ಶಂಕಿತ ವ್ಯಕ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾನೂನು ಜಾರಿ ಪರಿಭಾಷೆಯಲ್ಲಿ, ಶಂಕಿತ ವ್ಯಕ್ತಿ ಎಂದರೆ ಒಂದು ಅಪರಾಧವನ್ನು ಮಾಡಿದ್ದಾನೆಂದು ಆಪಾದಿಸಲಾಗಿರುವ ಅಥವಾ ಶಂಕಿಸಲಾಗಿರುವ ಪರಿಚಿತ ವ್ಯಕ್ತಿ. ಪೋಲಿಸರು ಮತ್ತು ವರದಿಗಾರರು ಹಲವುವೇಳೆ ಶಂಕಿತ ವ್ಯಕ್ತಿ ಪದವನ್ನು ಅಪರಾಧದ ಕರ್ತೃವನ್ನು ಸೂಚಿಸಲು ಪರಿಭಾಷೆಯಾಗಿ ಬಳಸುತ್ತಾರೆ. ಆದರೆ, ಅಧಿಕೃತ ವ್ಯಾಖ್ಯಾನದಲ್ಲಿ, ಅಪರಾಧಕರ್ತೃವು ಕಳ್ಳ, ಕೊಲೆಗಾರ, ನಕಲುಕೋರ ಇತ್ಯಾದಿ ಆಗಿರುತ್ತಾನೆ—ಅಂದರೆ ಅಪರಾಧವನ್ನು ಮಾಡಿದ ವ್ಯಕ್ತಿ. ಶಂಕಿತ ವ್ಯಕ್ತಿ ಮತ್ತು ಅಪರಾಧಕರ್ತೃ ಪದಗಳ ನಡುವಿನ ವ್ಯತ್ಯಾಸವು ಶಂಕಿತ ವ್ಯಕ್ತಿಯು ಅಪರಾಧ ಎಸಗಿದ್ದಾನೆ ಎಂಬುದು ತಿಳಿದಿರುವುದಿಲ್ಲ, ಮತ್ತು ಅಪರಾಧಕರ್ತೃವು ಆ ಸಮಯದಲ್ಲಿ ಅಪರಾಧಕ್ಕೆ ಶಂಕಿತನಾಗಿಲ್ಲದಿರಬಹುದು ಮತ್ತು ಹಾಗಾಗಿ ಅಗತ್ಯವಾಗಿ ಶಂಕಿತನಾಗಿರುವುದಿಲ್ಲ ಎಂಬುದನ್ನು ಗುರುತಿಸುತ್ತದೆ. ಶಂಕಿತ ವ್ಯಕ್ತಿಯು ಅಪರಾಧಕರ್ತೃವಿನಿಂದ ಭಿನ್ನ ವ್ಯಕ್ತಿಯಾಗಿರಬಹುದು, ಅಥವಾ ಯಾವುದೇ ನಿಜವಾಧ ಅಪರಾಧ ಆಗಿರದೇ ಇರಬಹುದು, ಮತ್ತು ಇದರರ್ಥ ಯಾವುದೇ ಅಪರಾಧಕರ್ತೃವು ಇರುವುದಿಲ್ಲ.

ಪೋಲಿಸ್ ವರದಿಗಳಲ್ಲಿನ ಒಂದು ಸಾಮಾನ್ಯ ತಪ್ಪೆಂದರೆ ಶಂಕಿತ ವ್ಯಕ್ತಿಯ ಬಗ್ಗೆ ಒಬ್ಬ ಸಾಕ್ಷಿಯ ವಿವರಣೆ (ಏಕೆಂದರೆ ಸಾಕ್ಷಿಯು ಸಾಮಾನ್ಯವಾಗಿ ಅಪರಾಧಕರ್ತೃವನ್ನು ವಿವರಿಸುತ್ತಾನೆ, ಆದರೆ ಛಾಯಾಚಿತ್ರವು ಶಂಕಿತ ವ್ಯಕ್ತಿಯದ್ದಾಗಿರುತ್ತದೆ). ಯಾವುದೇ ಶಂಕಿತ ವ್ಯಕ್ತಿ ಇಲ್ಲದಿದ್ದರೂ ಪೋಲಿಸರು ಶಂಕಿತನಿಗಾಗಿ ಹುಡುಕುತ್ತಿದ್ದಾರೆ ಎಂದು ಆಗಾಗ್ಗೆ ಹೇಳಲಾಗುತ್ತದೆ; ಪೋಲಿಸರು ಶಂಕಿತನಿಗಾಗಿ ಹುಡುಕುತ್ತಿರಬಹುದು, ಆದರೆ ಖಂಡಿತವಾಗಿ ಅವರು ಅಪರಾಧಕರ್ತೃವನ್ನು ಹುಡುಕುತ್ತಿರುತ್ತಾರೆ, ಮತ್ತು ಅಂತಹ ಪೋಲಿಸ್ ವರದಿಯಿಂದ ಶಂಕಿತನಿದ್ದಾನೆಯೇ ಅಥವಾ ಇಲ್ಲವೇ ಎಂದು ಹೇಳುವುದು ಬಹುವೇಳೆ ಅಸಾಧ್ಯ.

ಅಮೇರಿಕದ ಕಾನೂನು ವ್ಯವಸ್ಥೆಯಲ್ಲಿ, ಒಮ್ಮೆ ಮಾಹಿತಿಯನ್ನು ಪ್ರಕಟಿಸಿದ ಅಭಿಯೋಕ್ತರು, ರುಜುವಾತು ಪತ್ರ ಅಥವಾ ಆರೋಪಣ ಪತ್ರವನ್ನು ಜಾರಿಗೊಳಿಸಿದ ನ್ಯಾಯದರ್ಶಿಗಳ ಮಹಾಮಂಡಲಿಯು, ಅಥವಾ ದಸ್ತಗಿರಿ ಆದೇಶವನ್ನು ಜಾರಿಗೊಳಿಸಿದ ನ್ಯಾಯಾಧೀಶನು ಶಂಕಿತ ವ್ಯಕ್ತಿಯನ್ನು ಬಂಧಿಸಲು ನಿರ್ಧಾರವನ್ನು, ಅಥವಾ ವಿಚಾರಣೆಗೆ ಒಳಪಡಿಸಬೇಕೆಂದು ಅನುಮೋದಿಸಿದ ಮೇಲೆಯೇ, ಶಂಕಿತನನ್ನು ಸರಿಯಾಗಿ ಪ್ರತಿವಾದಿ ಅಥವಾ ಆರೋಪಿ ಎಂದು ಕರೆಯಬಹುದು. ಅಪರಾಧಿಯೆಂದು ತೀರ್ಮಾನಿಸಿದ ನಂತರವೇ ಶಂಕಿತನನ್ನು ಸರಿಯಾಗಿ ಅಪರಾಧಕರ್ತೃವೆಂದು ಕರೆಯಲಾಗುತ್ತದೆ.