ವಿಷಯಕ್ಕೆ ಹೋಗು

ವೆರಿಝೋನ್ ಕಮ್ಯುನಿಕೇಶನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Verizon Communications Inc.
ಸಂಸ್ಥೆಯ ಪ್ರಕಾರPublic (NYSEVZ, NASDAQVZ)
Dow Jones Industrial Average Component
ಸ್ಥಾಪನೆ1983 as Bell Atlantic
2000 as Verizon Communications, merger of Bell Atlantic and GTE
ಮುಖ್ಯ ಕಾರ್ಯಾಲಯVerizon Building
Lower Manhattan, ನ್ಯೂ ಯಾರ್ಕ್ ನಗರ
ಪ್ರಮುಖ ವ್ಯಕ್ತಿ(ಗಳು)Ivan Seidenberg, Chairman/CEO
ಉದ್ಯಮTelecommunications
ಸೇವೆಗಳುWireless
Telephone
Internet
Television
ಆದಾಯ $107.808 billion (2009)[]
ನಿವ್ವಳ ಆದಾಯ $6.707 billion (2009)
ಒಟ್ಟು ಆಸ್ತಿ $227.251 billion (2009)
ಒಟ್ಟು ಪಾಲು ಬಂಡವಾಳ $41.606 billion (2009)
ಉದ್ಯೋಗಿಗಳು222,900 (as of 2009[[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]])
ಜಾಲತಾಣVerizon.com
ವೆರಿಝೋನ್ ಕೇಂದ್ರಕಚೇರಿ ವೆರಿಝೋನ್ ಬಿಲ್ಡಿಂಗ್್ನ ದಕ್ಷಿಣ ಮುಖ, 2005ರಲ್ಲಿ
ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ ದಾಳಿಯಲ್ಲಿ ವಿಮಾನದ ಅವಶೇಷಗಳು ಬಿದ್ದು ವೆರಿಝೋನ್ ಬಿಲ್ಡಿಂಗಿಗೆ ಆಗಿರುವ ಹಾನಿಯ ಹತ್ತಿರದ ನೋಟ

ವೆರಿಝೋನ್ ಕಮ್ಯುನಿಕೇಶನ್ಸ್ ಐಎನ್್ಸಿ (NYSEVZ, NASDAQVZ) ಅಮೆರಿಕದ ಒಂದು ಬ್ರಾಡ್್ಬ್ಯಾಂಡ್ ಮತ್ತು ಟೆಲಿಕಮ್ಯುನಿಕೇಶನ್ಸ್ ಕಂಪನಿ. ಮತ್ತು ಡವ್ ಜೋನ್ಸ್ ಇಂಡಸ್ಟ್ರಿಯಲ್ ಅವೆರೇಜ್್ನ ಒಂದು ಘಟಕ. ಇದನ್ನು 1983ರಲ್ಲಿ ಬೆಲ್ ಅಟ್ಲಾಂಟಿಕ್ ಎಂದು ಸ್ಥಾಪಿಸಲಾಯಿತು. 1984ರಲ್ಲಿ ಎಟಿ ಮತ್ತು ಟಿ ವಿಭಜನೆಗೊಂಡು ಏಳು ಬೇಬಿ ಬೆಲ್ ್ಗಳಾದವು. ವೆರಿಝೋನ್್ ಆಗಿ ಬದಲಾಗುವುದಕ್ಕೆ ಮೊದಲು ಬೆಲ್್ ಆಟ್ಲಾಂಟಿಕ್ ಇನ್ನೊಂದು ಪ್ರಾದೇಶಿಕ ಬೆಲ್ ನಿರ್ವಹಣೆ ಕಂಪನಿ NYNEX ಜೊತೆ 1997ರಲ್ಲಿ ವಿಲೀನಗೊಂಡಿತ್ತು, ಇದರ ಹೆಸರು ವೆರಿಟಾಸ್ ಮತ್ತು ಹೊರಿಝೋನ್ ಎರಡರ ಸಂಕರ ಪದ[]. ಮತ್ತು ಇದರ ಉಚ್ಚಾರಣೆಯು ಹೊರಿಝೋನ್ ನಾದವನ್ನು ಹೊರಡಿಸುತ್ತದೆ. ಕಂಪನಿಯ ಕೇಂದ್ರ ಕಚೇರಿಯು ನ್ಯೂ ಯಾರ್ಕ್ ಸಿಟಿಯ ಲೋವರ್ ಮ್ಯಾನ್್ಹಟ್ಟನ್್ನ ವೆರಿಝೋನ್್ ಕಟ್ಟಡದಲ್ಲಿದೆ.[]

ಇತಿಹಾಸ

[ಬದಲಾಯಿಸಿ]

ವೆರಿಝೋನ್ ಕಂಪನಿಯನ್ನು ಸ್ಥಾಪಿಸಿದ್ದು ಎಟಿ ಮತ್ತು ಟಿ ಕಾರ್ಪೋರೇಶನ್. ಇದನ್ನು ಬೆಲ್ ಅಟ್ಲಾಂಟಿಕ್ ಕಾರ್ಪೋರೇಶನ್ ಎಂದು ಕರೆಯಲಾಯಿತು, ಇದು ಏಳು ಬೇಬಿ ಬೆಲ್್ಗಳಲ್ಲಿ ಒಂದು. ಎಟಿ ಮತ್ತು ಟಿ ಕಾರ್ಪೋರೇಶನ್ ವಿರುದ್ಧ ಬಂದ ಅವಿಶ್ವಾಸ ತೀರ್ಪಿನ ಹಿನ್ನೆಲೆಯಲ್ಲಿ ಈ ಹೊಸ ಕಂಪನಿಗಳು ಹುಟ್ಟಿಕೊಂಡವು. ತನ್ನ ವಿಭಜನೆ ಬಳಿಕ ಅಮೆರಿಕನ್ ಟೆಲಿಫೋನ್ ಆ್ಯಂಡ್ ಟೆಲಿಗ್ರಾಫ್ ಕಂಪನಿ(ನಂತರ ಇದು ಎಟಿ ಮತ್ತು ಟಿ ಕಾರ್ಪೋ. ಎಂದು ಪ್ರಸಿದ್ಧ)ಯಿಂದ ಏಳು ಬೆಲ್ ಆಪರೇಟಿಂಗ್ ಕಂಪನಿಗಳನ್ನು ಇದು ಹುಟ್ಟುಹಾಕಿತು. ಬೆಲ್ ಅಟ್ಲಾಂಟಿಕ್್ನ ಮೂಲ ಸರದಿ ಪಟ್ಟಿಯಲ್ಲಿರುವ ಕಾರ್ಯನಿರ್ವಹಣೆಯ ಕಂಪನಿಗಳಲ್ಲಿ ಇವು ಸೇರಿವೆ:

  • ದಿ ಬೆಲ್ ಟೆಲಿಫೋನ್ ಕಂಪನಿ ಆಫ್ ಪೆನ್ಸಿಲ್ವೇನಿಯಾ
  • ನ್ಯೂಜೆರ್ಸಿ ಬೆಲ್ ಟೆಲಿಫೋನ್ ಕಂಪನಿ
  • ದಿ ಡೈಮಂಡ್ ಸ್ಟೇಟ್ ಟೆಲಿಫೋನ್ ಕಂಪನಿ
  • ದಿ ಚೆಸಾಪೀಕೆ ಆ್ಯಂಡ್ ಪೊಟೋಮ್ಯಾಕ್ ಟೆಲಿಫೋನ್ ಕಂಪನಿ
  • ದಿ ಚೆಸಾಪೀಕೆ ಆ್ಯಂಡ್ ಪೋಟೋಮ್ಯಾಕ್ ಟೆಲಿಫೋನ್ ಕಂಪನಿ ಆಫ್ ಮೇರಿಲ್ಯಾಂಡ್
  • ದಿ ಚೆಸಾಪೀಕೆ ಆ್ಯಂಡ್ ಪೊಟೋಮ್ಯಾಕ್ ಟೆಲಿಫೋನ್ ಕಂಪನಿ ಆಫ್ ವರ್ಜಿನಿಯಾ
  • ದಿ ಚೆಸಾಪೀಕೆ ಆ್ಯಂಡ್ ಪೊಟೋಮ್ಯಾಕ್ ಟೆಲಿಫೋನ್ ಕಂಪನಿ ಆಫ್ ವೆಸ್ಟ್ ವರ್ಜಿನಿಯಾ

ಬೆಲ್ ಅಟ್ಲಾಂಟಿಕ್ ಮೂಲತಃ ಅಮೆರಿಕದ ರಾಜ್ಯಗಳಾದ ನ್ಯೂ ಜೆರ್ಸಿ, ಪೆನ್ಸಿಲ್ವೇನಿಯಾ, ಡೆಲಾವೇರ್, ಮೇರಿಲ್ಯಾಂಡ್, ವೆಸ್ಟ್ ವರ್ಜಿನಿಯಾ ಮತ್ತು ವರ್ಜಿನಿಯಾ ಹಾಗೂ ವಾಷಿಂಗ್ಟನ್ ಡಿ.ಸಿ.ಯಿಂದ ಕಾರ್ಯನಿರ್ವಹಿಸುತ್ತಿತ್ತು.

1994ರಲ್ಲಿ ಬೆಲ್ ಅಟ್ಲಾಂಟಿಕ್ ತನ್ನ ಮೂಲ ಆಪರೇಟಿಂಗ್ ಕಂಪನಿಗಳ ಮೂಲ ಹೆಸರುಗಳನ್ನು ಇಡಿಯಾಗಿ ಕೈಬಿಟ್ಟು ಪ್ರಥಮ ಪ್ರಾದೇಶಿಕ ಬೆಲ್ ಆಪರೇಟಿಂಗ್ ಕಂಪನಿಯಾಯಿತು. ಅಮೆರಿಟೆಕ್ ಮತ್ತು NYNEX (ಮತ್ತು 2002ರಲ್ಲಿ ಎಸ್್ಬಿಸಿ ಕಮ್ಯೂನಿಕೇಶನ್ಸ್) ತಮ್ಮ ಕಾರ್ಯನಿರ್ವಹಣೆ ಕಂಪನಿಗಳಿಗೆ ಡಿ/ಬಿ/ಎ ಹೆಸರುಗಳನ್ನು ಸರಳವಾಗಿ ಸೇರಿಸಿಕೊಂಡವು. ಯು.ಎಸ್. ವೆಸ್ಟ್ ಮತ್ತು ಬೆಲ್್ಸೌಥ್ ತಮ್ಮ ಕಾರ್ಯನಿರ್ವಹಣೆ ಕಂಪನಿಗಳನ್ನು ವಿಲೀನಗೊಳಿಸಿದವು. ಕಾರ್ಯನಿರ್ವಹಣೆ ಕಂಪನಿಗಳ ಶೀರ್ಷಿಕೆಗಳನ್ನು ಈ ರೀತಿ ಸರಳಗೊಳಿಸಲಾಯಿತು:

  • ಬೆಲ್ ಅಟ್ಲಾಂಟಿಕ್- ಡೆಲಾವೇರ್, ಐಎನ್್ಸಿ.
  • ಬೆಲ್ ಅಟ್ಲಾಂಟಿಕ್- ಮೇರಿಲ್ಯಾಂಡ್, ಐಎನ್್ಸಿ.
  • ಬೆಲ್ ಅಟ್ಲಾಂಟಿಕ್- ನ್ಯೂ ಜೆರ್ಸಿ, ಐಎನ್್ಸಿ.
  • ಬೆಲ್ ಅಟ್ಲಾಂಟಿಕ್- ಪೆನ್ಸಿಲ್ವೇನಿಯಾ, ಐಎನ್್ಸಿ.
  • ಬೆಲ್ ಅಟ್ಲಾಂಟಿಕ್- ವರ್ಜಿನಿಯಾ, ಐಎನ್್ಸಿ.
  • ಬೆಲ್ ಅಟ್ಲಾಂಟಿಕ್- ವಾಷಿಂಗ್ಟನ್ ಡಿ.ಸಿ., ಐಎನ್್ಸಿ.
  • ಬೆಲ್ ಅಟ್ಲಾಂಟಿಕ್- ವೆಸ್ಟ್ ವರ್ಜಿನಿಯಾ, ಐಎನ್್ಸಿ.

1996ರಲ್ಲಿ, ಸಿಇಓ ಮತ್ತು ಚೇರ್ಮನ್ ರೇಮಂಡ್ ಡಬ್ಲ್ಯೂ. ಸ್ಮಿಥ್ NYNEX ಜೊತೆ ಬೆಲ್ ಅಟ್ಲಾಂಟಿಕ್್ನ ವಿಲೀನವನ್ನು ಸಂಯೋಜನೆಗೊಳಿಸಿದರು. ಈ ವಿಲೀನವಾದಕೂಡಲೆ ಅದು ತನ್ನ ಕಾರ್ಪೋರೇಟ್ ಕೇಂದ್ರ ಕಚೇರಿಯನ್ನು ಫಿಲಿಡೆಲ್ಫಿಯಾದಿಂದ ನ್ಯೂ ಯಾರ್ಕ್ ಸಿಟಿಗೆ ಬದಲಾಯಿಸಿದರು. 1997ರ ವೇಳೆಗೆ ಅದರ ಹೆಸರನ್ನು ಸೇರಿಸಿಕೊಳ್ಳುವ ಮೂಲಕ NYNEXಗೆ ಸಮಾಧಾನ ನೀಡಲಾಯಿತು.

ಜಿಟಿಇ ಜೊತೆಗಿನ ಈ ವಿಲೀನಕ್ಕೆ ಮೊದಲು ನ್ಯೂ ಯಾರ್ಕ್ ಸ್ಟಾಕ್ ಎಕ್ಸಚೇಂಜ್್(NYSE)ನಲ್ಲಿ ಬೆಲ್ ಅಟ್ಲಾಂಟಿಕ್ "ಬಿಇಎಲ್" ಸಂಕೇತದಲ್ಲಿ ವ್ಯಾಪಾರವಾಗುತ್ತಿತ್ತು.

ಜಿಟಿಇ ವಿಲೀನ

[ಬದಲಾಯಿಸಿ]

ಬೆಲ್ ಅಟ್ಲಾಂಟಿಕ್ ಜಿಟಿಇ ಜೊತೆ 30 ಜೂನ್ 2000ದಂದು ವಿಲೀನವಾಯಿತು. ಮತ್ತು ಹೆಸರನ್ನು ವೆರಿಝೋನ್ ಕಮ್ಯೂನಿಕೇಶನ್ಸ್ ಐಎನ್್ಸಿ. ಎಂದು ಬದಲಾಯಿಸಲಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನದ ವಾಣಿಜ್ಯದ ಇತಿಹಾಸದಲ್ಲಿಯೇ ಅತಿ ದೊಡ್ಡ ವಿಲೀನಗಳಲ್ಲಿ ಇದೂ ಒಂದು. 1996ರಲ್ಲಿ NYNEX ಜೊತೆ ವಿಲೀನವಾದ ಬಳಿಕ ನ್ಯೂ ಯಾರ್ಕ್್ನಲ್ಲಿ ನೆಲೆಯನ್ನು ಹೊಂದಿರುವ ಬೆಲ್ ಅಟ್ಲಾಂಟಿಕ್ ಮತ್ತು ಕಾನೆಕ್ಟಿಕಟ್್ನ ಸ್ಟ್ಯಾಮ್್ಫೋರ್ಡ್್ನಿಂದ ಟೆಕ್ಸಾಸ್್ನ ಇರ್ವಿಂಗ್್ಗೆ ಕೇಂದ್ರ ಕಚೇರಿಯನ್ನು ವರ್ಗಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದ ಜಿಟಿಇ ನಡುವೆ 1998ರ ಜುಲೈ 27ರಂದು ನಡೆದ ನಿರ್ಣಾಯಕ ವಿಲೀನ ಒಪ್ಪಂದದ ಪರಿಣಾಮ ಇದು.

ಬೆಲ್ ಅಟ್ಲಾಂಟಿಕ್- ಜಿಟಿಇ ವಿಲೀನ ಪ್ರಕಟಣೆಯ ಕಾಲಕ್ಕೆ 52 ಶತಕೋಟಿ ಡಾಲರ್್ಗೂ ಅಧಿಕ ಎಂದು ಮೌಲ್ಯಮಾಪನ ಮಾಡಲಾಗಿತ್ತು. ಬೆಲ್ ಅಟ್ಲಾಂಟಿಕ್ ಮತ್ತು ಜಿಟಿಇ ಷೇರುದಾರರ ಒಪ್ಪಿಗೆ 27 ಸ್ಟೇಟ್ ರೆಗ್ಯುಲೇಟರಿ ಕಮಿಶನ್್ಗಳ ಮತ್ತು ಫೆಡರಲ್ ಕಮ್ಯುನಿಕೇಶನ್ಸ್ ಕಮಿಶನ್ನಿನ (ಎಫ್್ಸಿಸಿ) ಒಪ್ಪಿಗೆ, ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯಾಯಾಂಗ ಇಲಾಖೆ (ಡಿಓಜೆ) ಮತ್ತು ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಅನುಮತಿ ಈ ಎಲ್ಲ ಪ್ರಕ್ರಿಯೆ ಮುಗಿಯಲು ಹತ್ತಿರಹತ್ತಿರ ಎರಡು ವರ್ಷಗಳು ಹಿಡಿದವು.

ವೆರಿಝೋನ್ ಕಮ್ಯುನಿಕೇಶನ್ಸ್ ಸ್ಥಾಪಿಸುವುದಕ್ಕಾಗಿ ಬೆಲ್ ಅಟ್ಲಾಂಟಿಕ್ ಮತ್ತು ಜಿಟಿಇ ವಿಲೀನಗೊಂಡಿದ್ದು, ಇದರ ಕಾರ್ಯಾಚರಣೆ 30 ಜೂನ್ 2000ದಿಂದ ಆರಂಭವಾಯಿತು. ವೆರಿಝೋನ್ ಕಮ್ಯುನಿಕೇಶನ್್ನ ಕಾಮನ್್ ಸ್ಟಾಕ್್ನ 1.22 ಷೇರುಗಳಿಗೆ ಜಿಟಿಇ ಕಾಮನ್ ಸ್ಟಾಕ್್ನ ಪ್ರತಿ ಷೇರು ಪ್ರಮಾಣದಲ್ಲಿ ವಿನಿಮಯ ದರವನ್ನು ನಿಗದಿ ಮಾಡಲಾಯಿತು. ಜಿಟಿಇ ಸ್ಟಾಕ್್ಗಳು ವೆರಿಝೋನ್ ಕಮ್ಯುನಿಕೇಶನ್ಸ್ ಷೇರುಗಳಾಗಿ ಬದಲಾದುದರಿಂದ ಉಂಟಾದ ಚಿಲ್ಲರೆ ಷೇರುಗಳನ್ನು ಪ್ರತಿ ಷೇರಿಗೆ 55 ಡಾಲರ್್ನಂತೆ ಮಾರಲಾಯಿತು. ವೆರಿಝೋನ್ NYSEಯಲ್ಲಿ ಹೊಸತಾದ "ವಿಝಡ್" ಸಂಕೇತದೊಂದಿಗೆ 3 ಜುಲೈ 2000ದಿಂದ ವ್ಯಾಪಾರವಾಗತೊಡಗಿತು.

ಈ ನಡುವೆ, 21 ಸೆಪ್ಟೆಂಬರ್ 1999ರಂದು ಬೆಲ್ ಅಟ್ಲಾಂಟಿಕ್ ಮತ್ತು ಇಂಗ್ಲಂಡ್ ಮೂಲದ ವೊಡಾಫೋನ್ ಏರ್ ಟಚ್ ಪಿಐಸಿ (ಈಗ ವೊಡಾಫೋನ್ ಗ್ರುಪ್ ಪಿಐಸಿ) ತಾವು ಒಂದು ಹೊಸದಾದ ವೈರ್್ಲೆಸ್ ಬಿಸಿನೆಸ್ ರಾಷ್ಟ್ರೀಯ ಹೆಜ್ಜೆಗುರುತಿನೊಂದಿಗೆ ಆರಂಭಿಸಲು ನಿರ್ಧರಿಸಿರುವುದಾಗಿ ಪ್ರಕಟಿಸಿದವು. ಇದು ಒಂದೇ ಬ್ರ್ಯಾಂಡ್ ಮತ್ತು ಸಾಮಾನ್ಯವಾದ ಡಿಜಿಟಲ್ ತಂತ್ರಜ್ಞಾನವನ್ನು ಹೊಂದಿರುತ್ತದೆ. ಇದು ಬೆಲ್ ಅಟ್ಲಾಂಟಿಕ್್ನ ಮತ್ತು ವೊಡಾಫೋನ್್ನ ಯು.ಎಸ್. ವೈರ್್ಲೆಸ್ ಅಸೆಟ್ಸ್ [ಬೆಲ್ ಅಟ್ಲಾಂಟಿಕ್ ಮೊಬೈಲ್ (ಇದನ್ನು ಮೊದಲು 1997ರಲ್ಲಿ ಬೆಲ್ ಅಟ್ಲಾಂಟಿಕ್ - NYNEX ಮೊಬೈಲ್ ಎಂದು ಕರೆಯುತ್ತಿದ್ದರು.), ಏರ್ ಟಚ್ ಸೆಲ್ಯುಲರ್, ಪ್ರೈಮ್್ಕೋ ಪರ್ಸನಲ್ ಕಮ್ಯುನಿಕೇಶನ್ಸ್ ಮತ್ತು ಏರ್ ಟಚ್ ಪೇಜಿಂಗ್] ಇವುಗಳ ಸಂಯೋಜನೆಯಾಗಿರುತ್ತದೆ. ಈ ವೈರ್್ಲೆಸ್್ ಜಂಟಿ ಉದ್ಯಮಕ್ಕೆ ನಿಯಂತ್ರಣ ಸಮ್ಮತಿಯು ಆರು ತಿಂಗಳೊಳಗೆ ಲಭಿಸಿತು. ಮತ್ತು 4 ಏಪ್ರಿಲ್ 2000ದಿಂದ ವೆರಿಝೋನ್ ವೈರ್್ಲೆಸ್್ ಎಂದು ಕಾರ್ಯಾಚರಣೆಯನ್ನು ಆರಂಭಿಸಿತು. "ವೆರಿಝೋನ್" ಎಂಬ ಹೊಸ ಬ್ರ್ಯಾಂಡ್ ನೇಮ್ ಚಾಲ್ತಿಗೆ ಬಂತು. ಜಿಟಿಇದ ವೈರ್್ಲೆಸ್ ಕಾರ್ಯಾಚರಣೆಯು ವೆರಿಝೋನ್ ವೈರ್್ಲೆಸ್್ನ ಭಾಗವಾಯಿತು. 2004ರಲ್ಲಿ ಸಿಂಗ್ಯುಲರ್ ವೈರ್್ಲೆಸ್್ಅನ್ನು ಎಟಿ ಮತ್ತು ಟಿ ವೈರ್್ಲೆಸ್್ ಖರೀದಿಸುವ ವರೆಗೂ ಇದು ದೇಶದ ಅತಿದೊಡ್ಡ ವೈರ್್ಲೆಸ್್ ಕಂಪನಿಯಾಗಿತ್ತು. - ಇದಾದ ಸುಮಾರು ಮೂರು ತಿಂಗಳ ಬಳಿಕ ಬೆಲ್ ಅಟ್ಲಾಂಟಿಕ್ - ಜಿಟಿಇ ವಿಲೀನ ಅಂತ್ಯಗೊಂಡಿತು. ಆಗ ವೆರಿಝೋನ್ ವೆರಿಝೋನ್ ವೈರ್್ಲೆಸ್್ನ ಮಾಲೀಕತ್ವದಲ್ಲಿ (55%) ಮೇಲುಗೈ ಸಾಧಿಸಿತ್ತು.

ಜೆನುಯಿಟಿ ಯು ಈ ಮೊದಲು ಜಿಟಿಇ ಕಾರ್ಪೋರೇಶನ್್ನ ಇಂಟರ್ನೆಟ್ ವಿಭಾಗವಾಗಿತ್ತು. ಮತ್ತು 2000ರಲ್ಲಿ ಅದನ್ನು ಆರಂಭಿಸಲಾಗಿತ್ತು.[] ಲೆವಲ್ ಥ್ರೀ ಕಮ್ಯುನಿಕೇಶನ್ಸ್ ದಿವಾಳಿಯಾಗಿದ್ದ ಐಎಸ್್ಪಿಯ ಆಸ್ತಿಯನ್ನು ಕೇವಲ 137 ದಶಲಕ್ಷ ಡಾಲರ್್ಗೆ ಸ್ವಾಧೀನಪಡಿಸಿಕೊಂಡಿತು; ಚೌಕಾಶಿಯ- ತಳ ಬೆಲೆಯು 616 ದಶಲಕ್ಷ ಡಾಲರ್ ಎಂದು ಪರಿಗಣಿಸಲಾಗಿತ್ತು. ಈ ಮೊತ್ತವು ಬೆಲ್ ಅಟ್ಲಾಂಟಿಕ್ ಜೊತೆ ವಿಲೀನವಾಗುವುದಕ್ಕೆ ಮೊದಲು ಜಿಟಿಇ ಜೆನಿಯಿಟಿಗೆ (ಆಗ ಬಿಬಿಎನ್ ಪ್ಲಾನೆಟ್) 1997ರಲ್ಲಿ ನೀಡಿದ್ದು.[]

ವಿಲೀನದ ಪರಿಣಾಮಗಳು

[ಬದಲಾಯಿಸಿ]

ಈ ವಿಭಾಗವು ಲ್ಯಾಂಡ್್ಲೈನ್್ಗಳಿಗೆ ಮಾತ್ರ ಸಂಬಂಧಿಸಿದ್ದು ಎಂಬುದನ್ನು ಗಮನಿಸಿ. ವೆರಿಝೋನ್ ವೈರ್್ಲೆಸ್ ದೇಶಾದ್ಯಂತ ಕಾರ್ಯಾಚರಣೆ ನಡೆಸುತ್ತಿದೆ.

2004ರ ಏಪ್ರಿಲ್ 8ರಂದು ವೆರಿಝೋನ್್ ಷೇರುಗಳನ್ನು ಡವ್ ಜೋನ್ಸ್ ಇಂಡಸ್ಟ್ರಿಯಲ್ ಅವೆರೇಜ್್ನ ಒಂದು ಘಟವನ್ನಾಗಿ ಮಾಡಲಾಯಿತು.[] ವೆರಿಝೋನ್ ಸದ್ಯ 140.3 ದಶಲಕ್ಷ ಲ್ಯಾಂಡ್್ಲೈನ್ ಸೇವೆಯನ್ನು ಹೊಂದಿದೆ. ಎಂಸಿಐ ಜೊತೆ ವಿಲೀನದಿಂದಾಗಿ ಅದು 2,50,000ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ. ಅಮೆರಿಕ ಸಂಯುಕ್ತ ಸಂಸ್ಥಾನದುದ್ದಕ್ಕೂ ಹೆಚ್ಚುಕಡಿಮೆ ವೆರಿಝೋನ್ ಗ್ರಾಹಕರಿಗೆ ಸೇವೆಯನ್ನು ನೀಡುತ್ತಿದೆ. ಇದು ಸೇವೆಯನ್ನು ಒದಗಿಸುವ ರಾಜ್ಯಗಲ್ಲಿ ಇವು ಸೇರಿವೆ:

(#) ಬೆಲ್ ಆಪರೇಟಿಂಗ್ ಕಂಪನಿಗಳಿಂದಲೂ ಸೇವೆಪಡೆಯುತ್ತವೆ (ಕೆಳಗೆ ನೋಡಿ)

ಈ ರಾಜ್ಯಗಳು ಈ ಕೆಳಗಿನ ಆಪರೇಟಿಂಗ್ ಕಂಪನಿಗಳಿಂದ ಸೇವೆಯನ್ನು ಪಡೆಯುತ್ತವೆ:

ಮರುನಾಮಕರಣಗೊಂಡ ಹಿಂದಿನ ಬೆಲ್ ಆಪರೇಟಿಂಗ್ ಕಂಪನಿಗಳು:

  • ವೆರಿಝೋನ್ ಡೆಲಾವೇರ್, ಐಎನ್್ಸಿ,- ಆಗ್ನೇಯ ಪೆನ್ಸಿಲ್ವೇನಿಯಾದ ಒಂದು ಭಾಗದಲ್ಲಿಯೂ ಸೇವೆ ನೀಡುತ್ತದೆ.
  • ವೆರಿಝೋನ್ ಮೇರಿಲ್ಯಾಂಡ್, ಐಎನ್್ಸಿ.
  • ವೆರಿಝೋನ್ ನ್ಯೂ ಇಂಗ್ಲಂಡ್ ಟೆಲಿಫೋನ್ ಆ್ಯಂಡ್ ಟೆಲಿಗ್ರಾಫ್, ಐಎನ್್ಸಿ,- (*) ಚಿಹ್ನೆಯೊಂದಿಗೆ ಗುರುತಿಸಲ್ಪಟ್ಟಿದೆ.
  • ವೆರಿಝೋನ್ ನ್ಯೂ ಜೆರ್ಸಿ, ಐಎನ್್ಸಿ.
  • ವೆರಿಝೋನ್ ನ್ಯೂ ಯಾರ್ಕ್ ಟೆಲಿಫೋನ್, ಐಎನ್್ಸಿ.- ನೈಋತ್ಯ ಕೊನೆಕ್ಟಿಕಟ್್ನಲ್ಲೂ ಸೇವೆ ಸಲ್ಲಿಸುತ್ತದೆ.
  • ವೆರಿಝೋನ್ ಪೆನ್ಸಿಲ್ವೇನಿಯಾ, ಐಎನ್್ಸಿ.
  • ವೆರಿಝೋನ್ ವರ್ಜಿನಿಯಾ, ಐಎನ್್ಸಿ.
  • ವೆರಿಝೋನೋ ವಾಷಿಂಗ್ಟನ್, ಡಿ.ಸಿ., ಐಎನ್್ಸಿ.

(ವೆರಿಝೋನದ ಮೂಲ ಸೇವಾಕ್ಷೇತ್ರವು ಪಶ್ಚಿಮ ವರ್ಜಿನಿಯಾವನ್ನು ಒಳಗೊಂಡಿದೆ. ವೆರಿಝೋನ್ ವಿಲೀನಕ್ಕೆ ಪೂರ್ವದಲ್ಲಿ ಬೆಲ್ ಅಟ್ಲಾಂಟಿಕ್ ವೆರಿಝೋನ್ ವೆಸ್ಟ್ ವರ್ಜಿನಿಯಾ, ಐಎನ್್ಸಿ. ಎಂಬ ಆಪರೇಟಿಂಗ್ ಕಂಪನಿ ಅಡಿಯಲ್ಲಿ ಸೇವೆಯನ್ನು ನೀಡುತ್ತಿತ್ತು. ಹೀಗಿದ್ದರೂ, ವೆರಿಝೋನ್ ತನ್ನ ಎಲ್ಲ ವೆಸ್ಟ್್ ವರ್ಜಿನಿಯಾ ವಯರ್ ಲೈನ್ ಆಸ್ತಿಯನ್ನು ಫ್ರಂಟೀಯರ್ ಕಮ್ಯುನಿಕೇಶನ್ಸ್್ಗೆ ದೊಡ್ಡ ಒಪ್ಪಂದದ ಭಾಗವಾಗಿ ಮಾರಾಟ ಮಾಡಿದ್ದು, ಈ ಒಪ್ಪಂದ 2010ರಲ್ಲಿ ಅಂತಿಮಗೊಂಡಿದೆ. (ಸ್ವಾಮ್ಯ ಹರಣ ವಿಭಾಗ ನೋಡಿ)

ಹಿಂದಿನ ಜಿಟಿಇ ಕಾರ್ಯನಿರ್ವಹಣೆ ಕಂಪನಿಗಳು:
  • ಜಿಟಿಇ ಸೌಥ್್ವೆಸ್ಟ್, ಐಎನ್್ಸಿ. ಡಿಬಿಎ ವೆರಿಜೋನ್ ಸೌಥ್್ವೆಸ್ಟ್, ಐಎನ್್ಸಿ. (^ ಚಿಹ್ನೆಯಿಂದ ಗುರುತಾಗಿದೆ)
  • ಜಿಟಿಇ ಫ್ಲೋರಿಡಾ, ಐಎನ್್ಸಿ. ಡಿಬಿಎ ವೆರಿಝೋನ್ ಫ್ಲೋರಿಡಾ, ಐಎನ್್ಸಿ.. (ಈ ಚಿಹ್ನೆಯಿಂದ ಗುರುತಾಗಿದೆ)
  • ವೆರಿಝೋನ್ ಸೌಥ್, ಐಎನ್್ಸಿ. ( ಈ ಚಿಹ್ನೆಯಿಂದ ಗುರುತಾಗಿದೆ)
  • ವೆರಿಝೋನ್ ನಾರ್ಥ್, ಐಎನ್್ಸಿ. (~ ಈ ಚಿಹ್ನೆಯಿಂದ ಗುರುತಾಗಿದೆ)
  • ವೆರಿಝೋನ್ ಕ್ಯಾಲಿಫೋರ್ನಿಯಾ, ಐಎನ್್ಸಿ. (& ಈ ಚಿಹ್ನೆಯಿಂದ ಗುರುತಾಗಿದೆ)

ವೆರಿಝೋನ್್ ಕೆಲವು ಅಂತಾರಾಷ್ಟ್ರೀಯ ಸಂಪರ್ಕ ಕಂಪನಿಗಳಲ್ಲಿಯೂ ತನ್ನ ಹಕ್ಕನ್ನು ಹೊಂದಿದೆ. ಅತ್ಯಂತ ಗಮನಾರ್ಹವಾದದ್ದು, ವೊಡಾಫೋನ್ ಇಟಲಿಯಲ್ಲಿ ಅದು 23.14% ಪಾಲನ್ನು ಹೊಂದಿರುವುದು. ವೆರಿಝೋನದ ಇತರ ಅಂತಾರಾಷ್ಟ್ರೀಯ ಹೂಡಿಕೆ, ಜಿಬ್ರಾಲ್ಟರ್ NYNEX ಕಮ್ಯುನಿಕೇಶನ್ಸ್್ನಲ್ಲಿ ಶೇ.50 ಪಾಲು.

ಸ್ವಾಮ್ಯಹರಣ

[ಬದಲಾಯಿಸಿ]

ಪ್ರತಿಕೂಲ ಹವಾಮಾನ ಮತ್ತು ಅತ್ಯಧಿಕ ವೆಚ್ಚದ ಕಾರಣ ಜಿಟಿಇ ಅಲಾಸ್ಕಾವನ್ನು ವೆರಿಝೋನ್ ಜೊತೆ ವಿಲೀನಗೊಳಿಸುವದರ ಬದಲು ಅಲಾಸ್ಕಾ ಪವರ್ ಆ್ಯಂಡ್ ಟೆಲಿಫೋನ್ ಕಂಪನಿಗೆ ಮಾರಲಾಯಿತು.

2002ರಲ್ಲಿ ವೆರಿಝೋನ್ ಜಿಟಿಇದ ಹಿಂದಿನ ಟೆಲಿಫೋನ್ ಕಾರ್ಯಾಚರಣೆಯನ್ನು ಮೂರು ರಾಜ್ಯಗಳಲ್ಲಿ ಮಾರಾಟ ಮಾಡಿತು: ಮಿಸ್ಸೌರಿ ಮತ್ತು ಅಲಬಾಮಾ ಕಾರ್ಯಾಚರಣೆಯನ್ನು ಸೆಂಚುರಿ ಟೆಲ್್ಗೆ ಮಾರಲಾಯಿತು. ಇದು 2009ರಲ್ಲಿ ಎಂಬಾರ್ಕ್ ಜೊತೆ ವಿಲೀನಗೊಂಡು ಸೆಂಚುರಿಲಿಂಕ್ ಆಯಿತು.. ಕೆಂಟುಕಿ ಕಾರ್ಯಾಚರಣೆಯನ್ನು ಆಲ್್ಟೆಲ್್ಗೆ ಮಾರಲಾಯಿತು. ಇದು ನಂತರ ತನ್ನ ಲ್ಯಾಂಡ್್ಲೈನ್ ಕಾರ್ಯಾಚರಣೆಯನ್ನು ವಿಂಡ್್ಸ್ಟ್ರೀಮ್್ ಆಗಿ ಬದಲಾಯಿಸಿತು. 2005ರಲ್ಲಿ, ವೆರಿಝೋನ್, ಹವಾಯಿಯಲ್ಲಿಯ ಜಿಟಿಇದ ಹಿಂದಿನ ಟೆಲಿಫೋನ್ ಕಾರ್ಯಾಚರಣೆಯನ್ನು ದಿ ಕಾರ್ಲಿಲೆ ಗ್ರುಪ್್ಗೆ ಮಾರಾಟ ಮಾಡಿತು. ಈ ಕಾರ್ಯಾಚರಣೆಯು ಈಗ ಹವಾಯಿಯನ್ ಟೆಲಿಕಾಂ ಎಂದು ಹೆಸರಾಗಿದೆ.

3 ಏಪ್ರಿಲ್ 2006ರಂದು ವೆರಿಝೋನ್  ವೆರಿಝೋನ್  ಡೊಮಿನಿಕಾನ್ (ಡೊಮೆನಿಕನ್ ರಿಪಬ್ಲಿಕ್್ನಲ್ಲಿಯ ಕಾರ್ಯಾಚರಣೆ) ದಲ್ಲಿಯ ತನ್ನ ಹಕ್ಕನ್ನು ಮಾರುವುದಕ್ಕೆ, ವೆನೆಜುಯೆಲಾದಲ್ಲಿಯ CANTV ಮತ್ತು ಪ್ಯುರ್ಟೋರಿಕೋದಲ್ಲಿಯ ಪ್ಯುರ್ಟೋರಿಕೋ ಟೆಲಿಫೋನ್ ಕಂಪನಿ, ಐಎನ್್ಸಿ. (ಪಿಆರ್್ಟಿ)ಯನ್ನು ಟೆಲ್ಮೆಕ್ಸ್್ಗೆ ಮತ್ತು ಅಮೆರಿಕಾ ಮೋವಿಯನ್ನು 3.7 ಶತಕೋಟಿ ಡಾಲರ್್ಗೆ ಮಾರುವುದಕ್ಕೆ ಒಪ್ಪಿಕೊಂಡಿತು.[]

16 ಜನವರಿ 2007ರಂದು ಮೈನೆಯಲ್ಲಿಯ ವೆರಿಝೋನ್ ನ್ಯೂ ಇಂಗ್ಲಂಡ್ ಕಾರ್ಯಾಚರಣೆ, ನ್ಯೂ ಹ್ಯಾಂಪ್್ಶೈರ್ ಮತ್ತು ವೆರ್ಮೋಂಟ್ ಗಳನ್ನು ವಿಭಜಿಸಿ ಒಂದು ಹೊಸ ಬೆಲ್ ಆಪರೇಟಿಂಗ್ ಕಂಪನಿಯನ್ನು ಹುಟ್ಟುಹಾಕಿ ಅದನ್ನು ಫೇರ್್ಪಾಯಿಂಟ್ ಕಮ್ಯುನಿಕೇಶನ್ಸ್ ಜೊತೆ ವಿಲೀನಗೊಳಿಸಲಾಯಿತು. ಈ ಸಂಬಂಧದ ಒಪ್ಪಂದವು 2008ರ ಏಪ್ರಿಲ್ 1ರಂದು ಅಂತಿಮಗೊಂಡಿತು.

13 ಮೇ 2009ರಂದು ಅರಿಝೋನಾ, ಇದಾಹೋ, ಇಲ್ಲಿನೊಯ್ಸ್, ಇಂಡಿಯಾನಾ, ಮಿಚಿಗನ್, ನೆವಡಾ, ನಾರ್ಥ್ ಕಾರೋಲಿನಾ, ಓಹಿಯೋ, ಒರೆಗಾನ್, ಸೌಥ್ ಕೆರೋಲಿನಾ, ವಾಷಿಂಗ್ಟನ್, ವೆಸ್ಟ್ ವರ್ಜಿನಿಯಾ ಮತ್ತು ವಿಸ್ಕೋನ್್ಸಿನ್್ದಲ್ಲಿಯ ಎಲ್ಲ ವೆರಿಝೋನ್್ದ ವೈರ್್ಲೈನ್ ಆಸ್ತಿಯನ್ನು, ಅದೇ ರೀತಿ ಕೆಲಿಫೋರ್ನಿಯಾದಲ್ಲಿಯ ಕೆಲವು ಆಸ್ತಿಯನ್ನು ಫ್ರಂಟಿಯರ್ ಕಮ್ಯುನಿಕೇಶನ್ಸ್್ಗೆ ಮಾರಾಟ ಮಾಡುವುದಾಗಿ ವೆರಿಝೋನ್ ಪ್ರಕಟಿಸಿತು.[] 1 ಜುಲೈ 2010ರಂದು ಫ್ರಂಟಿಯರ್್ಗೆ ಈ ಆಸ್ತಿಗಳ ವರ್ಗಾವಣೆ ಅಂತಿಮಗೊಂಡಿತು.[]

ಎಂಸಿಐ ಸ್ವಾಧೀನ

[ಬದಲಾಯಿಸಿ]
ಚಿತ್ರ:Mci logo.png
ಎಂಸಿಐ ಲೋಗೋ, 2003-2006.

ಫೆಬ್ರವರಿ 14, 2005ರಂದು ವೆರಿಝೋನ್ ಈ ಮೊದಲು ವರ್ಲ್ಡ್್ಕಾಂ ಆಗಿದ್ದ ಎಂಸಿಐಅನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಿಕೊಂಡಿತು. ಎಸ್್ಬಿಸಿ ಕಮ್ಯುನಿಕೇಶನ್ಸ್ ಎಟಿ ಮತ್ತು ಟಿ ಕಾರ್ಪೋ.ವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕೆಲವು ವಾರಗಳ ಮೊದಲು ಇದು ನಡೆಯಿತು.

ಈ ಸ್ವಾಧೀನದ ಬಗ್ಗೆ ಮಾಧ್ಯಮಗಳಲ್ಲಿ ವಿವಿಧ ರೀತಿಯ ಪ್ರಚಾರ ದೊರೆಯಿತು. ಈ ಒಪ್ಪಂದ ಒಮ್ಮೆ ಜಾರಿಗೆ ಬಂದ ಬಳಿಕ ವೆರಿಝೋನ್್ಗೆ ಲಾಭವಾಗುವುದು, ಒಟ್ಟುಗೂಡಿದ ಕಂಪನಿಯಿಂದ ಸಾವಿರಾರು ನೌಕರಿ ಕಡಿಮೆಯಾಗುವುದರಿಂದ ಅಂತರ್ನಿಹಿತ ಉತ್ಪಾದಕತೆ ಹೆಚ್ಚಿ ಆರ್ಥಿಕತೆಯ ಮಟ್ಟ ಏರುವುದು, ಎಂಸಿಐ ಸದ್ಯ ಸೇವೆ ನೀಡುತ್ತಿರುವ ಗ್ರಾಹಕರ ವಾಣಿಜ್ಯದ ದೊಡ್ಡ ಅಡಿಪಾಯ ದೊರೆಯುವುದು ಎಂಬ ಲೆಕ್ಕಾಚಾರ ನಡೆಯಿತು. ವೆರಿಝೋನ್್ಗೆ ಆದ ನಿಜವಾದ ಲಾಭವೆಂದರೆ ದೂರಕ್ಕೆ -ಎಳೆದ ಲೈನ್್ಗಳ ಸ್ವಾಧೀನ. ವೆರಿಝೋನ್್ದ ವಹಿವಾಟಿನ ದೊಡ್ಡ ಭಾಗವು ಅಮೆರಿಕ ಸಂಯುಕ್ತ ಸಂಸ್ಥಾನಗಳ ಪೂರ್ವದ ರಾಜ್ಯಗಳ ಮೇಲೆ ಕೇಂದ್ರೀಕೃತವಾಗಿತ್ತು. ಇದು ಕಂಪನಿಗೆ ಪ್ರಾದೇಶಿಕ ಫೋನ್್ ಕಂಪನಿಯಾಗಿ ಪರಿಣಾಮಕಾರಿಯಾಗಿ ಲಾಭವನ್ನು ಮರಳಿ ಕೊಟ್ಟಿದ್ದಷ್ಟೇ ಅಲ್ಲ ದೂರ-ಎಳೆದ ಮಾರ್ಗದ ಬಳಕೆದಾರರು ಬಳಕೆ ಶುಲ್ಕವನ್ನೂ ತೆರುವಂತೆ ಮಾಡಿತು. ಹಿಂದಿನ ಎಂಸಿಐ, ತನ್ನ ಗ್ರಾಹಕರ ಕರೆಗಳನ್ನು ವೆರಿಝೋನ್ "ಹೆಜ್ಜೆ ಗುರುತಿ"ನ ಆಚೆ ಹೋಗಬೇಕಾದಾಗ, ಪೂರ್ತಿಗೊಳಿಸುವುದಕ್ಕೆ ಶುಲ್ಕ ತೆರಬೇಕಾಯಿತು. ಎಂಸಿಐ ಸ್ವಾಧೀನವು ಈ ಅಗತ್ಯವನ್ನೆಲ್ಲ ನಿವಾರಿಸಬೇಕಾಯಿತು ಮತ್ತು ದೀರ್ಘಾವಧಿಯ ಮಾರುಕಟ್ಟೆ ಸ್ಥಾನದ ಕಾರ್ಯತಂತ್ರದಲ್ಲಿ ಅದು ಪ್ರಮುಖವಾಗಿತ್ತು. 2006ರ ಜನವರಿ 6ರ ವೇಳೆಗೆ ಎಂಸಿಐಅನ್ನು ವೆರಿಝೋನ್್ನಲ್ಲಿ ವೆರಿಝೋನ್ ಬಿಸಿನೆಸ್ ಹೆಸರಿನಲ್ಲಿ ಸೇರಿಸಿಕೊಳ್ಳಲಾಯಿತು. ಈ ವಿಲೀನದಿಂದ ವಾಷಿಂಗ್ಟನ್ ವಿಝಾರ್ಡ್ಸ್ ಮತ್ತು ವಾಷಿಂಗ್ಟನ್ ಕ್ಯಾಪಿಟಲ್ ನ ಮೂಲವಾದ ವಾಷಿಂಗ್ಟನ್, ಡಿ.ಸಿ.ಗೆ, ವೆರಿಝೋನ್ ಸೆಂಟರ್್(ಮೊದಲು ಇದು ಎಂಸಿಐ ಸೆಂಟರ್)ಗೆ ಹೆಸರಿಡುವ ಹಕ್ಕನ್ನು ವೆರಿಝೋನ್ ಪಡೆದುಕೊಂಡಿತು. ಈ ಸ್ವಾಧೀನಕ್ಕೆ ಸ್ವಲ್ಪ ಮೊದಲು ಎಂಸಿಐ ಟೋಟಾಲಿಟಿ ಎಂಬ ಇಂಟರ್ನೆಟ್ ಕಂಪನಿಯನ್ನು ಖರೀದಿಸಿತ್ತು.

ವೆರಿಝೋನ್ ಎಂಸಿಐ ಜೊತೆ ಸೇರಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅತಿದೊಡ್ಡ ಟೆಲಿಕಮ್ಯುನಿಕೇಶನ್ಸ್ ಕಂಪನಿಯಾಗಿದೆ. ಇದರ ಮಾರಾಟ 75.11 ಶತ ಕೋಟಿ ಡಾಲರ್, ಲಾಭ 7.4 ಶತ ಕೋಟಿ ಡಾಲರ್. ಇದರ ಆಸ್ತಿ 168.13 ಶತ ಕೋಟಿ ಡಾಲರ್.After[[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]] ಬೆಲ್್ಸೌಥ್/ಎಟಿ ಮತ್ತು ಟಿ ಐಎನ್್ಸಿ ವಿಲೀನ ಮುಗಿದಾಗ ಎಟಿ ಮತ್ತು ಟಿ ಐಎನ್್ಸಿ ಆಸ್ತಿ ಮತ್ತು ಲಾಭದ ಲೆಕ್ಕದಲ್ಲಿ ಜಗತ್ತಿನಲ್ಲಿಯೇ ಅತಿ ದೊಡ್ಡ ಟೆಲಿಕಮ್ಯುನಿಕೇಶನ್ಸ್ ಕಂಪನಿಯಾಗಿದೆ.[೧೦]


ವಿವಾದಗಳು

[ಬದಲಾಯಿಸಿ]

ವೆರಿಝೋನ್ ಅನೇಕ ಸಾರ್ವಜನಿಕ ವಿವಾದಗಳಲ್ಲಿ ಸಿಲುಕಿದೆ.

2004ರ ಡಿಸೆಂಬರ್ 22ರಂದು ವೆರಿಝೋನ್.ನೆಟ್್ನ ಮೇಲ್ ಸರ್ವರ್್ಗಳನ್ನು ಯುರೋಪಿನ ಸಂಪರ್ಕಗಳನ್ನು ಅಂಗೀಕರಿಸದಂತೆ ಸಂಯೋಜನೆಗೊಳಿಸಲಾಯಿತು. ಸ್ಪ್ಯಾಮ್ ಇ-ಮೇಲ್ ಕಡಿಮೆ ಮಾಡುವ ತಪ್ಪಾದ ಪ್ರಯತ್ನ ಇದಾಗಿತ್ತು. ಬೇಡಿಕೆಯ ಮೇರೆಗೆ ವೈಯಕ್ತಿಕ ಡೊಮೇನ್್ಗಳ ಅಡೆಯನ್ನು ತೆಗೆಯಲಾಯಿತು.[೧೧]

2006ರ ಮೇ 11ರಂದು ವೆರಿಝೋನ್ ಎಟಿ ಮತ್ತು ಟಿ ಐಎನ್್ಸಿ ಹಾಗೂ ಬೆಲ್್ಸೌಥ್ ಜೊತೆ ಸೇರಿ ನ್ಯಾಶನಲ್ ಸೆಕ್ಯುರಿಟಿ ಏಜೆನ್ಸಿಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಲಕ್ಷಾಂತರ ನಾಗರಿಕರ ಕರೆ ದಾಖಲೆಗಳನ್ನು ಒದಗಿಸಿದೆ ಎಂಬ ಸಂಗತಿಯನ್ನು ಯುಎಸ್ಎ ಟುಡೇ ಬಹಿರಂಗಪಡಿಸಿದಾಗ ವಿವಾದ ತಲೆದೋರಿತು. ವೆರಿಝೋನ್ ಸಪಾಟಾಗಿ ಸರ್ಕಾರಕ್ಕೆ ದಾಖಲೆಗಳನ್ನು ನೀಡಲಾಗಿದೆ ಎಂಬ ಆರೋಪವನ್ನು ಅಲ್ಲಗಳೆಯಿತು. ಆದರೆ ಆ ಜನವರಿಯಲ್ಲಿ ತಾನು ಸ್ವಾಧೀನಪಡಿಸಿಕೊಂಡ ಎಂಸಿಐ ಹಾಗೆ ಮಾಡಿದೆಯೇ ಎಂಬ ವಿಷಯದ ಬಗ್ಗೆ ಪ್ರತಿಕ್ರಿಯಿಸದೆ ಮೌನ ವಹಿಸಿತು.[೧೨] 2007ರ ಅಕ್ಟೋಬರ್ 12ರಂದು ಕಂಪನಿಯು ಅಮೆರಿಕ ಸಂಯುಕ್ತ ಸಂಸ್ಥಾನದ ಎನರ್ಜಿ ಮತ್ತು ವಾಣಿಜ್ಯದ ಮೇಲಿನ ಸದನ ಸಮಿತಿಗೆ ಬರೆದ ಪತ್ರದಲ್ಲಿ ಎಫ್್ಬಿಐ ಮತ್ತು .ಯು.ಎಸ್.ಸರ್ಕಾರದ ಇತರ ಫೆಡರಲ್ ಏಜೆನ್ಸಿಗಳಿಗೆ ಗ್ರಾಹಕರ ಮಾಹಿತಿಯನ್ನು ಬಹಿರಂಗಪಡಿಸಿರುವುದಾಗಿ ಒಪ್ಪಿಕೊಂಡಿತು. ಜನವರಿ 2005ರಿಂದ ಸೆಪ್ಟೆಂಬರ್ 2007ರ ವರೆಗೆ ಸುಮಾರು 94 ಸಾವಿರ ಬಾರಿ ಈ ಮಾಹಿತಿ ನೀಡಲಾಗಿದೆ ಮತ್ತು 720 ಬಾರಿ ಯಾವುದೇ ಕೋರ್ಟ್ ಆದೇಶ ಅಥವಾ ವಾರಂಟ್ ಇಲ್ಲದೆಯೂ ನೀಡಲಾಗಿದೆ ಎಂದು ಹೇಳಿತು.[೧೩]

2007ರ ಸೆಪ್ಟೆಂಬರ್್ನಲ್ಲಿ NARAL ಪ್ರೋ-ಚಾಯ್ಸ್ ಅಮೆರಿಕಕ್ಕೆ ಒಂದು ಕಾರ್ಯಕ್ರಮಕ್ಕೆ ತನ್ನ ಮೊಬೈಲ್ ಫೋನ್ ನೆಟ್್ವರ್ಕ್ ಬಳಸಿಕೊಳ್ಳುವುದಕ್ಕೆ ವೆರಿಝೋನ್ ವೈರ್್ಲೆಸ್ ಆರಂಭದಲ್ಲಿ ನಿರಾಕರಿಸಿತು. ಈ ಕಾರ್ಯಕ್ರಮವು ಪ್ರೋ-ಚಾಯ್ಸ್ ಟೆಕ್ಸ್ಟ್ ಮೆಸೇಜ್್ಗಳನ್ನು ಜನರು ಸ್ವೀಕರಿಸುವುದಕ್ಕೆ ಅವಕಾಶಮಾಡಿಕೊಡುವ ಕಾರ್ಯಕ್ರಮವಾಗಿತ್ತು. "ವಿವಾದಿತ ಅಥವಾ ಹಿತಕರವಲ್ಲದ" ಸಂದೇಶಗಳನ್ನು ತಡೆಹಿಡಿಯುವ ಅಧಿಕಾರ ತನಗಿದೆ ಎಂಬ ಕಾರಣ ನೀಡಿತು. ನಂತರ ಅದು ನಿರ್ಣಯವನ್ನು ಕಾಯ್ದಿಟ್ಟಿತು:

"ನಿಖರತೆ ಇಲ್ಲದ ಆಂತರಿಕ ನೀತಿಯೊಂದರ ತಪ್ಪಾದ ವಿವರಣೆ ಇದು. ಅದು.... ಅನಾಮಧೇಯ ದ್ವೇಷದ ಸಂದೇಶಗಳನ್ನು ಮತ್ತು ವಯಸ್ಕರ ವಿಷಯಗಳನ್ನು ಮಕ್ಕಳಿಗೆ ಕಳುಹಿಸುವುದನ್ನು ತಡೆಯುವ ಬಗ್ಗೆ ಕಾಳಜಿ ವಹಿಸಲು ವಿನ್ಯಾಸಗೊಳಿಸಿದ್ದು.....  ವಿಚಾರಗಳ ಮುಕ್ತ ಹರಿಯುವಿಕೆ ಬಗ್ಗೆ ಅಪಾರವಾದ ಗೌರವ [ವೆರಿಝೋನ್್ಗೆ ಇದೆ.]"[೧೪]

2008ರಲ್ಲಿ ನಾರ್ಥನ್ ನ್ಯೂ ಇಂಗ್ಲಂಡ್್ನಲ್ಲಿಯ ಲ್ಯಾಂಡ್ ಲೈನ್ ಕಾರ್ಯಾಚರಣೆಯನ್ನು ಫೇರ್್ಪಾಯಿಂಟ್ ಕಮ್ಯುನಿಕೇಶನ್ಸ್್ಗೆ ಮಾರಾಟ ಮಾಡಿದ್ದು ಪ್ರಶ್ನೆಗಳನ್ನು ಮೂಡಿಸಿತು. ಮಾರಾಟದ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳಲು ಪಕ್ಷಗಳು ಮೈನೆ, ನ್ಯೂ ಹ್ಯಾಂಪ್್ಶೈರ್ ಮತ್ತು ವೆರ್್ಮೊಂಟ್ ಸರ್ಕಾರಗಳೊಂದಿಗೆ ವ್ಯವಹರಿಸಬೇಕಾಯಿತು.[ಸೂಕ್ತ ಉಲ್ಲೇಖನ ಬೇಕು]

2010ರ ಫೆಬ್ರವರಿ 4ರಂದು ವೆರಿಝೋನ್ ವೈರ್್ಲೆಸ್ ಗ್ರಾಹಕರು ಸೈಟ್ ಇಮೇಜ್ ಬೋರ್ಡ್್ಗಳ ಪ್ರವೇಶಕ್ಕೆ ಅಡಚಣೆಯಾಗುತ್ತಿವೆ ಎಂದು ಸಲ್ಲಿಸಿದ ದೂರುಗಳನ್ನು 4ಚಾನ್ ಸ್ವೀಕರಿಸಲು ಆರಂಭಿಸಿತು. boards.4chan.org ಡೊಮೇನ್್ಗೆ ಪೋರ್ಟ್ 80ಯಲ್ಲಿಯ ಟ್ರಾಫಿಕ್ ಮಾತ್ರ ತೊಂದರೆಗೆ ಈಡಾಗಿದೆ ಎಂಬುದನ್ನು 4ಚಾನ್ ಆಡಳಿತಗಾರರು ಕಂಡುಕೊಂಡರು. ಈ ರೀತಿ ತಡೆ ಮಾಡಿದ್ದು ಉದ್ದೇಶಪೂರ್ವಕವಾಗಿ ಎಂಬುದನ್ನು ಅವರು ನಂಬುವಂತೆ ಆಯಿತು. 2010ರ ಫೆಬ್ರವರಿ 7ರಂದು ವೆರಿಝೋನ್ ವೈರ್್ಲೆಸ್ 4chan.orgಅನ್ನು "ಮುಚ್ಚುಮರೆ ಇಲ್ಲದೆ ತಡೆಯಲಾಗಿದೆ" ಎಂದು ದೃಢಪಡಿಸಿತು.[೧೫]

2010ರ ಆಗಸ್ಟ್್ನಲ್ಲಿ ವೆರಿಝೋನ್ ಮತ್ತು ಗೂಗಲ್್ನ ಅಧ್ಯಕ್ಷರು ನೆಟ್್ವರ್ಕ್್ನ ತಾಟಸ್ಥ್ಯವನ್ನು ವ್ಯಾಖ್ಯಾನಿಸಬೇಕು ಮತ್ತು ಮಿತಿಗೊಳಿಸಬೇಕು ಎಂಬ ಒಪ್ಪಂದಕ್ಕೆ ಬಂದರು.

[೧೬]

ವೆರಿಝೋನ್ ಸೇವೆಗಳು

[ಬದಲಾಯಿಸಿ]
ವೆರಿಝೋನ್ ಸರ್ವಿಸ್ ವ್ಯಾನ್

ಧ್ವನಿ ನೀಡಿಕೆ

[ಬದಲಾಯಿಸಿ]

ವೆರಿಝೋನ್ ಅನೇಕ ವಿವಿಧ ರೀತಿಯ ಲ್ಯಾಂಡ್್ಲೈನ್ ಸೇವೆಗಳನ್ನು ಒದಗಿಸುತ್ತದೆ- ಸ್ಟ್ಯಾಂಡರ್ಡ್ POTS (ಪ್ಲೇನ್ ಓಲ್ಡ್ ಟೆಲಿಫೋನ್ ಸರ್ವಿಸ್) ಸೇವೆ ಮತ್ತು VoIP (ವೈಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್) ಹಾಗೂ ಆಪ್ಟಿಕಲ್ ಫೈಬರ್ ಲೈನ್ ಸೇವೆಗಳು. ಇದರ ಹೊರತಾಗಿ ವೆರಿಝೋನ್ ದೂರ ಅಂತರದ ಸೇವೆಗಳನ್ನು ಒದಗಿಸುತ್ತದೆ. ಮೈಕ್ರೋಸಾಫ್ಟ್ ಜೊತೆ ಸೇರಿ "ವೆರಿಝೋನ್ ವೆಬ್ ಕಾಲಿಂಗ್" ಎಂಬ ಸೇವೆಯನ್ನು ವೆರಿಝೋನ್ ನೀಡುತ್ತದೆ. ಇದೊಂದು ರೀತಿ VoIP ಸೇವೆ ಇದ್ದಂತೆ, ಇದನ್ನು ವಿಂಡೋಸ್ ಲೈವ್ ಮೆಸೆಂಜರ್ ಒಳಗೆ ಬಳಸುವರು. Iobi ಕೂಡ ನೋಡಿ.

ವೊಯ್ಸ್ ಮೇಲ್

[ಬದಲಾಯಿಸಿ]

ವೆರಿಝೋನ್ ವೊಯ್ಸ್ ಮೆಸೇಜಿಂಗ್ ಎಂಬ ವೊಯ್ಸ್್ಮೇಲ್ ಸೇವೆಯನ್ನು ಗೃಹ ಮತ್ತು ವಾಣಿಜ್ಯ ಬಳಕೆಗೆ ವೆರಿಝೋನ್ ಒದಗಿಸುತ್ತದೆ.

ನಿಸ್ತಂತು

[ಬದಲಾಯಿಸಿ]

ವೆರಿಝೋನ್್ದ ವೈರ್್ಲೆಸ್ ವಿಭಾಗಕ್ಕೆ ವೆರಿಝೋನ್ ವೈರ್್ಲೆಸ್ ನೋಡಿ.

ವೆರಿಝೋನ್ ವೊಯ್ಸ್್ವಿಂಗ್

[ಬದಲಾಯಿಸಿ]

ವೆರಿಝೋನ್ ವೊಯ್ಸ್್ವಿಂಗ್ ಒಂದು ವೊಯ್ಸ್ ಓವರ್ ಐಪಿ (VoIP) ಸೇವೆ. ಈ ಕೊಡುಗೆ ಡೆಲ್ಟಾಥ್ರೀದ್ದು. ಇದನ್ನು ವೆರಿಝೋನ್ ಮರುಮಾರಾಟ ಮಾಡಿತು. ಇದು ಬ್ರಾಡ್್ಬ್ಯಾಂಡ್ ಇಂಟರ್ನೆಟ್ ಸಂಪರ್ಕದ ಜೊತೆ ಫೋನ್ ಸೇವೆಯನ್ನು ಒದಗಿಸುತ್ತದೆ.[೧೭] ಒಂದು ಡಿಎಸ್ಎಲ್, ಕೇಬಲ್ ಅಥವಾ ವೆರಿಝೋನ್ FiOS ಇಂಟರ್ನೆಟ್ ಕನೆಕ್ಷನ್, ಒಂದು ನಿಯಮಿತ ಟೆಲಿಫೋನ್, ಒಂದು ರೌಟರ್ ಮತ್ತು ಒಂದು ಟೆಲಿಫೋನ್ ಅಡಾಪ್ಟರ್ ಈ ಸೇವೆಯನ್ನು ಪಡೆಯುವುದಕ್ಕೆ ಅವಶ್ಯ. 2009ರ ಮಾರ್ಚ್ 31ರಂದು ವೆರಿಝೋನ್ ಇದ್ದ ಎಲ್ಲ ಗ್ರಾಹಕರ ವೈಸ್್ವಿಂಗ್ ಸೇವೆಯನ್ನು ಸ್ಥಗಿತಗೊಳಿಸಿತು.

ವಿಡಿಯೋ

[ಬದಲಾಯಿಸಿ]

ವೆರಿಝೋನ್ 2005ರ ಸೆಪ್ಟೆಂಬರ್ 22ರಂದು ಟೆಕ್ಸಾಸ್್ನ ಕೆಲ್ಲೆರ್್ನಲ್ಲಿ ತನ್ನ FiOS ವೀಡಿಯೋ ಸೇವೆಯನ್ನು ಆರಂಭಿಸಿತು. 500ಕ್ಕೂ ಹೆಚ್ಚು ಒಟ್ಟು ಚಾನಲ್್ಗಳನ್ನು, 180ಕ್ಕೂ ಅಧಿಕ ಡಿಜಿಟಲ್ ಮ್ಯೂಸಿಕ್ ಚಾನೆಲ್್ಗಳನ್ನು, 95ಕ್ಕೂ ಅಧಿಕ ಉನ್ನತ ವ್ಯಾಖ್ಯೆಯ ಚಾನೆಲ್್ಗಳನ್ನು ಮತ್ತು 10,000 ವೀಡಿಯೋ- ಆನ್- ಡಿಮಾಂಡ್ ಟೈಟಲ್್ಗಳನ್ನು ನೀಡುವುದಕ್ಕಾಗಿ FiOS TV[೧೮] ಆಪ್ಟಿಕಲ್ ಫೈಬರ್್ಗಳನ್ನು ಬಳಸಿತು. ವೆರಿಝೋನ್ ಡೈರೆಕ್ಟ್ ಟಿವಿ ಸೇವೆಯನ್ನೂ ಒದಗಿಸಿತು.

ದತ್ತಾಂಶ

[ಬದಲಾಯಿಸಿ]

ತಾನು ಎಲ್ಲಿ ಫೋನ್ ಸೇವೆಯನ್ನು ಒದಗಿಸುತ್ತಿತ್ತೋ ಅಲ್ಲಿ ಬಹು ಭಾಗದಲ್ಲಿ ವೆರಿಝೋನ್ ಹೈಸ್ಪೀಡ್ ಇಂಟರ್ನೆಟ್ DSL ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿದೆ. ಡೌನ್್ಲೋಡ್ ಸಾಮರ್ಥ್ಯದ ವರೆಗೆ ವಿವಿಧ ವೇಗದ ಸೇವೆಯನ್ನು ಸ್ಥಳೀಯ ಮೂಲಸೌಕರ್ಯಗಳು ಹೇಗೆ ಬೆಂಬಲಿಸುತ್ತವೆ ಎನ್ನುವುದನ್ನು ಅವಲಂಬಿಸಿ ಡಿಎಸ್ಎಲ್ ಒದಗಿಸುತ್ತಿದೆ.

ಕೆಲವು ಗ್ರಾಹಕರಿಗೆ 2006ರಲ್ಲಿ ವೆರಿಝೋನ್ FTTP (ಫೈಬರ್ ಟು ದಿ ಪ್ರಿಮೈಸಸ್ ಅಥವಾ ಫೈಬರ್ ಟು ದಿ ಹೋಮ್) ಸೇವೆಯನ್ನು ನೀಡಲು ಆರಂಭಿಸಿತ್ತು. ವೆರಿಝೋನೋ ಇದನ್ನು "FiOS" ಎಂದು ಕರೆಯುತ್ತಿತ್ತು.[೧೯]

ನಾನ್-ಪ್ರಾಫಿಟ್ ಸ್ಪಾಮ್ ಮಾನಿಟರಿಂಗ್ ಆರ್ಗನೈಜೇಶನ್ ಸ್ಪಾಮ್್ಹೌಸ್ ಪ್ರಕಾರ ವೆರಿಝೋನ್ ಜಗತ್ತಿನಾದ್ಯಂತ ಇರುವ ನೆಟ್್ವರ್ಕ್್ಗಳಲ್ಲಿ ಅತ್ಯಧಿಕ ಸಂಖ್ಯೆಯ ಸ್ಪಾಮರ್್ಗಳನ್ನು (2007 ಆಗಸ್ಟ್ 2ರಂದು ಇದ್ದಂತೆ) ಹೊಂದಿದೆ.[೨೦]

ಡೈರೆಕ್ಟರಿ ಕಾರ್ಯಾಚರಣೆ

[ಬದಲಾಯಿಸಿ]

ವೆರಿಝೋನ್್ದ ಯೆಲ್ಲೋಪೇಜಸ್ ವ್ಯವಹಾರವು ಸುಪರ್ ಪೇಜಸ್ ಎಂದು ಪ್ರಸಿದ್ಧವಾಗಿದೆ. ಇದು ಟೆಕ್ಸಾಸ್ ನೆಲೆಯನ್ನು ಹೊಂದಿರುವ ಮಾರಾಟ, ಪ್ರಕಟಣೆ ಮತ್ತು ಸಂಬಂಧಿತ ಸೇವೆಯನ್ನು ಒಳಗೊಂಡಿದೆ. 1,200 ಡೈರೆಕ್ಟರಿ ಶೀರ್ಷಿಕೆಗಳು ಮತ್ತು 41 ರಾಜ್ಯಗಳಲ್ಲಿ 121 ದಶಲಕ್ಷ ಪ್ರತಿಗಳನ್ನು ಇದು ಹೊಂದಿದೆ. ಈ ವೆಬ್್ಸೈಟ್್ಗೆ ತಿಂಗಳಿಗೆ ಸುಮಾರು 17 ದಶಲಕ್ಷ

ಜನರು ಭೇಟಿ ನೀಡುತ್ತಾರೆ. 2004ರಲ್ಲಿ ಇದರ ಕಾರ್ಯನಿರ್ವಹಣೆ

ಆದಾಯವು 3.6 ಶತಕೋಟಿ ಡಾಲರ್ ಇತ್ತು. ಮತ್ತು

ದೇಶಾದ್ಯಂತ 7,300 ಸಿಬ್ಬಂದಿ ಇದ್ದರು.[೨೧] ಅತ್ಯಧಿಕ ಟ್ರಾಫಿಕ್

ಸೈಟ್್ಗಳ ವಿರುದ್ಧ ಸಮನಾಗಿ ನಿಲ್ಲುವ ಉದ್ದೇಶದಿಂದ

ಸುಪರ್ ಪೇಜಸ್್ಅನ್ನು ಗೂಗಲ್್ಗೆ ಜೊತೆ

ಮಾಡಲಾಯಿತು. ಇದರ ಉದ್ದೇಶ, ತನ್ನ ಪಟ್ಟಿಯಲ್ಲಿರುವ

ಲಕ್ಷಾಂತರ ಬಿಸಿನೆಸ್್ಗಳಿಗೆ ಜಾಹಿರಾತು ಹುಡುಕುವ

ಸೇವೆಯನ್ನು ಒದಗಿಸುವುದು. ಸುಪರ್್ಪೇಜಸ್ ತನ್ನ

ಜಾಹಿರಾತುದಾರರಿಗೆ ಗೂಗಲ್ ಸರ್ಚ್ ಶರತ್ತುಗಳನ್ವಯ ಬಿಡ್

ಮಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ.[೨೨]

17 ಶತಕೋಟಿ

ಡಾಲರ್ ಆಸ್ತಿಯನ್ನು ಹೊಂದಿರುವ ವೆರಿಝೋನ್ ವೈರ್್ಲೆಸ್

ಮತ್ತು ಹೈಸ್ಪೀಡ್ ಇಂಟರ್ನೆಟ್ ಸೇವೆಯ ವ್ಯವಹಾರವನ್ನು

ವಿಸ್ತರಿಸುವುದಕ್ಕೆ ಹಣವನ್ನು ಹೂಡಿತು.[೨೩] ವೆರಿಝೋನ್ ಡೈರೆಕ್ಟರಿಯನ್ನು ಪ್ರಕಟಿಸುವ ಕಾರ್ಯಾಚರಣೆಯಿಂದ ತಾನಾಗಿಯೇ ಹಿಂದೆ ಸರಿದ ಮೊದಲ ಬೇಬಿ ಬೆಲ್ ಏನಲ್ಲ. ಕ್ವೆಸ್ಟ್ ಡೆಕ್ಷ್ ಮೀಡಿಯಾ ಆಗುವುದಕ್ಕಾಗಿ ಕ್ವೆಸ್ಟ್್ಡೆಕ್ಷ್ ಡೈರೆಕ್ಟರಿ ಸೇವೆಗಳನ್ನು ಮಾರಾಟ ಮಾಡಿತ್ತು. ಮತ್ತೆ ಇಲ್ಲಿನಾಯ್ಸ್ ಬೆಲ್, ಈಗ ಎಟಿ ಮತ್ತು ಟಿ ತನ್ನ ಡೈರೆಕ್ಟರಿ ಕಾರ್ಯಾಚರಣೆಯನ್ನು ಆರ್.ಎಚ್. ಡೊನ್ನೆಲ್ಲಿಗೆ 1990ರಲ್ಲಿ ಮಾರಿದೆ. ("ಎಟಿ ಮತ್ತು ಟಿ ಯೆಲ್ಲೋಪೇಜಸ್ ಆರ್.ಎಚ್. ಡೊನ್ನೆಲ್ಲಿಯಿಂದ ಪ್ರಕಟವಾಗುತ್ತಿದೆ.")

ಪ್ರಾಯೋಜಕತ್ವ ಮತ್ತು ಹೆಸರಿಡುವ ಹಕ್ಕು

[ಬದಲಾಯಿಸಿ]
ವೆರಿಝೋನ್ ಸೆಂಟರ್ ಚೀನಾಟೌನ್, ವಾಷಿಂಗ್ಟನ್, ಡಿ.ಸಿ.
  • ವಾಷಿಂಗ್ಟನ್, ಡಿಸಿ.ಯಲ್ಲಿರುವ ದಿ ವೆರಿಝೋನ್ ಸೆಂಟರ್
  • ವೆರಿಝೋನ್ ಚಾಂಪಿಯನ್್ಶಿಪ್ ಟೀಮ್ ಪೆನ್್ಸ್ಕೆ ಜೊತೆ ಐಆರ್್ಎಲ್್ನ ಇಂಡಿ ಕಾರ್ ಸೀರಿಸ್್ನಲ್ಲಿ ಮತ್ತು NASCAR ರಾಷ್ಟ್ರವ್ಯಾಪಿ ಸರಣಿಯಲ್ಲಿ ಪ್ರಾಯೋಜಕತ್ವದ ಪಾಲುದಾರಿಕೆಗೆ ಸ್ಪರ್ಧಿಸುತ್ತಿದೆ.
  • ವೆರಿಝೋನ್ ಹೆರಿಟೇಜ್ PGA ಟೂರ್ ಫೆಡೆಕ್ಸ್ ಕಪ್ ಹಿಲ್ಟನ್ ಹೆಡ್ ಐಲ್ಯಾಂಡ್, ಸೌಥ್ ಕ್ಯಾರೋಲಿನಾದಲ್ಲಿ ಸ್ಪರ್ಧೆ
  • ವೆರಿಝೋನ್ IMAX 3ಡಿ ಥಿಯೇಟರ್ ನಾಟಿಕ್್ದಲ್ಲಿಯ ಜೋರ್ಡನ್್ದ ಪೀಠೋಪಕರಣ ಅಂಗಡಿ ಒಳಗೆ ಎಂಎ ಮತ್ತು ರೀಡಿಂಗ್, ಎಂಎ(ಮೊದಲು ಇದನ್ನು ಮೋಶನ್ ಒಡೆಸ್ಸಿ ಮೂವಿ ಎಂ.ಓ.ಎಂ. ಎಂದು ಕರೆಯುತ್ತಿದ್ದರು.)
  • ಬಾಬ್್ಸ್ಲೀಜ್, ಲೌಜ್ ಮತ್ತು ಸ್ಕೆಲೆಟನ್ ಟ್ರ್ಯಾಕ್ ಇರುವಲ್ಲಿಯೇ ನ್ಯೂ ಯಾರ್ಕ್್ದ ಲೇಕ್ ಪ್ಲಾಸಿಡ್್ನಲ್ಲಿಯ ವೆರಿಝೋನ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಇರುವುದು.
  • ಅಮೆರಿಕ ಸಂಯುಕ್ತ ಸಂಸ್ಥಾನದ ವಿವಿಧ ನಗರಗಳಲ್ಲಿರುವ ವೆರಿಝೋನ್ ವೈರ್್ಲೆಸ್ ಮ್ಯುಸಿಕ್ ಸೆಂಟರ್್ಗ ವೆರಿಝೋನ್ ವೈರ್್ಲೆಸ್ ಆ್ಯಂಪಿಥಿಯೇಟರ್್ಗಳಲ್ಲಿ ಇವು ಸೇರಿವೆ: ಇರ್ವಿನ್ ಸಿಎ, ನೋಬ್ಲೆಸ್್ವಿಲ್ಲೆ ಐಎನ್, ಸೆಂಟ್.ಲೂಯಿಸ್, ಎಂಓ, ಚಾರ್ಲೊಲ್ಲೆ ಎನ್್ಸಿ, ಪೆಲ್ಹಾಮ್, ಎಎಲ್ ಮತ್ತು ವರ್ಜಿನಿಯಾ ಬೀಚ್ ವಿಎ.
  • ವೆರಿಝೋನ್ ವೈರ್್ಲೆಸ್ ಅರೆನಾ ಮ್ಯಾಂಚೆಸ್ಟರ್, ಎನ್ಎಚ್್ನಲ್ಲಿದೆ.
  • ವೆರಿಝೋನ್ ಅರೆನಾ ನಾರ್ಥ್ ಲಿಟ್ಲ್ ರಾಕ್, ಎಆರ್್ನಲ್ಲಿದೆ.
  • ವೆರಿಝೋನ್ ವೈರ್್ಲೆಸ್ ಸೆಂಟರ್ ಮ್ಯಾನ್್ಕಾಟೋ, ಮಿನ್ನೆಸೋಟಾ ದಲ್ಲಿದೆ.

ಕಾರ್ಪೋರೇಟ್ ಗವರ್ನೆನ್ಸ್

[ಬದಲಾಯಿಸಿ]

ವೆರಿಝೋನ್ ಕಮ್ಯುನಿಕೇಶನ್ಸ್್ನ ಸದ್ಯದ ನಿರ್ದೇಶಕರ ಮಂಡಳಿಯ ಸದಸ್ಯರು ಇಂತಿದ್ದಾರೆ,[೨೪] ರಿಚರ್ಡ್ ಕ್ಯಾರಿಆನ್, ರಾಬರ್ಟ್ ಲೇನ್, ಸಾಂಡ್ರಾ ಮೂಸ್, ಜೋಸೆಫ್ ನ್ಯೂಬುಅರ್, ಥಾಮಸ್ ಓ ಬ್ರಿಯಾನ್, ಹಗ್ ಪ್ರೈಸ್, ಇವಾನ್ ಸೀಡೆನ್ಬರ್ಗ್/7}, ವಾಲ್ಟರ್ ಶಿಪ್ಲೇ, ಜಾನ್ ಆರ್. ಶ್ಟಾಫೋರ್ಡ್,ಮತ್ತು ರಾಬರ್ಟ್ ಸ್ಟೋರಿ.[೨೫]

ಇವನ್ನೂ ಗಮನಿಸಿ

[ಬದಲಾಯಿಸಿ]

ಟೆಂಪ್ಲೇಟು:Portal box

  • ಏರ್್ಫೋನ್ — ವೆರಿಝೋನ್ ನೀಡಿರುವ ಏರ್-ಗ್ರೌಂಡ್ ರೇಡಿಯೋಟೆಲಿಫೋನ್ ಸರ್ವಿಸ್
  • ಏರ್ ಟಚ್
  • ಐಡಿಯಾರ್ಕ್
  • ಎಂಸಿಐ ಕಮ್ಯುನಿಕೇಶನ್ಸ್
  • ಪ್ಲೇಲಿಂಕ್
  • ವೆರಿಝೋನ್ ಬಿಸಿನೆಸ್
  • ವೆರಿಝೋನ್ ಸ್ಮಾರ್ಟ್ ಪಾರ್ಕ್ — ಅಡ್ವಾನ್ಸ್ಡ್ ಟೆಲಿಕಮ್ಯುನಿಕೇಶನ್ಸ್ ಸರ್ವಿಸಸ್
  • ವೆರಿಜೋನ್‌ ವೈರ್‌ಲೆಸ್‌

ಉಲ್ಲೇಖಗಳು

[ಬದಲಾಯಿಸಿ]
  1. "Verizon 2009 10-K Annual Report". Form 10-K. Verizon Communications, Inc. 2009. Archived from the original on 2010-06-07. Retrieved 2010-06-02.
  2. "Verizon - Investor Relations - Company Profile - Corporate History". Archived from the original on 2008-09-18. Retrieved 2008-09-20.
  3. "ಗ್ರಾಹಕರಿಗೆ ನೆರವಾಗುವ ಸಂಪರ್ಕಗಳು Archived 2013-07-24 ವೇಬ್ಯಾಕ್ ಮೆಷಿನ್ ನಲ್ಲಿ.." ವೆರಿಝೋನ್ ಕಮ್ಯುನಿಕೇಶನ್ಸ್. ಫೆಬ್ರವರಿ 18, 2009ರಲ್ಲಿ ಮರು ಸಂಪಾದನೆ.
  4. Haley, Colin C. (July 25, 2002). "Genuity Jilted by Verizon, Mulls Options". Internet.com. Archived from the original on ಏಪ್ರಿಲ್ 18, 2008. Retrieved ಅಕ್ಟೋಬರ್ 25, 2010.
  5. Pappalardo, Denise (February 10, 2003). "Changes afoot for Genuity customers". Network World. Archived from the original on ಜೂನ್ 13, 2011. Retrieved ಅಕ್ಟೋಬರ್ 25, 2010.
  6. Isadore, Chris (April 1, 2004). "AT&T, Kodak, IP out of Dow". CNN/Money.
  7. ವೆರಿಝೋನ್ ಮಾರಲಿರುವ ಲ್ಯಾಟಿನ್ ಯುನಿಟ್್ಗಳು, iht.com
  8. ವೆರಿಝೋನ್, ಫ್ರಂಟಿಯರ್ $8.6 ಶತಕೋಟಿ ವಯರ್್ಲೆಸ್ ಒಪ್ಪಂದದಲ್ಲಿ, ಗೂಗ್ಲ್.ಕಾಂ
  9. Murawski, John (2010-07-01). "Frontier phone switch starts". News & Observer. Archived from the original on 2010-07-04. Retrieved 2010-07-01.
  10. ದಿ ಗ್ಲೋಬಲ್ 2000 ಫಾರ್ 2007 Archived 2015-04-19 ವೇಬ್ಯಾಕ್ ಮೆಷಿನ್ ನಲ್ಲಿ., ಫೋಬೆಸ್.ಕಾಂ
  11. ವೆರಿಝೋನ್ ಪರ್ಸಿಸ್ಟ್ಸ್ ವಿಥ್ ಯುರೋಪಿಯನ್ ಇಮೇಲ್ ಬ್ಲಾಕೇಡ್ , ಜಾನ್ ಲೇಡನ್, ದಿ ರಿಜಿಸ್ಟಾರ್, ಜನವರಿ 14, 2005
  12. ಪಬ್ಲಿಕ್ ಹಿಯರಿಂಗ್ ಶಾಟ್ ಇನ್ ಫೋನ್ ರೆಕಾರ್ಡ್ ಸ್ಕ್ಯಾಂಡಲ್, Archived 2011-06-24 ವೇಬ್ಯಾಕ್ ಮೆಷಿನ್ ನಲ್ಲಿ. , ವಿಲಿಯಂ ಫಿಶರ್, ಇಂಟರ್ ಪ್ರೆಸ್ ಸರ್ವಿಸ್, ಮೇ 26, 2006
  13. ನ್ಯಾಯಾಲಯದ ಆದೇಶಗಳಿಲ್ಲದೆ ವೆರಿಝೋನ್ ಗ್ರಾಹಕರ ದತ್ತಾಂಶಗಳನ್ನು ಸರ್ಕಾರಕ್ಕೆ ನೀಡಿತು, ಕನ್ಸುಮರ್ ಅಫೇರ್ಸ್.ಕಾಂ
  14. ಲಿಪ್್ಟಾಕ್, ಆಡಮ್ (2007-09-27). ವೆರಿಝೋನ್ ರಿವರ್ಸಸ್ ಇಟ್್ಸೆಲ್ಫ್ ಆನ್ ಅಬೋರ್ಸನ್ ರೈಟ್ಸ್ ಮೆಸೇಜಸ್ . ದಿ ನ್ಯೂ ಯಾರ್ಕ್ ಟೈಮ್ಸ್ , ಸೆಪ್ಟೆಂಬರ್ 27, 2007. https://www.nytimes.com/2007/09/27/business/27cnd-verizon.html. ದಿಂದ ಮರುಸಂಪಾದಿಸಿದ್ದು.
  15. ಮೂಟ್ (2010-02-07). ವೆರಿಝೋನ್ ವಯರ್್ಲೆಸ್ ಕನ್ಫರ್ಮ್ಸ್ ಬ್ಲಾಕ್. ಸ್ಟೇಟಸ್.4ಚಾನ್.ಆರ್ಗ್, 7 ಫೆಬ್ರವರಿ 2010. http://status.4chan.org/index.html#2310965532000217917 ದಿಂದ ಮರುಸಂಪಾದಿಸಿದ್ದು.
  16. /https://www.bloomberg.com/news/2010-08-12/google-verizon-pact-may-herald-end-of-equal-access-internet-as-fcc-stalls.html
  17. "Deltathree Reports First Quarter 2007 Financial Results". May 3, 2007.
  18. "Verizon FiOS TV: FiOS TV". Archived from the original on February 11, 2006. Retrieved February 12, 2006.
  19. "Verizon FiOS: FiOS for Home". Retrieved September 6, 2005.
  20. "Spamhaus Statistics: The Top 10". Retrieved August 2, 2007.
  21. "Verizon may sell $17 billion directory services". Billings Gazette. December 7, 2005.
  22. "Verizon online directory in ad deal with Google". Reuters. March 28, 2006.
  23. Ranii, David (December 6, 2005). "Donnelley likely to pass on Verizon directories". The News & Observer.
  24. "Investor.verizon.com". Archived from the original on 2010-07-24. Retrieved 2010-10-25.
  25. "Verizon Corporate Governance". Archived from the original on ಜುಲೈ 24, 2010. Retrieved January 2, 2008.

ಬಾಹ್ಯ ಕೊಂಡಿಗಳು

[ಬದಲಾಯಿಸಿ]