ವಿನೇಶ್ ಫೋಗಟ್
ವಿನೇಶ್ ಫೋಗಟ್ ಅವರು ಉತ್ತಮ ಕುಸ್ತಿಪಟು.[೧] ಅವರು ಯಶಸ್ವಿ ಕುಸ್ತಿಪಟು ಕುಟುಂಬಕ್ಕೆ ಸೇರಿದವರು. ಅವರ ಸಹೋದರಿಗಳಾದ ಗೀತಾ ಫೋಗಾಟ್ ಮತ್ತು ಬಬಿತಾ ಕುಮಾರಿ ಅಂತರಾಷ್ಟ್ರೀಯ ಕುಸ್ತಿಪಟುಗಳಾಗಿದ್ದು, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತರಾಗಿದ್ದಾರೆ.
ವೈಯಕ್ತಿಕ ವಿವರ
[ಬದಲಾಯಿಸಿ]ದೇಶ | ಭಾರತ |
ಜನನ | ೨೫ ಅಗಸ್ಟ್ ೧೯೯೪ (ವಯಸ್ಸು ೨೫) |
ವಿಳಾಸ | ಭಿವಾನಿ ಜಿಲ್ಲೆ, ಹರಿಯಾಣ, ಭಾರತ. |
ಎತ್ತರ | ೧೫೯ ಸೆಂ.ಮೀ. (೫.೩ ಫೀಟ್) |
ತೂಕ | ೫೬ ಕೆ.ಜಿ. |
ಕ್ರೀಡೆ
[ಬದಲಾಯಿಸಿ]ದೇಶ - ಭಾರತ |
ಕ್ರೀಡೆ - ಕುಸ್ತಿ |
ಸ್ಪರ್ಧೆ - ೪೮ ಕೆ.ಜಿ. / ೫೦ ಕೆ.ಜಿ. / ೫೩ ಕೆ.ಜಿ. |
ತರಬೇತುದಾರ - ಮಹಾವೀರ್ ಸಿಂಗ್ ಫೋಗಟ್ Archived 2020-01-25 ವೇಬ್ಯಾಕ್ ಮೆಷಿನ್ ನಲ್ಲಿ. |
ಸಾಧನೆ - ವಿಶ್ವದಲ್ಲಿ೨ನೇ ರ್ಯಾಂಕ್ |
ವೈಯಕ್ತಿಕ ಜೀವನ ಮತ್ತು ಕುಟುಂಬ
[ಬದಲಾಯಿಸಿ]ವಿನೇಶ್ ಫೋಗಟ್ ಅವರು ಕುಸ್ತಿಪಟುಯಾದ್ದ ಮಹಾವೀರ ಸಿಂಗ್ ಅವರ ಕಿರಿಯ ಸಹೋದರನ ಮಗಳು. ಅಂತರಾಷ್ಟ್ರೀಯ ಕುಸ್ತಿಪಟುಗಳಾದ ಗೀತಾ ಫೋಗಟ್ ಮತ್ತು ಬಬಿತಾ ಕುಮಾರಿ ವಿನೇಶ್ ಫೋಗಟ್ ಅವರ ಸಹೋದರಿಯರು. ಇವರಿಬ್ಬರೂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.
ವಿನೇಶ್ ಫೋಗಟ್ ಹಾಗೂ ಅವರ ಸಹೋದರಿಯನ್ನು ಕುಸ್ತಿಪಟುಗಳನ್ನಾಗಿಸಲು ಅವರ ತಂದೆ ಮತ್ತು ಚಿಕ್ಕಪ್ಪ ತಮ್ಮ ಸಮುದಾಯದಿಂದ ಅಪಾರ ಒತ್ತಡವನ್ನು ಅನುಭವಿಸಿದರು. ನಮ್ಮ ಸಮುದಾಯದ ನೈತಿಕತೆಯ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದವು. ಅವುಗಳನ್ನು ಎದುರಿಸಿ ವಿನೇಶ್ ಫೋಗಟ್ ಹಾಗೂ ಅವರ ಸಹೋದರಿಗಳನ್ನು ಉತ್ತಮ ಕುಸ್ತಿಪಟುಗಳನ್ನಾಗಿಸಿದರು. ವಿನೇಶ್ ಅವರ ಸಹೋದರಿ ರಿತು ಫೋಗಟ್ ಸಹ ಅಂತರಾಷ್ಟ್ರೀಯ ಕುಸ್ತಿಪಟು ಆಗಿದ್ದು, ೨೦೧೬ ರ ಕಾಮನ್ವೆಲ್ತ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ವಿನೇಶ್ ಫೋಗಟ್ ಅವರು ತನ್ನ ಪ್ರಿಯಕರ ಸೋಮ್ವೀರ್ ರಥೀ ಅವರೊಂದಿಗೆ ೧೩ ಡಿಸೆಂಬರ್ ೨೦೧೮ ರಂದು ಮದುವೆಯಾದರು.[೨] ಅವರ ಪತಿ ಜಿಂದ್ ಜಿಲ್ಲೆಯ ಬಕ್ತಾ ಖೆರಾ ಗ್ರಾಮದವರು. ಅವರೂ ಸಹ ಉತ್ತಮ ಕುಸ್ತಿಪಟು ಆಗಿದ್ದು, ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಎರಡು ಬಾರಿ ಚಿನ್ನದ ಪದಕವನ್ನು ಪಡೆದಿದ್ದಾರೆ.
ವೃತ್ತಿ ಜೀವನ
[ಬದಲಾಯಿಸಿ]- ೨೦೧೩ ಏಷ್ಯಿಯನ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್
೨೦೧೩ರಂದು ನವದೆಹಲಿಯಲ್ಲಿ ನಡೆದ ಮಹಿಳೆಯರ ೫೨ ಕೆ.ಜಿ. ಕುಸ್ತಿ ವಿಭಾಗದಲ್ಲಿ ವಿನೇಶ್ ಅವರು ೩-೦ ಅಂತರದಲ್ಲಿ ಗೆದ್ದು ಕಂಚು ಪದಕವನ್ನು ತಮ್ಮದಾಗಿಸಿಕೊಂಡರು. ಮೊದಲನೇ ಸುತ್ತಿನಲ್ಲಿ ಜಪಾನ್ ಮೂಲದ ನಾನಾಮಿ ಐರಿ ಎಂಬುವರೊಂದಿಗೆ ೩-೧ ಅಂತರದಲ್ಲಿ ವಿಜೇತರಾದರು. ಕ್ವಾರ್ಟರ್ ಫೈನಲ್ ನಲ್ಲಿ ಖಜಕಿಸ್ತಾನ್ ಮೂಲದ ತಾತ್ಯಾನ ಅಮಾನ್ ಜೊಲ್ ಅವರೊಂದಿಗೆ ೩-೧ ಅಂತರದಲ್ಲಿ ಸೋತರು.
- ೨೦೧೩ ಕಾಮನ್ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್
ವಿನೇಶ್ ಫೋಗಟ್ ಅವರು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಮಹಿಳೆಯರ ೫೧ ಕೆ.ಜಿ. ವಿಭಾಗದಲ್ಲಿ ೨ನೇ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಗೆದ್ದರು.
- ೨೦೧೪ ಏಷ್ಯಿಯನ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್
೨೦೧೪ರಂದು ಉತ್ತರ ಕೋರಿಯಾದ ಇಂಚಿಯಾನ್ ನಲ್ಲಿ ನಡೆದ ಮಹಿಳೆಯರ ೪೮ ಕೆ.ಜಿ. ವಿಭಾಗದಲ್ಲಿ ಕಂಚು ಪದಕವನ್ನು ಪಡೆದರು. ೧೬ನೇ ಸುತ್ತಿನಲ್ಲಿ ಫಿಡಲ್ಸ್ ರಿಪಬ್ಲಿಕ್ ನ ಯೊಂಗ್ಮಿಡಾಕ್ ಎಂಬ ಎದುರಾಳಿಯನ್ನು ೩-೧ ಅಂತರದಲ್ಲಿ ಸೋಲಿಸಿದರು. ಕ್ವಾರ್ಟರ್ ಫೈನಲ್ ನಲ್ಲಿ ಉಜಿಕಿಸ್ತಾನ್ ದೌಲೆತ್ಬೈಕ್ ಯಕ್ಷಿ ಮುರಾಯೋವಾ ಎಂಬುವರನ್ನು ೫-೦ ಅಂತರದಲ್ಲಿ ಸೋಲಿಸಿ, ಕಂಚಿನ ಪದಕವನ್ನು ಪಡೆದರು.
- ೨೦೧೪ ಕಾಮನ್ವೆಲ್ತ್ ಗೇಮ್ಸ್
೨೦೧೪ರಂದು ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಮಹಿಳಾ ವ್ರೆಸ್ಲಿಂಗ್ ೪೮ ಕೆ.ಜಿ. ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ, ಚಿನ್ನದ ಪದಕವನ್ನು ಗೆದ್ದರು. ಕ್ವಾರ್ಟರ್ ಫೈನಲ್ ನಲ್ಲಿ ನೈಜೀರಿಯಾದ ರೋಸ್ಮರಿ ನ್ವೆಕೆ ಅವರನ್ನು ೫-೦ ಅಂತರದಲ್ಲಿ ಸೋಲಿಸಿದರು. ವಿನೇಶ್ ಫೋಗಟ್ ಅವರ ಸೆಮಿ ಫೈನಲ್ ಎದುರಾಳಿಯಾದ ಕೆನಡಾದ ಜಾಸ್ಮಿನ್ ಮಿಯಾನ್ ಅವರನ್ನು ೪-೧ ಅಂತರದಲ್ಲಿ ಸೋಲಿಸಿದರು. ಫೈನಲ್ ನಲ್ಲಿ ಇಂಗ್ಲೆಂಡ್ನ ಯಾನಾ ರಟ್ಟಿಗನ್ ಅವರನ್ನು ೩-೧ ಅಂತರದಲ್ಲಿ ಸೋಲಿಸಿ, ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
- ೨೦೧೫-೨೦೧೭
೨೦೧೫ ರಂದು ದೊಹಾದಲ್ಲಿ ನಡೆದ ಏಷ್ಯಿಯನ್ ಚಾಂಪಿಯನ್ಶಿಪ್ ನಲ್ಲಿ ಫೈನಲ್ ಪಂದ್ಯವನ್ನು ಜಪಾನಿನ ಯೂಕಿ ಇರಿಯಾ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತರಾದರು. ೨೦೧೬ರಂದು ಇನ್ಸ್ತಾಬುಲ್ ನಲ್ಲಿ ನಡೆದ ರಿಯೋ ಚಾಂಪಿಯನ್ಶಿಪ್ ನ ಕೊನೆಯ ಸುತ್ತಿನಲ್ಲಿ ಹೆಸರಾಂತ ಕುಸ್ತಿಪಟುವಾದ ಐವೊನಾ ಮುಟ್ಕೊನಾಸ್ಕಾ ಎಂಬುವರನ್ನು ಸೋಲಿಸಿ, ಒಲಂಪಿಕ್ಸ್ ಗೆ ಅರ್ಹರಾದರು. ೨೦೧೬ ರಿಯೋದಲ್ಲಿ ನಡೆದ ಸಮ್ಮರ್ ಒಲಂಪಿಕ್ಸ್ ನಲ್ಲಿ ವಿನೇಶ್ ಕ್ವಾರ್ಟರ್ ಫೈನಲ್ ವರೆಗೂ ತಲುಪಿದರು. ಆದರೆ ಅವರ ಮೊಣಕಾಲು ಗಾಯದಿಂದಾಗಿ ಚೀನಾದ ಸನ್ ಯಾನನ್ ಅವರ ವಿರುದ್ಧ ಸೋತರು.
- ೨೦೧೮ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್
೨೦೧೮ರಂದು ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನ ಮಹಿಳೆಯರ ೫೦ ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದರು.
- ೨೦೧೮ ಏಷ್ಯಿಯನ್ ಗೇಮ್ಸ್
೨೦೧೮ರ ಏಷ್ಯಿಯನ್ ಗೇಮ್ಸ್ ನಲ್ಲಿ ಮಹಿಳೆಯರ ೫೦ ಕೆ.ಜಿ. ವಿಭಾಗದಲ್ಲಿ ವಿನೇಶ್ ಅವರು ಜಪಾನದ ಯುಕಿ ಐರಿ ಅವರನ್ನು ೬-೨ ಅಂತರದಲ್ಲಿ ಸೋಲಿಸಿ, ಚಿನ್ನದ ಪದಕವನ್ನು ಗೆದ್ದರು. ಅಷ್ಟೇ ಅಲ್ಲದೇ ಏಷ್ಯಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಷ್ಟೇ ಅಲ್ಲದೇ ಏಷ್ಯಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- ೨೦೧೯ ಏಷ್ಯಿಯನ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್
೨೦೧೯ರಂದು ನಡೆದ ಏಷ್ಯಿಯನ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ ವಿಜೇತರಾದ ಚೀನಾದ ಕಿಯಾಂವ್ ಪಾಂಗ್ ಅವರನ್ನು ಸೋಲಿಸಿ, ಕಂಚಿನ ಪದಕವನ್ನು ಪಡೆದರು.
- ೨೦೧೯ ಯಾಸನ್ ಡೋಗು ಇಂಟರ್ನ್ಯಾಷನಲ್
ವಿನೇಶ್ ಅವರು ೨೦೧೯ರ ಯಾಸನ್ ಡೋಗುನಲ್ಲಿ ರಷ್ಯಾದ ಏಕಡೆರ್ನಿಯಾ ಫೊಲೆಶ್ಚುಕ್ ಎಂಬುವರನ್ನು ಸೋಲಿಸಿ, ಚಿನ್ನದ ಪದಕವನ್ನು ಗೆದ್ದರು.
- ೨೦೧೯ ಪೋಲ್ಯಾಂಡ್ ಓಪನ್ ವ್ರೆಸ್ಲಿಂಗ್ ಟೂರ್ನಮೆಂಟ್
೨೦೧೯ರಂದು ವಾರ್ಸವ್ ನಲ್ಲಿ ನಡೆದ ಪೋಲ್ಯಾಂಡ್ ಓಪನ್ ವ್ರೆಸ್ಲಿಂಗ್ ಟೂರ್ನಮೆಂಟ್ ನಲ್ಲಿ ಚಿನ್ನವನ್ನು ಪಡೆಯುವುದರೊಂದಿಗೆ ಮಹಿಳೆಯರ ೫೩ ಕೆ.ಜಿ. ವಿಭಾಗದಲ್ಲಿ ಸತತ ಮೂರು ಬಾರಿ ಚಿನ್ನ ಪಡೆದವರಾಗಿ ಪ್ರಸಿದ್ಧರಾಗಿದ್ದಾರೆ.
- ೨೦೧೯ರ ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್
ವಿನೇಶ್ ಫೋಗಟ್ ಅವರು ಮಹಿಳೆಯರ ೫೩ ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದು, ೨೦೨೦ರ ಟೋಕಿಯೋ ಚಾಂಪಿಯನ್ಶಿಪ್ ಗೆ ಆಯ್ಕೆಯಾದರು. ಆದ್ದರಿಂದ ಅವರು ಟೋಕಿಯೋ ಚಾಂಪಿಯನ್ಶಿಪ್ ಗೆ ಆಯ್ಕೆಯಾದ ಮೊದಲ ಭಾರತೀಯರಾದರು.
- ೨೦೨೦ರ ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್
೨೦೨೦ರ ಜನವರಿಯಲ್ಲಿ ನಡೆದ ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ ನ ರೋಮ್ ರ್ಯಾಂಕಿಂಗ್ ಸರಣಿಯಲ್ಲಿ ಲೂಯಿಸಾ ಎಲಿಜಬೆತ್ ವಾಲ್ವೆರ್ಡ್ ಅವರನ್ನು ಸೋಲಿಸಿ, ಚಿನ್ನದ ಪದಕ ವಿಜೇತರಾದರು.
ಪದಕ ದಾಖಲೆಗಳು
[ಬದಲಾಯಿಸಿ]ವಿನೇಶ್ ಫೋಗಟ್ ಅವರು ಕಾಮನ್ವೆಲ್ತ್ ಮತ್ತು ಏಷ್ಯಿಯನ್ ಪಂದ್ಯಗಳಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.[೩] ಪೆಬ್ರವರಿ ೧೮, ೨೦೧೯ ರಂದು ನಡೆದ ಲಾರೆನ್ಸ್ ವರ್ಲ್ಡ್ ಚಾಂಪಿಯನ್ಶಿಪ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಮೊದಲ ಭಾರತೀಯ ಕ್ರೀಡಾಪಟುಯಾಗಿದ್ದಾರೆ.
ವಿಶ್ವ ಚಾಂಪಿಯನ್ಶಿಪ್
- 2019 ನೂರ್ ಸುಲ್ತಾನ್ - ೫೩ ಕೆ.ಜಿ. - ಕಂಚು
ಕಾಮನ್ವೆಲ್ತ ಕ್ರೀಡಾಕೂಟ
- ೨೦೧೪ ಗ್ಲಾಸ್ಗೋ - ೪೮ ಕೆ.ಜಿ. - ಚಿನ್ನ
- ೨೦೧೮ ಗೋಲ್ಡ್ ಕೋಸ್ಟ್ - ೫೦ ಕೆ.ಜಿ. - ಚಿನ್ನ
ಏಷ್ಯಿಯನ್ ಕ್ರೀಡಾಕೂಟ
- ೨೦೧೮ ಜಕಾರ್ತಾ - ೫೦ ಕೆ.ಜಿ. - ಚಿನ್ನ
- ೨೦೧೪ ಇಂಚಿಯಾನ್ - ೪೮ ಕೆ.ಜಿ. - ಕಂಚು
ಏಷ್ಯಿಯನ್ ಚಾಂಪಿಯನ್ಶಿಪ್
- ೨೦೧೫ ದೋಹಾ - ೪೮ ಕೆ.ಜಿ. - ಬೆಳ್ಳಿ
- ೨೦೧೭ ನವದೆಹಲಿ - ೫೫ ಕೆ.ಜಿ. - ಬೆಳ್ಳಿ
- ೨೦೧೮ ಬಿಷ್ಕೆಕ್ - ೫೦ ಕೆ.ಜಿ. - ಬೆಳ್ಳಿ
- ೨೦೧೩ ನವದೆಹಲಿ - ೫೧ ಕೆ.ಜಿ. - ಕಂಚು
- ೨೦೧೬ ಬ್ಯಾಂಕಾಕ್ - ೫೩ ಕೆ.ಜಿ. - ಕಂಚು
- ೨೦೧೯ ಕ್ಸಿಯಾನ್ - ೫೩ ಕೆ.ಜಿ. - ಕಂಚು
ಯುವ ಕುಸ್ತಿ ಚಾಂಪಿಯನ್ಶಿಪ್
- ೨೦೧೩ ಜೋಹಾನ್ ಬರ್ಗ್ - ೫೧ ಕೆ.ಜಿ. - ಬೆಳ್ಳಿ
ಪ್ರಶಸ್ತಿಗಳು
[ಬದಲಾಯಿಸಿ]- ಅರ್ಜುನ ಪ್ರಶಸ್ತಿ (೨೦೧೬)
- ಪದ್ಮಶ್ರೀ (೨೦೧೮)
ಉಲ್ಲೇಖ
[ಬದಲಾಯಿಸಿ]- ↑ https://www.prajavani.net/sports/sports-extra/wrestling-vinesh-won-gold-651182.html
- ↑ "ಆರ್ಕೈವ್ ನಕಲು". Archived from the original on 2020-01-26. Retrieved 2020-01-26.
- ↑ https://timesofindia.indiatimes.com/sports/asian-games/vinesh-enters-history-books-becomes-first-indian-woman-wrestler-to-win-asian-games-gold/articleshow/65475606.cms