ವಿಶ್ವವಿದ್ಯಾನಿಲಯ ಸಂಜೆ ಕಾಲೇಜ್, ಮೈಸೂರು ವಿಶ್ವವಿದ್ಯಾನಿಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೈಸೂರಿನ ವಿಶ್ವ ವಿದ್ಯಾನಿಲಯ ಸಂಜೆ ಕಾಲೇಜ್ ಮೈಸೂರು ವಿಶ್ವವಿದ್ಯಾನಿಲಯದ ನಾಲ್ಕು ಕಾಲೇಜುಗಳಲ್ಲಿ ಒಂದು. ೧೯೬೫ರಲ್ಲಿ ಸ್ಥಾಪಿತವಾದ ಈ ಕಾಲೇಜ್ ೨೦೧೫ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿದೆ. ಮಾನವೀಯತೆಯ ಆದರ್ಶದ ಹಿನ್ನೆಲೆಯಲ್ಲಿ ಸ್ಥಾಪಿತಗೊಂಡ ಮೈಸೂರು ವಿಶ್ವವಿದ್ಯಾನಿಲಯ ಹಗಲು ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಸೌಲಭ್ಯಗಳಿಲ್ಲದ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗಾಗಿಯೇ ವಿಶ್ವವಿದ್ಯಾನಿಲಯ ಸಂಜೆ ಕಾಲೇಜನ್ನು ಪ್ರಾರಂಭಿಸಿತು. ದುಡಿಮೆ ಮಾಡುತ್ತಲೆ ಪದವಿ ಪಡೆಯಬೇಕೆಂಬ ಹಂಬಲವುಳ್ಳ ಸಹಸ್ರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬದುಕು ಕಲ್ಪಿಸಿಕೊಟ್ಟ ಸಂಸ್ಥೆ ಎಂಬ ಹೆಗ್ಗಳಿಕೆ ಈ ಕಾಲೇಜಿಗಿದೆ.

ಶೈಕ್ಷಣಿಕವಾಗಿ ಸಾಂಸ್ಕ್ರುತಿಕವಾಗಿ ಯಾವ ಹಗಲು ಕಾಲೇಜುಗಳಿಗೂ ಕಡಿಮೆಯಿಲ್ಲದೆ ಸರಿಸಾಟಿಯಾಗಿ ಹೆಜ್ಜೆ ಹಾಕುತ್ತಾ ಸುವರ್ಣ ಸಂಭ್ರಮವನ್ನು ಆಚರಿಸಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸುಸಜ್ಜಿತವಾದ ಗ್ರಂಥಾಲಯ, ಗಣಕಯಂತ್ರ, ಕ್ರೀಡೆ, ಎನ್.ಎಸ್.ಎಸ್., ಎನ್.ಸಿ.ಸಿ. ವಿವಿಧ ಸಾಹಿತ್ಯ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಲ ಸೃಜನಶೀಲ ಅಭಿವ್ಯಕ್ತಿಗಾಗಿ ಪ್ರತಿ ವರ್ಷ ಕಾಲೇಜ್ 'ಸಂಜೆ ಮಲ್ಲಿಗೆ' ಎಂಬ ವಾರ್ಷಿಕ ಸಂಚಿಕೆಯನ್ನು ಹೊರತರುತ್ತಿದೆ.

ಕಾಲೇಜಿನಲ್ಲಿ ಸಮರ್ಥವಾದ ಬೋದಕ ಮತ್ತು ಬೋದಕೇತರ ಸಿಬ್ಬಂದಿಯವರಿದ್ದು, ಎಲ್ಲರು ಕಾಲೇಜಿನ ಯಶಸ್ವಿಗೆ ಪಾಲುದಾರರಾಗಿದ್ದಾರೆ.