ವಿಷಯಕ್ಕೆ ಹೋಗು

ವೆಂಕಟರಾಜ ಪಾನಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೆಂಕಟರಾಜ ಪಾನಸೆ ಇವರು ೧೯೩೧ರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಜನಿಸಿದರು. ಬಡತನದಿಂದಾಗಿ ಹೆಚ್ಚಿಗೆ ಒದಲಾರದೆ, ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ವೃತ್ತಿ ಜೀವನ ಪ್ರಾರಂಭಿಸಿದರು. ಇವರು 'ಬೆಳಗಾವಿ: ಕನ್ನಡಿಗರ ಸತ್ವಪರೀಕ್ಷೆ' ಎಂಬ ಪುಸ್ತಕವನ್ನು ಬರೆದಿರುವರು.


ಪತ್ರಿಕೋದ್ಯಮ[ಬದಲಾಯಿಸಿ]

ಇವರು ಮೊದಲು ರೈತ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ ಬಳಿಕ, ಚಿತ್ರಗುಪ್ತದಲ್ಲಿ ಸಹಸಂಪಾದಕರಾಗಿ ಕೆಲಕಾಲ ದುಡಿದರು.ಆನಂತರ ಜನಶಕ್ತಿಯ ಸಂಪಾದಕರಾದರು. ಕೆಲಕಾಲ ಚೆನ್ನೈದಲ್ಲಿರುವ ಸೋವಿಯೆಟ್ ಒಕ್ಕೂಟದ (ಈಗ ರಶಿಯಾ)ದ ಸಮಾಚಾರ ಇಲಾಖೆಯಲ್ಲಿ ಕನ್ನಡ ವಿಭಾಗದ ಸಂಪಾದಕರಾಗಿದ್ದರು.


ಸಾಹಿತ್ಯ[ಬದಲಾಯಿಸಿ]

ಕಥಾಸಂಕಲನ[ಬದಲಾಯಿಸಿ]

  • ಮನ್ಮಥನ ಹೆಂಡತಿ
  • ಇದು ಬರೆಯುವಂಥದಲ್ಲ

ಸಂಪಾದನೆ[ಬದಲಾಯಿಸಿ]

  • ವಿಶ್ವಕಥಾಕೋಶದ ೫ನೆಯ ಸಂಪುಟ

ಇವುಗಳನ್ನೂ ನೋಡಿ[ಬದಲಾಯಿಸಿ]