ಶಿರಸಂಗಿ ಲಿಂಗರಾಜ ದೇಸಾಯಿ

ವಿಕಿಪೀಡಿಯ ಇಂದ
Jump to navigation Jump to search
ಶಿರಸಂಗಿ ಲಿಂಗರಾಜ ದೇಸಾಯಿ
ಜನನ೧೦ ಜನವರಿ ೧೮೬೧
ಶಿಗ್ಲಿ, ಗದಗ ಜಿಲ್ಲೆ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಲೋಕೋಪಕಾರ

ಶಿರಸಂಗಿ ಲಿಂಗರಾಜರು ಲೋಕೋಪಕಾರಿ ಮತ್ತು  ಶಿರಸಂಗಿ ಸಂಸ್ಥಾನದ ಸಂಸ್ಥಾನಾಧಿಪತಿಯಾಗಿದ್ದರು. ಅವರು ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣದ ಸಲುವಾಗಿ ಅವರ ಎಲ್ಲಾ ಆಸ್ತಿಗಳನ್ನು ದಾನ ಮಾಡಿದರು. ಅವರು, ೧೯೦೪-೦೫ ರಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ  ಮೊದಲನೇ ಸಮಾವೇಶದಲ್ಲಿ ಅಧ್ಯಕ್ಷರಾಗಿದ್ದರು.[೧] [೨]

ಆರಂಭಿಕ ಜೀವನ[ಬದಲಾಯಿಸಿ]

ಶಿರಸಂಗಿ ಲಿಂಗರಾಜರು ಜನವರಿ ೧೦, ೧೮೬೧ ರಂದು  ಗೂಳಪ್ಪ ಮತ್ತು ಯಲ್ಲವ್ವ ಮಡ್ಲಿ ದಂಪತಿಗೆ ಗದಗ ಜಿಲ್ಲೆಯ ಶಿಗ್ಲಿಯಲ್ಲಿ ಜನಿಸಿದರು. ಅವರ ಹುಟ್ಟಿದ ಹೆಸರು ರಾಮಪ್ಪ. ಅವರನ್ನು ನವಲಗುಂದದ ಶಿರಸಂಗಿ ದೇಸಗತಿ ಮನೆತನದ ಜಾಯಪ್ಪಾ ದೇಸಾಯಿಯವರು ಮತ್ತು ಗಂಗಾಬಾಯಿಯವರು ದತ್ತು ಪಡೆದುಕೊಂಡರು. ಅನಂತರ ಅವರು  ಸಂಸ್ಥಾನಾಧಿಪತಿಗಳಾದರು. ಜೂನ್ ೨, ೧೮೭೨ ರಂದು ಅವರ ಹೆಸರು ಶಿರಸಂಗಿ ಲಿಂಗರಾಜ ದೇಸಾಯಿ ಎಂದು ಬದಲಾಯಿತು.[೩] [೧]

ಲೋಕೋಪಕಾರ[ಬದಲಾಯಿಸಿ]

ಶಿರಸಂಗಿ ಲಿಂಗರಾಜರ ಮೃತ್ಯುಪತ್ರದಲ್ಲಿದಂತೆ ೧೯೦೬ ನೇ  ಇಸವಿಯ ಆಗಸ್ಟ್ ತಿಂಗಳಲ್ಲಿ ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಉನ್ನತಿ ಮತ್ತು  ಶಿಕ್ಷಣಾಭಿವೃದ್ಧಿಗಾಗಿ ನವಲಗುಂದ-ಶಿರಸಂಗಿ ಟ್ರಸ್ಟ್ ಸ್ಥಾಪಿಸಲಾಯಿತು. ಆಗ ಟ್ರಸ್ಟ್ ನ ವರಮಾನ ಸುಮಾರು ಆರು ಲಕ್ಷ ರೂಪಾಯಿ ಇತ್ತು. ೧೯೩೦ ಮತ್ತು ೧೯೮೪ರ ನಡುವೆ ಈ ಟ್ರಸ್ಟ್ ನಿಂದ  ಸುಮಾರು ೬,೯೨೫ ವಿದ್ಯಾರ್ಥಿಗಳು ಪಡೆದ ಹಣಕಾಸು ನೆರವಿನ ಮೌಲ್ಯ ಸುಮಾರು ೨೨,೯೮,೩೨೧-೦೦  ಭಾರತೀಯ ರೂಪಾಯಿಗಳು . ಈ ಟ್ರಸ್ಟ್ ಈಗಲೂ ಸಹಲಿಂಗಾಯತ  ವಿದ್ಯಾರ್ಥಿಗಳಿಗೆ ಆರ್ಥಿಕ  ಸಹಾಯವನ್ನು ಮುಂದುವರೆಸಿದೆ. ಡಿ.ಸಿ.ಪಾವಟೆ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ರತ್ನಪ್ಪಾ ಕುಂಬಾರರು ಈ ಟ್ರಸ್ಟ್ ನಿಂದ ಆರ್ಥಿಕ ನೆರವು ಪಡೆದ ಕೆಲವು ಗಮನಾರ್ಹ  ವ್ಯಕ್ತಿಗಳು.[೪] [೫]

ಕರ್ನಾಟಕ ಲಿಂಗಾಯತ ಶಿಕ್ಷಣ(ಕೆಎಲ್ಇ) ಸೊಸೈಟಿ ಶಿರಸಂಗಿ ಲಿಂಗರಾಜರು ಮಾಡಿದ ಐವತ್ತು ಸಾವಿರ ರೂಪಾಯಿ ದಾನದ ಕೃತಾರ್ಥವಾಗಿ ೧೯೧೬ ರಲ್ಲಿ ಸ್ಥಾಪಿಸಲಾದ ಅದರ  ಮೊದಲ ಕಾಲೇಜಿಗೆ ಶಿರಸಂಗಿ ಲಿಂಗರಾಜರ ಹೆಸರು ಇಟ್ಟಿತು.[೪]

ಗುರುತಿಸುವಿಕೆ[ಬದಲಾಯಿಸಿ]

೨೦೦೯ ರಲ್ಲಿ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ  ಶಿರಸಂಗಿ ಲಿಂಗರಾಜರ ೧೪೮ ನೇ ಜನ್ಮ ವಾರ್ಷಿಕೋತ್ಸವವನ್ನು ಸಿ ಬಿ ಕೊಲ್ಲಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಚರಿಸಿದರು.[೬]

೨೦೧೨ ರಲ್ಲಿ, ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳು  ಶಿರಸಂಗಿ ಲಿಂಗರಾಜರ ೧೫೧ ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಿದರು.[೭]

೨೦೧೪ ರಲ್ಲಿ , ಕೆಎಲ್ಇಯ ಜಿ. ಎಚ್ ಕಾಲೇಜಿನಲ್ಲಿ ಶಿರಸಂಗಿ ಲಿಂಗರಾಜರ  ೧೫೩ ನೇ ಜನ್ಮ ವಾರ್ಷಿಕೋತ್ಸವ  ಆಚರಿಸಲಾಯಿತು ಮತ್ತು  ಅವರ ಬಾಲ್ಯವಿವಾಹ ತಡೆಯುವ ಪ್ರಯತ್ನ ಮತ್ತು ಅವರು ಪ್ರತಿ ಆರ್ಥಿಕ ವಲಯದ ಅಭಿವೃದ್ಧಿಗೆ ಕೊಟ್ಟಂತಹ ಬೆಂಬಲವನ್ನು  ನೆನೆಯಲಾಯಿತು.[೮]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ http://www.mbpatil.com/legacy-of-inclusive-growth/
  2. https://books.google.co.in/books?id=54gRAQAAIAAJ&q=sirasangi+lingaraj+desai&dq=sirasangi+lingaraj+desai&hl=kn&sa=X&ved=0ahUKEwjR5MrlmermAhUa6nMBHdINBacQ6AEIYDAI
  3. https://m.dailyhunt.in/news/india/kannada/prajavani-epaper-praj/shigliya+raamappa+shirasangiya+arasanaadha-newsid-79620067
  4. ೪.೦ ೪.೧ Patil, Shankaragouda Hanamantagouda (19 May 2018). "Community Dominance and Political Modernisation: The Lingayats". Mittal Publications. Retrieved 19 May 2018 – via Google Books.
  5. https://books.google.co.in/books?id=R84n-Wv1S-8C&pg=PA125&dq=sirasangi+lingaraj+desai&hl=kn&sa=X&ved=0ahUKEwjV9NC2nermAhVNIbcAHR6HDJIQ6AEIKDAA#v=onepage&q=sirasangi%20lingaraj%20desai&f=false
  6. "Philanthropist's birth anniversary celebrated - Times of India". The Times of India (in ಇಂಗ್ಲಿಷ್). Retrieved 2018-06-15.
  7. https://timesofindia.indiatimes.com/city/hubballi/Students-dedicate-a-day-for-Lingaraj/articleshow/11470260.cms
  8. "Shirasangi Lingaraj remembered". thehindu.com. 2016-05-13. Retrieved 2018-05-21.