ಕಲ್ಪ (ವೇದಾಂಗ)
Jump to navigation
Jump to search
( ವಿಜ್ಞಾನದಲ್ಲಿ ಕಾಲವನ್ನು ಅಳೆಯುವ ಮಾನಕ ಕಲ್ಪಕ್ಕೆ ಕಲ್ಪ (ಕಾಲಾವಧಿ) ನೋಡೀ)
ಕಲ್ಪ ಧರ್ಮಾಚರಣೆಯನ್ನು ನಿರೂಪಿಸುವ ವೇದಾಂಗಗಳ ಆರು ಶಾಖೆಗಳ ಪೈಕಿ ಒಂದು. ಸಂಪ್ರದಾಯವು ವೇದಾಂಗದ ಈ ಶಾಖೆಯಲ್ಲಿ ಯಾವುದೇ ವಿಶೇಷ ಕೃತಿಯನ್ನು ಸೂಚಿಸುವುದಿಲ್ಲವಾದರೂ, ಬಲಿಯಾಚರಣೆಯು ಹಲವಾರು ಪುರೋಹಿತರ ವರ್ಗಗಳಿಗೆ ದೊಡ್ಡ ಸಂಖ್ಯೆಯ ವ್ಯವಸ್ಥಿತ ಸೂತ್ರಗಳ ಹುಟ್ಟಿಗೆ ಕಾರಣವಾಯಿತು. ಇವುಗಳಲ್ಲಿ ಅನೇಕ ಕೃತಿಗಳು ಸಾಗಿ ಬಂದಿವೆ, ಮತ್ತು ಅವು ಸೂತ್ರ ಅವಧಿಯ ಸಾಹಿತ್ಯಕ ನಿರ್ಮಾಣಗಳಲ್ಲಿ ನಿಸ್ಸಂಶಯವಾಗಿ ಅತ್ಯಂತ ಪ್ರಮುಖ ಸ್ಥಾನವನ್ನು ಅಲಂಕರಿಸುತ್ತವೆ.