ಶಕ್ತಿ ಮೋಹನ್

ವಿಕಿಪೀಡಿಯ ಇಂದ
Jump to navigation Jump to search
ಶಕ್ತಿ ಮೋಹನ್
Shakti Mohan.jpg
ಜನನ೧೨.೧೦.೧೯೮೫
ಮುಂಬಯಿ, ಭಾರತ
ವೃತ್ತಿನೃತ್ಯ
Years active೨೦೦೯ರಿಂದ ಈಗಿನವರೆಗು

ಶಕ್ತಿ ಮೋಹನ್ ಭಾರತದ ಕಂಟೆಂಪರರಿ ನರ್ತಕಿಯೊಬ್ಬರು. ಜ಼ೀ ಟಿವಿಯವರು ನಡೆಸಿದ 'ಡ್ಯಾಂಸ್ ಇಂಡಿಯ ಡ್ಯಾಂಸ್' ಸ್ಪರ್ಧೆಯ ಎರಡನೇ ಕಂತಿನ ವಿಜೇತೆಯಾಗಿ ೫೦ ಲಕ್ಷ ರೂ.ಗಳ ನಗದು ಬಹುಮಾನ ಹಾಗು ಮಾರುತಿ ಸುಜುಕಿ ವಾಗನ್ ಆರ್ ಕಾರನ್ನು ಗೆದ್ದರು.[೧] ತೀಸ್ ಮಾರ್ ಖಾನ್ ಹಾಗು ರೌಡಿ ರಾಥೋಡ್ ಚಿತ್ರಗಳ ಹಾಡುಗಳಲ್ಲಿ ಕುಣಿದಿರುವ ಇವರು, ಚ್ಯಾನೆಲ್ ವಿನಲ್ಲಿ ಬರುವ ದಿಲ್ ದೋಸ್ತಿ ಡ್ಯಾಂಸ್ನಲ್ಲಿ ಕ್ರಿಯ ಘಾಯ್ ಪಾತ್ರವನ್ನು ಮಾಡಿದ್ದಾರೆ.[೨]

ಕಿರುತೆರೆ ಪ್ರದರ್ಶನಗಳು[ಬದಲಾಯಿಸಿ]

ಕಿರುತೆರೆ ಕಾರ್ಯಕ್ರಮ ಪಾತ್ರ
ದಿಲ್ ದೋಸ್ತಿ ಡ್ಯಾನ್ಸ್ (ಚ್ಯಾನೆಲ್ ವಿ ೨೦೧೧-೧೨, ೨೦೧೩-) ಕ್ರಿಯ ಘಾಯ್
ಡ್ಯಾನ್ಸ್ ಇಂಡಿಯ ಡ್ಯಾನ್ಸ್ (ಜ಼ೀ ಟಿವಿ) ವಿಜೇತೆ
ಝಲಕ್ ದಿಖ್ಲಾಜ - ೭ನೇ ಕಂತು ಸ್ಪರ್ಧಿ

ಚಲನಚಿತ್ರ ಪ್ರದರ್ಶನಗಳು[ಬದಲಾಯಿಸಿ]

ಚಿತ್ರಗಳು
ವರ್ಷ ಚಿತ್ರ ಪಾತ್ರ ಭಾಷೆ Notes
೨೦೧೦ ತೀಸ್ ಮಾರ್ ಖಾನ್ ಹಿಂದಿ ಟೈಟಲ್ ಸಾಂಗ್
೨೦೧೨ ರೌಡಿ ರಾಥೋಡ್ ಹಿಂದಿ ಐಟಮ್ ಹಾಡು "ಆ ರೆ ಪ್ರಿತಮ್ ಪ್ಯಾರೆ"
೨೦೧೪ ಕಾಂಚಿ ಹಿಂದಿ ಐಟಮ್ ಹಾಡು "ಕಂಬಲ್ ಕೆ ನೀಚೆ"
೨೦೧೪ ಸಮ್ರಾಟ್ ಅಂಡ್ ಕೊ. ಹಿಂದಿ ಐಟಮ್ ಹಾಡು ತೇಕ್ವಿಲ ವಕಿಲ

ವೈಯಕ್ತಿಕ ಜೀವನ[ಬದಲಾಯಿಸಿ]

ಬ್ರಿಜ್ಮೋಹನ್ ಹಾಗು ಕುಸುಮ್ ದಂಪತಿಗಳ ಮಗಳಾದ ಇವಳಿಗೆ ಮೂರು ಸಹೋದರಿಯರು - ನೀತಿ, ಮುಕ್ತಿ ಹಾಗು ಕ್ರಿತಿ.[೩] ಪೌರನೀತಿ ಅಥವಾ ಪೊಲಿಟಿಕಲ್ ಸೈನ್ಸ್ನಲ್ಲಿ ಎಮ್.ಎ ಪಡೆದಿರುವ ಶಕ್ತಿರವರು ಐಎಎಸ್ ಅಧಿಕಾರಿಯಾಗಬೇಕೆಂದಿದ್ದರು.[೪] ಚಿಕ್ಕಂದಿನ ಅಪ್ಘಾತದಿಂದ ನಡೆಯಲು ಆಗುವುದಿಲ್ಲ ಎಂಬ ವೈದ್ಯರ ಮಾತನ್ನು ಮೀರಿಸಿ ಕುಟುಂಬದ ಪ್ರೋತ್ಸಾಹದಿಂದ ನೃತ್ಯವನ್ನು ಮಾಡಿಬುಟ್ಟರು ಶಕ್ತಿ ಮೋಹನ್.[೫]

ಉಲ್ಲೇಖಗಳು[ಬದಲಾಯಿಸಿ]