ವಿಲಿಯಮ್ ಕ್ರೂಕ್ಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿಲಿಯಮ್ ಕ್ರೂಕ್ಸ್

ವಿಲಿಯಮ್ ಕ್ರೂಕ್ಸ್(17 ಜೂನ್ 1832 – 4 ಎಪ್ರಿಲ್ 1919)ಇವರು ಇಂಗ್ಲಂಡ್‌ನ ರಸಾಯನಶಾಸ್ತ್ರಜ್ಞ ಹಾಗೂ ಭೌತಶಾಸ್ತ್ರಜ್ಞ.ಇವರು ಥಾಲಿಯಮ್ ಮೂಲಧಾತುವನ್ನು ಕಂಡುಹಿಡಿದರು.ಇವರು ವೈಜ್ಞಾನಿಕ ಪರೀಕ್ಷೆಗಳಿಗೆ ಅನುಕೂಲವಾಗುವ ಹಲವಾರು ಉಪಕರಣಗಳನ್ನು ಅಭಿವೃದ್ಧಿ ಪಡಿಸಿದರು. ಅವುಗಳಲ್ಲಿ ಕ್ರೂಕ್ಸ್ ಟ್ಯೂಬ್,ರೇಡಿಯೋಮೀಟರ್ ಪ್ರಮುಖವಾದವುಗಳು.

ಇವರು ಲಂಡನ್‌ನಲ್ಲಿ ಜನಿಸಿದರು.೧೮೫೧ರಲ್ಲಿ ರಾಯಲ್ ಕಾಲೇಜ್ ಆಫ್ ಕೆಮೆಸ್ಟ್ರಿ ಯಿಂದ ಪದವಿ ಪಡೆದರು.೧೯೧೯ ರಲ್ಲಿ ನಿಧನರಾದರು.