ವಿನೋದ್ ಭಾಟಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏರ್ ಮಾರ್ಷಲ್

ವಿನೋದ್ ಭಾಟಿಯಾ

ವ್ಯಾಪ್ತಿಪ್ರದೇಶ ಭಾರತ
ಶಾಖೆ Indian Air Force
ಶ್ರೇಣಿ(ದರ್ಜೆ) ಏರ್ ಮಾರ್ಷಲ್
ಅಧೀನ ಕಮಾಂಡ್ವೆಸ್ಟರ್ನ್ ಏರ್ ಕಮಾಂಡ್
ಪ್ರಶಸ್ತಿ(ಗಳು) ಪರಮ ವಿಶಿಷ್ಟ ಸೇವಾ ಪದಕ
ಅತಿ ವಿಶಿಷ್ಟ ಸೇವಾ ಪದಕ
ವೀರ ಚಕ್ರ
ವೀರ ಚಕ್ರ (ಬಾರ್)

ವಿನೋದ್ ಭಾಟಿಯಾ ಇವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವೀರ ಚಕ್ರ ಮತ್ತು ಮೆಡಲ್ ಬಾರ್ ಪ್ರಶಸ್ತಿ ವಿಜೇತರು. ಇವರು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ. ಅವರನ್ನು 'ಜಿಮ್ಮಿ'[೧] ಎಂದೂ ಸಹ ಕರೆಯುತ್ತಾರೆ.

ಇವರು ೧೯೬೫ ಮತ್ತು ೧೯೭೧ ರ ಯುದ್ಧಗಳಲ್ಲಿ ವೀರ ಚಕ್ರವನ್ನು ಪಡೆದರು. [೨] [೩]

ಸೈನ್ಯ ಪ್ರಶಸ್ತಿಗಳು[ಬದಲಾಯಿಸಿ]

ಪರಮ ವಿಶಿಷ್ಟ ಸೇವಾ ಪದಕ ಅತಿ ವಿಶಿಷ್ಟ ಸೇವಾ ಪದಕ
ವೀರ್ ಚಕ್ರ (ಬರ್ವಾ) ಸಾಮಾನ್ಯ ಸೇವಾ ಪದಕ ಸಮರ್ ಸೇವಾ ಸ್ಟಾರ್ ಪಾಸ್ಚಿಮಿ ಸ್ಟಾರ್
ಸಿಯಾಚಿನ್ ಗ್ಲೇಸಿಯರ್ ಪದಕ ವಿಶೇಷ ಸೇವಾ ಪದಕ ರಕ್ಷಾ ಪದಕ ಸಂಗ್ರಾಮ್ ಪದಕ
ಸೈನಿಕ ಸೇವಾ ಪದಕ ಎತ್ತರದ ಸೇವೆ ಪದಕ ವಿದೇಶ ಸೇವಾ ಪದಕ ೫೦ ನೇ ಸ್ವಾತಂತ್ರ್ಯ ಪ್ರಶಸ್ತಿ ಪ್ರದಾನ
೨೫ ನೇ ಸ್ವಾತಂತ್ರ್ಯ ಪ್ರಶಸ್ತಿ ಪ್ರದಾನ ೩೦ ವರ್ಷಗಳ ಸುದೀರ್ಘ ಸೇವಾ ಪದಕ ೨೦ ವರ್ಷಗಳ ಸುದೀರ್ಘ ಸೇವಾ ಪದಕ ೯ ವರ್ಷಗಳ ಸುದೀರ್ಘ ಸೇವಾ ಪದಕ

ಪ್ರಶಸ್ತಿಗಳ ವಿವರ[ಬದಲಾಯಿಸಿ]

ವೀರ ಚಕ್ರ[ಬದಲಾಯಿಸಿ]

ಪ್ರಶಸ್ತಿ ದಿನಾಂಕ ೦೮ ಸೆಪ್ಟೆಂಬರ್ ೧೯೬೫. ಘೋಷಿಸಿದ ದಿನಾಂಕ ೦೧ ಜನವರಿ ೧೯೬೬.

ವಿವರಗಳು:[ಬದಲಾಯಿಸಿ]

ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ, ಫ್ಲೈಟ್ ಲೆಫ್ಟಿನೆಂಟ್ ವಿನೋದ್ ಕುಮಾರ್ ಭಾಟಿಯಾ ಲಾಹೋರ್ ಸೆಕ್ಟರ್‌ನಲ್ಲಿ ಸ್ಕ್ವಾಡ್ರನ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಈ ವಲಯದಲ್ಲಿ ೧೮ ಬಾರಿ ಕಾರ್ಯಾಚರಣೆಯನ್ನು ಮಾಡಿದರು. ೮ ನೇ ಸೆಪ್ಟೆಂಬರ್ ೧೯೬೫ ರಂದು, ಫ್ಲೈಟ್ ಲೆಫ್ಟಿನೆಂಟ್ ಭಾಟಿಯಾ ಅವರು ಶತ್ರುಗಳ ಭೂ ದಾಳಿಯನ್ನು ಮಟ್ಟಹಾಕುವ ವಿರುದ್ದದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಇದೊಂದು ಅತ್ಯಂತ ಕ್ಲಿಷ್ಟಕರ ವ್ಯಮಾನಿಕ ವ್ಯೂಹ ರಚನೆಯಾಗಿತ್ತು. ಈ ರಚನೆಯಲ್ಲಿದ್ದ ಎರಡನೇ ಯುದ್ಧ ವಿಮಾನವನ್ನು ಮುನ್ನಡೆಸುವ ಜವಾಬ್ಧಾರಿ ಇವರದಾಗಿತ್ತು. ಶತ್ರು ಯುದ್ಧ ಟ್ಯಾಂಕರ್ ಮತ್ತು ತೋಪುಗಳು ನಿರಂತರವಾಗಿ ಗುಂಡಿನ ಮಳೆಗರಿಯುತ್ತಿದ್ದವು. ಇದಕ್ಕೆ ಬೆದರದ ವಿನೋದ್ ಕುಮಾರ್ ಭಾಟಿಯಾ ಎರಡು ಯುದ್ಧ ಟ್ಯಾಂಕ್‌ಗಳನ್ನು ಧ್ವಂಸ ಮಾಡಿದರು.[೪]

ವೀರ ಚಕ್ರಕ್ಕೆ ಬಾರ್[ಬದಲಾಯಿಸಿ]

೨೬ ಜನವರಿ ೧೯೭೨ ರಂದು ಘೋಷಿಸಲಾಯಿತು

ವಿವರಗಳು[ಬದಲಾಯಿಸಿ]

ಡಿಸೆಂಬರ್ ೧೯೭೧ ರಲ್ಲಿ ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆಯ ಸಮಯದಲ್ಲಿ, ಸ್ಕ್ವಾಡ್ರನ್ ಲೀಡರ್ ವಿನೋದ್ ಕುಮಾರ್ ಭಾಟಿಯಾ ಅವರು ಫೈಟರ್ ಬಾಂಬರ್ ಸ್ಕ್ವಾಡ್ರನ್‌ನ ಫ್ಲೈಟ್ ಕಮಾಂಡರ್ ಆಗಿದ್ದರು. ಅವರು ಶತ್ರು ಪ್ರದೇಶದೊಳಗೆ ಹೆಚ್ಚಿನ ಸಂಖ್ಯೆಯ ಕಾರ್ಯಾಚರಣೆಗಳನ್ನು ಮಾಡಿ ಉಪಯುಕ್ತ ಮಾಹಿತಿಯನ್ನು ತಂದರು. ಶತ್ರು ವಾಯುನೆಲೆಗಳ ವಿರುದ್ಧ ಅವರು ಮೂರು ಬಾರಿ ತೀವ್ರತರವಾದ ಆಕ್ರಮಣಗಳನ್ನು ಮಾಡಿದರು. ಇವರ ಅಕ್ರಮಣವನ್ನು ಹಿಮ್ಮಟ್ಟಿಸಲಾಯಿತು. ಧೃತಿಗೆಡದೆ ವಿನೋದ್ ಕುಮಾರ್ ಭಾಟಿಯಾ ತೀವ್ರ ತರವಾದ ಆಕ್ರಮಣವನ್ನು ಎದುರಿಸಿ, ಗಸ್ತು ತಿರುಗುತ್ತಿದ್ದ ವಿಮಾನವನ್ನು ಸಹ ಲೆಕ್ಕಿಸದೆ ದಾಳಿ ಮಾಡಿದರು. ಒಟ್ಟು ಮೂರು ಶತ್ರು ವಿಮಾನಗಳು ಮತ್ತು ಸೇನಾ ಶಿಬಿರವನ್ನು ನಾಶಮಾಡಿದರು. ಇವರು ನಡೆಸಿದ ಧಾಳಿಗೆ ಶತ್ರು ಸೈನ್ಯದ ಸಂಪರ್ಕ ಸಾಧನಗಳು ನಾಶವಾದವು. ಇದಲ್ಲದೆ ಭಾರತೀಯ ಭೂ ಸೈನ್ಯಕ್ಕೆ ವಾಯು ಬೆಂಬಲ ಕೊಡುತ್ತಿದ್ದರು.

ಕಾರ್ಯಾಚರಣೆಯಲ್ಲಿ ಸ್ಕ್ವಾಡ್ರನ್ ಲೀಡರ್ ವಿನೋದ್ ಕುಮಾರ್ ಭಾಟಿಯಾ ಶೌರ್ಯ, ದೃಢತೆ ಮತ್ತು ಉನ್ನತ ಶ್ರೇಣಿಯ ವೃತ್ತಿಪರ ಕೌಶಲ್ಯವನ್ನು ಪ್ರದರ್ಶಿಸಿದರು.

ಉಲ್ಲೇಖಗಳು[ಬದಲಾಯಿಸಿ]

  1. http://www.bharat-rakshak.com/IAF/Database/6497
  2. "Vinod Bharia". Archived from the original on 2017-04-06. Retrieved 2024-04-07.
  3. "Highly Decorated Officers - Air Force". Archived from the original on 2017-04-07. Retrieved 2024-04-07.
  4. https://www.bharat-rakshak.com/IAF/Database/6497