ಸಾಮ್ಯನ್ಯಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಕೊಂಡಿ ಸೇರ್ಪಡೆ
(ಹೊಸ ಪುಟ: ಕಿಂಗ್ಸ್ ಬೆಂಚ್, ಕಾಮನ್ ಪ್ಲೀಸಿನ ಕೋರ್ಟು, ಎಕ್ಸ್ಚೆಕರ್ - ಇವು 13ನೆಯ ಶತಮಾನದ ಅ...) |
(ಕೊಂಡಿ ಸೇರ್ಪಡೆ) |
||
ಕಿಂಗ್ಸ್ ಬೆಂಚ್, ಕಾಮನ್ ಪ್ಲೀಸಿನ ಕೋರ್ಟು, ಎಕ್ಸ್ಚೆಕರ್ - ಇವು 13ನೆಯ
ಶಕ್ತಿಯುತರಾದ ವ್ಯವಹಾರದಾರರು ಲಂಚರುಶುವತ್ತುಗಳಿಂದ ಅಥವಾ ಹೆದರಿಕೆ ಹಾಕಿ ಸಂಪ್ರದಾಯನ್ಯಾಯದ ನ್ಯಾಯದರ್ಶಿಗಳಿಂದ (ಜ್ಯೂರಿ) ತಮಗೆ ಬೇಕಾದ ತೀರ್ಪುಗಳನ್ನು ಪಡೆಯುತ್ತಿದ್ದರು. ಇದರಿಂದಾಗಿ ಸಂಪ್ರದಾಯನ್ಯಾಯಾಲಯಗಳಿಂದ ವಂಚಿತರಾದವರು ರಾಜನಿಗೆ ಅಥವಾ ಅವನ ಮಂತ್ರಿಸಭೆಗೆ ತಮ್ಮ ವ್ಯವಹಾರದ ವಿಚಾರಗಳನ್ನು ಹೇಳಿಕೊಂಡು ದೂರು ಕೊಡುವ ಕ್ರಮ ಬಂತು. ಅವುಗಳನ್ನು ತನಿಖೆ ಮಾಡಲು ಚಾನ್ಸಲರ್ (ಎಕ್ಸ್ಚೆಕರಿನ ಪ್ರಮುಖ ಅಧಿಕಾರಿ), ಚಾನ್ಸರಿಯ ಬೇರೆ ಅಧಿಕಾರಿಗಳು, ಪ್ರಮುಖವಾಗಿ ಮಾಸ್ಟರ್ ಆಫ್ ರೋಲ್ಸ್ ಇವರಿದ್ದರು. ಚಾನ್ಸಲರ್ ಈ ಮೊದಲೇ ಎಕ್ಸ್ಚೆಕರಿನ ಮುಖ್ಯನಾಗಿ ಸಂಪ್ರದಾಯವನ್ನು ಚಲಾಯಿಸುವ ಹಕ್ಕು ಪಡೆದಿದ್ದ. ಒಂದನೆಯ ಎಡ್ವರ್ಡನ ಕಾಲದಲ್ಲಿ ಅರ್ಜಿಗಳನ್ನು ರಾಜನ ಮಂತ್ರಿಸಭೆ ಚಾನ್ಸಲರನಿಗೆ ಕಳುಹುತ್ತಿತ್ತು. ಈ ಕ್ರಮದಿಂದ ಚಾನ್ಸರಿಯ ಹಕ್ಕು ನಿರ್ಮಿತವಾದಂತೆ ಕಾಣುತ್ತದೆ. ಬರಬರುತ್ತ ಅರ್ಜಿಗಳನ್ನು ಚಾನ್ಸಲರನಿಗೆ ಕೊಡುವ ರೂಢಿ ಬಂತು. ಚಾನ್ಸಲರ್ ರಾಜನ ಆತ್ಮಸಾಕ್ಷಿಯ ನಿರ್ವಾಹಕ (ಕೀಪರ್ ಆಫ್ ಕಿಂಗ್ಸ್ ಕಾನ್ಷನ್ಸ್). ಯಾರ ಮೇಲಾದರೂ ಅರ್ಜಿ ಬಂದಲ್ಲಿ ಆತ ಹಾಜರಾಗುವಂತೆ ಚಾನ್ಸಲರ್ ಆತನಿಗೆ ನಿರೂಪ ಕೊಡುತ್ತಿದ್ದ. ಅವನು ಬಂದು ಅದಕ್ಕೆ ಸರಿಯಾಗಿ ಉತ್ತರವೀಯದಿದ್ದಲ್ಲಿ ಚಾನ್ಸಲರ್ ತನಗೆ ನ್ಯಾಯವೆಂದು ತೋರಿದಂತೆ ಮಾಡುತ್ತ್ತಿದ್ದ. ಸಂಪ್ರದಾಯನ್ಯಾಯದ ಕೋರ್ಟುಗಳಲ್ಲಿರುವ ಮೊಕದ್ದಮೆಯನ್ನು ಮುಂದುವರಿಸಕೂಡ ದೆಂದೂ ತೀರ್ಪು ಪಡೆಯಕೂಡದೆಂದೂ ಆಜ್ಞೆ ಕೊಡುತ್ತಿದ್ದ. ಅದಕ್ಕೆ ತಪ್ಪಿದಲ್ಲಿ ದಂಡ, ಕಾರಾಗೃಹವಾಸ ವಿಧಿಸುವ ಹಕ್ಕು ಆತನಿಗಿತ್ತು.
|