ಯಾಲಯವಿದೆ.

ಶಿಕ್ಷಣದ ಬಗ್ಗೆ

[ಬದಲಾಯಿಸಿ]

ಇಲ್ಲಿನ ಶಿಕ್ಷನ ಮತ್ತು ಕಲೆಯಲ್ಲಿ ಕ್ರೈಸ್ತರ ಪಶ್ಚಿಮದ ಛಾಪಿದೆ. ಇಲ್ಲಿ ಅನೇಕ ಮಿಶನರಿ ಸ್ಕೂಲ್ಗಳಿವೆ. ಸೈಂಟ್ ಎಡ್ಮಂಡ್, ಅಂತೋನಿ, ಸೈಂಟ್ ಮೇರಿ, ಸೈಂಟ್ ಬತ್ರಾ..ಇತ್ಯಾದಿ.'ಟೆಲಿಗ್ರಾಫ್' ಮುಖ್ಯ ಇಂಗ್ಲಿಷ್ ದೈನಿಕವಾದರೆ, ಪೂರ್ವಾಂಚಲ ಪ್ರಹರಿ, ದೈನಿಕ ಪೂರ್ವೋದಯ್, ಪ್ರಾತಃಖಬರ್, ಸೆಂಟಿನಲ್..ಇತ್ಯಾದಿ ಹಿಂದಿ ದೈನಿಕಗಳನ್ನು ಓದುವವರಿದ್ದಾರೆ. ಪೂರ್ವೋತ್ತರ ಭಾರತದ ಅದ್ಬುತ ಚಿತ್ರಕಲೆಗಳು, ಬುಡುಕಟ್ಟು ಜನರ ಬದುಕಿನ ದರ್ಶನವಾಗುವ ಡಾನ್ಬಾಸ್ಕೋ ಮ್ಯೂಸಿಯಂ ಶಹರದ ಮುಖ್ಯ ಆಕರ್ಷಣೀಯ ಕೇಂದ್ರ. ಎಲಿಫೆಂಟಾ ಫಾಲ್ಸಾ ಕೂಡ ಗಮನಾರ್ಹ. ಇದು ೧೮೮೩ರಲ್ಲಿ ಬಂದ ವಿನಾಶಕಾರಿ ಭೂಕಂಪದಿಂದ ಸೃಷ್ಟಿಯಾಗಿದೆಯಂತೆ. ಇಲ್ಲಿನ ಮಳೆಯ ಸೊಬಗು ನೋಡಲೆಂದೇ ಪ್ರವಾಸಿಗರು ಬರುವುದಿದೆ. ಸಾಮಾನ್ಯವಾಗಿ ಸಂಜೆಯ ಏಳು ಗಂಟೆಯ ನಂತರ ಜನರ ಓಡಾಟ ಕಡಿಮೆ.

ಜೀವನ ಶೈಲಿ

[ಬದಲಾಯಿಸಿ]

ಕೆಲವು ವರ್ಷದಿಂದ ಇಲ್ಲಿ ನೈಟ್ ಕ್ಲಬ್ಗಳು ಕಾಣಿಸಿಕೊಂಡಿವೆ. ಕೆಲವು ಕ್ಲಬ್ಗಳು ವೀಕೆಂಡ್ನಲ್ಲಿ ಮಾತ್ರ ತೆರೆಯುತ್ತವೆ. ಈ ಪ್ರದೇಶ ಪೂರ್ವೋತ್ತರದಲ್ಲಿರುವ ಕಾರಣ ಇಲ್ಲಿ ಕತ್ತಲು ಬೇಗನೆ ಆವರಿಸುತ್ತದೆ. ಮೇಘಾಲಯ ಮೇಘಗಳ ಆಗರವು ಹೌದು. ಖಾಸೀ ಮತ್ತು ಗಾರೋ ಇಲ್ಲಿನ ಬುಡಕಟ್ಟು ಸಂಸ್ಕೃತಿಯ ಪ್ರಮುಖ ಜನಾಂಗ. ಹಂದಿ ಮಾಂಸ ಮತ್ತು ಅನ್ನ ಇವರ ಪ್ರಿಯ ಆಹಾರ. ಕಚ್ಚಾ ಸುಪಾರಿ, ವೀಳ್ಯದೆಲೆ, ಶರಾಬು ಇವರ ಶೋಕಿ. ಡಾನ್ಬಾಸ್ಕೋ ಮ್ಯೂಸಿಯಂನ ಟೆರೇಸ್ ಸ್ಕೈವಾಕ್ನಲ್ಲಿ ನಿಂತರೆ ಇಡೀ ಶಿಲಾಂಗ್ ಶಹರದ ಸೌಂದರ್ಯವನ್ನು ಆಸ್ವಾದಿಸಬಹುದು. ಮೇಲಿನ ಮಾಳಿಗೆಯಲ್ಲಿ ಪ್ರವಾಸಿಗರಿಗಾಗಿ ಪೂರ್ವೋತ್ತರ ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಸಾಕ್ಷ್ಯ ಚಿತ್ರವನ್ನೂ ಪ್ರದರ್ಶಿಸುತ್ತಾರೆ.

ಪ್ರಸಿದ್ಧ ಸ್ಥಳ

[ಬದಲಾಯಿಸಿ]

ಇಲ್ಲಿಗೆ ಬಂದವರು ಚೆರಾಪುಂಜೀ ತಾಣವನ್ನು ವೀಕ್ಷಿಸಲು ಇಷ್ಟ ಪಡುತ್ತಾರೆ. ಈಗ ಅದರ ಹೆಸರು ಸೊಹರಾ ಎಂದು. ಇಲ್ಲಿನ ಜನರು ಮೊದಲಿಂದಲೂ ಸೊಹರಾ ಎಂದೇ ಕರೆಯುತ್ತಿದ್ದರು. ೧೩೦೦ ಮೀಟರ್ ಎತ್ತರದ ಈ ಕ್ಷೇತ್ರ ವಿಶ್ವದ ಸರ್ವಾಧಿಕ ಮಳೆ ಬರುವ ಜಾಗ. ೫೦೦ ಇಂಚು ಮಳೆಯ ದಾಖಲೆ ಕೂಡಾ ಇಲ್ಲಿದೆ. ಇದರ ಸಮೀಪದಲ್ಲಿ ಮಾವ್ಸಿನ್ರಾಮ್ನಲ್ಲಿ ಪ್ರಾಚೀನ ಗುಹೆಯಲ್ಲಿ ಶಿವಲಿಂಗ ದರ್ಶನ ಮಾಡಬಹುದು. ಎರಡು ಸಾವಿರ ಅಡಿ ಎತ್ತರದಿಂದ ಹರಿಯುವ ಮೊಸ್ಮಾಯಿ ಜಲಪಾತ, ಒಂದೂವರೆ ಕಿ.ಮಿ ದೂರದಲ್ಲಿ ಮೌಸ್ಮಾಯಿ ವಿಸ್ಮಯಕಾರಿ ಗುಹೆ ಆಕರ್ಷಣೀಯ. ೧೮೩೨ ರಲ್ಲಿ ಉತ್ತರ-ಪೂರ್ವ ಮುಖ್ಯಾಲಯ ಚೆರಾಪುಂಜಿಯೇ ಆಗಿತ್ತು. ಆದರೆ ಭೂಕಂಪದ ಕಾರಣ ೧೮೬೬ ರಲ್ಲಿ ಇದನ್ನು ಶಿಲಾಂಗ್-ಗೆ ಸ್ಥಳಾಂತರಿಸಲಾಯಿತು. ಇದು ಖಾಸೀ ಸಾಹಿತ್ಯ ಮತ್ತು ಸಂಸ್ಕೃತಿಯ ಪೀಠಸ್ಥಾನವೂ ಹೌದು. ಕಿತ್ತಳೆ-ಚಕೋತಾ ಇಲ್ಲಿ ಪ್ರಸಿದ್ದ. ಚೆರಾಪುಂಜಿಯ ಬಳಿ ಖಾಸೀ ಪರ್ವತದ ದಕ್ಷಿಣಕ್ಕೆ ಇರುವ ಮಾಮ್ಸಿನ್ರಾಮ್ ವರ್ಷಕ್ಕೆ ಎರಡು ಸಾವಿರದ ಮುನ್ನೂರು ಸೆ.ಮೀ ಮಳೆ ಬಿದ್ದು ದಾಖಲೆ ಸೃಷ್ಟಿಸಿತ್ತು. ಮೌಸ್ಮಾಯಿ ಫಾಲ್ಸ್ ಎಡಬದಿಗೆ ಬಾಂಗ್ಲಾದೇಶದ ಸಿಲ್-ಹಟ್ ಸಮತಟ್ಟು ಪ್ರದೇಶ ಕಾಣಬಹುದು. ಒಂದ್ಮೊಮೆ ಇದು ಅಸ್ಸಾಂನ ಭಾಗವಾಗಿತ್ತು. ಹವಾಮಾನ ಸರಿ ಇದ್ದರೆ ಬಾಂಗ್ಲಾ ದೇಶದ ಊರುಗಳು ಕಾಣುತ್ತವೆ. ಶಿಲಾಂಗ್ ವ್ಯೂಪಾಯಿಂಟ್ನಲ್ಲಿ ಮೇಘಾಲಯದ ಸಾಂಪ್ರದಾಯಿಕ ಉಡುಪು ಧರಿಸಿ ಪೋಟೋ ತೆಗೆಸಿಕೊಳ್ಳುವುದಕ್ಕೂ ಅವಕಾಶವಿದೆ. ಇಲ್ಲಿನ ಚೆರಾಬಜಾರ್-ನಿಂದ ಒಂದು ಕಿ.ಮಿ. ದೂರ ರಾಮಕೃಷ್ಣ ಮಿಷನ್ ಆಶ್ರಮ ಗಮನ ಸೆಳೆಯುತ್ತದೆ. ೧೯೨೪ ರಲ್ಲಿ ಸೆಲಾ ಕ್ಷೇತ್ರದಲ್ಲಿ ಸ್ಥಾಪಿತವಾಗಿದ್ದ ಈ ಆಶ್ರಮ ೧೯೩೧ ರಲ್ಲಿ ಚೆರಾಪುಂಜಿಗೆ ಸ್ಥಳಾಂತರವಾಗಿದೆ. ಸಾವಿರಾರು ಮಕ್ಕಳು ಈ ಆಶ್ರಮದ ಶಾಲೆಗಳಲ್ಲಿ ಓದುತ್ತಿದ್ದಾರೆ. ಮೇಘಾಲಯ ಶಬ್ದದ ಅರ್ಥ ಮೇಘಗಳ ಮಾಲೆ. ಆದರೆ ಇಲ್ಲಿ ಹಸಿರಿನ ನಡುವೆ ಜಲಪಾತಗಳೂ ಸಾಕಷ್ಟಿವೆ. ಹಾಗಾಗಿ ಇದನ್ನು ಮೋಡಗಳ, ಜಲಪಾತಗಳ, ಕ್ರಿನೋಲೈನ್, ನೋಹಕಾಲಿಕಾ, ಡೆನ್-ಥ್ಲೇನ್, ಬಿಶಪ್ ಆಂಡ್ ಬಿಡನ್, ಸ್ವೀಟ್ ಫಾಲ್ಸ್. ಹೀಗೆ ಅನೇಕ ಜಲಪಾತಗಳ ಕಾರಣ ಶಿಲಾಂಗ್ ಜಲಪಾತಗಳ ನಗರವೆಂದೂ ಕರೆಯಲ್ಪಡುವುದಿದೆ. ಜಲಪಾತಗಳಲ್ಲದೆ ಸಿಜೂ, ಡೊಬ್ ಖಾ ಕೋಲ್, ಕ್ರೆಮ್ ಕೊಸ್ತ್ಸಾ, ದ ಕೇವ್ ಆಫ್ ಇಓಸ್ನೆ ಎಜ್, ಮೌಸ್ಮಾಯಿ ಹಿತ್ಯಾದಿ ಗುಹೆಗಳೂ ಶಿಲಾಂಗ್ ಪರಿಸರದಲ್ಲಿವೆ. ಹತ್ತು ಕಿ.ಮಿ ದೂರದಲ್ಲಿ ಶಿಲಾಂಗ್ ಪೀಕ್ ಪರ್ವತವಿದೆ. ಇದು ಮೇಘಾಲಯದ ಅತಿ ಎತ್ತರದ ಸ್ಥಳವೂ ಹೌದು. ಇಲ್ಲಿ ಮೋಡಗಳು ಪ್ರವಾಸಿಗರ ನಡುವೆ ತೂರಿ ಓಡುತ್ತವೆ! ಅಕ್ಟೋಬರ್-ನಿಂದ ಫೆಬ್ರವರಿ ನಡುವೆ ಸುತ್ತಾಡಲು ಉತ್ತಮ ಕಾಲ. ಉಳಿದ ತಿಂಗಳಲ್ಲಿ ಆಗಾಗ ಮಳೆ ಬರುವ ಸಂಭವವಿದೆ. ಕೋಲ್ಕತ್ತಾ-ಗುವಾಹಟಿ ಯಿಂದ ಶಿಲಾಂಗ್ ಸಮೀಪದ ಉಮ್ರೋಯಿಗೆ ವಿಮಾನ ಸೌಕರ್ಯವಿದೆ. ರೈಲಲ್ಲಿ ಬರೋದಿದ್ರೆ ಗುವಾಹಟಿಗೆ ಬರಬೇಕು. ಇಲ್ಲಿಂದ ಶಿಲಾಂಗ್-ಗೆ ೧೦೩ ಕಿಲೋಮೀಟರ್ ದೂರವನ್ನು ವಾಹನದಲ್ಲಿ ಮೂರೂವರೆ ಗಂಟೆಯಲ್ಲಿ ತಲುಪಬಹುದು. ಪ್ರತೀ ಅರ್ಧ ಗಂಟೆಗೆ ಗುವಾಹಟಿಯಿಂದ ಅಸ್ಸಾಂ ಸ್ಟೇಟ್ ಟ್ರಾನ್ಸ್ಪೋರ್ಟ, ಮೇಘಾಲಯ ಸ್ಟೇಟ್ ಟ್ರಾನ್ಸ್ಪೋರ್ಟ ಕಾರ್ಪೊರೇಷನ್ ಬಸ್ಸುಗಳು ಓಡಾಡುತ್ತವೆ. ಶಿಲಾಂಗ್ ಭಾರತದ ಇತರ ರಾಜ್ಯಗಳಿಗಿಂತ ಭಿನ್ನವಾಗಿರುವ ರಾಜ್ಯ. ಶಿಲಾಂಗ್ ಶ್ರೀಮಂತಿಕೆ ಮತ್ತು ಅದರ ಸಂಪ್ರದಾಯಕ್ಕೆ ಗುರುತಿಸಲಾಗಿದೆ. ಇದೊಂದು ಅದ್ಭುತ್ತವಾದ ಪ್ರೇಕ್ಷಣೀಯ ಸ್ಥಳ. ಇಲ್ಲಿಗೆ ಬಂದವರು ಚೆರಾಪುಂಜಿಯನ್ನು ನೋಡದೆ ಹೋಗುವುದಿಲ್ಲ.

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-09-01. Retrieved 6 ಸೆಪ್ಟೆಂಬರ್ 2016.
  2. http://en.wikivoyage.org/wiki/Shillong. Retrieved 27 ಸೆಪ್ಟೆಂಬರ್ 2016. {{cite web}}: Missing or empty |title= (help)