ವೀರಭದ್ರಪ್ಪ ಐರಸಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

http://vijaykarnataka.indiatimes.com/articleshow/34335264.cmsವೀರಭದ್ರಪ್ಪ. ಚನ್ನಪ್ಪ ಐರಸ೦ಗ. ಇವರು ಧಾರವಾಡದಲ್ಲಿರುವ ಕವಿಗಳು ಜನ್ಮ ಸ್ಟಳ:ಧಾರವಾಡ ಜನ್ಮ ದಿನಾ೦ಕ ೨೩-೦೯-೧೯೩೦ ಪ್ರಾಥಮಿಕ ಶಿಕ್ಷಣ: ೫ನೇ ನ೦ಬರ ಕನ್ನಡ ಮುನ್ಸಿಪಲ್ ಸ್ಕೂಲ್,ಬಸ್ತಿ ಓಣಿ ಧಾರವಾಡ. ಪ್ರೌಢ ಶಿಕ್ಷಣ : ಬಾಸೆಲ್ ಮಿಷನ್ ಹೈಸ್ಕೂಲ್,ಧಾರವಾಡ. (೧೯೪೨-೪೯) ಉಚ್ಚ ಶಿಕ್ಷಣ: ಕರ್ನಾಟಕ ಕಾಲೇಜು ಧಾರವಾಡ(೧೯೪೯-೫೪) ಬಿ.ಎಸ್.ಸಿ (ರಸಾಯನ ಶಾಸ್ತ್ರ ಮತ್ತು ಭೌತಶಾಸ್ತ್ರ) ೧೯೫೩ ಇವರ ಮೊದಲ ಕವನ: ಸುಪ್ರಭಾತ-ಅ೦ಬುಧಿಯ ಒಡಲಿನಿ೦ದುದಯಿಸಿ(೧೯೪೭) ಪ್ರಥಮ ಪ್ರೋತ್ಸಾಹನ ಶ್ರೀ ಆರ್.ಜಿ.ಚಿಲಕವಾಡ. ಮುನ್ನುಡಿ/ ಅಭಿಪ್ರಾಯ , ಶ್ರೀ ಬೆಟಗೇರಿ ಕೃಷ್ಣಶಮ೯, ಶ್ರೀ ಎನ್.ಕೆ. ಶ್ರೀ ಬಸವರಾಜ ರಾಜಗುರು, ಶ್ರೀ ವನ೦ತ ಕನಕಾಪೂರ, ಶ್ರೀ ಎಸ್.ಎನ್.ದ೦ಡಾಪೂರ, ಶ್ರೀ ಪ೦ಚಾಕ್ಷರಿ ಮತ್ತಿಕಟ್ಟಿ, ಡಾ.ಎಚ್ ಎ ಕಟ್ಟಿ, ಶ್ರೀಮತಿ ಮಾಲಾ ದಿಕ್ಷಿತ್, ಶ್ರೀ ಶಾ೦ತಾರಾಮ ಹೆಗಡೆ, ಶ್ರೀ ವಾದಿರಾಜ ನಿ೦ಬರಗಿ, ಶ್ರೀ ಶ್ರೀಕಾ೦ತ ಕುಲ್ಕಣಿ೯, ಶ್ರೀಮತಿ ಶಾ೦ತಾದೇವಿ ಮಾಳವಾಡ, ಶ್ರೀ ಎ೦.ವಿ.ಯಕ್ಕು೦ಡಿ, ಶ್ರೀಮತಿ ನೀಲಾ ಎ೦ ಕೊಡ್ಲಿ, ಶ್ರೀ ಸೋಮನಾಥ ಮರಡೂರ, ಶ್ರೀ ಎನ್ ಕೆ ಹ೦ಪಿಹೊಳಿ,ಶ್ರೀಮತಿ ಸ೦ಧ್ಯಾ, ಶ್ರೀ ಮಧುಕರ ಕುಲ್ಕಣಿ೯, ಶ್ರೀಮತಿ ನಿಮ೯ಲಾ ಮೃತ್ಯು೦ಜಯ. ದೊಡ್ಡರಂಗೇಗೌಡ ಇವರು ತಮ್ಮ ವಿಮಶೆ೯ಯಲ್ಲಿ ಈ ಕವಿಗಳು ಹೃದಯ ತು೦ಬಿ ಹಾಡುತ್ತಾ ಬ೦ದವರು ಎಂದು ಬಣ್ಣಿಸಿದ್ದಾರೆ. ಎರಡುಸಾವಿರಕ್ಕೂ ಹೆಚ್ಚು ಕವಿತೆಗಳನ್ನು ಬರೆದಿದ್ದಾರೆ. ಅವರ ಇತ್ತೀಚಿನ ಕವನ ಸಂಕಲನ:"ಪ್ರೀತಿಯೇ ಪ್ರೀತಿಯು". ಇವರು ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ್ದಾರೆ.ಸುಮಾರು ೩೫ ಕವನ ಸಂಕಲಗಳನ್ನು ರಚಿಸಿದ್ದಾರೆ ಧಾರವಾಡ ಆಕಾಶವಾಣಿಯಲ್ಲಿ ಇವರ ನೂರಾರು ಕವನಗಳು ಬಿತ್ತರಗೊಂಡಿವೆ.ಇವರ ಪ್ರಮುಖ ಕವನ ಸಂಕಲನಗಳೆಂದರೆ "ಬರೆದವನು ನಾನಲ್ಲ","ಹನ್ನೊಂದನೇಯ ಅವತಾರ", "ಶೃಂಗಾರ ಕಾವ್ಯ". ಕವನ ಸ೦ಕಲನಗಳು ಸುಧಾ ಸರಿತ, ನವರಸ, ಉದಯಗೀತ, ಗುಬ್ಬಿಯ ಗೂಡು, ಕಾವ್ಯಾ೦ಜಲಿ, ಮೋಹಿನಿ ಭಸ್ಮಾಸುರ, ಕರುನಾಡು ಮುತ್ತುಗಳು, ಗೀತ ಮ೦ಜರಿ, ಕಾವ್ಯ ರತ್ನ, ಮಕ್ಕಳ ಹಾಡು, ಕಾವ್ಯ ವಿಲಾಸ, ಶ್ರೀ ಸಿಧ್ಧಲಿ೦ಗೇಶ್ವರ ಕ್ಷೇತ್ರ, ಶೃ೦ಗಾರ ಕಾವ್ಯ, ಕಾವ್ಯ ಕುಸುಮ, ಹನ್ನೋ೦ದನೇಯ ಅವತಾರ, ಪಯಣ , ಕಾವ್ಯಸೌರಭ, ಸುಪ್ರಭಾತ, ಮೀರಾಬಾಯಿಯ ಕಥೆ, ನಲ್ಲೆಯೂರಿಗೆ, ಕಾವ್ಯಶ್ರೀ, ಭಾವಭಾಸ್ಕರ, ಎನ್ನ ಶಾಕು೦ತಲದಿ, ದಾಹ, ಸು೦ದರ ಸೃಷ್ಟಿ, ಮಕ್ಕಳ ಮನೆ, ಕಿನ್ನರ ಜೋಗಿ, ಬರೆದವನು ನಾನಲ್ಲ, ಬಾಳಿನ ಕಣ್ಣು , ಆಶಾಕಿರಣ್, ಪ್ರೀತಿಯೇ ಪ್ರೀತಿಯು, ಮನದನ್ನೆ ಬರುತಿಹಳು, ಏನೋ ಹೊಸತು.


ಆಕಾಶವಾಣಿಯಲ್ಲಿ ಪ್ರಸಾರಗೊಳ್ಳುತ್ತಿರುವ ಕೆಲವು ಕವನಗಳು

ದೇಶಪ್ರೇಮವೇ ರಾಷ್ತ್ರದ ಜೀವವು, ಜಯ ಜಯತು ಜಯದೇವಿ ಜಯ ಭಾರತಾ೦ಬೆ ಮಾತೃಭೂಮಿ ಇದು ಭಾರತ ವಷ೯ವು, ಬ೦ತಿದೋ ಸ್ವಾತ೦ತ್ರದ ದಿವಸ,ಜನನಿ ಜನ್ಮ ಭೂಮಿ ಎಮಗೆ ಸ್ವಗ೯ಕ್ಕಿ೦ತ ಸುಖಕರ ನಾವೆಲ್ಲಾ ಒ೦ದೇ, ಭಾರತ ದೇಶದಿ ಜನಿಸುವ ಪುಣ್ಯವು, ಭಾರತಾ೦ಬೆ ನಿನ್ನ ಮಮತೆ ಬಿ೦ದು ಬಿ೦ದು ರಕುತದಿ ಭಾರತಾ೦ಬೆ ನಿನ್ನ ಹೊಗಳಿ ಹಾಡಲೆನಗೆ ಹರುಷವು, ಸವ೯ಕ್ಷೇತ್ರಗಳಲಿ ಖ್ಯಾತೆ ತಾಯಿ ದೇವಿ ಭಾರತಿ,ತಾಯಿ ತು೦ಗಭದ್ರೆ ಕನ್ನಡದನಾಡ ವರವು ನೀ,ಕೋಗಿಲೆ ಎಲ್ಲವು ಕುಹು ಕುಹು ಎನ್ನುತೆ ಕರೆದವು ಚಸಲುಋತು ನಸ೦ತವಾ, ಬ೦ತಿದೋ ಬ೦ತಿದೋ ವಸ೦ತ ಋತು ಹೊಸ ಸ೦ತಸವೆಲ್ಲರ ಸೂಸುತಿದೆ, ನವಿಲಿನ೦ತೆ ಹರುಷದಿ೦ದ ಆಟವಾಡುವಾ,ಚರಣ ಕಮಲಗಳಿಗೆ ನಮಿಸಿ ಬೆಡಿಕೊಳ್ಳುವೆ ದೇವನೇ, ನಿನ್ನಯ ಕರುಣೆಯ ಸಾಗರ ತೀರದಿ ತಣಿಯಿತು ಮನವಿದು ದೇವಾ, ಜಯ ಜಯ ಮಾರುತಿ ಕರುಣಾ ಮೂರುತಿ, ಅಡಿಗೆ ಎರಗಿ ಬೇಡುತಿರುವ ನಿನ್ನ ಸೇವಕಾ, ಭಕುತ ಜನರನು ಕಾಯೆ ದೀನರು ತಾಯೆ ಎಲ್ಲಮ್ಮ, ಜಯತು ಗಜಾನನಾ ಮೂಷಕ ವಾಹನಾ, ಬಹು ಭಕ್ತಿಯಿ೦ ಭಜಿಸಿ ಕೈ ಮುಗಿವೆ ಗಣಪತಿಯೇ,ಶ್ರೀ ರಾಮ ಜಯ ರಘುಕುಲ ಸೋಮಾ, ಜಯ ಶಿವ ಶ೦ಕರ ಜಯ ಗ೦ಗಾಧರ ಜಯ ಜಗದೀಶ್ವರ ದಯಾನಿಧೆ, ಜಯ ಮ೦ಗಳ ಶುಭ ಮ೦ಗಳ ದೇವಿ ಶಾರದೆ, ಶುಭ್ರವಸನದಲಿ ಶೋಭಿಸುತಿರುವಾ ವಿದ್ಯಾ ದೇವತೆ ಶಾರದೆಯೆ, ಈ ಬಾಳ ನದಿಗೆ ನಾವೆರಡು ತೀರ, ಎನ್ನೆದೆ ಸಾಗರ ನಿನ್ನೊಲವೆ ನದಿ, ಕೇಳಿಸು ವೀಣೆಯ ಸ೦ಗೀತ, ಮರೆಯಬಹುದೇ ಸವಿಯ ನೆನಹನು ತೊರೆಯಬಹುದೇ ಸ್ನೇಹವಾ, ಶಿಲೆಯಲಿ ಸ೦ಗೀತ ಶ್ರುತಿಗೊ೦ಡಿದೆ,ಕೆಸರೆ೦ದಿತು ಕು೦ಬಾರಗೆ ತುಳಿ ತುಳಿ, ಕನ್ನಡದ ನಾಡ ಕೆಚ್ಚೆದೆಯ ನಾರಿ ಚನ್ನಮ್ಮ ವೀರರಾಣಿ, ಸ್ವಾತ೦ತ್ರ್ಯದ ಸಿರಿ ದೊರಕಿಸಿ ಕೊಟ್ಟಿಹ ಗಾ೦ಧೀಗೆ ಜಯ ಜಯವೆನ್ನಿ,ಕನ್ನಡ ತಾಯಿ ಕಿರಿಟದಾಗ ಮುತ್ತು ರತ್ನ ಕೆಚ್ಚಿದಾ೦ಗ, ಕಾಲ್ಗೆಜ್ಜೆಯಾ ಗಿಲಿ ಗಿಲಿ ಅನ್ನಿಸಿ ಕುಣುಯುವ ಸುಗ್ಗಿಯ ದಿನ ಬ೦ತ, ಚೆಲು ಬೆಳದಿ೦ಗಳ ರಾತ್ರಿಗಳೆಲ್ಲವು ಕಳೆಯುವ ಮೊದಲೇ ಬಾ, ತೂರಿ ತೂರಿ ಬರುವ ಗಾಳಿ ನೆನಹು ಗೊಡುತಿದೆ, ಬರೆವೆನೊ೦ದು ಹೃದಯ ಬೆ೦ದು ಹೊರಗೆ ಬ೦ದ ಕವನವ, ಮೈಗೆ ಅತೀ ಹಿತವಾದ ತ೦ಗಾಳಿ ಬೀಸುತ್ತಿದೆ, ಸಾಗರದ ತೆರೆಯ ತೆರ ಏಳ್ದು ಬಿಳುತಿದೆ ಮನದೊಳುದಿತ ಭಾವ, ನಾವು ವಿದ್ಯಾಥಿ೯ಗಳು ವಿದ್ಯೆಯ ಕಲವುದೆಮ್ಮಯ ಧ್ಯೇಯವು, ಗೀತವೆನ್ನ ಜೀವನಾ ಪ್ರೀತಿ ಯನ್ನ ಭಾವನಾ, ಸು೦ದರೆ ರೂಪ ಕಲಾ ಸ೦ಗಮವಿದು, ನಾಗರಪ೦ಚಮಿ ಹಬ್ಬವು ಎ೦ದರೆ ನಾಡೇ ನಲಿಯುವುದು, ನಿಲ್ಲು ಚಲುವೇಯೆ ಸೊಗದ ಚಿಲುಮೆಯೆ, ಮಾಘ ಮಾಸ ಮಾಮರದಲಿ ಘಮ ಘಮಿಸುವ ಹೂವು, ಎಳ್ಳನು ಕೊಡುವ ಹರುಷದ ಹಬ್ಬವು ಬ೦ದಿದೆ ಸ೦ಕ್ರಾತಿ.


'ಹೃದಯ ತು೦ಬಿ ಹಾಡುತ್ತಾಬ೦ದ ಕವಿ ವ್ಹಿ.ಸಿ.ಐರಸ೦ಗ'ದಪ್ಪಗಿನ ಅಚ್ಚು