ವಿಶ್ವ ಗುಬ್ಬಚ್ಚಿಗಳ ದಿನ
ಮನೆಯಂಗಣದಲ್ಲಿನ ಗುಬ್ಬಚ್ಚಿಗಳು ಹಾಗೂ ಇನ್ನಿತರ ಪಕ್ಷಿಗಳ ಬಗೆಗೆ ಜನ ಜಾಗೃತಿ ಉಂಟುಮಾಡಿ ಅವುಗಳ ಸಂಕುಲಕ್ಕೆ ಉಂಟಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಪ್ರಯತ್ನವಾಗಿ ಮಾರ್ಚ್ 20 ದಿನವನ್ನು ವಿಶ್ವ ಗುಬ್ಬಚ್ಚಿಗಳ ದಿನವಾಗಿ ಆಚರಿಸಲಾಗುತ್ತಿದೆ. ಭಾರತದ ನೇಚರ್ ಫಾರೆವರ್ ಸೊಸೈಟಿಯ[೧] ಪ್ರಮುಖ ಆಸಕ್ತಿಯ ಮೇರೆಗೆ ಪ್ರಾರಂಭಗೊಂಡಿರುವ ಈ ಆಚರಣೆಗೆ, ಫ್ರಾನ್ಸಿನ ಇಕೋ-ಸಿಸ್ ಆಕ್ಷನ್ ಫೌಂಡೆಶನ್ ಮತ್ತು ವಿಶ್ವದ ಅನೇಕ ಸಂಸ್ಥೆಗಳು ಸಹಯೋಗ ನೀಡಿವೆ.ಸಂಸ್ಥೆಯ ನಿರ್ಮಾತೃ ಮೊಹಮ್ಮದ್ ದಿಲ್ವಾರ್ ಅವರು 2010ರಲ್ಲಿ ಗುಬ್ಬಚ್ಚಿಗಳ ದಿನವನ್ನು ಜಗತ್ತಿಗೆ ಪರಿಚಯಿಸಿದರು.
ಪ್ರಪಂಚದಾದ್ಯಂತ
[ಬದಲಾಯಿಸಿ]ಪ್ರತಿವರ್ಷ ಎನ್‌ಎಫ್‌ಎಸ್‌ಐ ವಿಶ್ವ ಗುಬ್ಬಚ್ಚಿಗಳ ದಿನವನ್ನು ಪ್ರಪಂಚದಾದ್ಯಂತ ಒಟ್ಟು 50 ರಾಷ್ಟ್ರಗಳಲ್ಲಿ ಆಚರಿಸುತ್ತಿದೆ
ಗುಬ್ಬಚ್ಚಿಗಳ ಅವಸಾನಕ್ಕೆ ಕಾರಣ
[ಬದಲಾಯಿಸಿ]- ಪ್ರಕೃತಿ ಸೌಂದರ್ಯವನ್ನು ಮೂಲೆಗುಂಪು ಮಾಡಿ ತಾಂತ್ರಿಕ ಬದುಕಿಗೆ ಜೋತುಬಿದ್ದಿರುವದು.
- ಕೃಷಿಯಲ್ಲಿ ಕೀಟನಾಶಕಗಳ ಬಳಕೆ.
- ಪ್ಯಾಕೇಟ್ ಆಹಾರ.
- ಬದಲಾದ ಜೀವನಶೈಲಿ.ಇವೆಲ್ಲವೂ ಗುಬ್ಬಚ್ಚಿಗಳಿಗೆ ಆಹಾರದ ಕೊರತೆ ಎದುರಾಗುವಂತೆ ಮಾಡಿದ್ದಲ್ಲದೇ ಅವುಗಳ ಸಾವಿಗೆ ಕಾರಣವಾಗಿದೆ .[೨]
ವಾಸದ ಕೊರತೆ
[ಬದಲಾಯಿಸಿ]ಹಿಂದಿನ ಮನೆಗಳು ಹೆಚ್ಚಿನದಾಗಿ ಹಂಚಿನ , ಹುಲ್ಲಿನ ಮನೆಗಳು. ಇವುಗಳು ಗುಬ್ಬಚ್ಚಿಗಳಿಗೆ ಹೇಳಿ ಮಾಡಿಸಿದ ವಾಸಸ್ಥಾನವಾಗಿದ್ದವು. ಆದರೆ ಇಂದಿನ ಮನೆಗಳ ನಿರ್ಮಾಣವೂ ಸಂಪೂರ್ಣವಾಗಿ ಆಧುನಿಕರಣಕ್ಕೆ ಒಳಪಟ್ಟಿರುವದು. ಇಂತಹ ಮನೆಗಳಲ್ಲಿ ಗುಬ್ಬಚ್ಚಿಗಳು ಗೂಡಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗೂಡಿಲ್ಲದೇ ಗುಬ್ಬಚ್ಚಿಗಳು ಬಿಸಿಲು, ಮಳೆ , ಗಾಳಿಗೆ ತತ್ತರಿಸುತ್ತಿದ್ದು ಅಳಿವಿನಂಚಿಗೆ ಸಾಗುತ್ತಿವೆ.
ಎನ್‌ಎಫ್‌ಎಸ್‌ಐನ ಜಾಗೃತಿ ಅಭಿಯಾನ
[ಬದಲಾಯಿಸಿ]ಎನ್‌ಎಫ್‌ಎಸ್‌ಐ ಇದು ಸ್ಥಾಪನೆಯಾಗಿದ್ದು 2005ರಲ್ಲಿ. ಗುಬ್ಬಚ್ಚಿಗಳು ಅವಸಾನಕ್ಕೆ ಹೋಗುತ್ತಿರುವುದನ್ನರಿತ ಎನ್‌ಎಫ್‌ಎಸ್‌ಐ ಇವುಗಳ ಬಗ್ಗೆ ಅರಿವು ಮೂಡಿಸಲು ಹಾಗೂ ವಾಸಸ್ಥಾನದ ಸಮಸ್ಯೆ ನಿವಾರಿಸಲು ಗೂಡುಗಳನ್ನು ಹಂಚಿಕೆ ಮಾಡುತ್ತಿದೆ.[೩]