ವೇದಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ವೈದಿಕ ಧರ್ಮದಲ್ಲಿ, ವೇದಿ ಪದವು ಬಲಿಪೀಠವನ್ನು ಸೂಚಿಸುತ್ತದೆ. ಅಂತಹ ಬಲಿಪೀಠಗಳು ಎತ್ತರಿಸಿದ ಆವರಣಗಳಾಗಿರುತ್ತಿದ್ದವು. ಇವುಗಳಲ್ಲಿ ಸಾಮಾನ್ಯವಾಗಿ ಕುಶ ಹುಲ್ಲನ್ನು ಹರಡಿರಲಾಗುತ್ತಿತ್ತು, ಮತ್ತು ಯಾಗದ ಅಗ್ನಿಗೆ ಕುಳಿಯನ್ನು ಹೊಂದಿರುತ್ತಿದ್ದವು; ಇದು ವಿವಿಧ ಆಕಾರಗಳದ್ದಾಗಿರುತ್ತಿತ್ತು, ಆದರೆ ಸಾಮಾನ್ಯವಾಗಿ ಮಧ್ಯದ ಭಾಗದಲ್ಲಿ ಕಿರಿದಾಗಿರುತ್ತಿತ್ತು.

  • ಮಹಾವೇದಿ, ಬೃಹತ್ ಅಥವಾ ಸಂಪೂರ್ಣ ವೇದಿ
  • ಉತ್ತರವೇದಿ, ಪವಿತ್ರ ಅಗ್ನಿಗಾಗಿ ನಿರ್ಮಿಸಲಾಗಿರುವ ಉತ್ತರ ದಿಕ್ಕಿನ ಬಲಿಪೀಠ (ಅಗ್ನ್ಯಾಯತನ)
    ವೈದಿಕ ಯಜ್ಞವೇದಿ
  • ಧಿಷ್ಣ್ಯ, ಒಂದು ಬಗೆಯ ಅಮುಖ್ಯ ಅಥವಾ ಬದಿಯ ಬಲಿಪೀಠ, ಸಾಮಾನ್ಯವಾಗಿ ಮರಳಿನಿಂದ ಮುಚ್ಚಿದ ಮಣ್ಣಿನ ರಾಶಿಯಾಗಿರುತ್ತದೆ, ಇದರ ಮೇಲೆ ಅಗ್ನಿಯನ್ನು ಇರಿಸಲಾಗುತ್ತದೆ
  • ದ್ರೋಣ, ತೊಟ್ಟಿಯಂತೆ ಆಕಾರವುಳ್ಳ ಬಲಿಪೀಠ (ಶುಲ್ಭಸೂತ್ರ. 3.216)
  • ಅಧ್ವರಧಿಷ್ಣ್ಯ, ಸೋಮಯಜ್ಞದಲ್ಲಿ ಎರಡನೇ ವೇದಿ

ವೈದಿಕ ಬಲಿಪೀಠಗಳನ್ನು ಕಲ್ಪದ (ಯಜ್ಞವನ್ನು ಸರಿಯಾಗಿ ಮಾಡುವುದನ್ನು ತಿಳಿಸುತ್ತವೆ) ಬಗ್ಗೆ ಇರುವ ವೇದಗಳಿಗೆ ಸಂಬಂಧಿಸಿದ ಪಠ್ಯಗಳಲ್ಲಿ ವರ್ಣಿಸಲಾಗಿದೆ. ಇದರಲ್ಲಿ ಗಮನಾರ್ಹವಾದವುಗಳೆಂದರೆ ಶತಪಥ ಬ್ರಾಹ್ಮಣ ಮತ್ತು ಸುಲ್ಬಸೂತ್ರಗಳು. ಋಗ್ವೇದವು ಮಂತ್ರಗಳ ವೇದಿಗೆ ಸಮಾನವಾಗಿವೆ ಎಂದು ಸುಲ್ಬಸೂತ್ರಗಳು ಹೇಳುತ್ತವೆ.[೧]

ಉಲ್ಲೇಖಗಳು[ಬದಲಾಯಿಸಿ]

  1. BSS 7, ASS 14.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ವೇದಿ&oldid=924403" ಇಂದ ಪಡೆಯಲ್ಪಟ್ಟಿದೆ