ವಿ. ಜಿ. ಕಾರ್ನಾಡ್
ವಿಜಿ ಕಾರ್ನಾಡ್ (೧೯೨೫- ೭ ಸೆಪ್ಟೆಂಬರ್ ೨೦೨೦)[೧] ಅವರು ಬಾನ್ಸುರಿ ನುಡಿಸುವ ಭಾರತೀಯ ಶಾಸ್ತ್ರೀಯ ಕೊಳಲು ವಾದಕರಾಗಿದ‍್ದರು]] [೨]
ಆರಂಭಿಕ ಜೀವನ
[ಬದಲಾಯಿಸಿ]ಅವರು ೧೯೨೫ರಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು, ಅಲ್ಲಿ ಬಿದಿರು ಹೇರಳವಾಗಿ ಬೆಳೆಯುತ್ತಿತು. ಅವರು ಯೌವನದಲ್ಲಿ ಕೊಳಲು ಮತ್ತು ಹಾರ್ಮೋನಿಯಂ ನುಡಿಸುತಿದ್ದರು.
ವೃತ್ತಿ
[ಬದಲಾಯಿಸಿ]ಅವರು ಆ ಕಾಲದ ಹೆಸರಾಂತ ಕೊಳಲು ವಾದಕರಾದ ಪಿ. ಸಂಜೀವರಾವ್ ಅವರಿಂದ ಪ್ರಭಾವಿತರಾಗಿದ್ದರು. ಅವರು ೨೦ನೇ ಶತಮಾನದ ಅತ್ಯುತ್ತಮ ಕೊಳಲು ವಾದಕರಾದ ಪನ್ನಾಲಾಲ್ ಘೋಷ್ ಅವರಿಂದ ಕೊಳಲು ಕಲಿಯಲು ಪ್ರಾರಂಭಿಸಿದರು. ಅವರ ಗುರು ಪನ್ನಾಲಾಲ್ ಘೋಷ್ ಅವರಂತೆ ಕಾರ್ನಾಡ್ ಅವರು ಆಕಾಶವಾಣಿಯಲ್ಲಿ ಸಿಬ್ಬಂದಿ ಕಲಾವಿದರೂ ಕೂಡ ಆಗಿದ್ದರು. ೧೯೬೦ ಮತ್ತು ೧೯೮೨ ರಲ್ಲಿ ಅವರು ಹಲವಾರು ಯುರೋಪಿಯನ್ ದೇಶಗಳಲ್ಲಿ ಪ್ರದರ್ಶನ ನೀಡಿದ್ದರು. ಇಂದು ಕಾರ್ನಾಡರು ಭಾರತದ ಅತ್ಯಂತ ಮೆಚ್ಚುಗೆ ಪಡೆದ ಕೊಳಲು ವಾದಕರಲ್ಲಿ ಒಬ್ಬರಾಗಿದ್ದಾರೆ. ಅವರು ಪ್ರಸಿದ್ಧ ಕೊಳಲುವಾದಕ ಪನ್ನಾಲಾಲ್ ಘೋಷ್ ಅವರ ಬಳಿ ಕಲಿತ ಕೊನೆಯ ಕೊಳಲು ವಾದಕರಲ್ಲಿ ಒಬ್ಬರು. ೧೯೮೬ ರಲ್ಲಿ ಅವರು ತಮ್ಮ ಗುರುವಿನ ಗೌರವಾರ್ಥ ಬಾಂಗ್ಲಾದೇಶದ ಢಾಕಾದಲ್ಲಿ ಸಂಗೀತ ಕಚೇರಿ ನೀಡಿದರು. ಅವರು ೨೦೧೧ ರಲ್ಲಿ ಪನ್ನಾಲಾಲ್ ಘೋಷ್ ಅವರ ೧೦೦ನೇ ಜನ್ಮ ವಾರ್ಷಿಕೋತ್ಸವದಲ್ಲಿ ಪ್ರದರ್ಶನ ನೀಡಿದರು.
ಉಲ್ಲೇಖಗಳು
[ಬದಲಾಯಿಸಿ]- ↑ https://davidphilipson.com/music/karnad/
- ↑ "Pt. V.G. Karnad - bansuri". davidphilipson.com. Retrieved 2019-10-25.