ಶಕ್ತಿ (೧೯೮೨ರ ಚಲನಚಿತ್ರ)
ಶಕ್ತಿ 1982 ರ ಒಂದು ಹಿಂದಿ ಅಪರಾಧಕೇಂದ್ರಿತ ನಾಟಕೀಯ ಚಲನಚಿತ್ರ. ಇದನ್ನು ರಮೇಶ್ ಸಿಪ್ಪಿ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಸಲೀಮ್-ಜಾವೇದ್ ಜೋಡಿ ಬರೆದಿದ್ದಾರೆ ಮತ್ತು ಮುಶೀರ್-ರಿಯಾಜ಼್ ನಿರ್ಮಿಸಿದ್ದಾರೆ. ಇದರಲ್ಲಿ ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ರಾಖೀ, ಸ್ಮಿತಾ ಪಾಟೀಲ್, ಮತ್ತು ಅಮ್ರೀಶ್ ಪುರಿ ನಟಿಸಿದ್ದಾರೆ. ಮುಖ್ಯ ಕಥಾವಸ್ತುವು 1974 ರ ತಮಿಳು ಚಲನಚಿತ್ರ ತಂಗ ಪದಕ್ಕಮ್‍ನ್ನು ಆಧರಿಸಿದೆ . ಅನುಭವಿ ನಟರಾದ ಕುಮಾರ್ ಮತ್ತು ಬಚ್ಚನ್ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡ ಮೊದಲ ಮತ್ತು ಏಕೈಕ ಚಿತ್ರ ಎಂಬ ಹೆಗ್ಗಳಿಕೆಗೆ ಶಕ್ತಿ ಪಾತ್ರವಾಗಿದೆ.[೧] ಭಾರತೀಯ ಸಿನೆಮಾ ಇತಿಹಾಸದಲ್ಲಿನ ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಇದು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಧ್ವನಿ ಸಂಕಲನ ಮತ್ತು ಕುಮಾರ್‌ರಿಗಾಗಿ ಅತ್ಯುತ್ತಮ ನಟ.
ದಿಲೀಪ್ ಕುಮಾರ್ ಮತ್ತು ಅಮಿತಾಭ್ ಬಚ್ಚನ್ ಇಬ್ಬರೂ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶಿತವಾದರು.
ಕಥಾವಸ್ತು
[ಬದಲಾಯಿಸಿ]ನಿವೃತ್ತ ಪೊಲೀಸ್ ಆಯುಕ್ತ ಅಶ್ವಿನಿ ಕುಮಾರ್ (ದಿಲೀಪ್ ಕುಮಾರ್) ತನ್ನ ಹದಿಹರೆಯದ ಮೊಮ್ಮಗ ರವಿಯನ್ನು (ಅನಿಲ್ ಕಪೂರ್) ಬರಮಾಡಿಕೊಳ್ಳಲು ರೈಲ್ವೆ ನಿಲ್ದಾಣದಲ್ಲಿರುತ್ತಾನೆ. ರವಿ ಬಿಎ ಪರೀಕ್ಷೆಗಳನ್ನು ಮುಗಿಸಿ ಹಿಂದಿರುಗುತ್ತಿರುತ್ತಾನೆ. ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಅಜ್ಜ ಕೇಳಿದಾಗ, ರವಿ ಕೂಡಲೇ ತನ್ನ ಅಜ್ಜನಂತೆಯೇ ಪೊಲೀಸ್ ಅಧಿಕಾರಿಯಾಗಲು ಮತ್ತು ತನ್ನ ದೇಶದ ಸೇವೆ ಮಾಡಲು ಬಯಸುತ್ತೇನೆ ಎಂದು ಉತ್ತರಿಸುತ್ತಾನೆ. ಪೊಲೀಸ್ ಅಧಿಕಾರಿಯಾಗಿರುವ ಪ್ರಯಾಣವು ಅನೇಕ ಕಠಿಣ ಸವಾಲುಗಳಿಂದ ಕೂಡಿದೆ ಮತ್ತು ರವಿ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಕುಮಾರ್ ಅವನಿಗೆ ಹೇಳುತ್ತಾನೆ. ಕುಮಾರ್ ತನ್ನದೇ ಜೀವನ ಕಥೆಯನ್ನು ಪುನರಾವರ್ತನದಲ್ಲಿ ವಿವರಿಸುವ ಮೂಲಕ ಪ್ರಾರಂಭಿಸುತ್ತಾನೆ. ಕುಮಾರ್ ಸಂತೋಷದ ಕುಟುಂಬವನ್ನು ಹೊಂದಿದ್ದು ಅದರಲ್ಲಿ ರವಿಯ ಅಜ್ಜಿ ಶೀತಲ್ ಮತ್ತು ರವಿಯ ತಂದೆಯಾದ ಮಗ ವಿಜಯ್ ಇದ್ದರು. ಅಪರಾಧದ ನಗರವನ್ನು ಶುದ್ಧೀಕರಿಸುವ ಮಾರ್ಗದಲ್ಲಿ, ಜೆ.ಕೆ.ವರ್ಮಾ (ಅಮ್ರಿಶ್ ಪುರಿ) ಎಂಬ ಭೀತಿ ಹುಟ್ಟಿಸುವ ಘೋರ ಅಪರಾಧಿ ವಿರುದ್ಧ ಅಶ್ವಿನಿ ಸೆಣಸಾಟವನ್ನು ಆರಂಭಿಸುತ್ತಾನೆ. ಅವನು ಜೆಕೆಯ ಪ್ರಾಬಲ್ಯವನ್ನು ನಾಶಮಾಡುವ ಸಲುವಾಗಿ ಯಶ್ವಂತ್ ಎಂಬ ಜೆಕೆಯ ಪ್ರಮುಖ ಸಹಾಯಕನನ್ನು ಬಂಧಿಸುತ್ತಾನೆ. ಆದರೆ, ಜೆಕೆ ಸಮಸ್ಯೆಯನ್ನು ಖುದ್ದಾಗಿ ನಿಭಾಯಿಸಿ ವಿಜಯ್‍ನನ್ನು ಅಪಹರಿಸುತ್ತಾನೆ. ಜೆಕೆ ಅಶ್ವಿನಿಗೆ ಕರೆಮಾಡಿ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ: ವಿಜಯ್‍ನ ಜೀವನದ ಬದಲಾಗಿ ಯಶ್ವಂತ್‍ನ ಸ್ವಾತಂತ್ರ್ಯ. ಈ ಪ್ರಕ್ರಿಯೆಯಲ್ಲಿ ತನ್ನ ಒಬ್ಬನೇ ಮಗನು ಕೊಲ್ಲಲ್ಪಟ್ಟರೂ ತಾನು ಕಾನೂನಿಗೆ ದ್ರೋಹ ಮಾಡುವುದಿಲ್ಲ ಎಂದು ಸದ್ಗುಣಶೀಲ ಪೋಲಿಸಿನವನಾದ ಅಶ್ವಿನಿ ಜೆಕೆಗೆ ಫೋನ್‌ನಲ್ಲಿ ಹೇಳುತ್ತಾನೆ. ಆದರೆ, ಅಶ್ವಿನಿಗೆ ತಿಳಿದಿಲ್ಲದಿರುವಂತೆ, ಸಂಭಾಷಣೆಯನ್ನು ಧ್ವನಿಮುದ್ರಣ ಮಾಡಲಾಗುತ್ತಿರುತ್ತದೆ. ವಿಜಯ್ ಟೇಪ್ ರೆಕಾರ್ಡರ್‌ನಲ್ಲಿ ತನ್ನ ತಂದೆಯ ಧ್ವನಿಯನ್ನು ಕೇಳಿದಾಗ, ಅವನು ತನ್ನ ತಂದೆಯ ಮಾತುಗಳನ್ನು ಕೇಳಿ ಮತ್ತು ತನ್ನ ಸ್ವಂತ ಮಾಂಸ ಮತ್ತು ರಕ್ತದ ಬಗ್ಗೆ ಅವನ ನೀರಸ ಮನೋಭಾವವನ್ನು ನೋಡಿ ಆಘಾತಗೊಂಡು ನೋವು ಅನುಭವಿಸುತ್ತಾನೆ.
ಯಾವುದೇ ಸಹಾಯ ಬರದೆ, ವಿಜಯ್ ತನ್ನ ಅಪಹರಣಕಾರರಿಂದ ತಪ್ಪಿಸಿಕೊಳ್ಳಲು ತಾನೇ ಹೊಣೆ ತೆಗೆದುಕೊಳ್ಳುತ್ತಾನೆ. ಇಡೀ ಗ್ಯಾಂಗ್ ವಿಜಯ್‌ಗಾಗಿ ಹುಡುಕುತ್ತಿರುವಾಗ, ಜೆ.ಕೆ.ನ ಗ್ಯಾಂಗ್‌ನಲ್ಲಿರುವ ಮತ್ತೊಬ್ಬ ಗೂಂಡಾ ಕೆ.ಡಿ.ನಾರಂಗ್ (ಕುಲಭೂಷಣ್ ಖರ್ಬಂದಾ) ವಿಜಯ್‌ನನ್ನು ಪತ್ತೆಹಚ್ಚುತ್ತಾನೆ. ಆದರೆ ಅಸಹಾಯಕ ಮಗುವಿನ ಮೇಲೆ ಕರುಣೆ ತೋರಿಸಿ ಸುರಕ್ಷಿತವಾಗಿ ಪಾರಾಗಲು ಅವನಿಗೆ ನೆರವಾಗುತ್ತಾನೆ. ಪೊಲೀಸಿನವರು ಜೆಕೆಯ ಅಡಗುತಾಣವನ್ನು ಪತ್ತೆಹಚ್ಚುತ್ತಾರೆ, ಆದರೆ ವಿಜಯ್ ಕಾಣೆಯಾಗಿದ್ದಾನೆಂದು ಕಂಡುಕೊಳ್ಳುತ್ತಾರೆ. ವಿಜಯ್ ತಪ್ಪಿಸಿಕೊಳ್ಳಲು ಯಶಸ್ವಿಯಾಗಿ ಸುರಕ್ಷಿತವಾಗಿ ಮನೆಗೆ ತಲುಪುತ್ತಾನೆ. ಆದರೆ ವಿಜಯ್ ನಿಧಾನವಾಗಿ ಆದರೆ ಎಚ್ಚರಿಕೆಯಿಂದ ತನ್ನ ತಂದೆಯಿಂದ ದೂರವಾಗುತ್ತಾನೆ. ವಿಜಯ್‍ನ ತಪ್ಪಿಸಿಕೊಳ್ಳುವಿಕೆಯ ಹಿಂದೆ ನಾರಂಗ್ ಇದ್ದನು ಎಂದು ಜೆಕೆ ಕಂಡುಕೊಂಡ ನಂತರ ನಾರಂಗ್ ಮತ್ತು ಜೆಕೆ ಬದ್ಧಶತ್ರುಗಳಾಗುತ್ತಾರೆ.
ವರ್ಷಗಳು ಉರುಳಿದಂತೆ, ಈಗ ಯುವಕನಾಗಿರುವ ವಿಜಯ್ (ಅಮಿತಾಭ್ ಬಚ್ಚನ್) ತನ್ನ ತಂದೆಯನ್ನು ಮತ್ತು ಕಾನೂನನ್ನು ಎತ್ತಿಹಿಡಿಯುವ ಬಗ್ಗೆ ತನ್ನ ತಂದೆಯ ಪ್ರೀತಿಯನ್ನು ದ್ವೇಷಿಸಲು ಪ್ರಾರಂಭಿಸುತ್ತಾನೆ. ಆಕಸ್ಮಿಕ ಎನ್ಕೌಂಟರ್‌ನ ವೇಳೆ, ವಿಜಯ್ ರೋಮಾ (ಸ್ಮಿತಾ ಪಾಟೀಲ್) ಎಂಬ ಯುವತಿಯನ್ನು ಪೀಡಿಸಲು ಪ್ರಯತ್ನಿಸಿದ 4 ಗೂಂಡಾಗಳಿಂದ ರಕ್ಷಿಸುತ್ತಾನೆ. ವಿಜಯ್ ಮತ್ತು ರೋಮಾ ನಿಕಟ ಸಂಬಂಧವನ್ನು ರೂಪಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಒಂದು ಹೋಟೆಲ್‌ನ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಉದ್ಯೋಗ ಸಂದರ್ಶನದ ವೇಳೆ, ಹೋಟೆಲ್‌ನ ಮಾಲೀಕ ಕೆ.ಡಿ.ನಾರಂಗ್ ಹಾದುಹೋಗುತ್ತಿದ್ದಾನೆ. ಅವನು ಸಂದರ್ಶನದ ಮಧ್ಯೆ ಪ್ರವೇಶಿಸಿ ಕೂಡಲೇ ವಿಜಯ್‍ನನ್ನು ನೇಮಿಸಿಕೊಳ್ಳುತ್ತಾನೆ. ತನ್ನ ಜೀವವನ್ನು ಉಳಿಸಿದ ವ್ಯಕ್ತಿ ಎಂದು ವಿಜಯ್ ಕೆ.ಡಿ.ನಾರಂಗ್‍ನನ್ನು ನೆನಪಿಸಿಕೊಂಡು ತಾನು ತನ್ನ ಜೀವಕ್ಕೆ ಉಪಕೃತನಾಗಿದ್ದೇನೆಂದು ಗ್ರಹಿಸಿದ ವ್ಯಕ್ತಿಯೊಂದಿಗೆ ಅಗತ್ಯವಿರುವ ಯಾವುದೇ ಸಾಮರ್ಥ್ಯದಲ್ಲಿ ಕೆಲಸ ಮಾಡಲು ನಿರ್ಧರಿಸುತ್ತಾನೆ.
ಜೆ.ಕೆ. ಮತ್ತು ಕೆ.ಡಿ. ಜೋಡಿಯು ಈಗ ತಮ್ಮ ಅಕ್ರಮ ವ್ಯವಹಾರಗಳಲ್ಲಿ ಬದ್ಧಶತ್ರುಗಳಾಗಿರುತ್ತಾರೆ. ಹಾಗಾಗಿ, ಅವರು ತನ್ನಿಂದ ಮತ್ತು ತನ್ನ ವ್ಯವಹಾರದಿಂದ ರಕ್ತವನ್ನು ಹೀರುವ ಮೊದಲು ತನ್ನ ಮುಳ್ಳುಗಳನ್ನು ತೆಗೆದುಹಾಕಲು ಜೆ.ಕೆ. ನಿರ್ಧರಿಸುತ್ತಾನೆ. ಜೆ.ಕೆ. ಕೆ.ಡಿ.ಯನ್ನು ಕೊಲೆ ಮಾಡಿಸಲು ಪ್ರಯತ್ನಿಸುತ್ತಾನೆ, ಆದರೆ ವಿಜಯ್ ತನ್ನ ಸಮಯ ಪ್ರಜ್ಞೆಯಿಂದ ಕೆ.ಡಿ.ಯನ್ನು ರಕ್ಷಿಸುತ್ತಾನೆ. ತಾನು ತನ್ನ ಜೀವನಕ್ಕೆ ಕೆ.ಡಿ.ಗೆ ಹೇಗೆ ಉಪಕೃತನಾಗಿದ್ದೇನೆ ಎಂದು ವಿಜಯ್ ಕೆ.ಡಿ.ಗೆ ನೆನಪಿಸುತ್ತಾನೆ. ಈಗ ವಿಜಯ್ ಕೆ.ಡಿ.ಯ ಬಲಗೈ ಬಂಟನಾಗುತ್ತಾನೆ. ನಾರಂಗ್‍ನನ್ನು ಕೊಲ್ಲಲು ವಿಫಲವಾಗಿದ್ದಕ್ಕೆ ಜೆ.ಕೆ. ತನ್ನ ಜನರ ಮೇಲೆ ಕೋಪಗೊಳ್ಳುತ್ತಾನೆ. ವಿಜಯ್ ಯೋಜನೆಯನ್ನು ಹಾಳು ಮಾಡಿದನು ಎಂದು ಅವನ ಜನರು ಹೇಳುತ್ತಾರೆ. ಕೋಪಗೊಂಡ ಜೆ.ಕೆ. ಮೊದಲು ವಿಜಯ್‌ನನ್ನು, ನಂತರ ನಾರಂಗ್, ಮತ್ತು ನಂತರ ಅಶ್ವಿನಿಯರನ್ನು ಕೊಲ್ಲುವ ಯೋಜನೆಯನ್ನು ರಚಿಸುತ್ತಾನೆ.
ವಿಜಯ್ ಮತ್ತು ಕೆ.ಡಿ.ನಾರಂಗ್‍ರ ನಡುವಿನ ಬೆಳೆಯುತ್ತಿರುವ ಸಾಮೀಪ್ಯವನ್ನು ಅಶ್ವಿನಿ ದ್ವೇಷಿಸತೊಡಗಿ ತನ್ನ ಮನೆಯನ್ನು ಬಿಟ್ಟು ಹೋಗುವಂತೆ ವಿಜಯ್‍ಗೆ ಹೇಳುತ್ತಾನೆ. ವಿಜಯ್ ರೋಮಾ ಜೊತೆಗೆ ಅವಳ ಮನೆಯಲ್ಲಿ ಮದುವೆಯಾಗದೆ ಇರಲು ಪ್ರಾರಂಭಿಸುತ್ತಾನೆ. ಶೀತಲ್ ತನ್ನ ಮಗನಿಗೆ ತಪ್ಪು ಹಾದಿಯನ್ನು ಬಿಡುವಂತೆ ಮನವೊಲಿಸಲು ಪ್ರಯತ್ನಿಸುತ್ತಾಳೆ, ಆದರೆ ಅದು ವ್ಯರ್ಥವಾಗುತ್ತದೆ. ನಂತರ, ರೋಮಾ ತಾನು ಅವನ ಮಗುವಿಗೆ, ಅಂದರೆ ರವಿಗೆ ತಾಯಿಯಾಗುವಳಿದ್ದೇಳೆ ಎಂದು ವಿಜಯ್‍ಗೆ ಹೇಳುತ್ತಾಳೆ. ಆದ್ದರಿಂದ ವಿಜಯ್ ಅವಳನ್ನು ಮದುವೆಯಾಗುತ್ತಾನೆ. ಒಂದು ರಾತ್ರಿ, ವಿಜಯ್ ಮತ್ತು ರೋಮಾ ಒಂದು ರೆಸ್ಟೋರೆಂಟ್‌ನಲ್ಲಿದ್ದಾಗ, ಗಣಪತ್ ರಾಯ್ ಎಂಬ ಕುಡಿದಿರುವ ವ್ಯಕ್ತಿ ರೋಮಾಗೆ ಮದುವೆಯನ್ನು ಪ್ರಸ್ತಾಪಿಸಲು ಪ್ರಯತ್ನಿಸುತ್ತಾನೆ. ಆದರೆ ವಿಜಯ್ ಅವನನ್ನು ಥಳಿಸುತ್ತಾನೆ. ಇದರಿಂದಾಗಿ ನೀಲಿ ಬಟ್ಟೆ ಧರಿಸಿದ ಇಬ್ಬರು ವ್ಯಕ್ತಿಗಳು ಮುಂದೆ ಬಂದು ರಾಯ್‍ನನ್ನು ಹೋಟೆಲ್‌ನಿಂದ ಹೊರಗೆ ಕರೆದೊಯ್ಯುತ್ತಾರೆ. ಮೂರ್ಖನಾಗಿ ಮತ್ತು ಕುಡಿದಂತೆ ನಟಿಸಲು ಈ ಇಬ್ಬರು ರಾಯ್‍ನನ್ನು ಗೊತ್ತುಮಾಡಿದ್ದರು ಎಂದು ಗೊತ್ತಾಗುತ್ತದೆ. ಕೆಲವು ನಿಮಿಷಗಳ ನಂತರ, ಆ ವ್ಯಕ್ತಿಗಳಲ್ಲಿ ಒಬ್ಬನು ರಾಯ್‌ನನ್ನು ಇರಿದು ಕೊಲ್ಲುತ್ತಾನೆ. ಮರುದಿನ ಬೆಳಿಗ್ಗೆ ವಿಜಯ್ ಮನೆಗೆ ಹಿಂದಿರುಗುತ್ತಾನೆ, ಆದರೆ ಅಶ್ವಿನಿಯ ಜನರು ಅವನನ್ನು ಹಿಂಬಾಲಿಸುತ್ತಾರೆ. ಅಶ್ವಿನಿಯ ಅತ್ಯಂತ ನಿಷ್ಠಾವಂತ ಅಧಿಕಾರಿಯಾದ ಸುಧಾಕರ್ ವಿಜಯ್ ರಾಯ್‍ನನ್ನು ಕೊಲೆ ಮಾಡಿದ್ದಾನೆಂದು ಹೇಳುವ ವಾರಂಟ್‍ನ್ನು ಹೊಂದಿರುತ್ತಾನೆ. ವಿಜಯ್‍ನನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಆದರೆ ಆರೋಪಗಳು ಸುಳ್ಳು ಎಂದು ನಿರ್ಧಾರಿತವಾದಾಗ, ವಿಜಯ್ ಜೈಲಿನಿಂದ ಬಿಡುಗಡೆಯಾಗುತ್ತಾನೆ ಮತ್ತು ಅವನು ಕೆ.ಡಿ.ಯೊಂದಿಗೆ ಪೂರ್ಣ ಸಮಯ ಕೆಲಸ ಮಾಡಲು ಪ್ರಾರಂಭಿಸುತ್ತಾನೆ.
ನಾರಂಗ್‍ನ ಸರಕುಗಳ ಟ್ರಕ್ ಒಂದನ್ನು ಜೆ.ಕೆ. ಕದ್ದಾಗ, ವಿಜಯ್ ತಾನು ಟ್ರಕ್ಕನ್ನು ಅವನ ಬಳಿಗೆ ಹಿಂತಿರುಗಿಸುವೆನು, ಆದರೆ ಏಕಾಂಗಿಯಾಗಿ, ಎಂದು ನಾರಂಗ್‍ಗೆ ವಿನಂತಿಸಿಕೊಳ್ಳುತ್ತಾನೆ. ಇದಕ್ಕೆ ನಾರಂಗ್ ಒಪ್ಪುತ್ತಾನೆ. ಜೆ.ಕೆ. ಹಾದುಹೋಗುವುದನ್ನು ವಿಜಯ್ ನೋಡಿದಾಗ ಅವನನ್ನು ಸೆರೆಹಿಡಿಯುತ್ತಾನೆ. ಜೆ.ಕೆ. ಶಾಲೆಯಿಂದ ಅಪಹರಿಸಿದ ಹುಡುಗ ತಾನೇ, ಮತ್ತು ತಾನು ತನ್ನ ಪ್ರತೀಕಾರಕ್ಕಾಗಿ ವರ್ಷಗಳಿಂದ ಕಾಯುತ್ತಿದ್ದೇನೆ ಎಂದು ವಿಜಯ್ ಜೆಕೆಗೆ ಹೇಳುತ್ತಾನೆ. ಇದು ಜೆ.ಕೆ.ಗೆ ಭಯ ಹುಟ್ಟಿಸುತ್ತದೆ. ಜೆ.ಕೆ.ಯ ಬಂಟರೊಂದಿಗೆ ಆಕ್ರೋಶವುಳ್ಳ ಸೆಣಸಾಟದ ನಂತರ, ವಿಜಯ್ ನಾರಂಗ್‍ನ ಟ್ರಕ್ಕನ್ನು ಅವನ ಬಳಿಗೆ ವಾಪಸು ಓಡಿಸಿಕೊಂಡು ಹೋಗುತ್ತಾನೆ. ಅಶ್ವಿನಿಯ ವಿರುದ್ಧ ಹಿತಾಸಕ್ತಿಯ ಬಗ್ಗೆ ಪತ್ರಕರ್ತರು ಪ್ರತಿ ಪ್ರಶ್ನೆ ಮಾಡಿದಾಗ - ಅವನ ಸ್ವಂತ ಮಗ ಕೆ.ಡಿ.ಯ ಗ್ಯಾಂಗ್‌ನಲ್ಲಿ ಹೆಸರಾಂತ ದರೋಡೆಕೋರನಾಗಿರುವುದು, ಆದರೆ ಇವನು ಪೊಲೀಸ್ ಉಪ ಆಯುಕ್ತನಾಗಿರುವುದು - ಪೊಲೀಸ್ ಆಯುಕ್ತ (ಅಶೋಕ್ ಕುಮಾರ್) ಅಶ್ವಿನಿಗೆ ಈ ಪ್ರಕರಣವನ್ನು ತ್ಯಜಿಸುವಂತೆ ಹೇಳುತ್ತಾನೆ. ಆದರೆ, ವಿಜಯ್ ಮತ್ತು ಇತರ ದುಷ್ಟ ಅಪರಾಧಿಗಳನ್ನು ಸೆರೆಹಿಡಿದು ವಿಚಾರಣೆಗೆ ಕರೆತರಲು ಅಶ್ವಿನಿ 48 ಗಂಟೆಗಳ ಕಾಲವನ್ನು ಕೇಳಿ, ತಾನು ವಿಫಲವಾದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಾನೆ. ಕೆ.ಡಿ., ವಿಜಯ್ ಮತ್ತು ಜೆ.ಕೆ.ಯ ಹೆಚ್ಚಿನ ಬಂಟರನ್ನು ಬಂಧಿಸಲಾಗುತ್ತದೆ, ಆದರೆ ಜೆ.ಕೆ. ತಲೆ ಮರೆಸಿಕೊಂಡೇ ಇರುತ್ತಾನೆ. ಅಶ್ವಿನಿಯ ಕೊಲೆ ಮಾಡುವ ಮೂಲಕ ಜೆ.ಕೆ. ತನ್ನ ಎಲ್ಲ ತೊಂದರೆಗಳನ್ನು ಒಮ್ಮೆಗೇ ತೊಲಗಿಸಲು ತಾನೇ ಹೊಣೆ ಹೊತ್ತುಕೊಳ್ಳುತ್ತಾನೆ. ಬದಲಾಗಿ, ತನ್ನ ಗಂಡನನ್ನು ರಕ್ಷಿಸುವ ಪ್ರಯತ್ನದಲ್ಲಿ ಶೀತಲ್‍ನನ್ನು ಜೆ.ಕೆ. ಸ್ವತಃ ಕೊಲೆ ಮಾಡುತ್ತಾನೆ. ಶೀತಲ್‍ಳ ಹತ್ಯೆಯ ಸಮಯದಲ್ಲಿ ಜೈಲಿನಲ್ಲಿದ್ದ ವಿಜಯ್ ಕೋಪಗೊಂಡು ಪೊಲೀಸರಿಂದ ತಪ್ಪಿಸಿಕೊಂಡು ಜೆ.ಕೆ.ಯ ತಲೆಯ ಬೇಟೆಯಾಡಲು ಪ್ರಾರಂಭಿಸುತ್ತಾನೆ. ಜೆ.ಕೆ.ಯ ನಾಲ್ಕು ಬಂಟರಿರುವ ಒಂದು ಅಡಗುದಾಣವನ್ನು ವಿಜಯ್ ಪತ್ತೆಹಚ್ಚುತ್ತಾನೆ. ಅವರ ವಿರುದ್ಧ ತನಗೆ ಯಾವುದೇ ದ್ವೇಷವಿಲ್ಲ, ಮತ್ತು ಜೆ.ಕೆ. ಮಾತ್ರ ತನಗೆ ಬೇಕು ಎಂದು ವಿಜಯ್ ಹೇಳುತ್ತಾನೆ, ಆದರೆ ಆ ದುಷ್ಟರು ಅವನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ, ಆ ಎಲ್ಲರನ್ನು ಕೊಲ್ಲುವಲ್ಲಿ ವಿಜಯ್ ಯಶಸ್ವಿಯಾಗುತ್ತಾನೆ. ಜೆ.ಕೆ.ಯ ಬಂಟನೊಬ್ಬನ ವಿಚಾರಣೆಯ ಸಮಯದಲ್ಲಿ, ನಕಲಿ ರುಜುವಾತುಗಳನ್ನು ಬಳಸಿಕೊಂಡು ಜೆ.ಕೆ. ಭಾರತವನ್ನು ತೊರೆಯುವ ಯೋಜನೆಯನ್ನು ಮಾಡಿದ್ದಾನೆ ಎಂದು ವಿಜಯ್‍ಗೆ ತಿಳಿಯುತ್ತದೆ. ವಿಜಯ್ ನಂತರ ಆ ವ್ಯಕ್ತಿಯನ್ನು ಮುಳುಗಿಸಿ ಕೊಲ್ಲುತ್ತಾನೆ.
ಸುಳಿವನ್ನು ಅನುಸರಿಸಿ, ವಿಜಯ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾನೆ ಮತ್ತು ವೇಷ ಮರೆಸಿಕೊಂಡಿದ್ದ ಜೆ.ಕೆ.ಯನ್ನು ಅಂತಿಮವಾಗಿ ಕೊಲ್ಲುವಲ್ಲಿ ಯಶಸ್ವಿಯಾಗಿ ತನ್ನ ತಾಯಿಯ ಸಾವಿಗೆ ಪ್ರತೀಕಾರ ಮಾಡುತ್ತಾನೆ. ಅಶ್ವಿನಿ ವಿಜಯ್‍ನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿ, ತಪ್ಪಿಸಿಕೊಳ್ಳದಂತೆ ವಿಜಯ್‍ಗೆ ಕೇಳಿಕೊಳ್ಳುತ್ತಾನೆ, ಆದರೆ ಅದು ವ್ಯರ್ಥವಾಗುತ್ತದೆ. ಅಶ್ರುಪೂರಿತ ಕಣ್ಣುಳ್ಳ ಅಶ್ವಿನಿ ಕುದುರೆಯನ್ನು ಎಳೆದಾಗ, ಈ ಪ್ರಕ್ರಿಯೆಯಲ್ಲಿ ತನ್ನ ಮಗ ಮಾರಣಾಂತಿಕವಾಗಿ ಗಾಯಗೊಳ್ಳುತ್ತಾನೆ. ಅಶ್ವಿನಿ ಅವನ ಕಡೆಗೆ ಧಾವಿಸುತ್ತಾನೆ. ಅಶ್ರುಪೂರಿತ ವಿದಾಯ ಹೇಳುತ್ತಾ, ವಿಜಯ್‍ಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳುತ್ತಾನೆ ಮತ್ತು ತಾನು ಯಾವಾಗಲೂ ಅವನನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು ತನ್ನ ತಂದೆಗೆ ಹೇಳುತ್ತಾನೆ. ನಂತರ ವಿಜಯ್ ಸಾಯುತ್ತಾನೆ. ಇದು ವಿಜಯ್‌ನನ್ನು ಕೊಲ್ಲುವುದು ಎಷ್ಟು ಮೂರ್ಖ ವಿಚಾರವಾಗಿತ್ತು ಮತ್ತು ಕುದುರೆಯನ್ನು ಎಳೆಯುವ ಮೊದಲು ಹಾಗೆ ಮಾಡುವ ಬಗ್ಗೆ ಅವನು ಏಕೆ ಮತ್ತೊಮ್ಮೆ ಯೋಚಿಸಲಿಲ್ಲ ಎಂದು ಅಶ್ವಿನಿಗೆ ಅರಿವಾಗುವಂತೆ ಮಾಡುತ್ತದೆ. ಇದರ ನಂತರ, ಅವನು ತಕ್ಷಣ ಪೊಲೀಸ್ ಪಡೆಯನ್ನು ತೊರೆಯುತ್ತಾನೆ.
ದೃಶ್ಯವು ವರ್ತಮಾನಕ್ಕೆ ಬಂದು ಕಣ್ಣೀರುಳ್ಳ ಅಶ್ವಿನಿ ಪೊಲೀಸ್ ಅಧಿಕಾರಿಯಾಗುವ ಅವನ ನಿರ್ಧಾರವನ್ನು ಅನುಸರಿಸಲು ಬಯಸುತ್ತಾನಾ ಎಂದು ರವಿಗೆ ಮತ್ತೊಮ್ಮೆ ಕೇಳುತ್ತಾನೆ. ರವಿ, ಹೃದಯ ವಿದ್ರಾವಕ ಕಥೆಯನ್ನು ಕೇಳಿದರೂ ರವಿ ದೃಢವಾಗಿ ಹೌದೆಂದು ಉತ್ತರಿಸುತ್ತಾನೆ. ಕುಮಾರ್ ಮತ್ತು ರವಿಯ ತಾಯಿ ರೋಮಾ ರವಿಗೆ ತಮ್ಮ ಆಶೀರ್ವಾದ ನೀಡುತ್ತಾರೆ. ರವಿ ರೈಲು ಹಿಡಿದು ಹೊರಟು ಹೋಗುತ್ತಾನೆ. ಭವಿಷ್ಯದಲ್ಲಿ ಅವನು ಅಧಿಕಾರಿಯಾಗುವನು ಎಂದು ಇದು ಸೂಚಿಸುತ್ತದೆ.
ಪಾತ್ರವರ್ಗ
[ಬದಲಾಯಿಸಿ]- ಡಿಸಿಪಿ ಅಶ್ವಿನಿ ಕುಮಾರ್ ಪಾತ್ರದಲ್ಲಿ ದಿಲೀಪ್ ಕುಮಾರ್
- ವಿಜಯ್ ಕುಮಾರ್ ಪಾತ್ರದಲ್ಲಿ ಅಮಿತಾಭ್ ಬಚ್ಚನ್
- ಶೀತಲ್ ಕುಮಾರ್ ಪಾತ್ರದಲ್ಲಿ ರಾಖೀ
- ರೋಮಾ ಪಾತ್ರದಲ್ಲಿ ಸ್ಮಿತಾ ಪಾಟೀಲ್
- ರವಿ ಕುಮಾರ್ ಪಾತ್ರದಲ್ಲಿ ಅನಿಲ್ ಕಪೂರ್
- ಜೆ.ಕೆ.ವರ್ಮಾ ಪಾತ್ರದಲ್ಲಿ ಅಮ್ರೀಶ್ ಪುರಿ
- ಕೆ.ಡಿ.ನಾರಂಗ್ ಪಾತ್ರದಲ್ಲಿ ಕುಲ್‍ಭೂಷಣ್ ಖರ್ಬಂದಾ
- ಲೋಬೊ ಪಾತ್ರದಲ್ಲಿ ಶರತ್ ಸಕ್ಸೇನಾ
- ಗಣಪತ್ ರಾಯ್ ಪಾತ್ರದಲ್ಲಿ ದಲಿಪ್ ತಾಹಿಲ್
- ಸತೀಶ್ ಪಾತ್ರದಲ್ಲಿ ಸತೀಶ್ ಶಾ
- ಪೊಲೀಸ್ ಆಯುಕ್ತನಾಗಿ ಅಶೋಕ್ ಕುಮಾರ್
ಪ್ರಶಸ್ತಿಗಳು
[ಬದಲಾಯಿಸಿ]ದಿಲೀಪ್ ಕುಮಾರ್ ಮತ್ತು ಅಮಿತಾಬ್ ಬಚ್ಚನ್ ಇಬ್ಬರೂ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶಿತವಾದರು ಆದರೆ ಅಂತಿಮವಾಗಿ ಅದನ್ನು ದಿಲೀಪ್ ಕುಮಾರ್ ಗೆದ್ದರು.ಅಮಿತಾಭ್ ಬಚ್ಚನ್ ಆ ವರ್ಷ ಆ ವಿಭಾಗದಲ್ಲಿ ಒಟ್ಟು 3 ನಾಮನಿರ್ದೇಶನಗಳನ್ನು ಪಡೆದಿದ್ದರು.
ಈ ಚಿತ್ರವು ವಿಮರ್ಶಾತ್ಮಕ ಮೆಚ್ಚುಗೆ ಪಡೆಯಿತು ಮತ್ತು ಈ ಕೆಳಗಿನ ಪ್ರಶಸ್ತಿ ಗೌರವಗಳಿಗೆ ಪಾತ್ರವಾಯಿತು:
- ಮುಶೀರ್ ಆಲಮ್, ಮೊಹಮ್ಮದ್ ರಿಯಾಜ಼್ - ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ - ಗೆಲುವು
- ದಿಲೀಪ್ ಕುಮಾರ್ - ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ - ಗೆಲುವು
- ಅಮಿತಾಭ್ ಬಚ್ಚನ್ - ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ - ನಾಮನಿರ್ದೇಶಿತ
- ರಾಖಿ - ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ - ನಾಮನಿರ್ದೇಶಿತ
- ರಮೇಶ್ ಸಿಪ್ಪಿ - ಫಿಲ್ಮ್‌ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ - ನಾಮನಿರ್ದೇಶಿತ
ಧ್ವನಿವಾಹಿನಿ
[ಬದಲಾಯಿಸಿ]"ಜಾನೆ ಕೈಸೆ ಕಬ್ ಕಹ್ಞಾ" ಹಾಡು ನಿತ್ಯನೂತನ ಹಿಟ್ ಎನಿಸಿಕೊಂಡಿದೆ.
ಎಲ್ಲ ಹಾಡುಗಳು ಆನಂದ್ ಬಕ್ಷಿ ಅವರಿಂದ ರಚಿತ; ಎಲ್ಲ ಸಂಗೀತ ಆರ್. ಡಿ. ಬರ್ಮನ್ ಅವರಿಂದ ರಚಿತ
ಸಂ. | ಹಾಡು | ಗಾಯಕ(ರು) | ಸಮಯ |
---|---|---|---|
1. | "ಏ ಆಸ್ಮ್ಞಾ ಬತಾ" | ಮಹೇಂದ್ರ ಕಪೂರ್ | |
2. | "ಹಮನೇ ಸನಮ್ ಕೋ ಖತ್ ಲಿಖಾ" | ಲತಾ ಮಂಗೇಶ್ಕರ್ | |
3. | "ಜಾನೆ ಕೆಯ್ಸೆ ಕಬ್ ಕಹ್ಞಾ" | ಕಿಶೋರ್ ಕುಮಾರ್, ಲತಾ ಮಂಗೇಶ್ಕರ್ | |
4. | "ಮಾಂಗಿ ಥೀ ಏಕ್" | ಮಹೇಂದ್ರ ಕಪೂರ್ |
ಟಿಪ್ಪಣಿಗಳು
[ಬದಲಾಯಿಸಿ]- ↑ Hungama, Bollywood (23 January 2017). "Ramesh Sippy on casting Amitabh Bachchan and Dilip Kumar together in Shakti - Bollywood Hungama".