ಪ್ರತಿಭಾ ನಂದಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
No edit summary |
ನಾವು ಹುಡುಗಿರೇ ಹೀಗೇ ಟ್ಯಾಗ್‌ಗಳು: Reverted ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೫೩ ನೇ ಸಾಲು: | ೫೩ ನೇ ಸಾಲು: | ||
# ಪುತಿನ ಕಾವ್ಯ ಪ್ರಶಸ್ತಿ |
# ಪುತಿನ ಕಾವ್ಯ ಪ್ರಶಸ್ತಿ |
||
==ಉಲ್ಲೇಖಗಳು |
==ಉಲ್ಲೇಖಗಳು ನಾವು ಹುಡಿಗಿರೇ ಹೀಗೆ== |
||
<References /> |
<References /> |
||
೦೮:೪೩, ೨೬ ಡಿಸೆಂಬರ್ ೨೦೨೪ ನಂತೆ ಪರಿಷ್ಕರಣೆ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕವಯಿತ್ರಿ ಪ್ರತಿಭಾ ನಂದಕುಮಾರ್ ಕನ್ನಡದ ಹೊಸ ಪೀಳಿಗೆಯ ಲೇಖಕಿ.ಕವಯಿತ್ರಿ, ಪತ್ರಕರ್ತೆ, ಅಂಕಣಕಾರ್ತಿ ಹಾಗೂ ಸ್ತ್ರೀವಾದಿಯಾಗಿ ಗುರುತಿಸಿಕೊಂಡಿದ್ದಾರೆ.
ಮೂಲತಃ ಬೆಂಗಳೂರಿನವರಾದ ಪ್ರತಿಭಾ ಅವರು ವಿ.ಎಸ್. ರಾಮಚಂದ್ರರಾವ್ ಹಾಗೂ ಯಮುನಾಬಾಯಿ ದಂಪತಿಗಳಿಗೆ ೧೯೫೫ ಡಿಸೆಂಬರ್ ೨೫ರಂದು ಜನಿಸಿದರು. ತಮ್ಮ ಬಾಲ್ಯದ ದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದಿರುವ ಪ್ರತಿಭಾ ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಂ.ಫಿಲ್. ಪದವಿಗಳನ್ನು ಪಡೆದಿದ್ದಾರೆ.
ಎನ್.ಜಿ.ಇ.ಎಫ್.ನಲ್ಲಿ ಭಾಷಾಂತರಕಾರರಾಗಿ ಸೇವೆ ಸಲ್ಲಿಸಿರುವ ಪ್ರತಿಭಾ ಅವರು ಅನಂತರ ʼಇಂಡಿಯನ್ ಎಕ್ಸ್‌ಪ್ರೆಸ್ʼ, ʼಡೆಕ್ಕನ್ ಹೆರಾಲ್ಡ್ʼ, ʼಬೆಂಗಳೂರು ಮಿರರ್ʼ ಮತ್ತು ʼಅಗ್ನಿʼ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಸದ್ಯ ಪತಿ ನಂದಕುಮಾರ್ ಹಾಗೂ ಮಕ್ಕಳಾದ ಅಭಿರಾಮ್ ಮತ್ತು ಭಾಮಿನಿ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಸಾಹಿತ್ಯ ಕೃಷಿ
ವೈಯಕ್ತಿಕ ಮತ್ತು ವೃತ್ತಿ ಬದುಕುಗಳೆರಡರಲ್ಲೂ ನಿರಂತರ ಸಾಹಸ ಮತ್ತು ಪ್ರಯೋಗಗಳನ್ನು ನಡೆಸಿರುವ ಪ್ರತಿಭಾ ಅವರು ಕಾವ್ಯಧರ್ಮವನ್ನೇ ತಮ್ಮ ಮನೋಧರ್ಮವಾಗಿಸಿಕೊಂಡಿರುವ ಕವಿ. ಉತ್ಕಟವಾಗಿ ಜೀವಿಸುವುದೇ ಬದುಕಿನ ಪರಮಸತ್ಯವನ್ನು ತಿಳಿಯಲು ಇರುವ ಏಕೈಕ ದಾರಿ ಎಂದು ನಂಬಿರುವ ಪ್ರತಿಭಾ ಅದೇ ಉತ್ಕಟತೆಯನ್ನು ತಮ್ಮ ಕಾವ್ಯದಲ್ಲೂ ಕಾಯ್ದುಕೊಂಡಿದ್ದಾರೆ.
ಕವನ ಸಂಕಲನಗಳು
- ನಾವು ಹುಡುಗಿಯರೇ ಹೀಗೆ (೧೯೭೯)
- ರಸ್ತೆಯಂಚಿನ ಗಾಡಿ
- ಅವರು ಪುರಾವೆಗಳನ್ನು ಕೇಳುತ್ತಾರೆ.
- ಕವಡೆಯಾಟ
- ಈತನಕ
- ಆಹಾ ಪುರುಷಾಕಾರಂ
- ಮುನ್ನುಡಿ ಬೆನ್ನುಡಿಗಳ ನಡುವೆ
- ಕೌಫಿಹೌಸ್
- ಮುದುಕಿಯರಿಗಿದು ಕಾಲವಲ್ಲ
- ಕೌಬಾಯ್ಸ್ ಮತ್ತು ಕಾಮ ಪುರಾಣ
- ಅವನ ಮುಖ ಮರೆತುಹೋಗಿದೆ
- ಪ್ರತಿಭಾ ನಂದಕುಮಾರ್ ಅವರ ಆಯ್ದ ಕವಿತೆಗಳು
- ಪ್ರತಿಭಾ ಕಾವ್ಯ (ಇಲ್ಲಿಯವರೆಗಿನ ಕವಿತೆಗಳು)
ಕಥಾಸಂಕಲನ
- ಯಾನ (೧೯೯೭)
ಲೇಖನ ಸಂಗ್ರಹ
- ನಿಮ್ಮಿ ಕಾಲಂ (ಅಂಕಣ ಬರಹ) (೨೦೦೦)
- ಮಿರ್ಚಿ ಮಸಾಲ (೨೦೦೧)
ಅನುವಾದಗಳು
- ಒಂದು ಹಿಡಿ ಸೂರ್ಯ ಮತ್ತು ಇತರ ಕವನಗಳು
- ಸೂರ್ಯಕಾಂತಿ (ಅನವಾದಿತ ಡೋಗ್ರಿ ಕವನಗಳು)
- ಆಕ್ರಮಣ (ಅನುವಾದಿತ ಕತೆಗಳು) (೧೯೯೭)
- ಶಿವಗಾಮಿ ಕಥೆ (ಸಂಪುಟ ೧)
ಆತ್ಮ ಕಥನ
- ಅನುದಿನದ ಅಂತರಗಂಗೆ
ಪ್ರಶಸ್ತಿಗಳು
- ಡಾ. ಶಿವರಾಮ ಕಾರಂತ ಪ್ರಶಸ್ತಿ (೧೯೯೬)
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೮)
- ಮಹಾದೇವಿ ವರ್ಮಾ ಕಾವ್ಯ ಸಮ್ಮಾನ್ (೨೦೦೩)
- ಹೂಗಾರ್ ಸ್ಮಾರಕ ಪ್ರಶಸ್ತಿ (೨೦೦೬)
- ಮುದ್ದಣ ಕಾವ್ಯ ಪ್ರಶಸ್ತಿ
- ಪುತಿನ ಕಾವ್ಯ ಪ್ರಶಸ್ತಿ