ವೀರಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೀರಮ್ಮ
ಜನನ೧೧೬೦
ಅಂಕಿತನಾಮನಿಜಗುರು ಶಾಂತೇಶ್ವರ
ಸಂಗಾತಿ(ಗಳು)ದಸರಯ್ಯ


ವೀರಮ್ಮ[ಬದಲಾಯಿಸಿ]

ದಯಾವೀರನೆಂಬ ಖ್ಯಾತಿಗೆ ಪಾತ್ರನಾಗಿದ್ದ ದಸರಯ್ಯ ಎಂಬುವವರ ಧರ್ಮಪತ್ನಿ. ಇವರಿಬ್ಬರು ಕಾಮಗೊಂಡಕ್ಕೆ ಸೇರಿದವರು. ಈಕೆ ಶಿವಾನುಭವಿ, ಸಾತ್ವಿಕಳು, ಅಹಿಂಸೆಯನ್ನು ತನ್ನ ಜೀವನ ಮೌಲ್ಯವಾಗಿಸಿಕೊಂಡು, ಅಷ್ಟಾವರಣಗಳ ಮಹತ್ವ, ಶರಣರ ನಿಲುವು, ಭಕ್ತರ ಡಾಂಬಿಕ ರೀತಿ-ನೀತಿ, ಮನದ ಚಾಂಚಲ್ಯವನ್ನು ಖಂಡಿಸಿದ್ದಾಳೆ. ವ್ರತನಿಷ್ಠೆ, ಪಾದೋದಕ, ಪ್ರಸಾದಗಳು, ಮನದ ಚಾಂಚಲ್ಯ ಮತ್ತು ಶರಣರ ನಿಲುವುಗಳಿಗೆ ಈಕೆ ಮಹತ್ಚ ನೀಡಿದ್ದಾಳೆ. ಬೆಳಗಿನ ವೇಳೆಯನ್ನರಿಯುವ ಕೋಳಿಯಂತೆ ವ್ರತನಿಷ್ಠರನ್ನು ಅರಿತು ಭಕ್ತ ಬೆರೆಯ ಬೇಕೆನ್ನುತ್ತಾಳೆ. ವೀರಮ್ಮನ ಎರಡು ದೀರ್ಘ ವಚನಗಳು ಮಾತ್ರ ಲಭ್ಯವಿವೆ. ಈಕೆಯ ವಚನಗಳ ಅಂಕಿತ "ನಿಜಗುರು ಶಾಂತೇಶ್ವರ".

ಪರಿಪೂರ್ಣನಲ್ಲ ಪ್ರದೇಶಿಕನಲ್ಲ
ನಿರತಿಶಯದೊಳತಿಶಯ ತಾ ಮುನ್ನಲ್ಲ
ಶರಣನಲ್ಲ ಐಕ್ಯನಲ್ಲ ಪರಮನಲ್ಲ
ಜೀವನಲ್ಲ ನಿರವಯನಲ್ಲ ಸಾವಯನಲ್ಲ
ಪರವಿಹವೆಂಬ ಭಯದೊಳಿಲ್ಲದವನು
ನಿರಾಲಯ ನಿಜಗುರು ಶಾಂತೇಶ್ವರನ
ಶರಣರ ನಿಲುವು ಉಪಮೆಗೆ ತಾನನುಪಮ

"https://kn.wikipedia.org/w/index.php?title=ವೀರಮ್ಮ&oldid=810404" ಇಂದ ಪಡೆಯಲ್ಪಟ್ಟಿದೆ