ವಿಷಯಕ್ಕೆ ಹೋಗು

ಶಾಂತಾರಾಮ ನಾಯಕ ಹಿಚಕಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾಂತಾರಾಮ ನಾಯಕ ಹಿಚಕಡ

[ಬದಲಾಯಿಸಿ]

ಶಾಂತಾರಾಮ ನಾಯಕ ಹಿಚಕಡ

[ಬದಲಾಯಿಸಿ]

ಶಾಂತಾರಾಮ ನಾಯಕ ಹಿಚಕಡರವರ ಪೂರ್ಣ ಹೆಸರು ಶಾಂತಾರಾಮ ನಾರಾಯಣ ನಾಯಕ.

ಶಾಂತಾರಾಮ ನಾರಾಯಣ ನಾಯಕರವರು ಸ್ವಾತಂತ್ರ್ಯಯೋಧರ ಕುಟುಂಬದಲ್ಲಿ, ೧೯೩೯ ಮಾರ್ಚ್ ೨೩ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಿಚಕಡದಲ್ಲಿ ಜನಿಸಿದರು.

ಶಿಕ್ಷಣ

[ಬದಲಾಯಿಸಿ]

ಇವರು ಹಿಂದಿ ರಾಷ್ಟ್ರಭಾಷಾ ವಿಶಾರದಾ ಪದವಿಯನ್ನು ಪಡೆದಿದ್ದಾರೆ. ಇದರೊಂದಿಗೆ ಎಂ.ಎ ಪದವಿಯನ್ನು ಪಡೆದಿದ್ದಾರೆ. ಹಾಗೂ ಬಿ.ಎಡ್ ಕೂಡಾ ಮಾಡಿದ್ದಾರೆ.

ಶಿಕ್ಷಕ ವೃತ್ತಿ
[ಬದಲಾಯಿಸಿ]

ಕೆನರಾ ವೆಲ್‌ಫೇರ್ ಟ್ರಸ್ಟಿನ ಮೊದಲ ಹೈಸ್ಕೂಲ್ ಪಿ . ಎಮ್ . ಹೈಸ್ಕೂಲಿನಲಿ ಸಹಶಿಕ್ಷಕರಾಗಿ 1961ರಲ್ಲಿ ಸೇವೆ ಪ್ರಾರಂಭಿಸಿ, ಶೆಟಗೇರಿ ಸತ್ಯಾಗ್ರಹ ಸಾರಕ ವಿದ್ಯಾಲಯದಲ್ಲಿ ಸಹಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿ ಹೊಂದಿದರು.

ಪ್ರಶಸ್ತಿಗಳು
[ಬದಲಾಯಿಸಿ]

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ , ರಾಜ್ಯ ಶಿಕ್ಷಕ ಪ್ರಶಸ್ತಿ , ಡಾ ॥ ಸೈಯ್ಯದ್ ಝಮೀರುಲ್ಲಾ ಫರೀಫ್ ಕಾವ್ಯ ಪ್ರಶಸ್ತಿ , ಸಾಹಿತ್ಯ ಮತ್ತು ಸಮಾಜ ಸೇವೆಗಾಗಿ ಹೊಯ್ಸಳ ಪ್ರಶಸ್ತಿ . ( ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಮೈಸೂರು ) ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಸುಸ್ತು ಮಾಸ್ತರ ಪ್ರಶಸ್ತಿ , ಸಾಹಿತ್ಯ ಸೇವೆಗಾಗಿ 2019ರ ಶ್ರೀ ಆರ್ . ಎನ್ . ನಾಯಕರ ಪ್ರಶಸ್ತಿಗಳು ಇವರಿಗೆ ದೊರಕಿವೆ.

ಲೇಖಕರ ಪ್ರಕಟಿತ ಕೃತಿಗಳು

[ಬದಲಾಯಿಸಿ]

ಕವನ ಸಂಗ್ರಹಗಳು

[ಬದಲಾಯಿಸಿ]

ಕಾಡಹೆಣ್ಣು, ದಾರಿಮಾಡಿಕೊಡಿ, ಅನುಭವ, ಆತಂಕ, ಅನುರಾಗ, ನಿನಾದ, ಸಂಭ್ರಮ ಮತ್ತು ಒಡಲಗೀತ ಇವರ ಕವನ ಸಂಗ್ರಹಗಳು.

ಚರಿತ್ರೆ

[ಬದಲಾಯಿಸಿ]

ಚರಿತ್ರೆಯಲ್ಲಿ ಮರೆತವರ ಕಥೆ ಮತ್ತು ಸ್ವಾತಂತ್ರ್ಯ ಹೋರಾಟದ ಹೊರಳುನೋಟ ಇವರು ಬರೆದ ಚರಿತ್ರೆಗಳು.

ಜೀವನ ಚರಿತ್ರೆ

[ಬದಲಾಯಿಸಿ]

ಮಾನಧನ ಎಂ . ಎಚ್ . ನಾಯಕ, ಶಿಕ್ಷಕ ಕವಿ ವಿ . ವೆ , ತೊರ್ಕೆ, ಕರುಣಾಳು ಸ , ಪ . ಗಾಂವಕರ, ಕರಬಂಧಿ ಡಿಕ್ಟೇಟರ್ ಬಾಸಗೋಡ ರಾಮ ನಾಯಕ, ಚುಟುಕು ಬ್ರಹ್ಮ ದಿನಕರ ದೇಸಾಯಿ ಮತ್ತು ಗೊನೇಹಳ್ಳಿಯ ಬೆಳಕು ಇವರು ರಚಿಸಿದ ಜೀವನ ಚರಿತ್ರೆಗಳು.

ಪ್ರಬಂಧ

[ಬದಲಾಯಿಸಿ]

ಇವರು ಬರೆದ ಪ್ರಬಂಧಗಳೆಂದರೆ ನಾಡವರು ಒಂದು ಸಾಂಸ್ಕೃತಿಕ ಅಧ್ಯಯನ, ಹಂಬಲ, ಹುಡುಕಾಟ ಮತ್ತು ಒಡನಾಟ.

ಮಂಡಕ್ಕಿ ತಿಂದ ಗಂಗೆ ಇವರು ಬರೆದ ಕಥೆಯಾಗಿದೆ.

{ref} ಎಲ್ಲಾ ಮಾಹಿತಿಯನ್ನು ಅವರ ಪುಸ್ತಕಗಳಿಂದ ಮತ್ತು ಅವರ ವೈಯಕ್ತಿಕ ಭೇಟಿಯಿಂದ ಪಡೆಯಲಾಗಿದೆ.{/ref}