ವೆಬ್‌ಸೈಟ್ ಸೇವೆಯ ಬಳಕೆ
This article includes a list of references, related reading or external links, but its sources remain unclear because it lacks inline citations. (April 2009) |
ವೆಬ್‌ಸೈಟ್ ಸೇವೆಯ ಬಳಕೆ ಎಂಬುದು ವೆಬ್‌ಸೈಟ್ ಒಂದಕ್ಕೆ ಸಂದರ್ಶಕರು ಕಳಿಸಿದ ಮತ್ತು ಅದರಿಂದ ಸ್ವೀಕರಿಸಿದ ದತ್ತಾಂಶದ ಪ್ರಮಾಣವಾಗಿದೆ. ಇದು ಅಂತರಜಾಲ ಬಳಕೆಯ ಒಂದು ಬೃಹತ್ ಭಾಗವಾಗಿದೆ. ಸಂದರ್ಶಕರ ಸಂಖ್ಯೆ ಮತ್ತು ಅವರು ಭೇಟಿನೀಡುವ ಪುಟಗಳ ಸಂಖ್ಯೆಯಿಂದ ಇದು ನಿರ್ಣಯಿಸಲ್ಪಡುತ್ತದೆ. ತಮ್ಮ ತಾಣದ ಯಾವ ಭಾಗಗಳು ಅಥವಾ ಪುಟಗಳು ಜನಪ್ರಿಯವಾಗಿವೆ ಎಂಬುದನ್ನು ನೋಡಲೆಂದು, ಒಳಬರುವ ಮತ್ತು ಹೊರಹೋಗುವ ದತ್ತಾಂಶ ಸಾಗಾಟದ ಮೇಲ್ವಿಚಾರಣೆಯನ್ನು ತಾಣಗಳು ವಹಿಸುತ್ತವೆ; ಅಷ್ಟೇ ಅಲ್ಲ, ನಿರ್ದಿಷ್ಟ ದೇಶವೊಂದರಲ್ಲಿನ ಜನರಿಂದ ಬಹುಮಟ್ಟಿಗೆ ವೀಕ್ಷಿಸಲ್ಪಡುತ್ತಿರುವ ಒಂದು ನಿಶ್ಚಿತ ಪುಟದಂಥ, ಯಾವುದಾದರೂ ಸ್ಪಷ್ಟ ಪ್ರವೃತ್ತಿಗಳೇನಾದರೂ ಅಲ್ಲಿ ಕಂಡುಬರುತ್ತವೆಯೇ ಎಂಬುದನ್ನು ಸಹ ತಾಣಗಳ ಮೇಲ್ವಿಚಾರಣಾ ವ್ಯವಸ್ಥೆಗಳು ಅವಲೋಕಿಸುತ್ತವೆ. ದತ್ತಾಂಶದ ಈ ಸಾಗಾಟ ಅಥವಾ ಬಳಕೆಯ ಮೇಲ್ವಿಚಾರಣೆ ನೋಡಿಳ್ಳುವುದಕ್ಕೆ ಅನೇಕ ಮಾರ್ಗಗಳು ಲಭ್ಯವಿವೆ. ತಾಣಗಳನ್ನು ರೂಪಿಸಲು, ಭದ್ರತಾ ಸಮಸ್ಯೆಗಳನ್ನು ಎತ್ತಿತೋರಿಸಲು ಅಥವಾ ಪಟ್ಟೆಯಗಲದ (ಬ್ಯಾಂಡ್‌ವಿಡ್ತ್) ಒಂದು ಸಂಭಾವ್ಯ ಕೊರತೆಯನ್ನು ಸೂಚಿಸಲು ನೆರವು ನೀಡುವುದಕ್ಕಾಗಿ ಒಟ್ಟುಗೂಡಿಸಲ್ಪಟ್ಟ ದತ್ತಾಂಶವು ಬಳಸಲ್ಪಡುತ್ತದೆ- ಎಲ್ಲ ಬಗೆಯ ವೆಬ್‌ಸೈಟ್ ಸೇವೆಯ ಬಳಕೆಗೆ ಇಲ್ಲಿ ಸ್ವಾಗತವಿರುವುದಿಲ್ಲ.
ಜಾಹೀರಾತು ನೀಡುವ ಯೋಜನೆಗಳನ್ನು ಕೆಲವೊಂದು ಕಂಪನಿಗಳು ಮುಂದಿಡುತ್ತವೆ, ಅಂದರೆ ಹೆಚ್ಚಿಸಲ್ಪಟ್ಟ ವೆಬ್‌ಸೈಟ್ ಸೇವೆಯ ಬಳಕೆಗೆ (ಸಂದರ್ಶಕರು) ಪ್ರತಿಯಾಗಿ, ತಾಣದ ಮೇಲಿನ ತೆರೆಯ ಸ್ಥಳಾವಕಾಶಕ್ಕಾಗಿ ಹಣವನ್ನು ಅವು ಪಾವತಿಸುತ್ತವೆ. ಶೋಧಕ ಎಂಜಿನುಗಳಲ್ಲಿನ ಸೇರ್ಪಡೆಯ ಮೂಲಕ ಹಾಗೂ ಶೋಧಕ ಎಂಜಿನಿನ ಅತ್ಯುತ್ತಮವಾಗಿಸುವಿಕೆಯ ಮೂಲಕ ತಮ್ಮ ವೆಬ್‌ಸೈಟ್ ಸೇವೆಯ ಬಳಕೆಯನ್ನು ಹೆಚ್ಚಿಸುವುದರ ಕಡೆಗೂ ತಾಣಗಳು ಅನೇಕವೇಳೆ ಗುರಿಯಿರಿಸುತ್ತವೆ.
ವೆಬ್‌ಸೈಟ್ ಸೇವೆಯ ಬಳಕೆಗಳನ್ನು ವಿಶ್ಲೇಷಿಸುವಿಕೆ
[ಬದಲಾಯಿಸಿ]ವೆಬ್ ವಿಶ್ಲೇಷಣ ಶಾಸ್ತ್ರ ಎಂಬುದು ವೆಬ್‌ಸೈಟ್ ಒಂದಕ್ಕೆ ಭೇಟಿನೀಡುವ ಸಂದರ್ಶಕರ ವರ್ತನೆಯ ಮಾಪನವಾಗಿದೆ. ವಾಣಿಜ್ಯೋದ್ದೇಶದ ಸಂದರ್ಭದಲ್ಲಿ, ವೆಬ್‌ಸೈಟ್‌ನ ಯಾವ ಮಗ್ಗುಲುಗಳು ಅಂತರಜಾಲ ಮಾರಾಟಗಾರಿಕೆ ಉಪಕ್ರಮಗಳ ವ್ಯಾವಹಾರಿಕ ಉದ್ದೇಶಗಳ ಕಡೆಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಮಾಪನವನ್ನು ಇದು ವಿಶೇಷವಾಗಿ ಉಲ್ಲೇಖಿಸುತ್ತದೆ; ಜನರು ಖರೀದಿಯೊಂದನ್ನು ಮಾಡಲು ಯಾವ ಅವರೋಹ ಪುಟಗಳು ಅವರನ್ನು ಉತ್ತೇಜಿಸುತ್ತವೆ ಎಂಬುದರ ಉಲ್ಲೇಖವನ್ನು ಇಲ್ಲಿ ಉದಾಹರಣೆಗೆಯಾಗಿ ನೀಡಬಹುದು. ವೆಬ್ ವಿಶ್ಲೇಷಣ ಶಾಸ್ತ್ರದ ತಂತ್ರಾಂಶ ಮತ್ತು ಸೇವೆಗಳ ಗಮನಾರ್ಹ ಮಾರಾಟಗಾರರಲ್ಲಿ ವೆಬ್‌ಟ್ರೆಂಡ್ಸ್, ಕೋರ್‌ಮೆಟ್ರಿಕ್ಸ್, ಆಮ್ನಿಚರ್, ಮತ್ತು ಗೂಗಲ್ ಅನಲಿಟಿಕ್ಸ್ ಸಂಸ್ಥೆಗಳು ಸೇರಿವೆ.
ವೆಬ್‌ಸೈಟ್ ಸೇವೆಯ ಬಳಕೆಯನ್ನು ಅಳೆಯುವಿಕೆ
[ಬದಲಾಯಿಸಿ]ವೆಬ್‌ಸೈಟ್‌ಗಳ ಮತ್ತು ತಾಣವೊಂದರಲ್ಲಿ ಅಡಕವಾಗಿರುವ ಏಕೋದ್ದಿಷ್ಟ ಪುಟಗಳು ಅಥವಾ ವಿಭಾಗಗಳ ಜನಪ್ರಿಯತೆಯನ್ನು ನೋಡಲೆಂದು ವೆಬ್‌ಸೈಟ್ ಸೇವೆಯ ಬಳಕೆಯನ್ನು ಅಳೆಯಲಾಗುತ್ತದೆ.
ಸೇವೆ ಸಲ್ಲಿಸಲ್ಪಟ್ಟ ಎಲ್ಲಾ ಪುಟಗಳಿಗೆ ಸಂಬಂಧಿಸಿ ಒಂದು ಸ್ವಯಂಚಾಲಿತವಾಗಿ-ರೂಪುಗೊಂಡ ಪಟ್ಟಿಯಾದ ವೆಬ್ ಸರ್ವರ್ ದಾಖಲೆಯ ಕಡತದಲ್ಲಿ ಕಂಡುಬರುವ ಬಳಕೆಯ ಅಂಕಿ-ಅಂಶಗಳನ್ನು ವೀಕ್ಷಿಸುವುದರಿಂದ ವೆಬ್‌ಸೈಟ್ ಸೇವೆಯ ಬಳಕೆಯನ್ನು ವಿಶ್ಲೇಷಿಸಬಹುದಾಗಿದೆ. ಯಾವುದೇ ಕಡತಕ್ಕೆ ಸೇವೆ ಸಲ್ಲಿಸಲ್ಪಟ್ಟಾಗ ಒಂದು ಬಡಿತ ವು (ಹಿಟ್) ಅಥವಾ ಭೇಟಿಯು ಸೃಷ್ಟಿಸಲ್ಪಡುತ್ತದೆ. ಸ್ವತಃ ಪುಟವನ್ನೇ ಒಂದು ಕಡತವೆಂದು ಪರಿಗಣಿಸಲಾಗುತ್ತದೆಯಾದರೂ, ಬಿಂಬಗಳು ಕೂಡಾ ಕಡತಗಳಾಗಿರುತ್ತವೆ; ಹೀಗಾಗಿ, 5 ಬಿಂಬಗಳೊಂದಿಗಿನ ಒಂದು ಪುಟವು 6 ಬಡಿತಗಳನ್ನು (5 ಬಿಂಬಗಳು ಮತ್ತು ಸ್ವತಃ ಆ ಪುಟ) ಸೃಷ್ಟಿಸಬಲ್ಲದಾಗಿರುತ್ತದೆ. ವೆಬ್‌ಸೈಟ್‌ನಲ್ಲಿ ಅಡಕವಾಗಿರುವ ಯಾವುದೇ ಪುಟಕ್ಕಾಗಿ ಸಂದರ್ಶಕನೊಬ್ಬನು ಮನವಿ ಸಲ್ಲಿಸಿದಾಗ, ಒಂದು ಪುಟದ ದೃಶ್ಯ ವು ಸೃಷ್ಟಿಸಲ್ಪಡುತ್ತದೆ - ಓರ್ವ ಸಂದರ್ಶಕನು ಯಾವಾಗಲೂ ಕನಿಷ್ಟಪಕ್ಷ ಒಂದು ಪುಟದ ದೃಶ್ಯವನ್ನು (ಮುಖ್ಯ ಪುಟ) ಸೃಷ್ಟಿಸುತ್ತಾನಾದರೂ, ಇನ್ನೂ ಅನೇಕ ಪುಟದ ದೃಶ್ಯಗಳನ್ನು ಸೃಷ್ಟಿಸಲು ಆತನಿಗೆ ಸಾಧ್ಯವಿರುತ್ತದೆ.
ವೆಬ್‌ಸೈಟ್‌ಗೆ ಹೊರಗಡೆಯಿರುವ ಜಾಡುಹಿಡಿಯುವ ಅನ್ವಯಿಕೆಗಳು ವೆಬ್‌ಸೈಟ್‌ನ ಪ್ರತಿಯೊಂದು ಪುಟದಲ್ಲಿ HTML ಸಂಕೇತದ ಒಂದು ಸಣ್ಣ ತುಣುಕನ್ನು ತೂರಿಸುವ ಮೂಲಕ ಬಳಕೆಯನ್ನು ದಾಖಲಿಸಬಲ್ಲವಾಗಿರುತ್ತವೆ.
ಸಣ್ಣ ಕಟ್ಟಿನ ಪತ್ತೆಯ ಸಲಕರಣೆಯಿಂದಲೂ ವೆಬ್‌ಸೈಟ್ ಸೇವೆಯ ಬಳಕೆಯನ್ನು ಕೆಲವೊಮ್ಮೆ ಅಳೆಯಲಾಗುತ್ತದೆ ಮತ್ತು ಈ ರೀತಿಯಲ್ಲಿ ಬಳಕೆಯ ದತ್ತಾಂಶದ ಯಾದೃಚ್ಛಿಕ ಮಾದರಿಗಳನ್ನು ಪಡೆಯಲಾಗುತ್ತದೆ; ಒಟ್ಟು ಅಂತರಜಾಲ ಬಳಕೆಯಾದ್ಯಂತ ಒಟ್ಟಾರೆಯಾಗಿ ವೆಬ್‌ಸೈಟ್ ಸೇವೆಯ ಬಳಕೆ ಕುರಿತಾದ ಮಾಹಿತಿಯನ್ನು ಲೆಕ್ಕಹಾಕಲು ಇದರಿಂದ ಸಾಧ್ಯವಾಗುತ್ತದೆ.
ವೆಬ್‌ಸೈಟ್ ಸೇವೆಯ ಬಳಕೆಯ ಮೇಲ್ವಿಚಾರಣೆ ವಹಿಸುವಾಗ, ಈ ಕೆಳಗೆ ನಮೂದಿಸಿರುವ ಮಾಹಿತಿಯ ಬಗೆಗಳನ್ನು ಅನೇಕವೇಳೆ ತಾಳೆ ನೋಡಲಾಗುತ್ತದೆ:
- ಸಂದರ್ಶಕರ ಸಂಖ್ಯೆ.
- ತಲಾ ಸಂದರ್ಶಕನಿಗೆ ಆಗಿರುವ ಪುಟ ವೀಕ್ಷಣೆಗಳ ಸರಾಸರಿ ಸಂಖ್ಯೆ: ಸರಾಸರಿ ಸಂದರ್ಶಕರಿಗೆ ಪ್ರಾಯಶಃ ತಾಣವು ಇಷ್ಟವಾದ ಕಾರಣದಿಂದ ಅಥವಾ ಅದು ಅವರಿಗೆ ಪ್ರಯೋಜನಕಾರಿಯಾಗಿ ಕಂಡುಬಂದ ಕಾರಣದಿಂದ, ಅವರು ತಾಣದ ಒಳಗಡೆ ಆಳವಾಗಿ ಅವಲೋಕಿಸಿದ್ದನ್ನು ಒಂದು ಉನ್ನತ ಸಂಖ್ಯೆಯು ಸೂಚಿಸುತ್ತದೆ.
- ಸರಾಸರಿ ಭೇಟಿಯ ಅವಧಿ: ಓರ್ವ ಬಳಕೆದಾರನ ಭೇಟಿಯ ಒಟ್ಟು ಉದ್ದ. ವಾಡಿಕೆಯಂತೆ, ಅವರು ಹೆಚ್ಚು ಕಾಲವನ್ನು ವಿನಿಯೋಗಿಸಿದಷ್ಟೂ ನಿಮ್ಮ ಕಂಪನಿಯಲ್ಲಿ ಅವರು ಹೆಚ್ಚು ಆಸಕ್ತಿ ತಳೆದವರಾಗಿರುತ್ತಾರೆ ಮತ್ತು ಅವರು ಸಂಪರ್ಕಕ್ಕೆ ದೊರೆಯುವ ಸಾಧ್ಯತೆ ಹೆಚ್ಚು.
- ಸರಾಸರಿ ಪುಟ ಅವಧಿ: ಎಷ್ಟು ಅವಧಿಯವರೆಗೆ ಪುಟವೊಂದು ವೀಕ್ಷಿಸಲ್ಪಟ್ಟಿದೆ ಎಂಬ ಮಾಹಿತಿ. ಪುಟಗಳು ಹೆಚ್ಚು ವೀಕ್ಷಿಸಲ್ಪಟ್ಟಷ್ಟೂ ನಿಮ್ಮ ಕಂಪನಿಗೆ ಒಳ್ಳೆಯದಾಗುತ್ತದೆ.
- ಕ್ಷೇತ್ರ ವರ್ಗಗಳು: ವೆಬ್ ಪುಟಗಳು ಮತ್ತು ಹೂರಣವನ್ನು ವಿತರಿಸುವುದಕ್ಕೆ ಅಗತ್ಯವಾದ IP ವಿಳಾಸ ಬರೆಯುವ ಮಾಹಿತಿಯ ಎಲ್ಲಾ ಮಟ್ಟಗಳು.
- ದಟ್ಟಣೆಯ ಸಮಯಗಳು: ತಾಣಕ್ಕೆ ಸಂಬಂಧಿಸಿದ ಅತ್ಯಂತ ಜನಪ್ರಿಯ ವೀಕ್ಷಣಾ ಕಾಲವು, ಪ್ರಚಾರಾಂದೋಲನಗಳನ್ನು ಮಾಡುವುದಕ್ಕಿರುವ ಅತ್ಯುತ್ತಮ ಕಾಲ ಯಾವುದೆಂಬುದನ್ನು ಹಾಗೂ ನಿರ್ವಹಣೆಯನ್ನು ಕೈಗೊಳ್ಳುವುದಕ್ಕೆ ಅತ್ಯಂತ ಉತ್ಕೃಷ್ಟವಾದ ಕಾಲ ಯಾವುದೆಂಬುದನ್ನು ತೋರಿಸುತ್ತದೆ.
- ಹೆಚ್ಚಿನ ಮನವಿ ಸಲ್ಲಿಸಲ್ಪಟ್ಟ ಪುಟಗಳು: ಇವು ಅತ್ಯಂತ ಜನಪ್ರಿಯ ಪುಟಗಳಾಗಿರುತ್ತವೆ.
- ಹೆಚ್ಚಿನ ಮನವಿ ಸಲ್ಲಿಸಲ್ಪಟ್ಟ ಪ್ರವೇಶ ಪುಟಗಳು: ಪ್ರವೇಶ ಪುಟ ಎಂಬುದು ಓರ್ವ ಸಂದರ್ಶಕನಿಂದ ವೀಕ್ಷಿಸಲ್ಪಟ್ಟ ಮೊದಲ ಪುಟವಾಗಿರುತ್ತದೆ ಮತ್ತು ಯಾವ ಪುಟಗಳು ಸಂದರ್ಶಕರನ್ನು ಹೆಚ್ಚಾಗಿ ಆಕರ್ಷಿಸುತ್ತವೆ ಎಂಬುದನ್ನು ಇದು ತೋರಿಸುತ್ತದೆ.
- ಹೆಚ್ಚಿನ ಮನವಿ ಸಲ್ಲಿಸಲ್ಪಟ್ಟ ನಿರ್ಗಮನ ಪುಟಗಳು: ಕೆಟ್ಟ ಪುಟಗಳು, ಮುರಿದ ಕೊಂಡಿಗಳನ್ನು ಕಂಡುಹಿಡಿಯುವಲ್ಲಿ ಅಥವಾ ನಿರ್ಗಮನ ಪುಟಗಳು ಒಂದು ಜನಪ್ರಿಯವಾದ ಬಾಹ್ಯ ಕೊಂಡಿಯನ್ನು ಹೊಂದಿರಬಹುದು ಎಂಬುದನ್ನು ಕಂಡುಹಿಡಿಯುವಲ್ಲಿ ಹೆಚ್ಚಿನ ಮನವಿ ಸಲ್ಲಿಸಲ್ಪಟ್ಟ ನಿರ್ಗಮನ ಪುಟಗಳು ನೆರವಾಗಬಹುದು.
- ಅಗ್ರಗಣ್ಯ ಪಥಗಳು: ಒಂದು ಪಥ ಎಂಬುದು ಪ್ರವೇಶದಿಂದ ನಿರ್ಗಮನದವರೆಗೆ ಸಂದರ್ಶಕರಿಂದ ವೀಕ್ಷಿಸಲ್ಪಟ್ಟ ಪುಟಗಳ ಸರಣಿಯಾಗಿದ್ದು, ಬಹುಪಾಲು ಗ್ರಾಹಕರು ತಾಣದ ಮೂಲಕ ಹಾದುಹೋಗುವ ಮಾರ್ಗವನ್ನು ಅಗ್ರಗಣ್ಯ ಪಥಗಳು ಗುರುತಿಸುತ್ತವೆ.
- ಉಲ್ಲೇಖಕಗಳು: ಕೊಂಡಿಗಳ ಸ್ಪಷ್ಟಮೂಲವನ್ನು ಆಶ್ರಯದಾತ ಕಾರ್ಯನಿರ್ವಾಹಕ ವ್ಯವಸ್ಥೆಯು ಜಾಡುಹಿಡಿಯಬಲ್ಲದಾಗಿರುತ್ತದೆ ಮತ್ತು ಒಂದು ನಿರ್ದಿಷ್ಟ ಪುಟಕ್ಕೆ ಸಂಬಂಧಿಸಿದಂತಿರುವ ಹೆಚ್ಚಿನ ಬಳಕೆಯನ್ನು ಯಾವ ತಾಣಗಳು ಸೃಷ್ಟಿಸುತ್ತಿವೆ ಎಂಬುದನ್ನು ನಿರ್ಣಯಿಸಲು ಅದು ಸಮರ್ಥವಾಗಿರುತ್ತದೆ.
ಅಲೆಕ್ಸಾ ಸಾಧನಪಟ್ಟಿಯನ್ನು ಬಳಸುವಾಗ ತಾಣಗಳನ್ನು ಸಂಪರ್ಕಿಸುವ ಜನರ ಮೇಲೆ ಆಧರಿಸಿ, ಬಳಕೆಯ ಶ್ರೇಯಾಂಕಗಳು ಮತ್ತು ಅಂಕಿ-ಅಂಶಗಳನ್ನು ಅಲೆಕ್ಸಾ ಇಂಟರ್‌ನೆಟ್‌ನಂಥ ವೆಬ್‌ಸೈಟ್‌ಗಳು ರೂಪಿಸುತ್ತವೆ. ಇದರೊಂದಿಗಿರುವ ತೊಡಕೆಂದರೆ, ಒಂದು ತಾಣಕ್ಕೆ ಸಂಬಂಧಿಸಿದಂತಿರುವ ಬಳಕೆಯ ಸಂಪೂರ್ಣ ಚಿತ್ರದೆಡೆಗೆ ಇದು ನೋಡುತ್ತಿರುವುದಿಲ್ಲ. ನೀಲ್‌ಸನ್ ನೆಟ್‌ರೇಟಿಂಗ್ಸ್‌ನಂಥ ಕಂಪನಿಗಳ ಸೇವೆಗಳನ್ನು ಬೃಹತ್ ತಾಣಗಳು ಸಾಮಾನ್ಯವಾಗಿ ಎರವಲು ಪಡೆಯುತ್ತವೆಯಾದರೂ, ಕೇವಲ ಚಂದಾದಾರಿಕೆಯಿಂದ ಮಾತ್ರವೇ ಅವರ ವರದಿಗಳು ಲಭ್ಯವಾಗುತ್ತವೆ.
ವೆಬ್‌ಸೈಟ್ ಸೇವೆಯ ಬಳಕೆಯನ್ನು ನಿಯಂತ್ರಿಸುವಿಕೆ
[ಬದಲಾಯಿಸಿ]ವೆಬ್‌ಸೈಟ್ ಒಂದು ಕಂಡಿರುವ ಬಳಕೆಯ ಪ್ರಮಾಣವು ಅದರ ಜನಪ್ರಿಯತೆಯ ಒಂದು ಮಾಪನವಾಗಿದೆ. ಸಂದರ್ಶಕರ ಅಂಕಿ-ಅಂಶಗಳನ್ನು ವಿಶ್ಲೇಷಿಸುವ ಮೂಲಕ, ತಾಣದ ನ್ಯೂನತೆಗಳನ್ನು ನೋಡಲು ಹಾಗೂ ಆ ಪ್ರದೇಶಗಳನ್ನು ಸುಧಾರಿಸುವ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತದೆ. ತಾಣವೊಂದರ ಜನಪ್ರಿಯತೆಯನ್ನು ಮತ್ತು ಅದಕ್ಕೆ ಭೇಟಿನೀಡುವ ಜನರ ಸಂಖ್ಯೆಯನ್ನು ಹೆಚ್ಚಿಸುವುದೂ ಸಹ (ಅಥವಾ, ಕೆಲವೊಂದು ನಿದರ್ಶನಗಳಲ್ಲಿ ತಗ್ಗಿಸುವುದು) ಸಾಧ್ಯವಿದೆ.
ಸಂಪರ್ಕವನ್ನು ಸೀಮಿತಗೊಳಿಸುವಿಕೆ
[ಬದಲಾಯಿಸಿ]ತಾಣದ ಕೆಲವೊಂದು ಭಾಗಗಳನ್ನು ಒಂದು ಸಂಕೇತಪದದಿಂದ ಸಂರಕ್ಷಿಸಿ, ನಿರ್ದಿಷ್ಟ ವಿಭಾಗಗಳು ಅಥವಾ ಪುಟಗಳಿಗೆ ಕೇವಲ ಅಧಿಕೃತ ಜನರು ಮಾತ್ರವೇ ಭೇಟಿನೀಡುವುದಕ್ಕೆ ಅವಕಾಶ ನೀಡುವುದು ಕೆಲವೊಮ್ಮೆ ಗುರುತರವಾದ ತೀರ್ಮಾನವಾಗಿ ಕಂಡುಬರುತ್ತದೆ.
ಕೆಲವೊಂದು ತಾಣದ ಕಾರ್ಯನಿರ್ವಾಹಕರು ತಮ್ಮ ಪುಟವು ನಿಶ್ಚಿತ ಬಳಕೆಗೆ ಈಡಾಗುವುದನ್ನು ತಡೆಗಟ್ಟುವ ಕ್ರಮವನ್ನು ಆಯ್ಕೆಮಾಡಿಕೊಂಡಿದ್ದು, ಭೌಗೋಳಿಕ ನೆಲೆಯ ಆಧಾರದಿಂದ ಆಗುವ ಬಳಕೆಯು ಇದಕ್ಕೊಂದು ಉದಾಹರಣೆಯಾಗಿದೆ. U.S. ಅಧ್ಯಕ್ಷ ಜಾರ್ಜ್ W. ಬುಷ್‌ಗೆ ಸಂಬಂಧಿಸಿದಂತಿದ್ದ ಮರು-ಚುನಾವಣೆಯ ಪ್ರಚಾರಾಂದೋಲನದ ತಾಣಕ್ಕೆ (GeorgeWBush.com) U.S.ನಿಂದ ಹೊರಗಡೆಯಿರುವ ಎಲ್ಲಾ ಅಂತರಜಾಲ ಬಳಕೆದಾರರು ಭೇಟಿನೀಡುವುದನ್ನು 2004ರ ಅಕ್ಟೋಬರ್ 25ರಂದು ತಡೆಗಟ್ಟಲಾಗಿತ್ತು; ಸದರಿ ತಾಣದ ಮೇಲಿನ ಒಂದು ವರದಿ ಮಾಡಲ್ಪಟ್ಟ ದಾಳಿಯ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು.[೧]
ಸಂಪರ್ಕಗಳ ಸಂಖ್ಯೆಯ ಆಧಾರದ ಮೇಲೆ ಹಾಗೂ ಪ್ರತಿ ಸಂಪರ್ಕವು ಬಳಸಿಕೊಂಡಿರುವ ಪಟ್ಟೆಯಗಲದ ಆಧಾರದ ಮೇಲೆ ವೆಬ್ ಸರ್ವರ್ ಒಂದಕ್ಕಿರುವ ಸಂಪರ್ಕವನ್ನು ಸೀಮಿತಗೊಳಿಸಲೂ ಸಾಧ್ಯವಿದೆ. ಅಪಾಚೆ HTTP ಸರ್ವರ್‌ಗಳ ಮೇಲೆ ಈ ಕಾರ್ಯವು ಲಿಮಿಟಿಪ್‌ಕಾನ್ ಘಟಕ ಮತ್ತು ಇತರ ವ್ಯವಸ್ಥೆಗಳಿಂದ ನೆರವೇರಿಸಲ್ಪಡುತ್ತದೆ.
ವೆಬ್‌ಸೈಟ್ ಬಳಕೆಯ ಹೆಚ್ಚಳ
[ಬದಲಾಯಿಸಿ]ತಾಣವೊಂದನ್ನು ಶೋಧಕ ಎಂಜಿನುಗಳಲ್ಲಿ ಇರಿಸುವ ಅಥವಾ ನಿಯೋಜಿಸುವ ಮೂಲಕ ಮತ್ತು ಬೃಹತ್ ಇ-ಮೇಲ್, ಪಾಪ್-ಅಪ್ ಜಾಹೀರಾತುಗಳು, ಹಾಗೂ ಪುಟದೊಳಗಿನ ಜಾಹೀರಾತುಗಳನ್ನು ಒಳಗೊಂಡಂತೆ ಜಾಹೀರಾತು ಪ್ರಕಟಣೆಯನ್ನು ಖರೀದಿಸುವ ಮೂಲಕ, ವೆಬ್‌ಸೈಟ್ ಸೇವೆಯ ಬಳಕೆಯನ್ನು ಹೆಚ್ಚಿಸಲು ಸಾಧ್ಯವಿದೆ. ಅಂತರಜಾಲ-ಆಧರಿತವಲ್ಲದ ಜಾಹೀರಾತು ಪ್ರಕಟಣೆಯನ್ನು ಖರೀದಿಸುವ ಮೂಲಕವೂ ವೆಬ್‌ಸೈಟ್ ಸೇವೆಯ ಬಳಕೆಯನ್ನು ಹೆಚ್ಚಿಸಬಹುದಾಗಿದೆ.
ಒಂದು ವೇಳೆ ಯಾವುದೇ ಶೋಧಕದ ಮೊದಲ ಪುಟಗಳಲ್ಲಿ ವೆಬ್ ಪುಟವೊಂದು ಪಟ್ಟಿಮಾಡಲ್ಪಟ್ಟಿಲ್ಲವಾದಲ್ಲಿ (ಅದರಲ್ಲೂ ವಿಶೇಷವಾಗಿ ಒಂದು ವೇಳೆ ಮೊದಲ ಪುಟದಲ್ಲಿ ಮತ್ತೋರ್ವ ಸ್ಪರ್ಧಿಯಿದ್ದಲ್ಲಿ), ಯಾರಾದರೊಬ್ಬರು ಇದನ್ನು ಕಂಡುಕೊಳ್ಳುವ ಅಧಿಕ ಸಂಭಾವ್ಯತೆಯು ಮಹತ್ತರವಾಗಿ ಕಡಿಮೆಯಾಗುತ್ತದೆ. ಕೆಲವೇ ಕೆಲವು ಜನರು ಮೊದಲ ಪುಟವನ್ನು ದಾಟಿಕೊಂಡು ಹೋಗುತ್ತಾರೆ, ಮತ್ತು ತರುವಾಯದ ಪುಟಗಳಿಗೆ ಹೋಗುವವರ ಶೇಕಡಾವಾರು ಪ್ರಮಾಣವು ಗಣನೀಯವಾಗಿ ಕಮ್ಮಿ ಎನ್ನಬೇಕು. ಇದರ ಪರಿಣಾಮವಾಗಿ, ಶೋಧಕ ಎಂಜಿನುಗಳ ಮೇಲೆ ಸೂಕ್ತವಾದ ನಿಯೋಜನೆಯನ್ನು ಪಡೆಯುವುದು ಸ್ವತಃ ವೆಬ್‌ಸೈಟ್‌ನಷ್ಟೇ ಮುಖ್ಯವಾಗಿರುತ್ತದೆ.
ಸುಸಂಘಟಿತ ಬಳಕೆ
[ಬದಲಾಯಿಸಿ]ಶೋಧಕ ಎಂಜಿನುಗಳು ಅಥವಾ ನಿರ್ದೇಶಿಕೆಗಳಲ್ಲಿನ ಪಾವತಿಸದ ಪಟ್ಟೀಕರಣದಿಂದ ಬರುವ ವೆಬ್‌ಸೈಟ್ ಸೇವೆಯ ಬಳಕೆಯು ಸಾಮಾನ್ಯವಾಗಿ "ಸುಸಂಘಟಿತ" ಬಳಕೆ ಎಂದು ಕರೆಯಲ್ಪಡುತ್ತದೆ. ನಿರ್ದೇಶಿಕೆಗಳು, ಶೋಧಕ ಎಂಜಿನುಗಳು, ಮಾರ್ಗದರ್ಶಿಗಳು (ಯೆಲ್ಲೋ ಪೇಜಸ್ ಮತ್ತು ಭೋಜನ ಮಂದಿರದ ಮಾರ್ಗದರ್ಶಿಗಳಂಥವು), ಮತ್ತು ಪ್ರಶಸ್ತಿಯ ತಾಣಗಳಲ್ಲಿ ವೆಬ್‌ಸೈಟ್‌ನ್ನು ಸೇರಿಸುವ ಮೂಲಕ ಸುಸಂಘಟಿತ ಬಳಕೆಯನ್ನು ಸೃಷ್ಟಿಸಬಹುದು ಅಥವಾ ಹೆಚ್ಚಿಸಬಹುದು.
ಬಹುತೇಕ ನಿದರ್ಶನಗಳಲ್ಲಿ, ಪ್ರಮುಖ ಶೋಧಕ ಎಂಜಿನುಗಳೊಂದಿಗೆ ವೆಬ್‌ಸೈಟ್‌ಗಳನ್ನು ನೋಂದಾಯಿಸುವುದು ವೆಬ್‌ಸೈಟ್ ಸೇವೆಯ ಬಳಕೆಯನ್ನು ಹೆಚ್ಚಿಸುವುದಕ್ಕಿರುವ ಅತ್ಯುತ್ತಮ ಮಾರ್ಗವಾಗಿದೆ. ನೋಂದಾಯಿತ ವೆಬ್‌ಸೈಟ್‌ಗಳನ್ನು "ಮಂದಗತಿಯಲ್ಲಿ ಸಾಗಿಸುವ" ಮೂಲಕ ಶೋಧಕ ಎಂಜಿನುಗಳು ಕಾರ್ಯನಿರ್ವಹಿಸುವುದರಿಂದಾಗಿ, ಕೇವಲ ನೋಂದಾಯಿಸುವಿಕೆಯೊಂದೇ ಬಳಕೆಯ ಖಾತರಿಯನ್ನು ನೀಡಲಾರದು. ಮಂದಗತಿಯಲ್ಲಿ ಸಾಗುವ ಈ ಕಾರ್ಯಸೂಚಿಗಳು (ತೆವಳುವ ಘಟಕಗಳು) "ಸ್ಪೈಡರ್‌ಗಳು" (ಜೇಡಗಳು) ಅಥವಾ "ರೊಬೋಟ್‌ಗಳು" (ಯಂತ್ರಮಾನವರು) ಎಂದೂ ಕರೆಯಲ್ಪಡುತ್ತವೆ. ತೆವಳುವ ಘಟಕಗಳು ನೋಂದಾಯಿತ ನೆಲೆಯ ಪುಟದಲ್ಲಿ ಆರಂಭಿಸುತ್ತವೆ, ಹಾಗೂ ವೆಬ್‌ಸೈಟ್‌ನ ಒಳಗಡೆಯ ಪುಟಗಳಿಗೆ ಪ್ರವೇಶಿಸುವ ಸಲುವಾಗಿ ತಾನ ಕಂಡುಕೊಳ್ಳುವ ಹೈಪರ್‌ಲಿಂಕ್‌ಗಳನ್ನು ಸಾಮಾನ್ಯವಾಗಿ ಅನುಸರಿಸುತ್ತವೆ (ಆಂತರಿಕ ಕೊಂಡಿಗಳು). ಆ ಪುಟಗಳ ಕುರಿತಾದ ಮಾಹಿತಿಯನ್ನು ಒಟ್ಟುಗೂಡಿಸುವುದಕ್ಕೆ ಹಾಗೂ ಅದನ್ನು ಶೇಖರಿಸುವುದಕ್ಕೆ ಮತ್ತು ಶೋಧಕ ಎಂಜಿನಿನ ದತ್ತಾಂಶ ಸಂಗ್ರಹದಲ್ಲಿನ ಅನಕ್ರಮಣಿಯಲ್ಲಿ ಅದನ್ನು ಸೇರಿಸುವುದಕ್ಕೆ ತೆವಳುವ ಘಟಕಗಳು ಆರಂಭಿಸುತ್ತವೆ. ಪ್ರತಿಯೊಂದು ನಿದರ್ಶನದಲ್ಲೂ, ಪುಟದ URL ಮತ್ತು ಪುಟದ ಶೀರ್ಷಿಕೆಯನ್ನು ಅವು ಅನಕ್ರಮಣಿಯಲ್ಲಿ ಸೇರಿಸುತ್ತವೆ. ಬಹುತೇಕ ನಿದರ್ಶನಗಳಲ್ಲಿ, ವೆಬ್ ಪುಟದ ಹೆಡರ್ (ಮೆಟಾ ಟ್ಯಾಗ್) ಮತ್ತು ಪುಟದ ಪಠ್ಯಭಾಗದ ಒಂದು ನಿಶ್ಚಿತ ಪ್ರಮಾಣವನ್ನೂ ಅವು ಅನಕ್ರಮಣಿಯಲ್ಲಿ ಸೇರಿಸುತ್ತವೆ. ಆಗ, ಒಂದು ನಿರ್ದಿಷ್ಟ ಪದ ಅಥವಾ ಪದಗುಚ್ಛಕ್ಕೆ ಸಂಬಂಧಿಸಿದಂತೆ ಶೋಧಕ ಎಂಜಿನಿನ ಬಳಕೆದಾರನೊಬ್ಬನು ಹುಡುಕಿದಾಗ, ಶೋಧಕ ಎಂಜಿನು ದತ್ತಾಂಶ ಸಂಗ್ರಹದೊಳಗೆ ಪರಿಶೀಲಿಸುತ್ತದೆ ಮತ್ತು ಫಲಿತಾಂಶಗಳನ್ನು ನೀಡುತ್ತದೆ; ಶೋಧಕ ಎಂಜಿನಿನ ಗಣನೆಗಳಿಗೆ ಅನುಸಾರವಾಗಿರುವ ಪ್ರಸ್ತುತತೆಯ ಆಧಾರದ ಮೇಲೆ ಈ ಫಲಿತಾಂಶಗಳು ಸಾಮಾನ್ಯವಾಗಿ ವಿಂಗಡಿಸಲ್ಪಟ್ಟಿರುತ್ತವೆ.
ಸಾಮಾನ್ಯವಾಗಿ, ಅಗ್ರಗಣ್ಯ ಸುಸಂಘಟಿತ ಫಲಿತಾಂಶವು ವೆಬ್ ಬಳಕೆದಾರರ ವತಿಯಿಂದ ಹೆಚ್ಚಿನ ಕ್ಲಿಕ್‌ಗಳನ್ನು (ಅಥವಾ ಭೇಟಿಗಳನ್ನು) ಪಡೆಯುತ್ತದೆ. ಕೆಲವೊಂದು ಅಧ್ಯಯನಗಳ [ಸಾಕ್ಷ್ಯಾಧಾರ ಬೇಕಾಗಿದೆ] ಅನುಸಾರ, ಕ್ಲಿಕ್‌ಗಳ ಪೈಕಿಯ 5% ಮತ್ತು 10%ನಷ್ಟನ್ನು ಭಾಗವನ್ನು ಅಗ್ರಗಣ್ಯ ಫಲಿತಾಂಶವು ಪಡೆಯುತ್ತದೆ. ತರುವಾಯದ ಪ್ರತಿಯೊಂದು ಫಲಿತಾಂಶವೂ, ಹಿಂದಿನದರ ಕ್ಲಿಕ್‌ಗಳ ಪೈಕಿಯ 30% ಮತ್ತು 60%ನಷ್ಟನ್ನು ಪಡೆಯುತ್ತದೆ. ಅಗ್ರಗಣ್ಯ ಫಲಿತಾಂಶಗಳಲ್ಲಿ ಕಾಣಿಸಿಕೊಳ್ಳುವುದು ಎಷ್ಟೊಂದು ಮುಖ್ಯವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಶೋಧಕ ಎಂಜಿನಿನ ಮಾರಾಟಗಾರಿಕೆಯಲ್ಲಿ ವಿಶೇಷಜ್ಞತೆಯನ್ನು ಪಡೆದಿರುವ ಕೆಲವೊಂದು ಕಂಪನಿಗಳು ಅಸ್ತಿತ್ವದಲ್ಲಿವೆ. ಆದಾಗ್ಯೂ, ಫಲಿತಾಂಶಗಳನ್ನು ಪಡೆಯುವುದು ಹೇಗೆ ಎಂಬುದರ ನಿಜವಾದ ಜ್ಞಾನವನ್ನು ಹೊಂದಿಲ್ಲದ "ಹೆಚ್ಚಿನ ಒತ್ತಡದ ಕಾರ್ಯತಂತ್ರದ" ಕಂಪನಿಗಳು ವೆಬ್‌ಮಾಸ್ಟರ್‌ಗಳನ್ನು ಸಂಪರ್ಕಿಸುವ ಪರಿಪಾಠವು ಸಾಮಾನ್ಯವಾಗುತ್ತಿದೆ. ಪ್ರತಿ-ಕ್ಲಿಕ್‌ಗೆ-ಪಾವತಿಸುವುದಕ್ಕೆ ಪ್ರತಿಯಾಗಿ, ಶೋಧಕ ಎಂಜಿನಿನ ಮಾರಾಟಗಾರಿಕೆಯು ಮಾಸಿಕವಾಗಿ ಅಥವಾ ವಾರ್ಷಿಕವಾಗಿ ಸಾಮಾನ್ಯವಾಗಿ ಪಾವತಿಸಲ್ಪಡುತ್ತದೆ, ಮತ್ತು ತಮಗೆ ಯಾವ ಉದ್ದೇಶದೊಂದಿಗೆ ಹಣಪಾವತಿಯಾಗಿದೆಯೋ, ಅದಕ್ಕೆ ಸಂಬಂಧಿಸಿದ ನಿಶ್ಚಿತ ಫಲಿತಾಂಶಗಳ ಕುರಿತು ಬಹುತೇಕ ಶೋಧಕ ಎಂಜಿನು ಕಂಪನಿಗಳು ಭರವಸೆ ನೀಡಲಾರವು.
ವೆಬ್ ಮಾಧ್ಯಮದ ಮೇಲೆ ಭಾರೀ ಪ್ರಮಾಣದಲ್ಲಿ ಮಾಹಿತಿಯು ಲಭ್ಯವಿರುವುದರಿಂದಾಗಿ, ತೆವಳುವ ಘಟಕಗಳು ತಾವು ಶೋಧಿಸಿದ ಎಲ್ಲಾ ಪುಟಗಳನ್ನು ಅವಲೋಕಿಸುವ ಮತ್ತು ಅನಕ್ರಮಣಿಯಲ್ಲಿ ಸೇರಿಸುವ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಲು ದಿನಗಳು, ವಾರಗಳು ಅಥವಾ ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಉದಾಹರಣೆಗೆ ಹೇಳುವುದಾದರೆ, 2004ರ ಅಂತ್ಯದ ವೇಳೆಗೆ ಇದ್ದಂತೆ ಗೂಗಲ್ ಎಂಜಿನು ಎಂಟು ಶತಕೋಟಿಗೂ ಹೆಚ್ಚಿನ ಪುಟಗಳನ್ನು ಅನಕ್ರಮಣಿಯಲ್ಲಿ ಸೇರಿಸಿತ್ತು. ಪುಟಗಳ ತ್ವರಿತ ಚಲನಾಕಾರ್ಯದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೂರಾರು ಅಥವಾ ಸಾವಿರಾರು ಸಂಖ್ಯೆಯ ಸರ್ವರ್‌ಗಳನ್ನು ಹೊಂದಿದ್ದರೂ ಸಹ, ಅನಕ್ರಮಣಿಯಲ್ಲಿ ಮರುಸೇರಿಸುವ ಒಂದು ಸಂಪೂರ್ಣ ಪ್ರಕ್ರಿಯೆಯು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. ಆ ಕಾರಣದಿಂದಲೇ ಕೆಲವೊಂದು ವೆಬ್‌ಸೈಟ್‌ಗಳಲ್ಲಿ ಇತ್ತೀಚೆಗಷ್ಟೇ ಪರಿಷ್ಕರಿಸಲಾದ ಕೆಲವೊಂದು ಪುಟಗಳು, ಶೋಧಕ ಎಂಜಿನುಗಳ ಮೇಲೆ ಶೋಧನೆಗಳನ್ನು ಮಾಡುವಾಗ ತತ್‌ಕ್ಷಣವೇ ಕಂಡುಬರುವುದಿಲ್ಲ.
ಬಳಕೆ ಅತಿಯಾದ ಹೊರೆ
[ಬದಲಾಯಿಸಿ]ಮಿತಿಮೀರಿದ ಪ್ರಮಾಣದಲ್ಲಿ ಮಾಡುವ ವೆಬ್‌ಸೈಟ್ ಸೇವೆಯ ಬಳಕೆಯು ವೆಬ್‌ಸೈಟ್ ಒಂದಕ್ಕೆ ಇರುವ ಎಲ್ಲಾ ಸಂಪರ್ಕವನ್ನು ನಾಟಕೀಯವಾಗಿ ತಗ್ಗಿಸಬಲ್ಲದು ಮತ್ತು ಕೆಲವೊಮ್ಮೆ ತಡೆಗಟ್ಟಲೂಬಲ್ಲದು. ಕಡತದ ಎಷ್ಟು ಮನವಿಗಳನ್ನು ಸರ್ವರ್ ನಿಭಾಯಿಸಬಲ್ಲದೋ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಕಡತದ ಮನವಿಗಳು ಸರ್ವರ್‌ಗೆ ಹೋಗುವುದರಿಂದಾಗಿ ಇದು ಉಂಟಾಗುತ್ತದೆ ಮತ್ತು ತಾಣದ ಮೇಲೆ ಆಗುವ ಒಂದು ಅಂತರರಾಷ್ಟ್ರೀಯ ದಾಳಿಯಿಂದ ಅಥವಾ ಕೇವಲವಾಗಿ ಅತಿಯಾದ-ಜನಪ್ರಿಯತೆಯಿಂದಲೂ ಇದು ಉಂಟಾಗಬಹುದಾಗಿದೆ. ಹಲವಾರು ಸರ್ವರ್‌ಗಳನ್ನು ಹೊಂದಿರುವ ಬೃಹತ್ ಪ್ರಮಾಣದ ವೆಬ್‌ಸೈಟ್‌ಗಳು ಅಗತ್ಯವಿರುವ ಬಳಕೆಯೊಂದಿಗೆ ಅನೇಕವೇಳೆ ಸಮರ್ಥವಾಗಿ ನಿಭಾಯಿಸಬಲ್ಲವು; ಆದರೆ ಬಳಕೆಯ ಅತಿಯಾದ ಹೊರೆಯಿಂದ ಸಣ್ಣ ಪ್ರಮಾಣದ ಸೇವೆಗಳು ತೊಂದರೆಗೊಳಗಾಗುವ ಸಾಧ್ಯತೆ ಹೆಚ್ಚು.
ಸೇವಾ ನಿರಾಕರಣೆಯ ದಾಳಿಗಳು
[ಬದಲಾಯಿಸಿ]ತಾಣವೊಂದು ಸಮರ್ಥವಾಗಿ ನಿಭಾಯಿಸಬಲ್ಲುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಮನವಿಗಳೊಂದಿಗೆ ತಾಣವನ್ನು ತುಂಬಿಸಿದ, ಒಂದು ದುರುದ್ದೇಶಪೂರಿತ ದಾಳಿಯ ನಂತರ ವೆಬ್‌ಸೈಟ್‌ಗಳನ್ನು ಮುಚ್ಚುವಂತೆ ಸೇವಾ ನಿರಾಕರಣೆಯ ದಾಳಿಗಳು (ಡಿನೈಯಲ್ ಆಫ್ ಸರ್ವೀಸ್ ಅಟ್ಯಾಕ್ಸ್-DoS ಅಟ್ಯಾಕ್ಸ್) ಒತ್ತಾಯಪಡಿಸಿವೆ. ಬೃಹತ್ ಪ್ರಮಾಣದಲ್ಲಿ ಹಂಚಿಕೆಯಾದ ಸೇವಾ-ನಿರಾಕರಣೆಯ ದಾಳಿಗಳನ್ನು ಸುಸಂಘಟಿಸಲು ವೈರಸ್‌ಗಳು ಕೂಡಾ ಬಳಸಲ್ಪಟ್ಟಿವೆ.
ಹಠಾತ್ ಜನಪ್ರಿಯತೆ
[ಬದಲಾಯಿಸಿ]ಪ್ರಚಾರದ ಒಂದು ಹಠಾತ್ ಸ್ಫೋಟವು ಆಕಸ್ಮಿಕವಾದ ರೀತಿಯಲ್ಲಿ ವೆಬ್‌ಸೈಟ್ ಸೇವೆಯ ಬಳಕೆಯ ಅತಿಯಾದ ಹೊರೆಯೊಂದನ್ನು ಉಂಟುಮಾಡಬಹುದು. ಮಾಧ್ಯಮಗಳಲ್ಲಿನ ಒಂದು ಸುದ್ದಿ ತುಣುಕು, ಕ್ಷಿಪ್ರವಾಗಿ ಹರಡುವ ಒಂದು ಇ-ಮೇಲ್, ಅಥವಾ ಜನಪ್ರಿಯ ತಾಣವೊಂದಕ್ಕೆ ಸೇರಿದ ಒಂದು ಕೊಂಡಿ ಇವುಗಳು ಇಂಥದೊಂದು ಉತ್ಕರ್ಷವನ್ನು ಸಂದರ್ಶಕರಲ್ಲಿ ಉಂಟುಮಾಡಬಹುದು (ಕೆಲವೊಮ್ಮೆ ಇದು ಸ್ಲಾಶ್‌ಡಾಟ್ ಪರಿಣಾಮ ಅಥವಾ ಡಿಗ್ಗ್ ಅಥವಾ ರೆಡ್ಡಿಟ್ ಪರಿಣಾಮ ಎಂದು ಕರೆಯಲ್ಪಡುತ್ತದೆ).
ಇವನ್ನೂ ಗಮನಿಸಿ
[ಬದಲಾಯಿಸಿ]- ವೆಬ್‌ಸೈಟ್ ಸೇವೆಯ ಬಳಕೆಯ ಸೃಷ್ಟಿಯ ಮಾದರಿ
ಉಲ್ಲೇಖಗಳು
[ಬದಲಾಯಿಸಿ]- ಝಿಯಾನ್ ಹಡಾದ್, ಇಟ್ಜಿಕ್ ಕಿಟ್ರೋಸರ್ ಮತ್ತು ಯೊಸ್ಸಿ ಸೆಗಾಲ್ (6 ಮಾರ್ಚ್ 2003). "ವೆಬ್ ಟ್ರಾಫಿಕ್ ರೇಂಜಿಂಗ್" Archived 2011-01-24 ವೇಬ್ಯಾಕ್ ಮೆಷಿನ್ ನಲ್ಲಿ. – 2005ರ ಜನವರಿ 1ರಂದು ಮರುಸಂಪಾದಿಸಲಾಯಿತು
- ಮಾಲಾಸಿನ್ಸ್ಕಿ, ಆಂಡ್ರೇ; ಡೊಮಿನಿಕ್, ಸ್ಕಾಟ್ & ಹ್ಯಾಟ್ರಿಕ್, ಟಾಮ್ (1 ಮಾರ್ಚ್ 2001). "ಮೆಷರಿಂಗ್ ವೆಬ್ ಟ್ರಾಫಿಕ್" ಅಟ್ IBM – 2005ರ ಜನವರಿ 1ರಂದು ಮರುಸಂಪಾದಿಸಲಾಯಿತು
- ಮ್ಯಾಕ್ಲಿಸ್, ಶರೋನ್ (17 ಜೂನ್ 2002). "ಮೆಷರಿಂಗ್ ವೆಬ್‌ಸೈಟ್ ಟ್ರಾಫಿಕ್" Archived 2009-04-18 ವೇಬ್ಯಾಕ್ ಮೆಷಿನ್ ನಲ್ಲಿ. ಅಟ್ ಕಂಪ್ಯೂಟರ್World.com – 2005ರ ಜನವರಿ 1ರಂದು ಮರುಸಂಪಾದಿಸಲಾಯಿತು
- ವಾರ್ಡ್, ಮಾರ್ಕ್ (5 ಮೇ 2003). "ದಿ ಡೇಂಜರ್ಸ್ ಆಫ್ ಹ್ಯಾವಿಂಗ್ ಎ ಗುಡ್ ಐಡಿಯಾ" Archived 2010-07-06 ವೇಬ್ಯಾಕ್ ಮೆಷಿನ್ ನಲ್ಲಿ. – ಗ್ಲೆನ್ ಫ್ಲೀಶ್ಮನ್ ಎಂಬ ಸ್ವತಂತ್ರ ವೃತ್ತಿಗ ಪತ್ರಕರ್ತನ ತಾಣವು ಮ್ಯಾಕ್ಸೆಂಟ್ರಲ್ ಎಂಬ ತಾಣಕ್ಕೆ ಮತ್ತು ಅದರಿಂದ ಸಂಪರ್ಕವನ್ನು ಪಡೆದ ನಂತರ, ಅವನ ನಿದರ್ಶನದ ಕುರಿತಾಗಿ BBC ನ್ಯೂಸ್ ಮಾಡಿದ ಒಂದು ಅವಲೋಕನ – 2005ರ ಜುಲೈ 7ರಂದು ಮರುಸಂಪಾದಿಸಲಾಯಿತು; ಸದರಿ ಕೊಂಡಿಯು ಈಗ ಕಾರ್ಯನಿರ್ವಹಿಸುತ್ತಿಲ್ಲ
- ↑ Miller, Rich (2004-10-26). "Bush Campaign Web Site Rejects Non-US Visitors".
- Pages using the JsonConfig extension
- Articles lacking in-text citations from April 2009
- All articles lacking in-text citations
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕಂಪ್ಯೂಟರ್ ಜಾಲಬಂಧದ ವಿಶ್ಲೇಷಣೆ
- ವರ್ಲ್ಡ್ ವೈಡ್ ವೆಬ್
- ವೆಬ್‌ಸೈಟ್‌ನ ವಿಶ್ಲೇಷಣಶಾಸ್ತ್ರ
- ಅಂತರಜಾಲದಲ್ಲಿನ ಮಾರಾಟಗಾರಿಕೆ
- ಕ್ರಮಬದ್ಧವಾದ ಅಂತರಜಾಲ ಮಾರಾಟಗಾರಿಕೆ
- ಅಂತರ ಜಾಲ ತಾಣಗಳು