ವಿವೇಕ ಶಾನಭಾಗ
ಗೋಚರ
ವಿವೇಕ ಶಾನಭಾಗ ಇವರು ಕನ್ನಡದ ಪ್ರಸಿದ್ಧ ಕತೆಗಾರ ಕಾದಂಬರಿಕಾರ ಮತ್ತು ನಾಟಕಕಾರರು. ವೃತ್ತಿಯಿಂದ ಎಂಜಿನಿಯರ್ ಆಗಿರುವ ವಿವೇಕ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದಾರೆ. ವಿವೇಕರು "ಭಾವನಾ" ಹಾಗೂ "ಪ್ರಜಾವಾಣಿ" ಪತ್ರಿಕೆಗೆ ಕೆಲವು ಕಾಲ ಅಂಕಣಗಳನ್ನೂ ಬರೆದಿದ್ದರು. ಉದ್ಯೋಗನಿಮಿತ್ತ ಅಮೇರಿಕ, ಇಂಗ್ಲೆಂಡ್, ಕಲ್ಕತ್ತಾಗಳಲ್ಲಿ ಹಲವು ವರ್ಷ ವಾಸವಾಗಿದ್ದ ವಿವೇಕ್ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈವರೆಗೆ ವಿವೇಕ ೫ ಕಥಾಸಂಕಲನಗಳು, ೫ ಕಾದಂಬರಿಗಳು, ೩ ನಾಟಕಗಳು ಹಾಗೂ ೨ ಸಂಪಾದಿತ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರು 'ದೇಶಕಾಲ' ಎನ್ನುವ ವಿಶಿಷ್ಟ ಸಾಹಿತ್ಯಿಕ ತ್ರೈಮಾಸಿಕ ಪತ್ರಿಕೆಯೊಂದನ್ನು ೭ ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದ್ದಾರೆ.[೧]
ಸಾಹಿತ್ಯ
[ಬದಲಾಯಿಸಿ]ಕಥಾಸಂಕಲನ
[ಬದಲಾಯಿಸಿ]- ಅಂಕುರ
- ಲಂಗರು
- ಹುಲಿಸವಾರಿ
- ಮತ್ತೊಬ್ಬನ ಸಂಸಾರ
- ಘಾಚರ್-ಘೋಚರ್
ಕಾದಂಬರಿ
[ಬದಲಾಯಿಸಿ]- ಇನ್ನೂ ಒಂದು
- ಒಂದು ಬದಿ ಕಡಲು
- ಘಾಚರ್ ಘೋಚರ್
- ಊರು ಭಂಗ
- ಸಕೀನಾಳ ಮುತ್ತು
ನಾಟಕ
[ಬದಲಾಯಿಸಿ]- ಸಕ್ಕರೆ ಬೊಂಬೆ
- ಬಹುಮುಖಿ
- ಇಲ್ಲಿರುವುದು ಸುಮ್ಮನೆ
ಸಂಪಾದಿತ ಕೃತಿಗಳು:
- ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ
- ಸಿರಿಗನ್ನಡ - ಇದು ಇಂಗ್ಲಿಷಿನಲ್ಲಿ ಪ್ರಕಟವಾಗಿರುವ ಆಂಥಾಲಜಿ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]