ವಿಶ್ವ ಕಾರ್ಮಿಕರ ದಿನಾಚರಣೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Information icon.svg ವಿಶ್ವಕೋಶದ ಲೇಖನಗಳು ಮಾಹಿತಿಯನ್ನು ನೀಡಬೇಕಷ್ಟೆ. ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ವಿಶ್ವಕೋಶಕ್ಕೆ ತಕ್ಕಂತದಲ್ಲ.

'ಮೇ ದಿನ'-'ವಿಶ್ವಕಾರ್ಮಿಕರ ದಿನಾಚರಣೆ'

'ಬಂಡಾವಾಳಶಾಹಿ' ಮತ್ತು 'ಸಮಾಜವಾದಿ ಸಿದ್ಧಾಂತ' :[ಬದಲಾಯಿಸಿ]

ಕಾರ್ಲ್ ಮಾರ್ಕ್ಸ್ ೧೮೯೬ ರ ಮೇ ತಿಂಗಳಿನಲ್ಲಿ 'ನ್ಯಾಷನಲ್ ' ದಲ್ಲಿ ಇದರಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಮೇ ೧೮೯೦ ರಿಂದ ಮೇ ೧ ನ್ನು ೮ ಗಂಟೆಗಳ ಬೇಡಿಕೆಗೆ, ಆಚರಿಸುವ ಕರೆಯನ್ನು ಕೊಟ್ಟರು. ಇದಕ್ಕಿಂತ ಮಿಗಿಲಾಗಿ ಮೇ, ೧ ನೆಯ ತಾರೀಖನ್ನು 'ವಿಶ್ವಕಾರ್ಮಿಕರದಿನ' ವೆಂದೂ 'ದೀಕ್ಷಾದಿನ' ವಾಗಿಯೂ ಆಚರಿಸುವಂತೆ ರೂಪಿಸಲಾಯಿತು. ಅಂದರೆ ಕಾರ್ಮಿಕರು ತಮ್ಮ ಐತಿಹಾಸಿಕ ಜವಾಬ್ದಾರಿಯಾದ ಸಮಾಜವಾದಿ ಸಾಮಾಜಿಕ ವ್ಯವಸ್ಥೆಯನ್ನು ಸ್ಥಾಪಿಸಲು ನಡೆಸಬೇಕಾದ ವರ್ಗ ಹೋರಾಟಗಳ ವಾರ್ಷಿಕ ಆಚರಣೆಯಾಗಿ ರೂಪಿಸಿದ್ದರು. 'ವಿಶ್ವದ ಮೊದಲ ಸಮಾಜವಾದಿ ರಾಷ್ಟ್ರ' ವನ್ನು ಸ್ಥಾಪಿಸಿದ ವಿ. ಐ. ಲೆನಿನ್ ರವರ 'ಮೇ ದಿನಾಚರಣೆ' ಯನ್ನು ಕುರಿತು ಹೇಳಿರುವ ಮಾತುಗಳು ಅತ್ಯಂತ ಔಚಿತ್ಯಪೂರ್ಣವಾಗಿವೆ. 'ಕಾರ್ಮಿಕರು ತಮ್ಮ ದಿನನಿತ್ಯದ ಸಮಸ್ಯೆಗಳನ್ನು ಕುರಿತು ಚಿಂತಿಸಲು ಹಾಗೂ ಬೇಡಿಕೆಗಳನ್ನು ರೂಪಿಸಿ ಹೋರಾಡಲು ವರ್ಷವೆಲ್ಲಾ ತೆರವಾಗಿರುತ್ತದೆ. ಆದರೆ, ವಿಶ್ವದಲ್ಲಿ ಬಂಡವಾಳಶಾಹಿಯು ನಡೆಸುತ್ತಿರುವ ಶೋಷಣೆ ಮತ್ತು ದಬ್ಬಾಳಿಕೆಗಳನ್ನು ಅಂತ್ಯಗೊಳಿಸಿ, ಶೋಷಣಾರಹಿತ ಸರಿಸಾಮಾನತೆಯ, ಸಮಾಜವಾದಿ ಸಮಾಜದ ನಿರ್ಮಾಣಕ್ಕಾಗಿ ನಡೆಸಬೇಕಾದ ಹೋರಾಟಗಳ ಬಗ್ಗೆ ಹಾಗೂ ಮಾಡಬೇಕಾದ ಯೋಜನೆಗಳಬಗ್ಗೆ ಚಿಂತನೆಮಾಡಲು ಹಾಗೂ ನಿರ್ಣಯಗಳನ್ನು ಕೈಗೊಳ್ಳಲು 'ಮೇ ದಿನ' ವನ್ನು ಮೀಸಲಾಗಿಡಬೇಕು.' ಎಂದು. ಎಲ್ಲಾ ದೇಶಗಳ ಕಾರ್ಮಿಕರೇ ಒಂದಾಗಿರಿ, ಒಂದಾಗಿರಿ', 'ವಿಶ್ವದ ಕಾರ್ಮಿಕರೇ ಒಂದಾಗಿರಿ', ಇದು 'ಮೇ ದಿನಾಚರಣೆ' ಯ ಘೋಷಣೆ. ವಿಶ್ವದ ಮೇದಿನವನ್ನು ಸತತವಾಗಿ ೧೨೩ ವರ್ಷಆಚರಿಸುತ್ತಾಬಂದಿದೆ. ೨೦೦೯ ರಂದು ಬದಲಾದ ವಿಶ್ವದ ಪರಿಸ್ಥಿತಿಯಲ್ಲಿ ನಾವು ಕಾಣುವುದು, ಬಂಡವಾಳಶಾಹಿ ವ್ಯವಸ್ಥೆಯ ಪೂರ್ಣಪತನದ ಪಥ. ಹಾಗಾಗಿ ಈವರ್ಷವನ್ನು 'ವಿಶ್ವ ಸಮಾಜವಾದೀ ಸಮಾಜ ಪ್ರತಿಷ್ಠಾಪನೆಯ ದೀಕ್ಷಾದಿನ' ವೆಂದು ಆಚರಿಸುವ ಅಪರಿಸ್ಥಿತಿ ಬಂದಿದೆ. ವಿಶ್ವ-ಕಾರ

"೧೯೨೯-೩೦ ರಲ್ಲಾದ ವಿಶ್ವದ ಆರ್ಥಿಕಮುಗ್ಗಟ್ಟು" :[ಬದಲಾಯಿಸಿ]

ಚಾರಿತ್ರಿಕ ಸಂಗತಿಯೆಂದರೆ, ೧೯೨೯-೩೦ ರದಶಕದಲ್ಲಿ ' ಗ್ರೇಟ್ ಡಿಪ್ರೆಶನ್' ಸಂಭವಿಸಿತ್ತು. ಆದರೆ, ೨೦೦೮ ರ ಅದೇ ಮರುಕಳಿಸಿದ 'ಗ್ರೇಟ್ ಡಿಪ್ರೆಶನ್' ನ್ನು ಗಮನಿಸಿದರೆ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪರಿಹಾರವಿಲ್ಲವೆಂಬ ತಳಮಳ, ಈಗ ಎಲ್ಲೆಡೆ ಪ್ರಾರಂಭವಾಗಿದೆ. ಈ ಸಂಕ್ರಮಣಕಾಲದಲ್ಲಿ ವಿಶ್ವದ ಗಮನ, ಸಮಾಜವಾದಿ ರಾಷ್ಟ್ರಗಳ ಕಡೆಗೆ ಹೊರಳಿದೆ. ಒಂದೆಡೆ ಬಲಾಢ್ಯ-ಚೈನ, ತನ್ನ ಸಮಾಜವಾದದ ಪ್ರಯೋಗದಿಂದಲೇ ವಿಶ್ವದ ಅತೀ ಬಲಿಷ್ಠ ರಾಷ್ಟ್ರವಾಗಿ ಮೆರೆಯುತ್ತಿದೆ. ಮತ್ತೊಂದು ಕಡೆ, ಸಣ್ಣ-ಪುಟ್ಟರಾಷ್ಟ್ರಗಳಾದ ಬ್ರೆಝಿಲ್, ಮೆಕ್ಸಿಕೊ, ನಿಕರಾಗುವ, ನೇಪಾಳ, ಮುಂತಾದ ರಾಷ್ಟ್ರಗಳು ಎಲ್ಲರ ಗಮನವನ್ನು ಸೆಳೆಯುತ್ತಿವೆ.

ಇಂದಿನ (೨೦೦೯-೧೦) ವಿಶ್ವದ ಕಾರ್ಮಿಕರ ಪರಿಸ್ಥಿತಿ :[ಬದಲಾಯಿಸಿ]

೨೦೦೮ ರ ಅಕ್ಟೋಬರ್ ತಿಂಗಳಿನಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ವಿಶ್ವಕೇಂದ್ರವಾದ ಅಮೆರಿಕೆಯಲ್ಲಿ 'ಮಹಾನ್ ಆರ್ಥಿಕ ಕುಸಿತ' ಸಂಭವಿಸಿ ಆ ರಾಷ್ಟ್ರದ ಹಿರಿಯ ಪ್ರಖ್ಯಾತ ಖಾಸಗಿ ಬ್ಯಾಂಕ್ ಗಳು, ದಿವಾಳಿತನವನ್ನು ಘೋಷಿಸಿದ ಪರಿಣಾಮವಾಗಿ, ಅಲ್ಲಿ ಪ್ರಾರಂಭವಾದ ತೀವ್ರ ಆರ್ಥಿಕ ಮುಗ್ಗಟ್ಟು ವಿಶ್ವದಾದ್ಯಂತವೂ ಹಬ್ಬಿ, ವಿಶ್ವದಲ್ಲೇ ಬಂಡವಾಳಶಾಹೀ ವ್ಯವಸ್ಥೆಯೇ ಕುಸಿದುಬೀಳುವ ಭೀತಿಯನ್ನುಂಟುಮಾಡಿವೆ. ಕುಸಿಯುತ್ತಿರುವ 'ಆರ್ಥಿಕ ಮುಗ್ಗಟ್ಟು', ವಿಶ್ವದಾದ್ಯಂತ ಹಬ್ಬಿತು. ಹೀಗೆಯೇ ಆದಲ್ಲಿ ಬಂಡವಾಳಶಾಹಿಯನ್ನು ನಂಬಿದವರಿಗೆ ವ್ಯವಸ್ಥೆಯ ಕುಸಿತದ ಅರಿವಾಗಿ, ಮಾನಸಿಕ ಆಘಾತವಾಗಿದೆ. ೧೮೯೬ ರ ಮೇ ೧ ತಿಂಗಳು ಚಿಕಾಗೋ ನಗರದಲ್ಲಿ 'ಹೇಮಾರ್ಕೆಟ್ ಸ್ಕ್ವೇರ್' ನಲ್ಲಿ ನಡೆದ 'ಕಾರ್ಮಿಕರ ಬೃಹತ್ ಹೋರಾಟ' ವನ್ನು ನೆನಪಿಗೆ ತರುತ್ತದೆ. ಅಂದು ರೂಪುಗೊಂಡ 'ಅಮೆರಿಕನ್ ರಾಷ್ಟ್ರೀಯ ಸಂಪು', ಕಾರ್ಮಿಕ ವರ್ಗವು ದಿನಕ್ಕೆ ೮ ಗಂಟೆಗಳ ಕಾಲ ಕೆಲಸದ ವೇಳೆಯ ಬೇಡಿಕೆಗಾಗಿ ನಡೆದ ಐತಿಹಾಸಿಕ ಹೋರಾಟ ಈ ಸಂಬಂದದಲ್ಲಿ ನಡೆದ ಗೋಲಿಬಾರ್ ನಲ್ಲಿ ಮಡಿದ ಕಾರ್ಮಿಕರು, ತತ್ಪರಿಣಾಮವಾಗಿ ಗಲ್ಲಿಗೇರಿಸಿಲಾದ ಕಾರ್ಮಿಕ-ಮುಖಂಡರು, ಮುಂತಾದ ಹೋರಾಟ, ತ್ಯಾಗ-ಬಲಿದಾನಗಳ ಕಥನ ಜ್ಞಾಪಕಕ್ಕೆ ಬಂದಾಗ, ಅಂದಿನಿಂದ ಇಂದಿನವರೆಗಿನ ಪರಿಕಲ್ಪನೆ ಸ್ಮೃತಿಪಟಲದಲ್ಲಿ ಮಿಂಚಿ ಮನಸ್ಸಿನ ಸಮತೋಲನವನ್ನು ಕೆಡೆಸುತ್ತದೆ. ಅಂದು ತಮ್ಮ ರಾಕ್ಷಸೀ ಪ್ರವೃತ್ತಿಯನ್ನು ಮೆರೆಸಿ ಕಾರ್ಮಿಕರ ಹೋರಾಟಗಾರರ ಮೇಲೆ, ಖಾಸಗೀಸೈನ್ಯವನ್ನು ದಬ್ಬಾಳಿಕೆ ಮಾಡಲು ಆಜ್ಞಾಪಿಸಿದ ಬಂಡಾವಾಳಶಾಹೀ ಶಕ್ತಿಗಳು, ತಮ್ಮ ರಾಕ್ಷಸೀ ಮೂಲಪ್ರವೃತ್ತಿಯನ್ನು ತ್ಯಜಿಸಿಲ್ಲವಾದರೂ ಇಂದು ಅವರಕಣ್ಣುಮುಂದೆಯೇ 'ಬಂಡಾವಾಳ ಶಾಹಿ ವ್ಯವಸ್ಥೆ' ಕುಸಿಯುತ್ತಿರುವ ಸನ್ನಿವೇಶವನ್ನು ವೀಕ್ಷಿಸುವಕಾಲ ಒದಗಿಬಂದಿದೆ. ಅಂದಿನ ಬಂಡವಾಳಶಾಹಿಯು, 'ಮುಂದುವರೆದ ಬಂಡವಾಳಶಾಹಿ' ಯಾಗಿ, ಅದು 'ಸಾಮ್ರಾಜ್ಯಶಾಹಿ' ಯಾಗಿ, 'ನವ-ಸಾಮ್ರಾಜ್ಯಶಾಹಿ' ಯಾಗಿ, ಬಲಗೊಳ್ಳುತ್ತ, ವಿಶ್ವವನ್ನೇ ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಡುವಷ್ಟು ಹಂತಕ್ಕೆ ಬೆಳೆದರೂ ಆ ಬಂಡವಾಳಶಾಹಿ ವ್ಯವಸ್ಥೆಯಲ್ಲಿಯ 'ಅಂತರ್ಗತ ವೈರುಧ್ಯ' ಗಳೇ ಅದಕ್ಕೆ ಮುಳುವಾಗಿ, ನಿಧಾನವಾಗಿ ಅದರ ಅವಸಾನದ ಅಂಚನ್ನು ಮುಟ್ಟಿವೆ.

ಇಂದಿನ ಆರ್ಥಿಕ ಹಾಗೂ ರಾಜಕೀಯ ತಜ್ಞರು, ವೈಜ್ಞಾನಿಕ ಸಮಾಜವಾದದ ಪ್ರವರ್ತಕ, 'ಕಾರ್ಲ್ ಮಾರ್ಕ್ಸ್' ನ ಮೂಲ ಸಿದ್ಧಾಂತಗಳ ಬರವಣಿಗೆಯನ್ನು ಶೋಧದಲ್ಲಿದ್ದಾರೆ. ಸಮಾಜವಾದಿ ವ್ಯವಸ್ಥೆಯ ಇಂದಿನ ಸಂಕಷ್ಟಕ್ಕೆ ಪರ್ಯಾಯವೆಂದು ನಿರ್ಣಯಕ್ಕೆ ಬರುತ್ತಿದ್ದಾರೆ. ೨೦೦೮ ರಲ್ಲಿ ಆರ್ಥಿಕ ಮುಗ್ಗಟ್ಟು

ಭಾರತ[ಬದಲಾಯಿಸಿ]

ಭಾರತದಲ್ಲಿ ಮೇ ೧ ಅನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ.ಈ ದಿನವನ್ನು ಅಂತರಾಷ್ಟ್ರೀಯ ಶ್ರಮಿಕ್ ದಿವಸ್ಎಂದು ಆಚರಿಸಲಾಗುತ್ತದೆ. ಪಾದಾರ್ಪಣೆಮಾಡಿ ವಿಶ್ವದ ಸಮಾಜವಾದದ 'ಇತಿಹಾಸದ ಕೊನೆ', 'ಸಿದ್ಧಾಂತದ ಕೊನೆ,' ಹತ್ತಿರಕ್ಕೆ ಬಂದಿದೆ. ಹಿಂದೆ 'ಸೋವಿಯತ್ ಯೂನಿಯನ್ ' ನಲ್ಲಿ 'ಸಾಮ್ಯವಾದಿ-ವ್ಯವಸ್ಥೆ,' ವಿಘಟನೆಗೊಂಡಾಗಲೇ ಸಮಾಜವಾದಿ ಸಿದ್ಧಾಂತದ ಅಂತ್ಯವಾಯಿತೆಂದು ಬೀಗುತ್ತಿದ್ದ ಬಂಡವಾಳ ಶಾಹಿ ಇತಿಹಾಸಜ್ಞರು ಹಾಗೂ ಅರ್ಥಶಾಸ್ತ್ರಜ್ಞರು, ಈಗ ಬಂಡವಾಳಶಾಹಿಯ ಅಂತ್ಯ ಸನ್ನದ್ಧವಾಯಿತೆಂದು ನಂಬಿಗೆ ವ್ಯಕ್ತಪಡಿಸುತ್ತಿದ್ದಾರೆ. ವ್ಯವಸ್ಥೆಯ ಕುಸಿತದಿಂದ ಸಂಬವಿಸಿದ ಸಮಸ್ಯೆಯಾಗಿರುವ ಕಾರಣಕ್ಕಾಗಿ, ಮತ್ತೊಂದು 'ಸಮರ್ಥ ಪರ್ಯಾಯ ವ್ಯವಸ್ಥೆ' ಯಕಡೆಗೆ ಹುಡುಕಾಟ ನಡೆಯುತ್ತಿದೆ.

ಕಾರ್ಮಿಕರ ದಿನ