ವೈರ್‌ಷಾರ್ಕ್
ಅಭಿವೃದ್ಧಿಪಡಿಸಿದವರು | The Wireshark team |
---|---|
Stable release | 1.2.6
/ ಜನವರಿ 27, 2010 |
Preview release | 1.3.3
/ ಫೆಬ್ರವರಿ 12, 2010 |
Repository | |
ಕ್ರಮವಿಧಿಯ ಭಾಷೆ | C |
ಕಾರ್ಯಾಚರಣಾ ವ್ಯವಸ್ಥೆ | Cross-platform |
ವಿಧ | Packet analyzer |
ಪರವಾನಗಿ | GNU General Public License |
ಅಧೀಕೃತ ಜಾಲತಾಣ | www.wireshark.org |
ವೈರ್‌ಷಾರ್ಕ್ ಎಂಬುದು ಒಂದು ಉಚಿತವಾದ ಹಾಗೂ ಮುಕ್ತ-ಮೂಲದ ಸಣ್ಣಗಾತ್ರದ ವಿಶ್ಲೇಷಕವಾಗಿದೆ. ಜಾಲಬಂಧದ ದೋಷನಿವಾರಣೆ, ವಿಶ್ಲೇಷಣೆ, ತಂತ್ರಾಂಶ ಮತ್ತು ಸಂವಹನೆಗಳ ವಿಧ್ಯುಕ್ತ ನಿರೂಪಣೆಯ ಅಭಿವೃದ್ಧಿ, ಹಾಗೂ ಶಿಕ್ಷಣಕ್ಕಾಗಿ ಇದನ್ನು ಬಳಸಲಾಗುತ್ತದೆ. ಮೂಲತಃ ಎಥೆರಿಯಲ್ ಎಂಬ ಹೆಸರು ಇದಕ್ಕಿತ್ತು. ಆದರೆ ಸರಕುಮುದ್ರೆಯ ವಿವಾದಗಳ ಕಾರಣದಿಂದಾಗಿ 2006ರ ಮೇ ತಿಂಗಳಲ್ಲಿ ಈ ಯೋಜನೆಗೆ ವೈರ್‌ಷಾರ್ಕ್ ಮರುನಾಮಕರಣ ಮಾಡಲಾಯಿತು.
ವೈರ್‌ಷಾರ್ಕ್ ಒಂದು ಮಿಶ್ರ-ವೇದಿಕೆಯಾಗಿದ್ದು, ತನ್ನ ಬಳಕೆದಾರ ಇಂಟರ್‌ಫೇಸ್‌ನ್ನು (ಒಟ್ಟಿಗೆ ಉಪಯೋಗಿಸಬಹುದಾದಂತೆ ಉಪಕರಣದ ಎರಡು ಭಾಗಗಳನ್ನು ಕೂಡಿಸುವ ಸಾಧನಕ್ಕೆ ಇಂಟರ್‌ಫೇಸ್ ಎಂದು ಹೆಸರು) ಕಾರ್ಯಗತಗೊಳಿಸಲು GTK+ಸಾಧನದ ಟೂಲ್‌ಕಿಟ್‌ನ್ನು, ಹಾಗೂ ದತ್ತಾಂಶ ವಿಭಾಗಗಳನ್ನು ಹಿಡಿದಿಡಲು pcapನ್ನು ಇದು ಬಳಸುತ್ತದೆ. ಲಿನಕ್ಸ್, ಮ್ಯಾಕ್ ಓಎಸ್ X, BSD, ಮತ್ತು ಸೊಲಾರಿಸ್ ಸೇರಿದಂತೆ ಹಲವಾರು Unix-ರೀತಿಯ ಕಾರ್ಯಾಚರಣಾ ವ್ಯವಸ್ಥೆಗಳ ಮೇಲೆ, ಹಾಗೂ ಮೈಕ್ರೋಸಾಫ್ಟ್ ವಿಂಡೋಸ್ ಮೇಲೆ ಇದು ಕಾರ್ಯಚಟುವಟಿಕೆಯನ್ನು ನಡೆಸುತ್ತದೆ. GNU ಜನರಲ್ ಪಬ್ಲಿಕ್ ಲೈಸೆನ್ಸ್‌ನ ನಿಬಂಧನೆಗಳ ಅಡಿಯಲ್ಲಿ ಬಿಡುಗಡೆಯಾಗಿರುವ ವೈರ್‌ಷಾರ್ಕ್ ಒಂದು ಉಚಿತ ತಂತ್ರಾಂಶವಾಗಿದೆ.
ಕಾರ್ಯಚಟುವಟಿಕೆ
[ಬದಲಾಯಿಸಿ]ವೈರ್‌ಷಾರ್ಕ್ ತಂತ್ರಾಂಶವು tcpdumpನ್ನು ತುಂಬಾ ಹೋಲುತ್ತದೆಯಾದರೂ, ಇದು ಗ್ರಾಫಿಕ್ ಶೈಲಿಯ ಮುಂಚೂಣಿಯ ವ್ಯವಸ್ಥೆಯೊಂದನ್ನು, ಹಾಗೂ ಮಾಹಿತಿಯನ್ನು ವರ್ಗೀಕರಿಸುವ ಮತ್ತು ಸೋಸುವ ಇನ್ನೂ ಅನೇಕ ಆಯ್ಕೆಗಳನ್ನು ಹೊಂದಿದೆ. ಬಳಕೆದಾರನು ಸಂಕೀರ್ಣ ವಿಧಾನದೊಳಗೆ ಜಾಲಬಂಧದ ಇಂಟರ್‌ಫೇಸ್‌ನ್ನು ಇರಿಸುವ ಮೂಲಕ, ಜಾಲಬಂಧದ (ಸಾಮಾನ್ಯವಾಗಿ ಇದು ಒಂದು ಎಥರ್‌ನೆಟ್ ಜಾಲಬಂಧವಾಗಿದ್ದರೂ, ಇತರ ವ್ಯವಸ್ಥೆಗಳಿಗಾಗಿ ಪೂರಕ ವ್ಯವಸ್ಥೆಯನ್ನು ಸೇರಿಸಲಾಗಿರುತ್ತದೆ) ಮೂಲಕ ಹಾದುಹೋಗುತ್ತಿರುವ ಎಲ್ಲಾ ಮಾಹಿತಿ ದಟ್ಟಣೆಯನ್ನೂ ನೋಡಲು ಇದು ಅನುವುಮಾಡಿಕೊಡುತ್ತದೆ.
ಇತಿಹಾಸ
[ಬದಲಾಯಿಸಿ]ದತ್ತಾಂಶ ವಿಭಾಗಗಳನ್ನು ಹಿಡಿದಿಡಲು ಹಾಗೂ ವಿಶ್ಲೇಷಿಸಲು ಒಂದು ಸಾಧನದ ಅಗತ್ಯವಿದ್ದುದರಿಂದ, ಜೆರಾಲ್ಡ್ ಕಾಂಬ್ಸ್ (ಕನ್ಸಾಸ್ ನಗರದ ಮಿಸ್ಸೌರಿ ವಿಶ್ವವಿದ್ಯಾಲಯದ ಓರ್ವ ಕಂಪ್ಯೂಟರ್ ವಿಜ್ಞಾನದ ಪದವೀಧರ) ಎಂಬಾತ ಅನಿವಾರ್ಯವಾಗಿ ಎಥೆರಿಯಲ್ ಎಂಬ ಹೆಸರಿನ ಪ್ರೋಗ್ರ್ಯಾಂನ್ನು ಬರೆಯಲು ಪ್ರಾರಂಭಿಸಿದ. ಇದರ ಮೊದಲ ಆವೃತ್ತಿಯನ್ನು ಆತ 1998ರಲ್ಲಿ ಬಿಡುಗಡೆಮಾಡಿದ. ಈಗಿರುವ ಪರಿಸ್ಥಿತಿಯ ಅನುಸಾರ, ಇದಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಿರುವ 500ಕ್ಕೂ ಹೆಚ್ಚಿನ ಲೇಖಕರಿದ್ದು, ಸಂಕೇತದ ಒಟ್ಟಾರೆ ನಿರ್ವಹಣೆಯನ್ನು ಜೆರಾಲ್ಡ್ ನಡೆಸಿಕೊಂಡು ಬರುತ್ತಿದ್ದಾನೆ ಹಾಗೂ ಇದರ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದ್ದಾನೆ; ಇದಕ್ಕೆ ಬರಹದ ಕೊಡುಗೆಯನ್ನು ನೀಡುತ್ತಿರುವ ಲೇಖಕರ ಪಟ್ಟಿಯು ವೈರ್‌ಷಾರ್ಕ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
2006ರ ಮೇ ತಿಂಗಳಲ್ಲಿ ಸದರಿ ತಂತ್ರಾಂಶದ ಹೆಸರನ್ನು ವೈರ್‌ಷಾರ್ಕ್ ಎಂಬುದಾಗಿ ಬದಲಿಸಲಾಯಿತು. ಏಕೆಂದರೆ, ಇದರ ಸೃಷ್ಟಿಕರ್ತ ಹಾಗೂ ಪ್ರಮುಖ ಅಭಿವರ್ಧಕ ಜೆರಾಲ್ಡ್ ಕಾಂಬ್ಸ್ ತಾನು ಕೆಲಸವನ್ನು ಬದಲಿಸಿದಾಗಲೆಲ್ಲಾ ಎಥೆರಿಯಲ್ ಸರಕುಮುದ್ರೆಯನ್ನು (ಆಗ ಇದು ಅವನ ಹಳೆಯ ಉದ್ಯೋಗದಾತ ಕಂಪನಿಯಾದ ನೆಟ್‌ವರ್ಕ್ ಇಂಟಿಗ್ರೇಷನ್ ಸರ್ವೀಸಸ್‌ನ ಸ್ವಾಮ್ಯದಲ್ಲಿತ್ತು) ಬಳಸಲು ಸಾಧ್ಯವಾಗುತ್ತಿರಲಿಲ್ಲ.[೧] ಆದರೂ ಸಹ, ಬಹುತೇಕ ಆಕರ ಸಂಕೇತದ ವಿಷಯಕ್ಕೆ ಸಂಬಂಧಿಸಿದ ಕೃತಿಸ್ವಾಮ್ಯವನ್ನು ಆತ ಇನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ (ಮತ್ತು ಉಳಿದ ಭಾಗವು GNU GPLನ ಅಡಿಯಲ್ಲಿ ಮರು-ವಿತರಣೆಗೆ ಅರ್ಹವಾಗಿತ್ತು). ಆದ್ದರಿಂದ, ಎಥೆರಿಯಲ್‌ಗೆ ಸಂಬಂಧಿಸಿದ ಮಾಹಿತಿ ಭಂಡಾರದ ಬುಡಮೇಲು ಮಾಡುವಿಕೆಗೆ ತೊಡಗಿಸಿಕೊಂಡ ಆತ, ವೈರ್‌ಷಾರ್ಕ್ ತಂತ್ರಾಂಶದ ಮಾಹಿತಿ ಭಂಡಾರದ ಬುಡಮೇಲು ಮಾಡುವಿಕೆಗಾಗಿರುವ ಆಧಾರವಾಗಿ ಅದನ್ನು ಬಳಸಿದ.
ಎಥೆರಿಯಲ್ ತಂತ್ರಾಂಶದ ಅಭಿವೃದ್ಧಿಯು ನಿಂತುಹೋಯಿತು, ಹಾಗೂ ವೈರ್‌ಷಾರ್ಕ್ ತಂತ್ರಾಂಶಕ್ಕೆ ಬದಲಿಸಿಕೊಳ್ಳುವುದು ಯೋಗ್ಯವೆಂದು ಎಥೆರಿಯಲ್ ಭದ್ರತಾ ಸಲಹಾಸಮಿತಿಯು ಶಿಫಾರಸು ಮಾಡಿತು.[೨]
eWEEK ಲ್ಯಾಬ್ಸ್ ಸಂಸ್ಥೆಯು ವೈರ್‌ಷಾರ್ಕ್‌ನ್ನು 2007ರ ಮೇ 2ರಲ್ಲಿದ್ದಂತೆ "ಅತ್ಯಂತ ಪ್ರಮುಖವಾದ ಸಾರ್ವಕಾಲಿಕ ಮುಕ್ತ-ಮೂಲದ ಅನ್ವಯಿಕೆಗಳಲ್ಲಿ ಒಂದು" ಎಂದು ಹೆಸರಿಸಿದೆ.[೩]
ವೈಶಿಷ್ಟ್ಯಗಳು
[ಬದಲಾಯಿಸಿ]ಒಂದೇ ತೆರನಲ್ಲದ ಜಾಲಬಂಧ ಸ್ಥಾಪನೆಯ ವಿಧ್ಯುಕ್ತ ನಿರೂಪಣೆಗಳ ರಚನೆಗಳನ್ನು "ಅರ್ಥಮಾಡಿಕೊಳ್ಳುವ" ತಂತ್ರಾಂಶವೆಂದು ವೈರ್‌ಷಾರ್ಕ್ ಹೆಸರುಪಡೆದಿದೆ. ಈ ರೀತಿಯಾಗಿ ಸಂಪುಟೀಕರಣ ಮತ್ತು ಕ್ಷೇತ್ರಗಳನ್ನು, ವಿಭಿನ್ನವಾದ ಜಾಲಬಂಧ ಸ್ಥಾಪನೆಯ ವಿಧ್ಯುಕ್ತ ನಿರೂಪಣೆಗಳಿಂದ ಸ್ಪಷ್ಟವಾಗಿ ನಮೂದಿಸಲ್ಪಟ್ಟ ವಿಭಿನ್ನ ದತ್ತಾಂಶ ವಿಭಾಗಗಳಿಗೆ ಸಂಬಂಧಿಸಿದ ಅವುಗಳ ಅರ್ಥಗಳೊಂದಿಗೆ ಪ್ರದರ್ಶಿಸಲು ಅದಕ್ಕೆ ಸಾಧ್ಯವಾಗುತ್ತದೆ. ದತ್ತಾಂಶ ವಿಭಾಗಗಳನ್ನು ಹಿಡಿದಿಡುವ ಸಲುವಾಗಿ ವೈರ್‌ಷಾರ್ಕ್ ತಂತ್ರಾಂಶವು pcapನ್ನು ಬಳಸುತ್ತದೆ. ಇದರಿಂದಾಗಿ pcapನ್ನು ಬೆಂಬಲಿಸುವ ಜಾಲಬಂಧಗಳ ವಿಧಗಳ ಮೇಲೆ ಮಾತ್ರವೇ ದತ್ತಾಂಶ ವಿಭಾಗಗಳನ್ನು ಹಿಡಿದಿಡಲು ಇದಕ್ಕೆ ಸಾದ್ಯವಾಗುತ್ತದೆ.
- ಜಾಲಬಂಧವೊಂದರ ಪ್ರತ್ಯಕ್ಷ ಅಥವಾ ನೇರ ಸಂಪರ್ಕವೊಂದರಿಂದ ಬಂದ "ತಂತಿಯಿಂದ" ದತ್ತಾಂಶವನ್ನು ಹಿಡಿದಿಡಬಹುದು ಅಥವಾ ಈಗಾಗಲೇ ಹಿಡಿದಿಡಲಾದ ದತ್ತಾಂಶ ವಿಭಾಗಗಳನ್ನು ದಾಖಲಿಸಿಕೊಂಡಿರುವ ಕಡತವೊಂದರಿಂದ ದತ್ತಾಂಶವನ್ನು ಓದಬಹುದು.
- ಪ್ರತ್ಯಕ್ಷ ದತ್ತಾಂಶವನ್ನು ಅನೇಕ ಬಗೆಯ ಜಾಲಬಂಧಗಳಿಂದ ಓದಲು ಸಾಧ್ಯವಿದ್ದು, ಎಥರ್‌ನೆಟ್, IEEE 802.11, PPP, ಮತ್ತು ಲೂಪ್‌ಬ್ಯಾಕ್ ಮೊದಲಾದವು ಅದರಲ್ಲಿ ಸೇರಿವೆ.
- ಹಿಡಿದಿಡಲಾದ ಜಾಲಬಂಧದ ದತ್ತಾಂಶವನ್ನು ಒಂದು GUI ಮೂಲಕ, ಅಥವಾ ಬಳಕೆಯ ಅಂತಿಮ (ಆದೇಶ ಸರಣಿ) ರೂಪಾಂತರದವಾದ tsharkನ ಮೂಲಕ ಅವಲೋಕಿಸಬಹುದಾಗಿದೆ.
- "editcap" ಪ್ರೋಗ್ರಾಂಗಿರುವ ಆದೇಶ-ಸರಣಿ ಸ್ವಿಚ್ಚುಗಳನ್ನು ಬಳಸುವ ಮೂಲಕ, ಹಿಡಿದಿಡಲಾದ ಕಡತಗಳನ್ನು ಸರಣಿಬದ್ಧವಾಗಿ ಪರಿಷ್ಕರಿಸಬಹುದು ಅಥವಾ ರೂಪಾಂತರಿಸಬಹುದು.
- ಒಂದು ಪ್ರದರ್ಶಿಕಾ ಶೋಧಕ ವ್ಯವಸ್ಥೆಯನ್ನು ಬಳಸುವ ಮೂಲಕ ದತ್ತಾಂಶದ ಪ್ರದರ್ಶಿಕೆಯನ್ನು ಸಂಸ್ಕರಿಸಬಹುದಾಗಿದೆ.
- ಹೊಸ ವಿಧ್ಯುಕ್ತ ನಿರೂಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಪ್ಲಗ್-ಇನ್‌ಗಳನ್ನು ಸೃಷ್ಟಿಸಬಹುದು.
libpcap ಸ್ವರೂಪವು ವೈರ್‌ಷಾರ್ಕ್‌ನ ಸ್ಥಳೀಯ ಜಾಲಬಂಧದ ಜಾಡಿನ ಕಡತದ ಸ್ವರೂಪವಾಗಿದ್ದು, ಇದು libpcap ಮತ್ತು WinPcapನಿಂದ ಬೆಂಬಲಿಸಲ್ಪಡುತ್ತದೆ. ಆದ್ದರಿಂದ ಆ ಸ್ವರೂಪವನ್ನು ಬಳಸುವ tcpdump ಮತ್ತು CA NetMasterನಂಥ ಅನ್ವಯಿಕೆಗಳಿಂದ ಬಂದ ಹಿಡಿದಿಡಲಾದ ಕಡತಗಳನ್ನು ಇದು ಓದಬಲ್ಲುದಾಗಿರುತ್ತದೆ, ಮತ್ತು ಹಿಡಿದಿಡಲ್ಪಟ್ಟ ದತ್ತಾಂಶಗಳ ಕಡತಗಳನ್ನು ಓದಲು libpcap ಅಥವಾ WinPcapನ್ನು ಬಳಸುವ ಅನ್ವಯಿಕೆಗಳಿಂದ ಇದರ ಹಿಡಿದಿಡಲ್ಪಟ್ಟ ದತ್ತಾಂಶಗಳನ್ನು ಓದಬಹುದಾಗಿದೆ. snoop, ನೆಟ್‌ವರ್ಕ್ ಜನರಲ್‌ನ Sniffer, ಮತ್ತು ಮೈಕ್ರೋಸಾಫ್ಟ್ ನೆಟ್‌ವರ್ಕ್ ಮಾನಿಟರ್‌ನಂಥ ಇತರ ಜಾಲಬಂಧ ವಿಶ್ಲೇಷಕಗಳಿಂದ ಬಂದ ಹಿಡಿದಿಟ್ಟ ದತ್ತಾಂಶಗಳನ್ನೂ ಇದು ಓದಬಲ್ಲದು.
ಭದ್ರತೆ
[ಬದಲಾಯಿಸಿ]ಇಂಟರ್‌ಫೇಸ್ ಒಂದರಿಂದ ಜಾಲಬಂಧದ ಕಚ್ಚಾ ದಟ್ಟಣೆಯ ಹಿಡಿದಿಡುವಿಕೆಗೆ ಕೆಲವು ವೇದಿಕೆಯ ಮೇಲಿನ ವಿಶೇಷ ಸೌಲಭ್ಯಗಳು ಅಗತ್ಯವಾಗಿರುತ್ತವೆ. ಈ ಕಾರಣಕ್ಕಾಗಿ, ಎಥೆರಿಯಲ್/ವೈರ್‌ಷಾರ್ಕ್ ಮತ್ತು tethereal/tsharkನ ಹಳೆಯ ಆವೃತ್ತಿಗಳನ್ನು ಅಧಿಕ ಬಳಕೆದಾರ ಸೌಲಭ್ಯಗಳೊಂದಿಗೆ ಹಲವು ಬಾರಿ ನಡೆಸಲಾಗುತ್ತದೆ. ವಿಧ್ಯುಕ್ತ ನಿರೂಪಣೆಯ ಕೂಲಂಕಷ ವಿಶ್ಲೇಷಕಗಳನ್ನು, ಅವುಗಳ ವಿಧ್ಯುಕ್ತ ನಿರೂಪಣೆಗಾಗಿರುವ ದಟ್ಟಣೆಯು ಹಿಡಿದಿಡಲ್ಪಟ್ಟಾಗ ಕರೆಯಲಾಗುತ್ತದೆ. ಇಂಥ ಬೃಹತ್ ಸಂಖ್ಯೆಯ ವಿಶ್ಲೇಷಕಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ವಿಶ್ಲೇಷಕವೊಂದರಲ್ಲಿನ ನ್ಯೂನತೆಯಿಂದಾಗಿ ಇದೊಂದು ಗಂಭೀರ ಸ್ವರೂಪದ ಭದ್ರತಾ ಅಪಾಯವನ್ನೊಡ್ಡಬಹುದು. ಹಿಂದಿದ್ದ ಬೃಹತ್ ಸಂಖ್ಯೆಯ ಖಂಡನೀಯತೆಗಳ ಅಥವಾ ಭೇದ್ಯತೆಗಳ ಕಾರಣದಿಂದಾಗಿ (ಅವುಗಳ ಪೈಕಿ ಅನೇಕವು ದೂರದ ಸಂಕೇತ ನಿರ್ವಹಣೆಗೆ ಅನುವುಮಾಡಿಕೊಟ್ಟಿವೆ) ಮತ್ತು ಉತ್ತಮ ರೀತಿಯಲ್ಲಿನ ಭವಿಷ್ಯದ ಅಭಿವೃದ್ಧಿಯನ್ನು ಕುರಿತಾದ ಅಭಿವರ್ಧಕರ ಸಂದೇಹಗಳ ಕಾರಣದಿಂದಾಗಿ, OpenBSDಯು ತನ್ನ ಉತ್ಪನ್ನಗಳ ಶ್ರೇಣಿಯಿಂದ ಎಥೆರಿಯಲ್‌ನ್ನು, ತನ್ನ 3.6 ಆವೃತ್ತಿಯ ಬಿಡುಗಡೆಗೆ ಮುಂಚಿತವಾಗಿಯೇ ತೆಗೆದುಹಾಕಿದೆ.[೪]
tcpdumpನ್ನು ಅಥವಾ ವೈರ್‌ಷಾರ್ಕ್‌ನೊಂದಿಗೆ ಬರುವ dumpcap ಸೌಕರ್ಯವನ್ನು ನಡೆಸುವುದು ಒಂದು ಸಂಭವನೀಯ ಪರ್ಯಾಯ ವಿಧಾನವಾಗಿದೆ. ಕಡತವೊಂದರೊಳಗೆ ದತ್ತಾಂಶ ವಿಭಾಗಗಳನ್ನು ಹಿಡಿದಿಡುವ ಅಧಿಕ ಬಳಕೆದಾರ ಸೌಕರ್ಯಗಳು ಇದರಲ್ಲಿದ್ದು, ಅವು ನಂತರ ಈ ದತ್ತಾಂಶ ವಿಭಾಗಗಳನ್ನು ವಿಶ್ಲೇಷಿಸುತ್ತವೆ. ಇದಕ್ಕಾಗಿ ಅವು ದತ್ತಾಂಶ ವಿಭಾಗದ ಹಿಡಿದಿಡುವಿಕೆಯ ದಪ್ಪ ಕಡತದ ಮೇಲಿನ ನಿರ್ಬಂಧಿತ ಸೌಕರ್ಯಗಳೊಂದಿಗಿನ ವೈರ್‌ಷಾರ್ಕ್ ತಂತ್ರಾಂಶವನ್ನು ಬಳಸುತ್ತವೆ. ನಿಸ್ತಂತು ಜಾಲಬಂಧಗಳ ಮೇಲೆ, IEEE 802.11 ರಚನೆಗಳನ್ನು ಹಿಡಿದಿಡಲು ಮತ್ತು ತತ್ಫಲವಾಗಿ ಕಂಡುಬರುವ ದಪ್ಪ ಕಡತಗಳನ್ನು ವೈರ್‌ಷಾರ್ಕ್ ನೆರವಿನೊಂದಿಗೆ ಓದಲು ಏರ್‌ಕ್ರ್ಯಾಕ್ ನಿಸ್ತಂತು ಭದ್ರತಾ ಸಾಧನಗಳನ್ನು ಬಳಸುವುದು ಸಾಧ್ಯವಿದೆ.
ವೈರ್‌ಷಾರ್ಕ್ 0.99.7, ಆವೃತ್ತಿಯವರೆಗೆ ಇದ್ದಂತೆ, ದಟ್ಟಣೆಯ ಹಿಡಿದಿಡುವಿಕೆಯನ್ನು ಕೈಗೊಳ್ಳಲು, ವೈರ್‌ಷಾರ್ಕ್ ಮತ್ತು tsharkಗಳು dumpcapನ್ನು ನಡೆಸುತ್ತವೆ. ದಟ್ಟಣೆಯನ್ನು ಹಿಡಿದಿಡಲು ವಿಶೇಷವಾದ ಸೌಕರ್ಯಗಳು ಅಗತ್ಯವಿರುವ ವೇದಿಕೆಯ ಮೇಲೆ, ಆ ವಿಶೇಷ ಸೌಕರ್ಯಗಳೊಂದಿಗೆ ನಡೆಯಲು ಕೇವಲ dumpcapನ್ನು ಮಾತ್ರವೇ ನೆಲೆಗೊಳಿಸಬೇಕಾಗುತ್ತದೆ - ವೈರ್‌ಷಾರ್ಕ್ ಆಗಲೀ ಅಥವಾ tshark ಆಗಲೀ ವಿಶೇಷ ಸೌಕರ್ಯಗಳೊಂದಿಗೆ ನಡೆಯುವುದು ಅಗತ್ಯವಿರುವುದಿಲ್ಲ, ಮತ್ತು ಅವುಗಳ ಪೈಕಿ ಯಾವುದನ್ನೂ ವಿಶೇಷ ಸೌಕರ್ಯಗಳೊಂದಿಗೆ ನಡೆಸಲಾಗುವುದಿಲ್ಲ.
ಆಕರಗಳು
[ಬದಲಾಯಿಸಿ]- ↑ "What's up with the name change? Is Wireshark a fork?". Wireshark: Frequently Asked Questions. Retrieved 2007-11-09.
- ↑ "Ethereal: enpa-sa-00024". Archived from the original on 2010-01-02. Retrieved 2010-03-23.
- ↑ "The Most Important Open-Source Apps of All Time - Wireshark". eWeek. Retrieved 2007-11-09.[ಶಾಶ್ವತವಾಗಿ ಮಡಿದ ಕೊಂಡಿ]
- ↑ "CVS log for ports/net/Ethereal/Attic/Makefile". Archived from the original on 2020-04-01. Retrieved 2022-10-19.
ಗ್ರಂಥಸೂಚಿ
[ಬದಲಾಯಿಸಿ]- Orebaugh, Angela; Ramirez, Gilbert; Beale, Jay (February 14, 2007), Wireshark & Ethereal Network Protocol Analyzer Toolkit, Syngress, p. 448, ISBN 1597490733
- Sanders, Chris (May 23, 2007), Practical Packet Analysis: Using Wireshark to Solve Real-World Network Problems, No Starch Press, p. 192, ISBN 1593271492
ಹೊರಗಿನ ಕೊಂಡಿಗಳು
[ಬದಲಾಯಿಸಿ]- ವೈರ್‌ಷಾರ್ಕ್ ಅಧಿಕೃತ ಜಾಲತಾಣ
- ವೈರ್‌ಷಾರ್ಕ್ ವಿಕಿ
- Wireshark on SourceForge.net
- ಎಥೆರಿಯಲ್ ತನ್ನ ಹೆಸರನ್ನು ವೈರ್‌ಷಾರ್ಕ್ ಎಂದು ಬದಲಿಸಿಕೊಳ್ಳುತ್ತದೆ — ಅಭಿವರ್ಧಕ ಜೆರಾಲ್ಡ್ ಕಾಂಬ್ಸ್ನ ಅಭಿಪ್ರಾಯ.
- ದಿ ಬೆಸ್ಟ್ ಆಫ್ ಟಾಪ್ ಟೆನ್ ಪ್ಯಾಕೆಟ್ ಸ್ನಿಫರ್ 2010 Archived 2013-02-08 ವೇಬ್ಯಾಕ್ ಮೆಷಿನ್ ನಲ್ಲಿ.
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಅಕ್ಟೋಬರ್ 2022
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Commons link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಜಾಲಬಂಧ ವಿಶ್ಲೇಷಕಗಳು
- GTK
- ಮುಕ್ತಮೂಲದ ಜಾಲಬಂಧ ನಿರ್ವಹಣಾ ತಂತ್ರಾಂಶ
- ಯುನಿಕ್ಸ್ ಜಾಲಬಂಧ-ಸಂಬಂಧಿತ ತಂತ್ರಾಂಶ
- ವಿಂಡೋಸ್ ತಂತ್ರಾಂಶ
- C ಭಾಷೆಯಲ್ಲಿ ಪ್ರೋಗ್ಯಾಮ್ ಮಾಡಲಾಗಿರುವ ಉಚಿತ ತಂತ್ರಾಂಶ
- ಮಿಶ್ರ-ವೇದಿಕೆಯ ಉಚಿತ ತಂತ್ರಾಂಶ
- Lua-ಬರೆಯಬಹುದಾದ ತಂತ್ರಾಂಶ